ಗಾನ ಅಷ್ಟಮಿ ಸಂಚಿಕೆ ೨

Поделиться
HTML-код
  • Опубликовано: 10 фев 2025
  • ಗಾನ ಅಷ್ಟಮಿ
    ಸಂಚಿಕೆ ೨
    February ವಿಷಯ: ಪ್ರೇಮ ಗೀತೆ / ಮದುವೆ ಹಾಡುಗಳು
    ಗಾನ ಅಷ್ಟಮಿಯ ಎರಡನೆಯ ಸಂಚಿಕೆಗೆ ಒಂದು ಮಧುರವಾದ ಪ್ರೇಮ ಗೀತೆಯನ್ನು ಪ್ರಸ್ತುತಪಡಿಸುತ್ತಿರುವವರು ಅಮೂಲ್ಯ.
    “ಗುನಾ” 1991ರ ತಮಿಳು ಚಿತ್ರದ “ಕಣ್ಮಣಿ” ಗೀತೆಯ ಕನ್ನಡ ಅನುವಾದವನ್ನು ಶಾಲಿನಿ ಎಸ್. ಆರ್. ಮಾಡಿದ್ದಾರೆ. ಸಂಗೀತ ಸಂಯೋಜನೆ ಇಳೆಯರಾಜ ಅವರದ್ದು.
    ಸಾಹಿತ್ಯ:
    ಕಣ್ಮರೆ ಆದಂತೆ ನಟಿಸಲೇ ನಾ ನಿನ್ನೊಂದಿಗೆ
    ಕೊಂಚವೇ ಕಾಡಿಬಿಡುವ ಆಸೆಗೆ ನೀಡು ಒಂದು ಒಪ್ಪಿಗೆ
    ನಾನೆಂದೋ ಬರೆದ ಈ ಕವಿತೆ ಸಾಲಿಗೆ
    ನೀ ಬಂದೆ ರಾಗದಂತೆ ಈಗ ಮೆಲ್ಲಗೆ
    ನೀ ಬರುವ ದಾರಿಯಲ್ಲಿ ನಿನ್ನನ್ನು ನೋಡಲೆಂದೇ ಹೂಡಿಬಿಡುವೆ ನಾನೊಂದು ಬಿಡಾರ
    ಏನೆಂದು ಕೇಳು ಬೇಗ ನಾನೆಲ್ಲ ಹೇಳಿಬಿಡುವೆ ಕಣ್ಣಲ್ಲೇ ಈ ಪ್ರೀತಿ ವಿಚಾರ
    ನಾ ಕಳಿಸಿದಂತ ಮನವಿ ನಿನ್ನನ್ನು ತಲುಪಿತೆಂದು ಹೇಗೆ ತಿಳಿಯಲಿ?
    ನಿನ್ನಿಂದ ಬರುವ ಒಂದು ಉತ್ತರಕ್ಕೆ ನಾನು ಎಷ್ಟು ಕಾಯಲಿ?
    ನೀನೆ ನನ್ನ ಜಗವು ನನಗೆ ನೀನೆ ವರವು
    ಇದನು ಹೇಗೆ ಕೂಗಿ ಹೇಳಲಿ?
    ನಿನ್ನದೇ ಆಲಾಪ ಈಗಲೂ ಕೇಳುತಿಹುದು ಮನದಲಿ
    ಸ್ವಪ್ನವೇ ಸಾಕಾರ ಆದ ಹಾಗೆ ನೀನಿರಲು ಜೊತೆಯಲಿ
    ನೀನೊಮ್ಮೆ ಆಲಿಸು ಮನದ ಕಿರುದನಿ
    ಸದ್ದಿರದೆ ಮೂಡಿದ ಈ ಪ್ರತಿಧ್ವನಿ

Комментарии •