ಕಣ್ಣೀರಾಕಿದ Prof.Krishne Gowda : ನನ್ನ ಮಗಳಿಗೂಸ್ಕರ ನಮ್ಮ ಬೀಗರಿಗೆ ಪತ್ರ ಬರೆದೆ..!

Поделиться
HTML-код
  • Опубликовано: 31 авг 2022
  • Prof. Krishne Gowda :ಹೆಣ್ಣು ಮಗುವನ್ನು ಸಾಕದೆ ಇದ್ದರೆ ಮನೆ ಪೂರ್ಣ ವಾಗುವುದಿಲ್ಲ ಪ್ರೊಫೆಸರ್ ಕೃಷ್ಣೇಗೌಡ..! #krishnegowda #lifestory
    ಪ್ರೊ. ಕೃಷ್ಣೇಗೌಡ - Life Story Prof Krishne Gowda
    ಟೀಚರ್ ಅಂತ ಅಲ್ಲ ನನ್ನನ್ನು ಯಾವಾಗ ಟೀಚರ ಎಂದು ಕರೆಯುತ್ತಾರೆ ಎಂದರೆ ಸ್ಟೂಡೆಂಟ್ ಗಳು ಇದ್ದಾರೆ ಅವರಿಲ್ಲವಾದರೆ ನನ್ನನ್ನು ಟೀಚರ್ ಎಂದು ಯಾರು ಕರೆಯುತ್ತಾರೆ ಹಾಗೆ ನಾನು ಒಬ್ಬ ತಂದೆ ಕೂಡ ತಂದೆ ಎಂದು ಯಾವಾಗ ಅದೇ ನಾನು ಎಂದರೆ ನನಗೆ ಒಬ್ಬಳು ಮಗಳು ಬಂದ ಮೇಲೆ ಅಲ್ಲಿಯವರೆಗೂ ನಾನು ತಂದೆಯಲ್ಲ ಒಬ್ಬ ಮನುಷ್ಯ ಗಂಡು. ಹೆಣ್ಣು ಮಗುವನ್ನು ಸಾಕದೆ ಇದ್ದರೆ ಮನೆ ಪೂರ್ಣ ವಾಗುವುದಿಲ್ಲ
    #kannada #kannadanews #kannadanews #krishnegowda #krishnegowdruspeach, #life #lifestory #krishnegowdrucomedy #standupcomedy #kannadacomedy #standup #kannada #cininewsintamil #karnataka #cinimaticvideo #pratidhvaninews #pratidhvani #comedy #comedyclub #Pratidhvani #PratidhvaniMedia #karnataka #ಕನ್ನಡ #ಕನ್ನಡನ್ಯೂಸ್ #mysore #dboss #dbossfans #viral #viralvideo #video #india #standupcomedy #siddaramaiah #narendramodi #drrajkumar #rajkumar #darshan #darshanthoogudeepa
    Krishne Gowdru Comedy Central Kannada Filmy Duniya Group ಕನ್ನಡ ಸಿನಿಮಾ ಅಭಿಮಾನಿಗಳು - Kannada Cinema Abhimanigalu Kannada comedy #siddaramaiah #dboss #kicchasudeep #sumalatha #comedy #viralvideo #viral #kannada #karnataka #dkshivakumar #hdkumaraswamy #sandalwood #bollywood #drrajkumar #shivanna #dhruv #puneethrajkumar #appu #politics #police #loksabhaelection2024 #narendramodi #rahulgandhi

Комментарии • 598

  • @sathyanaru
    @sathyanaru 2 дня назад +1

    ನಮ್ಮ ಒಡಲಂಗಳದಿ ಬೆಳೆದೊಂದ ಹೂವನ್ನೆ ನಿಮ್ಮ ಮಡಿಲೊಳು ಇಡಲು
    ತಂದಿರುವೆವು...... ಎಂಬೊಂದು ನುಡಿಯಂತೆ , ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.🎉🎉❤❤

  • @lokeshnk3258
    @lokeshnk3258 23 дня назад +7

    ಪ್ರೋ ಕೃಷ್ಣೇಗೌಡ ಸರ್ ನೀವು ನಿಜವಾಗಿಯೂ ಪುಣ್ಯವಂತರು
    ಆದರೆ ನಾನು ತುಂಬಾ ನತದೃಷ್ಟ
    ನನಗೆ ಇಬ್ಬರು ಮಕ್ಕಳು ಇದ್ದಾರೆ
    ಒಬ್ಬ ಮಗ ಮತ್ತು ಒಬ್ಬಳು ಮಗಳು
    ಇಬ್ಬರು ಕೂಡ ನನ್ನ ಮಾತು ಕೇಳುವುದ್ದಿಲ್ಲ
    ನನಗೆ ಜೀವನದಲ್ಲಿ ತುಂಬಾನೇ ನೋವು
    ಅನುಭವಿಸುತ್ತೀದೇನೆ
    ಇಬ್ಬರ ವಯಸ್ಸು ಕೂಡ 30 ದಾಟಿದೆ
    ಇನ್ನೂ ವಿವಾಹ ಆಗಿರುವುದಿಲ್ಲ🙏🌹

  • @ksrikanthapuranika1977
    @ksrikanthapuranika1977 Год назад +63

    ಅದ್ಭುತ ಸಂದರ್ಶನ, ಕೇಳಿ ಕಣ್ತುಂಬಿ ಬಂತು, ಹೃದಯ ಹಗುರಾಯಿತು. ಧನ್ಯವಾದಗಳು

  • @pushpashetty3710
    @pushpashetty3710 11 месяцев назад +27

    ಧನ್ಯವಾದಗಳು ಗೌಡರೆ, ನಿಮ್ಮ ಮಾತುಗಳನ್ನು ಕೇಳಿ ಮನಸ್ಸು ತುಂಬಿ ಹೋಯಿತು. ಎಂಥಾ ಅದ್ಭುತವಾದ ಸಂದರ್ಶನ

  • @nanjundaiahk2180
    @nanjundaiahk2180 Месяц назад +4

    ಧನ್ಯೋಶ್ಮಿ ಕೃಷ್ಣೇಗೌಡರೆ, ನನಗೆ ಒಬ್ಬಳು ಮಗಳಿದ್ದಾಳೆ ಅವಳಿಗೆ ಕಿವಿ ಕೆಳಿಸುವುದಿಲ್ಲ ಮಾತು ಬರುವುದಿಲ್ಲ ಬಹಳ ಕಷ್ಟಪಟ್ಟಿದ್ದೇವೆ ನಿವು ಅಸೆ ಪಟ್ಟಂತೆ ನಮಗೂ ಹೆಣ್ಣು ಮಗಳೆ ಬೇಕೆಂದು ಪಡೆದೆವು ನನ್ನ ನಿಲ್ರಷ್ಕದಿಂದ ಮೂಕಿಯಾಗಿದ್ದು ಪ್ರತಿ ದಿನ ನೋವನ್ನನನುಬವಿಸುತ್ತಿದ್ದೇವೆ ಅದರೂ ನಮ್ಮನ್ನ ನೋಡಿಕೋಳ್ಳುತ್ತಿರುವವಳೆ ಅವಳು ನಿಮಗೆ ಧನ್ಯವಾದಗಳು.

