Ep-2|ಕೆಂಪೇಗೌಡರ ವಂಶದ ಮೂಲ ಯಾವುದು..?|History of Kempe Gowda I|Gaurish Akki Studio|GaS

Поделиться
HTML-код
  • Опубликовано: 26 июн 2023
  • ನಾಡಪ್ರಭು ಕೆಂಪೇಗೌಡರ ಜಯಂತಿ ಹಿನ್ನೆಲೆಯಲ್ಲಿ ಕೆಂಪೇಗೌಡರ ಬಗ್ಗೆ ವಿದ್ವತ್ಪೂರ್ಣ ಸಂಶೋಧನಾ ಗ್ರಂಥ ರಚನೆ ಮಾಡಿರುವ ಇತಿಹಾಸ ತಜ್ಞರಾದ ಡಾ.ತಲಕಾಡು ಚಿಕ್ಕ ರಂಗೇಗೌಡರು ಗೌರೀಶ್ ಅಕ್ಕಿ ಸ್ಟುಡಿಯೋಗೆ ಆಗಮಿಸಿದ್ದರು. ಪ್ರಮುಖವಾಗಿ ಕೆಂಪೇಗೌಡರನ್ನು ಕುರಿತ ಸಂವಾದ ಇದಾಗಿತ್ತು.
    ಕೆಂಪೇಗೌಡರ ಹುಟ್ಟು, ಇತಿಹಾಸ, ಬೆಂಗಳೂರಿನ ಸ್ಥಾಪನೆ ಜೊತೆಜೊತೆಗೆ ಅವರನ್ನು ಕುರಿತ ತಪ್ಪು ತಿಳಿವಳಿಕೆಯನ್ನು ತೊಡೆದು ಹಾಕುವ ಪ್ರಯತ್ನ ಈ ಸಂವಾದದಲ್ಲಿದೆ. ತಪ್ಪದೇ ವೀಕ್ಷಿಸಿ..
    ಇವರು ಸಂಪಾದಿಸಿರುವ ಪುರಾಣೈತಿಹಾಸಿಕ ಸಂಶೋಧನಾ ಕೃತಿ -ʼಶ್ರೀ ಕೆಂಪೇಗೌಡ ರಾಜವಂಶ ಚರಿತೆʼ ಪುಸ್ತಕ ಖರೀದಿಸಲು ಕರೆ ಮಾಡಿ : 98450 56075. ಈ ಕೃತಿ ಅಂಕಿತ ಪುಸ್ತಕ, ನವ ಕರ್ನಾಟಕ, ಸಪ್ನಾ ಬುಕ್‌ ಹೌಸ್‌ ಮುಂತಾದ ಮಳಿಗೆಗಳಲ್ಲಿ ಲಭ್ಯವಿದೆ.
    ===================
    ಡಾ. ತಲಕಾಡು ಚಿಕ್ಕರಂಗೇಗೌಡ ಎಂ. ಎ., ಡಿ'ಲಿಟ್.,
    ಡಾ. ತಲಕಾಡು ಚಿಕ್ಕರಂಗೇಗೌಡರು ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ತಾಲೂಕಿನ ತಲಕಾಡು ಗ್ರಾಮದಲ್ಲಿ ದಾನಿ ಜಮೀನ್ದಾರ್ ಚಾವಡಿ ರಂಗೇಗೌಡರ ಮನೆತನದಲ್ಲಿ ದಿನಾಂಕ 05.02.1962ರಲ್ಲಿ ಹುಟ್ಟಿದರು. ಇವರ ತಂದೆ ದಿ.ಗಿರಿಗೌಡರು ಹಾಗೂ ತಾಯಿ ದಿ. ಚಂದ್ರಮ್ಮ ಅಪ್ಪಟ ರೈತ ದಂಪತಿಗಳು. ಮಗನ ವಿದ್ಯಾಭ್ಯಾಸದ ಸಲುವಾಗಿಯೇ ಈ ದಂಪತಿಗಳು ತಮ್ಮ ವಾಸ್ತವ್ಯವನ್ನು ತಲಕಾಡು ಗ್ರಾಮದಿಂದ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಮಹಾನಗರಕ್ಕೆ ಬದಲಾಯಿಸಿದರು. ಇದರ ಪರಿಣಾಮವಾಗಿ ಡಾ.ತಲಕಾಡು ಚಿಕ್ಕರಂಗೇಗೌಡರು ಬೆಂಗಳೂರಿನ ಮಲ್ಲೇಶ್ವರದ ಶ್ರೀ ಸರಸ್ವತಿ ಮಹಿಳಾ ಸಮಾಜ, ಶೇಷಾದ್ರಿಪುರ ಪ್ರೌಢಶಾಲೆ ಮತ್ತು ಎಂ.ಇ.