ಬೂತಾಯಿ ಪುಳಿಮುಂಚಿ ( SARDINE PULIMUNCHI)

Поделиться
HTML-код
  • Опубликовано: 27 сен 2024
  • ಬೂತಾಯಿ ಪುಳಿಮುಂಚಿ : 15 ಬೂತಾಯಿ ಮೀನು.
    ಘಾಟಿ ಮೆಣಸು 25 ,ಕರಿ ಮೆಣಸು1ಚಮಚ, ಮೆಂತೆ1/2 ಚಮಚ ,ಮೂರನ್ನು ಎಣ್ಣೆ ಹಾಕಿ ಬೇರೆ,ಬೇರೆ ಹುರಿಯಿರಿ.ಕೊತಂಬರಿ(ಧನಿಯ)3 ಚಮಚ , ಜೀರಿಗೆ 1.5ಚಮಚ,ಓಮ 1/2 ಚಮಚ ಎಲ್ಲವನ್ನೂ ಎಣ್ಣೆ ಹಾಕದೆ ಹುರಿಯಿರಿ. ಹುರಿದ ಎಲ್ಲಾ ಸಾಮಗ್ರಿಗಳನ್ನು ಮತ್ತು ಅರಶಿನ ಹುಡಿ1/2ಚಮಚ ಬೆಳ್ಳುಳ್ಳಿ5 ಎಸಳು,ಚಿಕ್ಕ ತುಂಡು ಶುಂಠಿ ಎಲ್ಲವನು ಮಿಕ್ಸಿಯಲ್ಲಿ ಹುಡಿ ಮಾಡಿ.ನಂತರ ಗ್ರೈಂಡರ್ ಗೆ ಹಾಕಿ ನಯವಾಗಿ ರುಬ್ಬರಿ.ಚಿಕ್ಕ ಒಂದು ನೀರುಳ್ಳಿಯನ್ನು ತೆಂಗಿನ ಎಣ್ಣೆ ಹಾಕಿ ಹುರಿಯಿರಿ. ನಂತರ ಹುಣಸೆ ಹುಳಿ ಹುರಿದ ನೀರುಳ್ಳಿಯನ್ನು ಗ್ರೈಂಡರ್ ಗೆ ಹಾಕಿ.ನಯವಾಗಿ ರುಬ್ಬಿದ ಮಸಾಲದೊಟ್ಟಿಗೆ ಗ್ರೈಂಡರ್ ನಲ್ಲಿ ಪುನಃ10 ನಿಮಿಷ ರುಬ್ಬಿರಿ.ರುಬ್ಬಿದ ಮಸಾಲ ಪಾತ್ರೆಗೆ ಹಾಕಿ.ಅದಕ್ಕೆ ದೊಡ್ಡ ನೀರುಳ್ಳಿ1, ಹಸಿಮೆಣಸು 5, ಒಂದು ತುಂಡು ಶುಂಠಿ ಯನ್ನು ಚಿಕ್ಕ, ಚಿಕ್ಕತುಂಡು ಮಾಡಿ ಮಸಾಲೆಗೆ ಹಾಕಿ ಉಪ್ಪು ಹಾಕಿ ಕುದಿಸಿ.ಮಸಾಲೆ ಕುದಿದ ನಂತರ ಮೀನು ಹಾಕಿ .ಮೀನು ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ .7 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ತೆಂಗಿನ ಎಣ್ಣೆ 2 ಚಮಚ ಹಾಕಿ ಕೈಯಿಂದ ಹಿಸುಕಿ ಮೀನು ಪುಳಿಮುಂಚಿಗೆ ಹಾಕಿ.ಸ್ವಲ್ಪ ಕೊತ್ತಂಬರಿ ಸೊಪ್ಪು ಕಟ್ ಮಾಡಿ ಹಾಕಿ ಬೂತಾಯ್ ಪುಳಿಮುಂಚಿ ರೆಡಿ.

Комментарии • 117