    • @parvathihammigi2794
      @parvathihammigi2794 8 дней назад

      ಏನಾಯ್ತು ಸರ್... ನಿಮ್ಮ ಮಗಳಿಗೆ ಯಾಕೆ ಮಾತು ಬರಲ್ಲ... ತುಂಬಾ ನೋವಾಯಿತು...

  • @goutamnakhate5461
    @goutamnakhate5461 Год назад +28

    ಅದ್ಭುತ ಮಾತುಗಳು. ಹೃದಯ ತುಂಬಿ ಬಂತು. ನೂರು ಕಾಲ ಬಾಳಿ. ನಿರಂತರ ಕನ್ನಡ ಸೇವೆ ಮುಂದುವರೆಯಲಿ.

  • @indarakumarbhadravathi548
    @indarakumarbhadravathi548 Год назад +38

    ನಿಮ್ಮದು ದೇವ ವಾಕ್ಯಗಳು ಪ್ರೊಫೆಸರ್ sir,,,, ತುಂಬಾ ಅರ್ಥಗರ್ಭಿತ ಸಂದರ್ಶನ

  • @ravihs5932
    @ravihs5932 2 месяца назад +10

    ಏನ್ ಹೇಳೋದು ಸಾರ್ ನಿಮ್ಮ ಪತ್ರ ನನ್ನ ಕಣ್ಣೀರು ಆಯಿತು ಅಷ್ಟೆ ಧನ್ಯೋಸ್ಮಿ🎉

  • @srinivasam6644
    @srinivasam6644 Год назад +24

    Best interview sir. ಪ್ರೊ. ಕೃಷ್ಣೇಗೌಡರು ತುಂಬಾ ಉತ್ತಮವಾಗಿ ಸೊಗಸಾಗಿ ಬದುಕಿನ ಪ್ರೀತಿಯ ಅರ್ಥ ತಿಳಿಸಿದ್ದಾರೆ
    ಧನ್ಯವಾದಗಳು.. ಸರ್..🙏🙏

  • @shashidhargowda7351
    @shashidhargowda7351 Год назад +16

    ಧನ್ಯೋಸ್ಮಿ ಕೃಷ್ಣೆ ಗೌಡರಿಗೆ.
    ತಂದೆ, ತಾಯಿ ಕೇಳಿದ್ದೆ, ಮಗಳು ಬಗ್ಗೆ ಕೇಳಿರಲಿಲ್ಲ. ತುಂಬಾ ಚೆನ್ನಾಗಿ ಹೃ ದಯಕ್ಕೆ ತಟ್ಟುವಂತೆ ಮಾತನಾಡಿದ್ದು ಭಾವುಕರನ್ನಾಗಿಸಿತು.
    ನನಗೆ ಒಬ್ಬ ಮಗ, ಅವನ್ನನ್ನು ನಾವು ಯಾವಾಗಲೂ ಸಹ ಮಗನಾಗಿ ಮತ್ತು ಮಗಳಾಗಿ ನೋಡುತ್ತೇವೆ. ನಮ್ಮ ಮನಸಿನ್ನಲ್ಲಿ ಹೃದಯದಲ್ಲಿ ಯಾವಾಗಲೂ ಸಹ ನೀವು ಹೇಳಿದ ಹಾಗೆ ಸವಿಯುತಿದ್ಧೇವು. ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು.

  • @vanishree9010
    @vanishree9010 Месяц назад +2

    ನನಗೆ ಹೆಣ್ಣು ಮಕ್ಕಳು ಇಲ್ಲದಿದ್ದರೂ ಇಬ್ಬರು ಗಂಡು ಮಕ್ಕಳನ್ನು ನೀವು ಹೇಳಿದ ರೀತಿಯಲ್ಲಿ ಬೆಳೆಸಿರುವುದು ಮತ್ತು ಅವರಿಬ್ಬರೂ ನಮ್ಮೆಲ್ಲರ ಮೇಲೆ ಇಟ್ಟಿರುವ ಪ್ರೀತಿ ಪ್ರೇಮ ವಿಶ್ವಾಸ ಖುಷಿ ಆಗುತ್ತದೆ. ತುಂಬಾ ಧನ್ಯವಾದಗಳು ಸರ್.

  • @madhurabhagya6872
    @madhurabhagya6872 4 месяца назад +8

    ನಿಮ್ಮ ಸಂದರ್ಶನ ಪೂರ್ತಿ ನೋಡುವ ಮೊದಲೇ coment ಮಾಡೋ ಆಸೆ, ನಿಮ್ಮ ಅನಿಸಿಕೆ ಹೇಳ್ತಾ ಇರುವಿರಿ ಅನ್ನಿಸ್ತಾ ಇಲ್ಲ ನನ್ನ ಅನಿಸಿಕೆ ಹೇಳ್ತಾ ಇದ್ದೀರಾ ಅನ್ನಿಸಿ ಹೋಯಿತು, ನಿಮ್ಮನ್ನು ಕಂದ ನನ್ನಾಗಿ ಪಡೆದ ಕನ್ನಡಮ್ಮ ಅದೆಷ್ಟು ಧನ್ಯಳೋ, ಕನ್ನಡಮ್ಮನ ಮಕ್ಕಳಾಗಲು ಅದೆಷ್ಟು ಪುಣ್ಯ ಬೇಕಲ್ವಾ....... ನಿಜವಾಗಲೂ ಹೆಣ್ಣು ಮಕ್ಕಳಿಲ್ಲದ ಜೀವನ ಬರಡು, ಬಂಜರು,sir.❤❤❤❤❤❤

  • @parvathihammigi2794
    @parvathihammigi2794 9 дней назад +2

    ಕೃಷ್ಣೇಗೌಡ ಸರ್ ಎಂತಹ ಸಂಸ್ಕಾರ... ಸಂಸ್ಕೃತಿ ಬಿಂಬಿಸುವ ನುಡಿ ಮುತ್ತುಗಳು...! ನನಗೀಗ ೫೭ ವರ್ಷಗಳು...ನಾನೂ ನಿಮ್ಮ ಮಗಳಾಗಿ ಹುಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನಿಸುತ್ತದೆ... ನಿಮ್ಮ ಕುಟುಂಬ.. ನಿಮ್ಮ ವಿದ್ಯಾರ್ಥಿಗಳು ಬಹು ಪುಣ್ಯವಂತರು...

  • @spg6651
    @spg6651 11 месяцев назад +8

    ಕೃಷ್ಣೆ ಗೌಡ್ರೆ -- ನಿಮ್ಮ ಈ ಮಾತು ಶಾಲೆಯಾ ಪಠ್ಯ ಪುಸ್ತಕದಲ್ಲಿ ಬರ್ಬೇಕು -- ಜೀವನವನ್ನ ಹೇಗೆ ಸವಿಯಬೇಕು ಎಂಬುದನ್ನ ತುಂಬಾನೇ ಚನ್ನಾಗಿ ನಮಿಗೆ ಕಲಿಸಿದ್ದೀರಿ .. ಎಷ್ಟಾದ್ರೂ ನೀವು ಮೇಸ್ಟ್ರು ಅಲ್ಲವೇ -- ನಾವೆಲ್ಲರೂ ನಿಮ್ಮ ವಿದ್ಯಾರ್ಥಿ ಗಳಾಗಿದ್ದಿವೆ .. ನಿಜವಾಗಿ ಹೇಳಬೇಕೆಂದ್ರೆ -- ನಿಮ್ಮ ಈ ಮಾತು ನಮ್ಮ ಸನಾತನ ಧರ್ಮದ ಸಾರ ಅನ್ನಬಹುದು ." ಇಂದಿನ ದಿನಸು ಸುದಿನ ನಾಳೆಗೆ ಎಂದರೆ ಅದು ಕಠಿಣ " ಅಂತ ಪುರಂದರ ದಾಸರು ಎಲ್ಲ ಕಾಲವನ್ನೇ ಒಳ್ಳೆಯದೇ ಅಂತ ಹೇಳಿರುತ್ತಾರೆ .. ಧನ್ಯವಾದಗಳು ಸರ್ ..