ಎಸ್. ಕಾಲೇಜುಗಳಲ್ಲಿ ತಮ್ಮ ಶಾಲಾ ಕಾಲೇಜು ಶಿಕ್ಷಣಗಳನ್ನು ಪೂರೈಸಿದರು. ಇದರ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ತದನಂತರ 'ತಲಕಾಡು : ಸಾಂಸ್ಕೃತಿಕ ಅಧ್ಯಯನ' ಎಂಬ ವಿಷಯದ ಮೇಲೆ ಆಳವಾದ ಸಂಶೋಧನೆ ನಡೆಸಿ ಪ್ರೌಢ ಪ್ರಬಂಧವನ್ನು ರಚಿಸಿ ಅದನ್ನು ಕನ್ನಡ ವಿಶ್ವವಿದ್ಯಾಲಯ, ಹಂಪಿ ಇಲ್ಲಿಗೆ ಸಲ್ಲಿಸಿ 'ಡಾಕ್ಟರ್ ಆಫ್ ಲೈಟರೇಚರ್' ಪದವಿಯನ್ನು ಪಡೆದರು.
    ಯುವಕರಾಗಿದ್ದಾಗಲೇ ಇಡೀ ದೇಶವನ್ನು ಸುತ್ತಬೇಕೆಂದು ಇಚ್ಛೆ ಪಟ್ಟು ಅದರಂತೆ 1980 ರಲ್ಲಿ ಸೈಕಲ್ನಲ್ಲಿ ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಪ್ರವಾಸ ಮಾಡಿ ಬಂದರು.ನಂತರ 1981ರಲ್ಲಿ ಹಿಮಾಲಯ ಪರ್ವತವನ್ನು ಕಾಲ್ನಡಿಗೆಯಲ್ಲಿ ಸುತ್ತಿ ಬಂದರು. ಇದಕ್ಕಾಗಿ ಇವರಿಗೆ 1992ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. 2018 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇವರಿಗೆ 'ನಾಡಪ್ರಭು ಕೆಂಪೇಗೌಡ ಪ್ರಶಸ್ತಿ' ನೀಡಿ ಗೌರವಿಸಿದೆ.
    ತಮ್ಮ ವಿದ್ಯಾಭ್ಯಾಸದ ನಂತರ ಆಂತರಿಕ ಲೆಕ್ಕ ಪರಿಶೋಧಕರಾಗಿ ವೃತ್ತಿಯನ್ನು ಆರಂಭಿಸಿದ ಇವರು ಬೆಂಗಳೂರು, ಭೂಪಾಲ್, ನವದೆಹಲಿ, ನಾಗಪುರ, ಬಾಂಬೆ, ಸಿಕಂದರಾಬಾದ್, ಮದ್ರಾಸ್, ಹಿಂದೂಪುರ, ಅನಂತಪುರ, ಶಿವಮೊಗ್ಗ, ಧಾರವಾಡ, ಚಿತ್ರದುರ್ಗ, ಹಾಸನ, ಮಡಿಕೇರಿ ಮತ್ತು ಮೈಸೂರುಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿ ಲೋಕಜ್ಞಾನವನ್ನು ಪಡೆದರು.
    ಚೆಲುವ ಕನ್ನಡನಾಡು, ಮಣ್ಣಿನ ಮಕ್ಕಳು ಮಾಸ ಪತ್ರಿಕೆಯ ಸಂಪಾದಕರಾಗಿಯೂ, ಈ ಸಂಜೆ ಪತ್ರಿಕೆಯ ವಿಶೇಷ ಬಾತ್ಮಿದಾರರಾಗಿಯೂ ಮತ್ತು 'ಸೂರ್ಯೋದಯ' ಕನ್ನಡ ದಿನಪತ್ರಿಕೆಯ ಆಡಳಿತಾಧಿಕಾರಿಯಾಗಿಯೂ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿರುವ ಇವರು ಕನ್ನಡಿಗರೇ ಒಂದಾಗಿ, ದಲಿತರ ಪ್ರಥಮ ವಿದ್ಯಾಗುರು ತಲಕಾಡು ರಂಗೇಗೌಡರು, ಟಿಪ್ಪು ಸುಲ್ತಾನ್ ಕಾಲದ ಪ್ರಸಂಗಗಳು, ವಿಜಯನಗರ ಸಾಮ್ರಾಜ್ಯದ ಅಮರ ನಾಯಕ ಶ್ರೀಮತು ರಾಜಮಾನ್ಯ ಶ್ರೀ ಕೆಂಪೇಗೌಡ ರಾಜವಂಶ ಚರಿತೆ ಎಂಬ ಕೃತಿಗಳನ್ನು ರಚಿಸಿದ್ದಾರೆ.
