Mangalavara Ganesha Pooja Vidhana || 21 ದಿನದ ಗಣಪತಿ ಪೂಜಾ ವಿಧಾನ ||
HTML-код
- Опубликовано: 10 фев 2025
- ಮಂಗಳವಾರ ಪ್ರಾರಂಭವಾಗುವ 21 ದಿನದ ಗಣಪತಿ ಪೂಜೆ - ಮಾಡುವ ವಿಧಾನ ಹಾಗು ಮಹತ್ವವನ್ನು ಇಲ್ಲಿ ತಿಳಿಯಿರಿ.
ಪೂಜೆಗೆ ಬೇಕಾದ ಸಾಮಾನುಗಳು:
• ಗಣಪತಿ ವಿಗ್ರಹ
• ಜೋಡಿ ದೀಪಗಳು
• ಆರತಿ ತಟ್ಟೆ
• ನೀಲಾಂಜನಗಳು
• ವಿಗ್ರಹ ಕೂರಿಸುವುದಕ್ಕೆ ಒಂದು ದೊಡ್ಡ ತಟ್ಟೆ
• ಅಭಿಷೇಕಕ್ಕೆ ಒಂದು ತಟ್ಟೆ
• ಪಂಚಾಮೃತ (ಹಾಲು,ಮೊಸರು,ತುಪ್ಪ, ಜೇನುತುಪ್ಪ,ಸಕ್ಕರೆ(ಕಲ್ಲುಸಕ್ಕರೆ))
• ಗೆಜ್ಜೆ ವಸ್ತ್ರ
• ಅಂಗದಾರ
• ಕಟ್ಟಿದ ಹೂವು
• ಬಿಲ್ವ ಪತ್ರೆ, ತುಂಬೆ ಹೂವ,ಗರಿಕೆ,ಬಿಳಿ ಎಕ್ಕದ ಹೂವ,ರುದ್ರಾಕ್ಷಿ ಹೂವು.
• ಹೀಗೆ ಯಾವ ಹೂವಾದರೂ ಪರವಾಗಿಲ್ಲ,ದಿನ ನಿತ್ಯ ಯಾವ ಹೂವು ಸಿಕ್ಕಿದರು ಶೇಖರಿಸಿಟ್ಟುಕೊಳ್ಳಿ.
ನೈವೇದ್ಯಕ್ಕೆ :
ಹಾಲು ಸಕ್ಕರೆ, ಬೆಲ್ಲ,ಹಣ್ಣುಗಳು, ತೆಂಗಿನಕಾಯಿ, ಪಂಚಕಜ್ಜಾಯ (ಎಳ್ಳು, ಬೆಲ್ಲ,ಕಡ್ಲೆ ಬೀಜ ಒಣಕೊಬ್ಬರಿ - ಇವುಗಳಿಂದ ಮಾಡುವುದು), ನೆನೆಸಿದ ಕಡ್ಲೆ ಕಾಳು, ಮೊಸರನ್ನ, ಸಿಹಿ ಅವಲಕ್ಕಿ, ಬೆಲ್ಲದ ಅನ್ನ, ರವೇ ಉಂಡೆ, ಸಿಹಿ ಕಡಬು, ಕರ್ಜಿಕಾಯಿ,ಸಂಕರ ಪೌಲಿ ಹೀಗೆ ದಿನಕ್ಕೆ ಒಂದು ತರ ನೈವೇದ್ಯ ಮಾಡಬಹುದು.
ಪೂಜೆ ವಿಧಾನ :
• ಒಂದು ಪಾತ್ರೆಯಲ್ಲಿ ನೀರನ್ನು ಶೇಖರಿಸಿ ಇಟ್ಟುಕೊಂಡು ಆ ನೀರನ್ನು ಪೂಜೆ ಮಾಡಿ - ಗಂಗೆ ಮಂತ್ರ ಹೇಳಿಕೊಳ್ಳಿ.
• ಮೊದಲು ದೀಪವನ್ನ ಪೂಜೆ ಮಾಡಿ ದೀಪಗಳ್ಳನ್ನು ಹಚ್ಚಿರಿ ಹೂವಿಟ್ಟು ಊದಬತ್ತಿ ಬೆಳಗಿ.
• ಮೊದಲು ಗಣಪತಿಯಾ ವಿಗ್ರಹವನ್ನು ತೊಳೆದು ಅಭಿಷೇಕಕ್ಕೆ ಚಿಕ್ಕ ತಟ್ಟೆಯಲ್ಲಿ ಕೂರಿಸಿ. ಗಂಗೆ ಪೂಜೆ ಮಾಡಿರುವ ಜಲದಿಂದ ಅಭಿಷೇಕ ಮಾಡಿ.
• ಪಂಚಾಮೃತವನ್ನು ಒಂದೇ ಲೋಟಕ್ಕೆ ಬೆರೆಸಿಕೊಳ್ಳಬಹುದು. ಅಥವಾ ಬೇರೆ ಬೇರೆ ಲೊಟ್ಟಕೆ ಹಕ್ಕಿ ಕೊಳ್ಳಬಹುದು.
• ಪಂಚಾಮೃತವನ್ನು ಒಂದೇ ಲೋಟಕ್ಕೆ ಬೆರೆಸಿಕೊಳ್ಳಬಹುದು. ಅಥವಾ ಬೇರೆ ಬೇರೆ ಲೊಟ್ಟಕೆ ಹಕ್ಕಿ ಕೊಂಡು ಅಭಿಷೇಕವನ್ನು ಮಾಡಬಹುದು. ನಂತರ ವಿಭೂತಿ ಗಂಧ ಅಕ್ಷತೆ ಇಟ್ಟು ಹೂವಿಟ್ಟು ಊದಬತ್ತಿಯನ್ನು ಗಂಟಾ ನಾದದೊಂದಿಗೆ ಬೆಳಗಿ. ಕರ್ಪೂರವನ್ನು ಗಂಟಾ ನಾದದೊಂದಿಗೆ ಬೆಳಗಿ. ಉದ್ಧರಣೆಯಿಂದ ಮೂರು ಬರಿ ಅರ್ಗ್ಯ (ನೀರನ್ನು) ಬಿಡಿ.
• ಈಗ ನಮಸ್ಕಾರವನ್ನು ಮಾಡಿ ಗಣಪತಿಯನ್ನು ತೆಗೆದು ತೊಳೆದು ಕೊಂಡು ಒರೆಸಿ ವಿಬೂತಿ ಗಂಡ ಅಕ್ಷತೆ ಇಟ್ಟು ರೆಡಿ ಮಾಡಿ.
• ಒಂದು ಥಟ್ಟೆಯೆಲ್ಲಿ ವಿಬೂತಿ ಅಥವಾ ಗಂಧದಿಂದ ಸ್ವಸ್ತಿಕ್ ಎಂದು ಬರೆದು ಅದರ ಮೇಲೆ ಗಣಪತಿ ಯನ್ನು ಕೂರಿಸಿ.
• ಈಗ ಮತೊಮ್ಮೆ ಗಂಧ ಅಕ್ಷತೆ ಇಂದ ಪೂಜಸಿ.
• ಈಗ ಬಿಡಿ ಹೂಗಳನ್ನು ಗಾರಿಕೆಯೊಂದಿಗೆ ಬೆರೆಸಿ ಕೊಂಡು ಅಷ್ಟೋತ್ತರವನ್ನು ನಿಧಾನವಾಗಿ ಹೇಳಿಕೊಂಡು ಒಂದೊಂದು ಮಾತ್ರೆ ಒಂದೊಂದು ಬಿಡಿ ಹೂವು ಹಾಕುತ್ತ ಅಷ್ಟೋತ್ತರವನ್ನು ಮುಗಿಸಿ.
• ಕಟ್ಟಿಯಾದ ಹೂವು, ಅಂಗದಾರ, ಜೇಗ್ಗೆವಸ್ತ್ರಗಳಿಂದ ಗಣಪತಿಯನ್ನ ಅಲಂಕರಿಸಿ.
• ಗಂಟಾನಾದ ದೊಂದಿಗೆ ಊದಬತ್ತಿ ಯನ್ನು ಬೆಳಗಿ ನೈವೇದ್ಯ ಮಾಡಿ.
• ಕರ್ಪೂರ ತುಪ್ಪದ ಬತ್ತಿಯನ್ನು ಹಚ್ಚಿ ಗಂಟಾನಾದದೊಂದಿಗೆ ಮಹಾ ಮಂಗಳಾರತಿಯನ್ನು ಮಾಡಿ. ಈಗ ಅರ್ಗ್ಯವನ್ನು ಬಿಡಿ.
• ಅಕ್ಷತೆ ಹೂವು ತೆಗೆದುಕೊಂಡು ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡಿ. 21 ಸಲ ಕಿವಿ ಹಿಡಿದು ಬಸ್ಕಿ ಹೊಡೆಯುವುದು (ಸಾದ್ಯವಾದರೆ).