  • @savithreeks8676
    @savithreeks8676 26 дней назад +2

    ಮುತ್ತಿನಂಥ ಮಾತಾಡಿದೀರೀ... ಧನ್ಯವಾದಗಳು ನಿಮಗೆ 👏

  • @manjulamanasa302
    @manjulamanasa302 Год назад +30

    ಅಧ್ಬುತ ಮಾತುಗಳಿಂದ ಎಲ್ಲ ರ ಮನಸ್ಸಿನಲ್ಲೂ ಶಾಶ್ವತವಾಗಿ ಉಳಿದಿರುವ ನಿಮಗೆ ಧನ್ಯವಾದಗಳು ಅಣ್ಣ. .

  • @Bss9248
    @Bss9248 23 дня назад +1

    ಇಂದಿನ ಕಾಲ ಘಟ್ಟದಲ್ಲಿ ನಿಮ್ಮ ಈ ಅದ್ಬುತವಾದ ಸಂದರ್ಶನ ಪ್ರತಿ tande ತಾಯಿ ಮತ್ತು ಮಕ್ಕಳಿಗೆ ಬದುಕಿನಲ್ಲಿ ಗೆಲುವು ಪಡೆಯಲು ಉಪಯುಕ್ತವಾಗಿದೆ ಧನ್ಯವಾದಗಳು ಸಾರ್, ಇನ್ನು ಹೆಚ್ಚಿನ ಸಂದರ್ಶನ ಪ್ರಕಟಿಸಿ

  • @jayashreebhandari7656
    @jayashreebhandari7656 11 месяцев назад +8

    ಹತ್ತು ಗಂಡ್ಹಡದರೂ ಬಂಜೆಂಬರು ...ದಟ್ಟಿಯ ಉಡುವ ನಾರಿಯ ಕೊಡು ಶಿವನೇ ಮತ್ತೊಂದು ನಾ ಒಲ್ಲೆ ..
    ಜಾನಪದ ಹಾಡು ನೆನಪಾಯಿತು ಸರ್.ನಾನು ನಿಮ್ಮ ತರಹ ತುಂಬಾ ಭಾವುಕಳು ಮಕ್ಕಳೆಂದರೆ ❤️🙏
    ತುಂಬಾ ಅದ್ಭುತವಾದ ಸಂದರ್ಶನ.ಇಬ್ಬರಿಗೂ ಧನ್ಯವಾದಗಳು 🙏

    • @rameshgk2311
      @rameshgk2311 4 месяца назад +2

      ಅರ್ಥ ಹೇಳಿ????

  • @shanshanmugam46
    @shanshanmugam46 11 месяцев назад +15

    I am in Tamilnadu but I am an student of you in st Philomena's Mysore pls BLESS my kids sir I have two girl child but my two brothers are no more they have two kids one Two girls and another one have one girl and one boy I am looking after every one I am proud I have six kids pls Bless them from where are🙏🙏🙏

    • @rmk_ro
      @rmk_ro 2 месяца назад

      Bless you

  • @bhagyasheelak4705
    @bhagyasheelak4705 Месяц назад +4

    ಹೌದು ಸರ್ ನನ್ನ ಮಗಳು ನನ್ನ ತಾಯಿಗಿಂತಲು ಹೆಚ್ಚು ಅವಳೊಂದು ವರ ಥ್ಯಾಂಕ್ಸ್ to her

  • @sarojahs7347
    @sarojahs7347 Год назад +20

    ಸಾರ್ಥಕ ಜೀವನ ನಿಮ್ಮದು, ತಂದೆ ತಾಯಿ ಎನ್ನುವ ಪದ, ಸ್ಥಾನಕ್ಕೆ ನಿಮ್ಮಗಳ ನಿಲುವು, ನಿಮ್ಮ ಮಾತು ಪರಿಪೂರ್ಣ 🙏🙏🙏🙏🙏

  • @seemavs2508
    @seemavs2508 Год назад +74

    ಸರ್ ನಾನು ನಿಮ್ಮ ಪಾಠ ಕೇಳಿ ಬೆಳೆದಿರುವ ಮಗಳು ನಿಮ್ಮ ಈ ಸಂದರ್ಶನ ಅದ್ಭುತ. ಫಿಲೋಮಿನಾಸ್ ಕಾಲೇಜ್ ನಲ್ಲಿ ನೀವು ಮಾಡಿದ ಪ್ರತಿ ಪಾಠ ಕಣ್ಮುಂದೆ ಹಾದು ಹೋದಂಗಿತ್ತು. Awesome interview by an excellent lecturer . :)

  • @satishshetty7903
    @satishshetty7903 Год назад +6

    ಕನ್ನಡದ ಹೆಮ್ಮೆ, ಅಪೂರ್ವ ಜ್ಞಾನ ಕೋಶ ಶ್ರೀ ಕೃಷ್ಣೆಗೌಡ್ರ ಜೊತೆ ಅದ್ಬುತ ಸಂದರ್ಶನ, ಕೂಡು ಕುಟುಂಬದ ಬಗ್ಗೆ, ಮಕ್ಕಳ ಬಗ್ಗೆ ಉತ್ತಮ ಅನುಭವ ಹಂಚಿಕೊಂಡಿದ್ದೀರಿ, ಸಂದರ್ಶಕರು ಉತ್ತಮ ಜ್ಞಾನ ಹೊಂದಿದ್ದಾರೆ 💐🙏🏻👏🏻

  • @rshvin
    @rshvin Год назад +8

    ಏನ್ ಚಂದ ನಿಮ್ಮ ಮಾತು ಸರ್. ಬದುಕನ್ನು ಇಷ್ಟು ಸಿಹಿಯಾಗಿ ಕಳೇದಿರಾ!!!🙏👌 ಪುನ್ಯವಂತರಯ್ಯಾ.

  • @rajashekara3879
    @rajashekara3879 Год назад +17

    ನಿಮ್ಮ ಜೀವನ ಮೌಲ್ಯ ಅನನ್ಯವಾದುದು ನನಗೂ ಮಗಳಿದ್ದಾಳೆ,ನಿಮ್ಮ ಮಗಳ ಮದುವೆಯ ದಿನದ ನಿಮ್ಮ ಭಾವ ಈಗಲೇ ನನ್ನ ಕಣ್ಣ ಮುಂದೆಯೇ ಬರುತ್ತಿದೆ....ಇಂತಹದೊಂದು ದಿನ ನನ್ನ ಬದುಕಿನಲ್ಲಿ ಬರುವುದರಲ್ಲಿ ಸಂಶಯವಿಲ್ಲ ನಿಮ್ಮಂತಹ ಹಿರಿಯರ ಆಶೀರ್ವಾದ ನಮ್ಮ ಮೇಲಿರಲಿ...

