SRI RAMA RAAGHAVA STOTRAM / ರಾಮರಾಘವ ರಾಮರಾಘವ ರಾಮರಾಘವ ಪಾಹಿಮಾಂ

Поделиться
HTML-код
  • Опубликовано: 11 фев 2025
  • ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳು "ರಾಮರಾಘವ ರಾಮರಾಘವ ರಾಮರಾಘವ ಪಾಹಿಮಾಂ| ರಾಮರಾಘವ ರಾಮರಾಘವ ರಾಮರಾಘವ ಶಾಧಿಮಾಂ||'
    ಹಾಡನ್ನು ರಚಿಸಿದ ಸಂದರ್ಭ ತುಂಬಾ ರೋಚಕವಾಗಿದೆ.
    ಮಾಘ ಮಾಸದಲ್ಲಿಯ ದಾಸನವಮಿ ಉತ್ಸವ ಹೃಷೀಕೇಶದಲ್ಲಿ ಆಚರಿಸಿ ... ಫಾಲ್ಗುಣದಲ್ಲಿ ಸದ್ಗುರು ಭಗವಾನ ಶ್ರೀಧರ ಸ್ವಾಮಿಗಳು ಗಿರಿನಾರಿಗೆ ಹೋಗಲು ಹರಿದ್ವಾರದಿಂದ ರೇಲಿನ ಮೂಲಕ ಗುಜರಾಥದ ಕಾಠೇವಾಡ ಪ್ರದೇಶದ ಜುನಾಗಢಕ್ಕೆ ಬಂದರು! ...
    ಭಾರತದ ಸ್ವಾತಂತ್ರ ಪೂರ್ವದ ಅಖಂಡ ಭಾರತ ದೇಶದ ವಿಭಜನೆಯ ಸಂಧಿಕಾಲ …
    .... ಹಿಂಸೆಯ ತಾಂಡವ ನಡೆಯುತ್ತಿದ್ದ ಕಾಲ … ಎಲ್ಲ ಗಡಿಪ್ರದೇಶದಲ್ಲೂ ಅಮಾನುಷ ಹತ್ಯಾಕಾಂಡ ನಡೆದಿತ್ತು .... ಜುನಾಗಡ ಪ್ರದೇಶದಲ್ಲೂ ಜನಮನದಲ್ಲಿ ತೀವ್ರ ಅಸಂತೋಷ ತುಂಬಿಕೊಂಡಿತ್ತು!
    ಶ್ರೀ ಶ್ರೀಧರ ಸ್ವಾಮಿಗಳು ಅಯ್ಯಾಬುವಾ ರಾಮದಾಸಿಯೊಂದಿಗೆ ಜುನಾಗಡಕ್ಕೆ ಬಂದು 'ಸನಾತನ ಹಿಂದು ಧರ್ಮಶಾಲೆ'ಯಲ್ಲಿ ಉಳಿದುಕೊಂಡರು .... ಇಲ್ಲಿ ಮೂರು-ನಾಲ್ಕು ದಿನವಿದ್ದು .... ನಂತರ ಒಂದು ದಿನ ಪ್ರಾತಃಪೂರ್ವ ಗಿರಿನಾರಿಗೆಂದು ನಡೆಯ ಹತ್ತಿದರು!
    ಆದರೆ ದೈವೇಚ್ಛೆ ಬೇರೆ ಇತ್ತು ….. ಸ್ವಾಮಿಗಳು ಗಿರಿನಾರಿನ ರಸ್ತೆ ಬಿಟ್ಟು ಬೇರೆ ರಸ್ತೆಯಲ್ಲಿ ನಡೆದಿದ್ದರು ….. ಸೂರ್ಯೋದಯದ ವೇಳೆ ….. ಒಂದು ಶ್ರೀರಾಮ ಮಂದಿರ ಕಾಣಿಸಿತು .... ಶ್ರೀರಾಮ ತನ್ನದೇ ಸಂಕಲ್ಪದಿಂದ ತನ್ನ ಭಕ್ತನನ್ನು ಬರಮಾಡಿಕೊಂಡನೋ ಏನೋ? ….
    ಮಂದಿರದ ಶ್ರೀರಾಮನ ಮೂರ್ತಿ ಅತ್ಯಂತ ಸುಂದರವಾಗಿತ್ತು .... ಅಲ್ಲಿಯ ಪೂಜಾರ್ಚನೆಯ ವ್ಯವಸ್ಥೆಯೂ ಉತ್ತಮವಾಗಿತ್ತು .... ದೈವ ಸಂಕಲ್ಪದಂತೆ ಸ್ವಾಮಿಗಳು ಜಪಾನುಷ್ಠಾನ ಮಾಡುತ್ತಾ ಅಲ್ಲೇ ಹದಿನೈದು-ಇಪ್ಪತ್ತು ದಿನ ತಂಗಿದರು!
    ಒಂದು ದಿನ ...
    ರಾಮಮಂದಿರದಲ್ಲಿ ಯಾರೋ ಒಬ್ಬ ನೌಖಾಲಿಯಲ್ಲಾಗುತ್ತಿರುವ ನರಮೇಧದ ಪತ್ರಿಕಾವರದಿಯನ್ನು ಸ್ವಾಮಿಗಳಿಗೆ ಓದಿ ಹೇಳಿದನು .... ದೇಶದಲ್ಲಿ ನಡೆಯುತ್ತಿದ್ದ ಯವನರ ಅನಾಚಾರ - ಅತ್ಯಾಚಾರ ... ಅಮಾಯಕ ಜನರ - ಹೆಂಗಸು - ಮಕ್ಕಳ ಆಕ್ರಂದ ಸ್ವಾಮಿಗಳ ಮನ ಕಲುಕಿತ್ತು! ...
    ಶ್ರೀರಾಮನ ವಿಗ್ರಹದ ಮುಂದೆ ಹೋಗಿ ... 'ನೀನು ತೊಟ್ಟಿರುವ ಬಿರುದು ಭಕ್ತವತ್ಸಲ - ದಯಾನಿಧಿ - ಭಕ್ತಕಾಮಕಲ್ಪದ್ರುಮ ... ಧರ್ಮದಂಡವನ್ನು ಕೈಯಲ್ಲಿ ಹಿಡಿದು ನೀನು ಜಗತ್ತನ್ನು ಆಳುತ್ತಿರುವೆ .... ಮತ್ಸ-ಕೂರ್ಮ-ವರಾಹ-ನರಸಿಂಹಾದಿ ಅವತಾರ ತಾಳುವಾಗ .... ಸಂಕಲ್ಪಿಸಿದ ಕೂಡಲೇ ಆ ರೂಪಗಳನ್ನು ಪ್ರಕಟಿಸಿದೆಯಲ್ಲವೇ? ... ಇಂತಹ ಸಮಯದಲ್ಲಿ ನೀನೇಕೆ ಅವತಾರ ತಾಳಲೊಲ್ಲೆ? ... ಅಂತಹ ಅವತಾರಕ್ಕೆ ಇನ್ನೂ ಸಮಯ ಬರದಿದ್ದಲ್ಲಿ ನಿನ್ನ ಸಾಮರ್ಥ್ಯವನ್ನು ನಮಗಾದರೂ ಕೊಡು!' ಎಂದು ಕೇಳಿಕೊಂಡರು! .... ಶ್ರೀರಾಮ ಸ್ವಾಮಿಗಳಿಗೆ ಅದೇನು ಆಶ್ವಾಸನ ನೀಡಿದನೋ .... ