ಶಿರಾಡಿ ದೈವದ ನರ್ತನ ಸೇವೆಗೆ ಮಕ್ಕಳನ್ನು ಅರ್ಪಿಸುವ ಬಾವುಕ ಕ್ಷಣ|ಬಿಕ್ಕಿ ಬಿಕ್ಕಿ ಅತ್ತ ದೈವ ದೀಕ್ಷೆ ಪಡೆದ ವ್ಯಕ್ತಿ

Поделиться
HTML-код
  • Опубликовано: 1 окт 2024
  • #daivaradhane #bhootharadhane #tulunaduculture #indianculture #indiancultureandfestivals
    ಕಾಂತಾರ ಚಿತ್ರದಲ್ಲಿ ಪಂಜುರ್ಲಿ ಪಾತ್ರಧಾರಿ ವ್ಯಕ್ತಿ ಕಾಲವಾದ ಬಳಿಕ ಆತನ ಮಗನೇ ದೈವದ ಸೇವೆಗೆ ನೇಮಕಗೊಳ್ಳುವ ಚಿತ್ರಣ ಇದೆ. ಅದೇ ರೀತಿಯಲ್ಲಿ ಕಡಬ ತಾಲೂಕಿನಲ್ಲಿ ಕಾರಣಿಕದ ದೈವ ಆಗಿರುವ ಶಿರಾಡಿ ದೈವದ ಸೇವೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಬಳಿಕ ಆ ವ್ಯಕ್ತಿಯ ಮಕ್ಕಳೇ ಮುಂದಿನ ಸೇವೆ ಮಾಡಬೇಕೆಂದು ನಿಶ್ಚಯಗೊಂಡ ಪ್ರಸಂಗ ನಡೆದಿದ್ದು ಕಾಂತಾರ ಚಿತ್ರವನ್ನು ನೆನಪಿಸಿದೆ.
    ಕಳೆದ 2023ರ ಮಾರ್ಚ್ 30 ರಂದು ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲಿ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದ ಶಿರಾಡಿ ದೈವದ ವಾರ್ಷಿಕ ಜಾತ್ರೆ ನಡೆಯುತ್ತಿದ್ದಾಗ ಘಟನೆ ನಡೆದಿತ್ತು. ಉಳ್ಳಾಕುಲು ದೈವ ಹಾಗೂ ನಾಗಬ್ರಹ್ಮ ದೈವದ ನರ್ತನ ಸೇವೆ ನಡೆಯುತ್ತಿದ್ದಾಗ ಉಳ್ಳಾಕುಲು ದೈವದ ನರ್ತಕರಾಗಿದ್ದ ಎಡಮಂಗಲ ನಿವಾಸಿ 60 ವರ್ಷದ ಕಾಂತು ಅಜಿಲ ದೈವದ ನರ್ತನ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.
    ದೈವ ನರ್ತಕ ಕಾಂತು ಅಜಿಲರ ಅಕಾಲಿಕ ಸಾವಿನ ಬಳಿಕ ಗ್ರಾಮದ ಜನ ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು. ದೈವಜ್ಞರ ಪ್ರಶ್ನಾ ಚಿಂತನೆ ನಡೆಸಿದಾಗ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ ಅವರೇ ಮುಂದೆ ದೈವ ನರ್ತನದ ಜವಾಬ್ದಾರಿ ಹೊರಬೇಕು ಅಂತ ಕಂಡುಬಂದಿತ್ತು. ಬಳಿಕ, ಶಿರಾಡಿ ದೈವದ ಒಪ್ಪಿಗೆಯನ್ನೂ ಪಡೆಯಲಾಗಿತ್ತು. ಹೀಗಾಗಿ ಈ ವರ್ಷದ ಶಿರಾಡಿ ದೈವದ ನೇಮೋತ್ಸವಕ್ಕೂ ಮುನ್ನ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಿ, ಇಬ್ಬರಿಗೂ ಯಾವ ರೀತಿಯಲ್ಲಿ ದೈವದ ಸೇವೆಯನ್ನು ಮಾಡಬೇಕು ನಡೆಸಲಾಗಿದೆ. ಅನ್ನೋದನ್ನು ತಿಳಿಸುವ ಪ್ರಕ್ರಿಯ
    ದೈವ ನರ್ತಕರು ಶುದ್ಧವಾಗಿ ಮಡಿ ಬಟ್ಟೆಯನ್ನು ಸುತ್ತಿ ಮನೆ ಮಂದಿಯ ಹಾಗೂ ಗ್ರಾಮದ ಹಿರಿಯರ ಆಶೀರ್ವಾದ ಪಡೆದ ಬಳಿಕ ಒಂಬತ್ತು ದಿಕ್ಕಿಗೆ ಸೇರಿದ ಜನರ ಸಮ್ಮುಖದಲ್ಲಿ ದೀಕ್ಷೆ ಬೂಳ್ಯವನ್ನು ನೀಡಲಾಗುತ್ತದೆ. ದೈವ ನರ್ತಕನಿಗೆ ತನ್ನ ಸೇವೆ ಮಾಡುವಂತೆ ನೀಡುವ ಈ ದೀಕ್ಷೆ ದೈವಾರಾಧನೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ದೈವ ತನ್ನ ಅವಾಹನೆಯನ್ನು ಹೊಸದಾಗಿ ನೇಮಕವಾದ ದೈವ ನರ್ತಕರ ಮೂಲಕ ತೋರ್ಪಡಿಸಲಿದೆ ಎನ್ನುವುದು ದೀಕ್ಷೆ ಬೂಳ್ಯದ ಹಿಂದಿರುವ ತತ್ವವಾಗಿದೆ.
    ದೀಕ್ಷೆ ಪಡೆದ ಬಳಿಕ ದೈವ ನರ್ತಕ ನಾಲ್ಕು ಗ್ರಾಮಕ್ಕೆ ಸಂಬಂಧಪಟ್ಟ ದೈವಗಳ ಸೇವೆಯ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುತ್ತಾನೆ. ಈ ಅಪೂರ್ವ ಕ್ಷಣವನ್ನು ಕಣ್ಣುಂಬಿಕೊಳ್ಳಲು ಊರ ಹಾಗೂ ಪರವೂರಿನ ದೈವಭಕ್ತರು ಭಾಗವಹಿಸಿದ್ದರು.