    • @srinivasab.s7659
      @srinivasab.s7659 Год назад +1

      ನಿಮ್ಮ ಜೀವನದ ಪ್ರಯಾಣ ಅದ್ಭುತ ಮತ್ತು ಆನಂದದಾಯಕ. ನಿಮ್ಮಂತೆ ನನ್ನ ಜೀವನದಲ್ಲೂ ಕೆಲವು ಸಾಮ್ಯತೆ ಇದೆ. ಎಲ್ಲರ ಬಾಳಿನಲ್ಲೂ ಇಂತಹ ಸುಖ ಸಂತೋಷ ಲಭಿಸಲಿ.ನಿಮಗೆ ಮತ್ತು ಶ್ರೀಯುತ ಹಿರೇಮಗಳೂರು ಕಣ್ಣನ್ ರವರಿಗೆ ತುಂಬು ಹೃದಯದ ಧನ್ಯವಾದಗಳು. ಕಣ್ಣನ್ ಮಾಮ ರವರ ಆಶೀರ್ವಾದ ಎಲ್ಲರಿಗೂ ಸಿಗಲಿ

  • @Vadda9
    @Vadda9 Год назад +13

    This is one of best interview I have heard till date... Thank You very much...

  • @spg6651
    @spg6651 11 месяцев назад +5

    ನನಗೆ ಹೆಣ್ಣು ಮಗುವಾದಾಗ ನಮ್ಮ ಕಾಲೋನಿ ಯಲ್ಲಿ ನಮ್ಮ ಸಮಕಾಲೀನ ದಂಪತಿಗಳಿಗೆ ಗಂಡು ಮಗು ಆಗಿತ್ತು. ಕಂಪೆನಿ ಕಾಲೋನಿ ಆದ ಕಾರಣ ಅವೆಲ್ಲರನ ಒಡನಾಟ ಚೆನ್ನಾಗಿತ್ತು. ನನ್ನ ಮಗಳ ಬಾಲ್ಯ ನೋಡಿ ಆ ದಂಪತಿಗಳು ಹೇಳಿದ ಮಾತು ಒಂದೇ ಶಹಭಾಷ್ .. ತುಂಬಾನೇ ಹಚ್ಕೊಂಡಿದ್ರು . ಇವತ್ತು ನನ್ನ ಮಗಳಿಗೆ 23 ವರುಷ .. ತುಂಬಾನೇ ಬುದ್ದಿವಂತೆ .. ಅವಳಿಂದ ನಾನು ಕಲಿತದ್ದೇ ಜಾಸ್ತಿ .. ಜಗಳನು ಮಾಡಿದ್ದಾನೆ ಬೈಸುಕೊಂಡಿದ್ದೀನಿ .. ಎಲ್ಲ ಆಗಿದೆ .. ದೊಡ್ಡ ದೊಡ್ಡ ವಿಚಾರಗಳ ಸುದೀರ್ಘ ಚರ್ಚೆ ಇಂದ ನಾನು ತುಂಬಾನೇ ಕಲಿತಿದ್ದೀನಿ.

  • @gouvishwakosha4448
    @gouvishwakosha4448 Год назад +15

    ಅಭಿನಂದನೆಗಳು ಫ್ರೂ.ಕೃಷ್ಣೇಗೌಡ ರೇ ಹೆಮ್ಮೆ ಅನಿಸುತ್ತದೆ ನಿಮ್ ವಿಚಾರ ಕೇಳಿ.ಅಂತಯೇ ನಮ್ಮನ್ನೂ ಇಂತಹುದೇ ಮಾತುಗಳು,ಭಾವನಾತ್ಮಕತೆ, ಆತ್ಮಸ್ಥೈರ್ಯ ದೊಂದಿಗೆ ಬೆಳೆಸಿದ ನನ್ನ ತಂದೆಯವರ ಬಗ್ಗೆ ಅಖಂಡ ಪ್ರೀತಿ.ನಾನು ನನ್ನ ತಾಯ್ತಂದೆಯರ ನಾಲ್ಕನೇ ಮಗಳು.ಹಾಗಂತ ಯಾರಿಗೂ ಯಾವುದಕ್ಕೂ ಲೋಪವಾಗದಂತೆ ಸಂಸ್ಕಾರ ನೀಡಿದ ದೈವ ಅವರು.
    🙏🙏🙏

    • @vanajav5261
      @vanajav5261 Год назад

      ನಮಗೂ ಇಬ್ಬರು ಹೆಣ್ಣುಮಕ್ಕಳು. ನಿಮ್ಮ ಅನುಭವ ನಮ್ಮದು ಕೂಡ! ಆದರೆ ನಿಮ್ಮ ಹಾಗೆ ಸೊಗಸಾಗಿ, ಭಾವ ಪೂರ್ಣವಾಗಿ ಹೇಳಿದ ವರnnu ಇದುವರೆಗೆ ಕಂಡಿರ ಲಿlla!

    • @indhumathinagaraj9438
      @indhumathinagaraj9438 Год назад

      ಎಲ್ಲಾ ತಂದೆ ತಾಯಿಯರೂ ಎಲ್ಲಾ ಗಂಡು ಹೆಣ್ಣು ಮಕ್ಕಳೂ ಗಮನವಿಟ್ಟು ಕೇಳಿ ತಮ್ಮ ಮುಂಬರುವ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕೆಲ್ಲವೂ ಹಾಲು ಜೇನು ಸವಿದಂತೆಯೇ

  • @NarayanaJNani
    @NarayanaJNani 14 дней назад

    ಕಂದಾ, ನೀನು ಎರಡು ವರ್ಷದ ಕಂದ
    ನಾನು ಎರಡು ವರ್ಷದ ತಂದೆ
    ಹಾಗೆ ನೋಡಿದರೆ
    ನಮ್ಮಿಬ್ಬರ ವಯಸ್ಸೂ ಒಂದೇ
    Yenthaa sogasu! Brilliant Shri krSNE gowda 🙏

  • @Tanthyaa
    @Tanthyaa Год назад +18

    Hatts of to the richness in our kannada language, the way the sir is utilizing the richness of kannada language, superb, one of the best interview or discussion,
    ನಿಮ್ಮ್ಮ ನುಡಿ ಯಲ್ಲಿರುವ ಶ್ರೀಮಂತಿಕೆ ಅಬೂತಪೂರ್ವ,

    • @jayappas3462
      @jayappas3462 2 месяца назад +1

      ಅದ್ಭುತವಾದ ನುಡಿ Muthugalu

  • @Nagsbeankitchen
    @Nagsbeankitchen 4 месяца назад +2

    Teacher ಆಗಿರೋದರಿಂದ ಚೆನ್ನಾಗಿ ಕಥೆ ಹೇಳ್ತಾರೆ. ಎರಡೂವರೆ ಘಂಟೆ cinema ಕಥೆ ಅಷ್ಟೇ. ಚಿತ್ರಮಂದಿರದಿಂದ ಹೊರಗಡೆ ಬಂದರೆ ಗೊತ್ತಾಗುತ್ತೆ ಈ ಸಮಾಜದಲ್ಲಿ ಎಷ್ಟು crime ನಡೆಯುತ್ತೆ ಅಂತ. ಇಂತಹ ಕೆಟ್ಟ ಕೃತ್ಯಗಳಿಗೆ ನಮ್ಮ ಸರ್ಕಾರ ಸಹಾ support ಮಾಡುವಂತ ಮನೋಭಾವ ಇರುವಂತಹುದು. ನ್ಯಾಯಾಲಯಗಳು ಸಹಾ ಕಣ್ಣಿಗೆ ಬಟ್ಟೆ ಕಟ್ಟಿರುವಂತಹ ಸ್ಥಿತಿಯಲ್ಲೇ ಇವೆ. ಹಾಗಿರಬೇಕಾದರೆ ಹೆಣ್ಣು ಮಕ್ಕಳಿಗೆ ಈ ದೇಶದಲ್ಲಿ ಪ್ರೊಟೆಕ್ಷನ್ ಇದೆಯಾ.