    ಕರ್ನಾಟಕ ರಾಜ್ಯ ಸರ್ಕಾರ ರಚಿಸಿರುವ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾಗಿ ಹಾಗೂ ಇತಿಹಾಸಿಕ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾಧಿಕಾರವು ಸ್ಥಾಪಿಸಿರುವ ಪೀಠವೂ ಸೇರಿದಂತೆ 108 ಅಡಿಗಳ ಎತ್ತರದ ನಾಡಪ್ರಭು ಕೆಂಪೇಗೌಡರ ಭವ್ಯವಾದ ಕಂಚಿನ ಪ್ರತಿಮೆ ರೂಪುರೇಷೆ ನಿರ್ಧಾರ ಮಾಡುವಲ್ಲಿ ಅಂದರೆ ನಾಡಪ್ರಭು ಕೆಂಪೇಗೌಡರ ದೇಹದಾರ್ಡ್ಯತೆ, ಮುಖಚರ್ಯೆ ಹೇಗಿರಬೇಕೆಂಬ ಬಗ್ಗೆ ಸಲಹೆ ಸೂಚನೆ ನೀಡಿ ಅದು ಭವ್ಯವಾಗಿ ರೂಪುಗೊಳ್ಳುವಂತೆ ಪಾತ್ರ ವಹಿಸಿದ್ದಾರೆ. ಜೊತೆಗೆ ನಾಡಪ್ರಭುಗಳ ಬೃಹತ್ ಕಂಚಿನ ಪ್ರತಿಮೆಯ ಪೀಠದ ಸುತ್ತ ಇರುವ 18 ಅಡಿಗಳ ನಾಲ್ಕು ಭಿತ್ತಿಚಿತ್ರಗಳಾದ ನಾಡಪ್ರಭು ಕೆಂಪೇಗೌಡರು ಒಡ್ಡೋಲಗದಲ್ಲಿ ಆಸೀನರಾಗಿ ಕೆರೆ ನಿರ್ಮಾಣದ ಬಗ್ಗೆ ಸಮಾಲೋಚನೆಯಲ್ಲಿ ತೊಡಗಿರುವ ದೃಶ್ಯ, ನಾಡಪ್ರಭು ಕೆಂಪೇಗೌಡರು ಕುಟುಂಬ ಸಮೇತರಾಗಿ ಆದಿ ಚುಂಚನಗಿರಿಯ ಶ್ರೀ ಕಾಲಭೈರವನ ಪೂಜೆಯಲ್ಲಿ ಪಾಲ್ಗೊಂಡಿರುವ ದೃಶ್ಯ, ನಾಡಪ್ರಭು ಕೆಂಪೇಗೌಡರಿಂದ ಬೆಂಗಳೂರು ಪೇಟೆಗಳ ವೀಕ್ಷಣೆಯ ದೃಶ್ಯ ಹಾಗೂ ಅಮರನಾಯಕ ನಾಡಪ್ರಭು ಕೆಂಪೇಗೌಡರು ನಿರ್ಮಾಣ ಹಂತದಲ್ಲಿರುವ ಬೆಂಗಳೂರು ಕೋಟೆಯನ್ನು ವೀಕ್ಷಿಸುತ್ತಿರುವ ದೃಶ್ಯಗಳನ್ನು ಆಳವಾಗಿ ಅಧ್ಯಯನ
    ಮಾಡಿ ನೀಡಿದ ಶ್ರೇಯಸ್ಸು ಇವರದು. ಈ ಭವ್ಯವಾದ ಪ್ರತಿಮೆಯು London books of world record ಪ್ರಕಾರ ನಗರವೊಂದರ ನಿರ್ಮಾತೃವೊಬ್ಬರ 108 ಅಡಿಗಳ ಎತ್ತರದ ಲೋಹದ ಪ್ರತಿಮೆಯೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿತವಾಗಿರುವುದು ಪ್ರಪಂಚದಲ್ಲಿ ಇದೆ ಮೊದಲು ಎಂದು ದಾಖಲಾಗಿದೆ.
    ===================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    #nadaprabhukempegowda #birthanniversary #gaurishakkistudio #talakaduchikkarangegowda #historian #history #kempegowda #kempegowdastatue
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 31