Комментарии • 16

  • @kumaraks5138
    @kumaraks5138 18 дней назад

    ಸ್ವಾಮಿಶಿರಾಡಿರಾಜನ್ ದೈವ🙏🌹🙏🌹🙏🌹🙏🌹🙏🥰🥰🥰🙋🌄🙌🚩🚩🚩🚩🤝🤝😊😊😊

  • @ShreeshaGore
    @ShreeshaGore 3 месяца назад

    Wow beautiful picture super

  • @VanajaGangadhar-on3kg
    @VanajaGangadhar-on3kg 4 месяца назад +3

    🙏ಚಕ್ರವರ್ತಿ ಶಿರಾಡಿ ರಾಜನ್ ದೈವ🙏

  • @SavithriNaik-ot9xk
    @SavithriNaik-ot9xk 4 месяца назад +1

    Sarvarigu olledagali

  • @praveenshetty6104
    @praveenshetty6104 3 месяца назад

    🌹🙏🙏🌹

  • @shashikalakotian5762
    @shashikalakotian5762 4 месяца назад +1

    🙏🙏🙏🙏

  • @chethanpk9485
    @chethanpk9485 4 месяца назад +2

    🙏🙏🙏

  • @dwarakanathtr380
    @dwarakanathtr380 4 месяца назад +1

    Om

  • @Pavangowda886
    @Pavangowda886 4 месяца назад +1

    🙏🙏🙏🙏🙏

  • @leelavathiharladka1097
    @leelavathiharladka1097 4 месяца назад

    🙏🏾🙏🏾🙏🏾🙏🏾🙏🏾🙏🏾

  • @surajs2157
    @surajs2157 4 месяца назад +1

    🙏🙏

  • @savitashetty1340
    @savitashetty1340 4 месяца назад +1

    🙏🙏

  • @jdevadiga67
    @jdevadiga67 4 месяца назад

    O Anna Neta pirawudu tantra ki eppudu encha panda matamantra malpunakulna akulle Bavanegu taka kriye apudu