  • @champakamalagurumurthy9434
    @champakamalagurumurthy9434 Год назад +9

    ನಾನು ಕೂಡ ಒಂದು ಹೆಣ್ಣು ಮಗುವಿನ ತಾಯಿ, ಈಗ 23ರ ಬಾಲೆ, ನನಗೊಂದು ಗಂಡು ಮಗು ಇರಬೇಕಿತ್ತು ಅನಿಸಿಯೇ ಇಲ್ಲ, ಕನ್ನಡವನ್ನೇ ಉಸಿರಾಡಿ ಪೋಷಿಸುತ್ತಾ ಇರುವ ನೀವು ಬೀಗರಿಗೆ ಬರೆದ ಪತ್ರ ಅದ್ಭುತವಾಗಿದೆ, ನಿಮಗಿದೋ ನಮ್ಮ ನಮನ

  • @manivenkataramana8985
    @manivenkataramana8985 Год назад +8

    Sir. I have met you in person. You are an asset to the NATION. GOD bless you all the time. Mani Venkataramana.Florida U.S.

  • @mohanarangappa4153
    @mohanarangappa4153 Год назад +5

    ನನಗೆ 65 ವರ್ಷ. ಸಂದರ್ಶನ ವೀಕ್ಷಿಸುವಾಗ ಪತ್ರ ಓದುವಾಗ ಕಣ್ಣಲ್ಲಿ ನೀರು ತುಂಬಿತು. ಉತ್ತಮ ಸಂದರ್ಶನವಾಗಿತು. ಧನ್ಯವಾದಗಳು

  • @shashikalakumble4322
    @shashikalakumble4322 2 месяца назад

    ಸರ್... ನಿಮಗೆ ವಂದನೆಗಳು🙏.
    ಕೃತಜ್ಞತೆಗಳು.. ಇದು ಬರಿಯ ಸಂದರ್ಶನವಲ್ಲ... ಹೆಣ್ಣನ್ನು ತಾತ್ಸರ ಭಾವದಿಂದ ಕಾಣುವವರ ಕಣ್ಣನ್ನು ತೆರೆಸಲಿ.
    ನಿಮಗೆ ಜೈ ಹೋ🙋‍♀️

  • @raghuadishesh6587
    @raghuadishesh6587 Месяц назад +1

    Every father should listen to this interview. I cried along with you sir

  • @hrnarasimhamurthyhrnarasim2284
    @hrnarasimhamurthyhrnarasim2284 Год назад +9

    Awesome interview by an excellent professor & Father

  • @vrishtimp217
    @vrishtimp217 2 месяца назад

    ತುಂಬಾ ತೂಕವಾದ ಮಾತುಗಳು ಸರ್. ನಮ್ಮ ಕಣ್ಣನ್ನೂ ತೆರೆಸಿದಿರಿ. ಧನ್ಯೋಸ್ಮಿ .

  • @madhusudhanl.g.8387
    @madhusudhanl.g.8387 Год назад +15

    Sir, we too have a daughter. Our daughter and son in law fit the description you have made.
    So are our son and daughter in law.
    Your talk made us emotional and feel how blessed we are.
    We are your fans and feel you are our family member.
    Namaskaragalu

  • @archanaalur7399
    @archanaalur7399 Год назад +8

    ನಮಗೂ ನಿಮ್ಮ ಹಾಗೆ ಇಬ್ಬರು ಹೆಣ್ಣು ಮಕ್ಕಳು. ನಿಮ್ಮ ಮನಸ್ಥಿತಿ ಯೇ ನಮ್ಮದು ಕೂಡ,ಸರ್

  • @musichousekannada
    @musichousekannada Год назад +5

    ಆನಂದದ ಬದುಕಿನ ಒಳನೋಟ ಮಾಡಿಸುವ ಸಂದರ್ಶನ. ಧನ್ಯವಾದಗಳು

  • @NagarajMadigiri
    @NagarajMadigiri Месяц назад

    ಸರ್ ಅಧ್ಬುತ ಕರುಳ ಕುಡಿಗಳ ಜೊತೆಗಿನ ಸಂಬಂಧ ಮತ್ತು ಕಳೆದ ಬದುಕಿನ ಅದ್ಭುತ ಲೋಕದ ಪರಿಚಯ ಮಾಡಿಕೊಟ್ಟಿದ್ದೀರಿ.ಧನ್ಯವಾದಗಳು.

  • @varunkakhandaki
    @varunkakhandaki Год назад +1

    ಒಳ್ಳೆ ವಿಚಾರ ತಿಳಿಸಿದ್ದಿರಿ. ಎಲ್ಲರೂ ನಿಮ್ಮ ಹಾಗೇ ವಿಶಾಲವಾಗಿ ಯೋಚಿಸಿ ಮಕ್ಕಳನ್ನು ಬೆಳೆಸುವಲ್ಲಿ ಸ್ವಲ್ಪ ಶ್ರಮವಹಿಸಿದರೆ ಸಾರ್ಥಕ ಜೀವನ ನಡೆಸಬಹುದು. 🙏🙏🙏🙏... ಇನ್ನೊಂದು ವಿಚರ ಅಂದ್ರೆ ನನ್ನ ತಂದೆ ತಾಯಿಯು ನಿಮ್ಮ ಹಾಗೇ ಒಳ್ಳೆ ಕಲ್ಪನೆಯಲ್ಲಿಯೇ ನನ್ನನು ಬೆಳೆಸಿದ್ದಾರೆ. ಇದಕ್ಕಾಗಿ ಅವರಿಗೆ ಯಾವುದೇ ಪದಗಳನ್ನು ಬಳಿಸಿ ಧನ್ಯವಾದಗಳು ಎಂದು ಹೇಳೋದು ಕಷ್ಟ.

  • @jssaraswathisvlog606
    @jssaraswathisvlog606 Год назад +13

    ನೀವು ಭಾವುಕರೂ ಔದು ಹೃದಯವಂತರೂ ಔದು.. Really you r great. Very knowledgeable person.listening to your talk we feel very proud.

  • @rekhashashi9832
    @rekhashashi9832 Год назад +1

    ಅತ್ಯುತ್ತಮ ವಿಡಿಯೋ ಇದು ಶ್ರೀ ಕೃಷ್ನೇ ಗೌಡರಿಂದ ಎಂದು ಅನ್ನಿಸಿದರೆ ಉತ್ಪ್ರೇಕ್ಷೆ ಆಗಲಾರದು..
    ಒಂದು ಘಂಟೆಯ ವೀಡಿಯೋ ಸಮಯ ಇರುತ್ತೋ ಇಲ್ಲವೋ ಅನ್ಕೊಂಡೆ... ಆದರೆ ಮದ್ಯದಲ್ಲಿ ನಿಲ್ಲಿಸಲು ಆಗಲೇ ಇಲ್ಲ... ವಿಚಾರ ವಿನಿಮಯ ಅಷ್ಟು ಹಿಡಿಸಿತು 👌👌
    ಮನ ಮುಟ್ಟುವ ವಿಚಾರ
    ಉತ್ತಮ ಪ್ರಶ್ನೆಗಳು ಅಷ್ಟೇ ಪ್ರಾಮಾಣಿಕ ಉತ್ತರಗಳು 🙏🙏🙏🙏

  • @r.rekhaiyer8397
    @r.rekhaiyer8397 Год назад +14

    Every children should get a father like you. Very blessed are you and your daughters.

  • @yashasgayathri1970
    @yashasgayathri1970 Год назад +28

    ಹೆಣ್ಣಿನ ಬಗ್ಗೆ ನಿಮ್ಮಗೆ ಇರುವ ಗೌರವ ನಿಮ್ಮ ಮಾತಿನಲ್ಲಿ ಕೇಳಿ ತುಂಬಾ ಸಂತೋಷ ಆಯ್ತು ಸರ್ ಧನ್ಯವಾದಗಳು

  • @dharmappabarki9557
    @dharmappabarki9557 11 месяцев назад +1

    ಕೃಷ್ಣೇಗೌಡರ ಈ ಸಂದರ್ಶನ ಹೃದಯವನ್ನು ತುಂಬಿಸಿತು. ಮಹಾತ್ಮರ ಸಾಲಿಗೆ ಸೇರುವ ಮಹಾತ್ಮ ಇವರು. ನಮ್ಮ ಸಮಾಜಕ್ಕೆ ಕೃಷ್ಣೇಗೌಡರು ಓರ್ವ ಗುರುವಾಗಿದ್ದಾರೆ. 🙏
    (ಸದಾಶಿವ ಅವರೇ ನಿಮಗೂ ಧನ್ಯವಾಗಳು. ನೀವಿಬ್ಬರೂ ಕುಳಿತಿರವ ಜಾಗದ ಮಧ್ಯೆ ನನಗೊಂದು ಕೌತುಕ ಕಂಡಿತು: ನೇಪಥ್ಯದಲ್ಲಿ ಕಂಡುಬಂದ ಬೆಳಕಿನ ದೀಪಗಳ ಸರಪಳಿಯು ನಿಮ್ಮಿಬ್ಬರ ಮುಖಗಳನ್ನು ಮಾರ್ಮಿಕವಾಗಿ ಕೂಡಿಸಿದಂತೆ ನನಗೆ ಭಾಸವಾಗುತಿತ್ತು). 🙏🙏

  • @meerapadaki226
    @meerapadaki226 Год назад +22

    ಪ್ರತಿಯೊಂದು ಮಾತು ಹೃದಯಸ್ಪರ್ಶಿ.ನಮ್ಮ ಮಗಳನ್ನು ನೆನೆದು ಭಾವುಕರಾದೆವು .

  • @umashankari7405
    @umashankari7405 10 месяцев назад +1

    ಒಳ್ಳೆಯ ತಿಳುವಳಿಕೆ, ಅದ್ಭುತ ಸಂದೇಶ.. 👏👏🙏🙏

  • @kanthrajdoddary8855
    @kanthrajdoddary8855 2 месяца назад +1

    ನಿಮ್ಮ ನಿಲುವು ಅತ್ಯಭ್ದು ತ❤❤❤

  • @shwethayc4088
    @shwethayc4088 Год назад +4

    ಕುಟುಂಬದ ಸಾರ್ಥಕತೆಯಿಂದಲಿ ಮೆರೆವ ಕಣ್ಣಿದು ಅದ್ಭುತ ಎಲ್ಲಾ ಪೋಷಕರೂ ಹೀಗೆ ವಿಚಾರಿಸಿದ್ರೆ 🙏🏾👍🏾👌🏾🌺

    • @shwethayc4088
      @shwethayc4088 Год назад +1

      ಹೆಣ್ಣುಮಕ್ಕಳ ಜೀವನ ಸಾರ್ಥಕವಾಗುತ್ತಿತ್ತು 👩‍❤️‍💋‍👩

  • @mallannam9627
    @mallannam9627 Год назад +7

    ಈ ಸಂದರ್ಶನ ತುಂಬಾ ಚೆನ್ನಾಗಿತ್ತು.ಪ್ರೊ. ಕೃಷ್ಣೆಗೌಡ್ರು, ಅವರ ಅಂತರಾಳಾದ ಮಾತುಗಳು ಮಾದರಿಯಾಗಿದ್ದವು.ಅವರಿಗೆ ಹೃದಯ ಪೂರ್ವಕ ನಮಸ್ಕಾರಗಳು.

  • @ThippeswamyS-rm5ew
    @ThippeswamyS-rm5ew 2 месяца назад

    ಕೃಷ್ಣೇಗೌಡರ ಮಾತುಗಳು ಒಂದೊಂದು ಅದ್ಭುತ ಮತ್ತು ಅರ್ಥಪೂರ್ಣ

  • @umamanic.p4358
    @umamanic.p4358 Год назад +22

    ಸರ್ ಅದ್ಭುತವಾದ ಸಂದರ್ಶನ .ಭಾವನಾತ್ಮಕ ವಾಗಿತ್ತು.ಹೆಣ್ಣು ಮಕ್ಕಳ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದೀರಿ . 🙏

  • @kanakappatalavar8713
    @kanakappatalavar8713 Год назад +5

    ಮನುಷ್ಯತ್ವದ ನಡುವೆ ವಿಸ್ತರಿಸಿದೀರಿ ಕುಟುಂಬದೊಳಗೆ ಲೀನವಾಗಿಸಿದಿರಿ ಧನ್ಯವಾದಗಳು

  • @mlsamaga49
    @mlsamaga49 28 дней назад

    ಬಹಳ ಔಚಿತ್ಯ ಪೂರ್ಣ ಮಾತುಗಳು 🙏

  • @ramakrishnabhatpadyana8349
    @ramakrishnabhatpadyana8349 Год назад +11

    ಅಭಿನಂದನೆಗಳು. ನಿಮ್ಮ ಮಾತುಗಳನ್ನು ಕೇಳಿ ಹೃದಯ ತುಂಬಿ ಬಂತು. ಅನಂತಾನಂತ ವಂದನೆಗಳು. 💐 💐 💐 💐 💐 ಸ್ವಸ್ತಿ.