• ಪ್ರಾರಂಭದಿಂದಲೂ ಹಿಡಿದು ಪ್ರದಕ್ಷಿಣೆ ಹಾಕಿ ಕೊನೆ ಮಾಡುವವರೆಗೂ ನಿಮ್ಮ ಮನಸ್ಸಿನಲ್ಲಿ ಇರುವುದನ್ನು ಪ್ರಾರ್ಥಿಸಿಕೊಳ್ಳುತ್ತಿರಬೇಕು.
• ದೃಷ್ಟಿ ಕೆಂಪು ನೀರು ತುಪ್ಪದ ನೀಲಾಂಜನದ ಆರತಿಯನ್ನು ಬೆಳಗಿ. ಅರ್ಗ್ಯ ಬಿಡಿ.
ಮನೆಯಲ್ಲಿ ಮಕ್ಕಳಿದ್ದರೆ ಅವರ ಕೈನಲ್ಲಿ ಪೂಜೆ ಮಾಡಿಸಿ.
ನೀವು ಬೇಡಿಕೊಂಡಿದ್ದನ್ನ ಅವರ ಬಾಯಿ ಯಿಂದಲೂ ಹೇಳಿಸಿ.
ಈ ಪೂಜೆ ಯನ್ನು ಉಪವಾಸವಿದ್ದು ಮಾಡಿ.
ಸಂಜೆ 5 -7 ಗಂಟೆ ಒಳಗಡೆ ದೀಪವನ್ನ ಹಚ್ಚಿ.
ಒಂದು ಗಂಟೆ ನಂತರ ಮೂರು ಬರಿ ಬಲಗಡೆಯಲ್ಲಿ ಸವರುತ್ತಾ ಗಣಪತಿಯನ್ನು ಕದಲಿಸಿ.
ಗಣಪತಿ ವಿಗ್ರಹವನ್ನು ನೀವು ದಿನ ನಿತ್ಯ ಪೂಜೆ ಮಾಡುವ ಜಾಗದಲ್ಲೇ ಇಟ್ಟು ಪೂಜೆ ಮಾಡಬಹುದು.
ಮತ್ತೆ ಮರು ದಿನ ಬೆಳ್ಳಿಗೆ ಪೂಜೆ ಮಾಡಬೇಕು - ಹೀಗೆ ೨೧ ದಿನ ಮಾಡಬೇಕು.
ಈ ಪೂಜೆಯ ಮಹತ್ವ
• ಯಾವುದೇ ಶುಭ ಕಾರ್ಯಗಳು ನಿರ್ವಿಗ್ನವಾಗಿ ನೆರವೇರಲೆಂದು ಗಣಪತಿ ಪೂಜೆ ಮಾಡುತ್ತಾರೆ.
• 21 ತಿಂಗಳು ಶಂಕಷ್ಟಹರ ಗಣಪತಿ ಪೂಜೆ ಮಾಡಲು ಆಗದಿದ್ದವರು ಮಂಗಳವಾರ ಪ್ರಾರಂಭವಾಗುವ ಈ 21 ದಿನ ಗಣಪತಿ ಪೂಜೆ ಯನ್ನು ಮಾಡಬಹುದು.
• ನಿಮಗೆ ಯಾವುದೇ ಕಷ್ಟ ವಿದ್ದರೂ ಈ ಪೂಜೆಯಿಂದ ಅತಿ ಶೀಘ್ರವಾಗಿ ನೆರವೇರುತ್ತೆ.
ಭಕ್ತಿ, ನಂಬಿಕೆ, ಶ್ರದ್ದೆ ಇಂದ ಪೂಜೆ ಮಾಡಿ.
• ಕೊನೆ ದಿನ ಪೂಜೆ ಮುಗಿಸುವಾಗ- ಗಣೇಶ ದೇವಸ್ಥಕ್ಕೆ ಪೂಜೆ ಮಾಡಿಸಿ, ಮಕ್ಕಳಿಗೆ ಪ್ರಸಾದದೊಂದಿಗೆ ನೋಟ್ ಬುಕ್ ಪೆನ್ಸಿಲ್ ಪೆನ್ ನ್ನು ಹಂಚಿರೀ.
ಸರ್ವೇಜನ ಸುಖಿನೋ ಭವಂತು
Thanks for watching
Please visit www.cookinggranny.com