  • @gurunaik8826
    @gurunaik8826 Год назад +7

    ಗಂಡುಗಲಿ ಕೃಷ್ಣದೇವರಾಯ

  • @prakashsw9194
    @prakashsw9194 9 месяцев назад

    Super episode

  • @ananthabhat1774
    @ananthabhat1774 Год назад +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ 😊

  • @geegle230
    @geegle230 Год назад +2

    ಇತಿಹಾಸ ಸೊಗಸಾಗಿದೆ, ಧನ್ಯವಾದಗಳು 💐

  • @roushantara345
    @roushantara345 11 месяцев назад

    Super

  • @arikesarik.k6414
    @arikesarik.k6414 Год назад +3

    ಚಿಕ್ಕರಂಗೇಗೌಡರು ಉತ್ತಮ ಮಾಹಿತಿ ನೀಡಿದ್ದಾರೆ. ಅವರಿಗೆ ಧನ್ಯವಾದಗಳು.

  • @veerupateel93
    @veerupateel93 Год назад +1

    ಅದ್ಭುತ ಕಾರ್ಯಕ್ರಮ

  • @srikanthgowda8419
    @srikanthgowda8419 11 месяцев назад

    Jai kempegowda 🤗🙏

  • @anup256
    @anup256 Год назад

    Great info. Great History.!

  • @manju-uu6yc
    @manju-uu6yc Год назад

    Gawrish sariyada samayadalli olle subject .thanks

  • @DHORESAHEBH-re6lo
    @DHORESAHEBH-re6lo Год назад

    Great explain, super history

  • @kalakappajadhav7271
    @kalakappajadhav7271 Год назад

    ಇತಿಹಾಸಕಾರರು ಉತ್ತಮವಾಗಿ ಹೆಳಿದ್ದಾರೆ.

  • @mamathaim4587
    @mamathaim4587 Год назад

    Excellent information 🙏

  • @harishms4109
    @harishms4109 Год назад +1

    Very intresting episode.
    Eger to watch next episode, plz upload.

  • @jyothisundar8067
    @jyothisundar8067 Год назад

    ಧನ್ಯವಾದಗಳು

  • @sukeshsuke4048
    @sukeshsuke4048 8 месяцев назад

    Amar nayaka created by chikkarangegouwda

  • @coronanews9256
    @coronanews9256 Год назад

  • @RameshRock-bx7mh
    @RameshRock-bx7mh Год назад

    Super sir ⚘🙏

  • @shobhakumar2271
    @shobhakumar2271 Год назад +1

    Very interested and TRUE history 👌

  • @SunilGowdaSN
    @SunilGowdaSN Год назад

    Nadaparbhu kempegowda 🙏

  • @MalgudiJunction
    @MalgudiJunction Год назад

    ವಿಜಯನಗರ ಸಾಮ್ರಾಜ್ಯ 🙏🏻

  • @shivarudraiahswamy4278
    @shivarudraiahswamy4278 Год назад

    ಯಲಹಂಕದ ವಿಜಯ ನಗರದ ಪ್ರತಿನಿಧಿ ಹೆಸರು ತಿಳಿಯಲಿಲ್ಲ

  • @m.b.nagaraj7666
    @m.b.nagaraj7666 Год назад +1

    ಇತಿಹಾಸ ಸುಳ್ಳಿನ ಕಂತೆ

  • @thedon207
    @thedon207 Год назад

    Chikkaramgegowdara pata kelode chanda

  • @user-pf3qw7np7h
    @user-pf3qw7np7h Год назад

    Hesaralle gottagalva avru kannadirgaru antha