  • @shobhalvenkatesha2727
    @shobhalvenkatesha2727 Год назад +9

    Good interview, given much space to the guest 💐

  • @chinnumudducreations593
    @chinnumudducreations593 Год назад +6

    ಸರ್ ನಿಮ್ಮ ಅನುಭವ ಅನನ್ಯ.. ನೀವು ಹೇಳುತ್ತಿದ್ದ ಅಷ್ಟು ಸಮಯ ನನ್ನ ಮಗಳೊಂದಿಗೆ ನನ್ನದೇ ಲೋಕದಲ್ಲಿ ವಿಹರಿಸುತಿದ್ದೆ

  • @ganapatimanju4442
    @ganapatimanju4442 Год назад +5

    ಅತ್ಯಮೂಲ್ಯ ಭಾವನೆಗಳು ಸರ್. ಸಮಸ್ತ ಹೆಣ್ಣು ಮಕ್ಕಳ ಜೀವನ ಹೀಗೆ ಇರಲಿ

  • @venkatramana8805
    @venkatramana8805 3 месяца назад

    ತುಂಬ ಅದ್ಬುತ ಮಾತುಗಳು ಸರ್ ಮಾಣಿಕ್ಯ ಯಾವತ್ತೂ ಮಾಣಿಕ್ ನೆ ಅನ್ನೋದನ್ನ ತಮ್ಮ ಮಾತುಗಳಲ್ಲಿ ಸಾಬೀತು ಪಡಿಸಿದ್ದಿರಿ ಸರ್ ನಿಮ್ಮಂತಹ ಸಮಾಜಕ್ಕೆ ಸಂದೇಶಗಳನ್ನು ಸಾರುವ ವ್ಯಕ್ತಿಗಳು ಬೇಕು ಸರ್ ಈವತ್ತಿನ ದಿನಗಳಲ್ಲಿ

  • @sirigowri8626
    @sirigowri8626 Год назад +8

    ನಿಜಕ್ಕೂ ನನಗೆ ಕೃಷ್ಣೆ ಗೌಡರ ಅಂತ ಅಣ್ಣ ಇ ದ್ದಿದರೆ ಅನ್ನಿಸಿತು

  • @rajeshakn2349
    @rajeshakn2349 Год назад +1

    ಒಳ್ಳೆ ವಿಚಾರ ಅದನ್ನು ಮಾತಾಡು ಹಾಗೆ ವಿಚಾರ ಮಾಡಿದ anchor ಗೆ salute

  • @indiramani9052
    @indiramani9052 Год назад +15

    ನನ್ನ ಕಣ್ಣೀರು ನಿಲ್ಲುತ್ತಿಲ್ಲ, ಸರ್.

  • @kamalaht8846
    @kamalaht8846 Год назад +1

    ಸರ್ ತುಂಬು ಹೃದಯದ ಅಭಿನಂದನೆಗಳು, ನಾನು /ನನ್ನ ಗಂಡ, ನನ್ನ ಎರಡು ಹೆಣ್ಣು ಮಕ್ಕಳಿಂದ ಭವಾನಾತ್ಮಕ ಶ್ರೀಮಂತಿಕೆ ಅನುಭವಿಸಿದ್ದೇವೆ, ಈಗಲೂ ಅನುಭವಿಸುತ್ತಿದ್ದೇವೆ. ನಿಮ್ಮ ಮಾತು ಹೃದಯದ ಮಾತಾಗಿದೆ. ಇದನ್ನು ಎಲ್ಲ ತಂದೆ -ತಾಯಿಯರು ಅನುಭವಿಸಲು ಮಾದರಿಯಾಗಲಿ. 👌🙏💐💐🌱

  • @goudappakamat828
    @goudappakamat828 4 месяца назад +1

    ಪ್ರೊಫೆಸರ್ ಮಾನ್ಯ ಕೃಷ್ಣೆಗೌಡ್ರಿಗೆ ತುಂಬು ಹೃತ್ಪೂರ್ವಕ ಅಭಿನಂದನೆಗಳು. ನನ್ನ ಮನಸಿನಲ್ಲಿ ಹುದುಗಿರುವ ನನ್ನ ಮಗಳ ಮೇಲಿನ ಪ್ರೀತಿಯ, ತಮ್ಮ ಅನುಭವ ಮಾತುಗಳನ್ನು

  • @kaverikmohan4415
    @kaverikmohan4415 Год назад +5

    ಏನು ಅದ್ಭುತ ಸರ್ ಧನ್ಯವಾದಗಳು

  • @shivakumarhs1293
    @shivakumarhs1293 Год назад +3

    ಪದಗಳಿಲ್ಲ ಮೇಷ್ಟ್ರೇ ಅದ್ಭುತವಾಗಿತ್ತು 👌🏼👌🏼👌🏼

  • @alakanandackulkarni8261
    @alakanandackulkarni8261 11 месяцев назад +2

    Very very emotional I felt very very happy to hear your kannada richness

  • @S.A.1
    @S.A.1 2 месяца назад

    I have brought up my child same way- no expectations and no advice , she has grown in to a beautiful young woman who listens to anything we say❤ Same feelings for my daughter.

  • @shekharayyahiremath565
    @shekharayyahiremath565 Год назад +1

    ತಮ್ಮ ಅನುಭವ ಅನುಭವ ಮೃತದಲ್ಲಿ ಕರ್ಪೂರದ ಉದಾಹರಣೆಯನ್ನು ಕೊಟ್ಟಿದ್ದ ಕೊಟ್ಟಿದ್ದೀರಲ್ಲ ಅದನ್ನು ಕೇಳಿ ಆತ್ಮ ಪೂರಕವಾಯಿತು ಗೌಡರೆ ಧನ್ಯವಾದಗಳು

  • @srinivasasrinivasa6989
    @srinivasasrinivasa6989 Год назад +10

    ಸರ್ ನಿಮ್ಮ ಈ ಅದ್ಭುತ ಜೀವನ ನಮಗೆ ಎಲ್ಲಾ ರಿಗೂ ಪ್ರೇರಣೆ ಸರ್ ಧನ್ಯವಾದಗಳು ಸರ್

  • @divyanagdivyashree6989
    @divyanagdivyashree6989 Год назад +9

    Excellent,Mind blowing and well said sir ,We too have 2 daughters and we are grateful to God 🙏
    And good thoughts shared by you sir
    Thank you sir

  • @vidyalakshmi3883
    @vidyalakshmi3883 Год назад +8

    ಸ್ವಾಸ್ತ್ಯ ಸಮಾಜ ನಿರ್ಮಾಣ ಆಗುವಂತಹ ಒಂದು ಸಂದರ್ಶನ, ಒಂದು ಸಂಪನ್ಮೂಲ ವ್ಯಕ್ತಿ, ಒಂದು ವಿಚಾರ,ಒಂದು channel ಬಹುಶಃ ಇದೊಂದೇ ಅನ್ಸತ್ತೆ. ಧನ್ಯವಾದಗಳು sir. ನಮ್ಮ ಹಳ್ಳಿಯ ಮುಗ್ಧ ಜನರ ಕ್ರೌರ್ಯ ಯಾವ mattakkide ಗೊತ್ತಾ sir ಹೆಣ್ಣು ಮಗು ಹುಟ್ಟಿದರೆ. ಭಯಾನಕ sir. ಅದಕ್ಕೆ ಬಲಿಯಾದ ನತದೃಷ್ಟ ತಾಯಿ ನಾನೇ ಸಾಕ್ಷಿ.

  • @WiseClasses
    @WiseClasses Год назад +26

    At the outset, let me clarify that I am writing in English not because I don't write in Kannada but because presently I don't have kannada typing keyboard. Nor can I withhold my urge to write till I get the one. Firstly, I must profusely thank this channel, of course interviewer and the speaker, for bringing this piece of AV to my access today. I enjoyed every second and every emotions, of course the most appropriate and apt vocabulary, from the beginning to the end. I felt like reading your "Autobiography", Gowdre. All your experiences are expressed here so vividly that any listener would readily agree to emulate ideals emerging out of them.

  • @r.rekhaiyer8397
    @r.rekhaiyer8397 Год назад +13

    Many fathers who won't ake the responsibility of the children should see this interview. Very proud of you sir.

  • @prbuji109
    @prbuji109 Год назад +8

    Well discussion Sir...

  • @chandrashekarrao539
    @chandrashekarrao539 Год назад +2

    ಹೃದಯದ ಅಂತರಾಳದಿಂದ ಬಂದ ಮಾತುಗಳು ನಿಮ್ಮ ಹೃದಯವನ್ನು ಕಲಕುತ್ತದೆ

  • @prabhamanitn9089
    @prabhamanitn9089 Год назад +4

    excellant interview ..my favourite person

  • @satyamedhavip7531
    @satyamedhavip7531 Год назад +1

    Heart Touching... So nice of You!

  • @sujaykumar3212
    @sujaykumar3212 Год назад +1

    It's 💯 percent TRUE and it's really in my family also I have also Two daughters. Thanku for sharing your lovely views.🙏🙏🙏🙏🙏🌹🌹🌹🌹💐💐💐💐💐💐

  • @shruthir3772
    @shruthir3772 4 месяца назад +4

    ನಿಮ್ಮ ಮಾತುಗಳು ಬಹಳ ಜನರ ಬದುಕಿಗೆ ಸ್ಪೂರ್ತಿ ಸರ್.. ಇಂಥ ಸಂದರ್ಶನಗಳನ್ನ ಕೊಡ್ತ ಇರಿ. ಬಹಳ ಜನರ ಬದುಕು ಸುಧಾರಿಸಬಹುದು. ಧನ್ಯವಾದಗಳು.

  • @konkanqueensmagic6426
    @konkanqueensmagic6426 Год назад +5

    I have 2 daughters , 3 Grand children , daughters well studied , n settled in life
    We never condemn our daughters , specially my husband was more attached to daughters , hd never even raise voice towards daughters
    But , i was very strict , towards daughters
    It was his patience , affection
    Respect
    I am lil strict , Even today

  • @Deepak_Rachi852
    @Deepak_Rachi852 Год назад +3

    ಜೀವನದಲ್ಲೊಮ್ಮೆ ಈ ಸಂದರ್ಶನವನ್ನು ನೋಡ್ಬೇಕು

  • @Dr.Cauvery
    @Dr.Cauvery 3 месяца назад

    So beautiful...so touching... Down to earth❤❤❤

  • @sarojashigli2325
    @sarojashigli2325 Год назад +10

    Amazing and emotional words for women and daughters great fathers in world namaste and thanks

  • @shubhav5995
    @shubhav5995 Год назад +5

    Prati hennigu nimmantaha adbhuta appa sikkare hennina jeevana saartaka🙏🙏

  • @BanaviBaduku
    @BanaviBaduku 11 месяцев назад +2

    ಧನ್ಯವಾದಗಳು,ಹೆಣ್ಣು ಮಕ್ಕಳ ಬಗ್ಗೆ ಸತ್ಯವಾದ ಮಾತು ಹೇಳಿದ್ದಾರೆ.

  • @beevaidya
    @beevaidya Год назад +3

    ನಮಸ್ತೆ ಸರ್,
    ನಿಮ್ಮ ಈ ಒಂದು ಮಾತುಗಳು ಕುಟುಂಬದಲ್ಲಿ ಬದುಕುವಾಗ ಹೇಗೆ ಅರ್ಥೈಸಬೇಕು ಮತ್ತು ನಾವು ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ತುಂಬಾ ಚೆನ್ನಾಗಿ ಅರ್ಥೈಸಿ ಹೇಳಿದ್ದೀರಿ
    ಜೊತೆಗೆ ಬದುಕನ್ನು ನಾವು ಹೇಗೆ ಪ್ರೀತಿಸಬೇಕು ಅನ್ನೋದನ್ನು ಕೂಡ ತುಂಬಾ ಚೆನ್ನಾಗಿ ತಿಳಿಸಿದ್ದೀರಿ
    ಹೆಣ್ಣುಮಕ್ಕಳ ಬಗ್ಗೆ ಆಗಲಿ ಹೆಣ್ಣು ಮಗುವಿನ ಬಗ್ಗೆ ಆಗಲಿ ನಿಮಗಿರುವ ಒಲವು ಅದರ ಮೇಲಿನ ಪ್ರೀತಿ ನಿಜಕ್ಕೂ ಅದನ್ನು ವರ್ಣಿಸೋಕೆ ಮಾತೆ ಬಾರದು
    ಸಾಧ್ಯವಾದರೆ ನಿಮ್ಮನ್ನು ಭೇಟಿಯಾಗೋದಕ್ಕೆ ಒಂದು ಅವಕಾಶ ಮಾಡಿಕೊಡಿ ಧನ್ಯವಾದಗಳು ನಿಮ್ಮ ಅಭಿಮಾನಿ
    ಬೀರೇಶ್ ಬಿಹೆಚ್ ಹರಿಹರ

  • @sudheerkumarlkaulgud7521
    @sudheerkumarlkaulgud7521 Год назад +6

    ಅತ್ಯುತ್ತಮ ಸಂದರ್ಶನ. ಕೃಷ್ಣೇಗೌಡರ ಕನ್ನಡ ಕೇಳುವುದೇ ಆಹ್ಲಾದಕರ ಅನುಭವ. ಸಂದರ್ಶಕರು ಮಧ್ಯೆ ಜಾಸ್ತಿ ಮಾತನಾಡದೇ ಇದ್ದುದು ಮೆಚ್ಚಲೇಬೇಕು

  • @pradeepdeshpande9439
    @pradeepdeshpande9439 Год назад

    Thanks for giving wonderful experience 🙏🙏🙏

  • @ramaprasadk4687
    @ramaprasadk4687 2 месяца назад +2

    ಈ ಸಂದರ್ಶನ ಚೆನ್ನಾಗಿದೆ. ಸಂದರ್ಶಕ ಸದಾಶಿವ ನಮ್ಮ ಸಮಾಜವನ್ನು ದರಿದ್ರ ಸಮಾಜ ಅನ್ನುವುದು ಮಾತ್ರ ಅಸಹ್ಯ.

  • @kumarakantirava7888
    @kumarakantirava7888 Год назад

    At first, did not like the Interview. Now, am liking it.
    Thank you. Interesting questions asked. Helpful.

  • @venkateshkv7145
    @venkateshkv7145 23 дня назад

    professor you are really lucky and the people should see this ,,,,many many don't the regality super soooo sweet and nice of you sir, 😀😀😀😀😀😀😀😀😀😀😀😀 ..

  • @anupamadeepak3751
    @anupamadeepak3751 Год назад

    ಅತ್ಯುತ್ತಮ ವಿಷಯ ಹಂಚಿದ್ದೀರಿ.ತುಂಬಾ ಅದೃಷ್ಟ ಮಾಡಿದ್ದೀರಿ.ಧನ್ಯವಾದಗಳು ಸರ್

  • @victormachado7078
    @victormachado7078 Год назад +9

    Krishne Gowdre is a great human being

  • @ankaarts8376
    @ankaarts8376 Год назад +4

    ಇವು ಬರಿ ಮಾತುಗಳಲ್ಲ ಸುಂದರ ಭವ್ಯ ಭಾವನೆಗಳ ಮಹಾಪೂರ..ಬದುಕಿನ ರೋಚಕ ಕ್ಷಣಗಳ ಬುತ್ತಿ..

  • @akshatanadig4989
    @akshatanadig4989 Год назад +10

    One of the best life lessons for all of us..best interview

  • @williamr4015
    @williamr4015 Год назад +3

    ಸೂಪರ್ ಸರ್. 👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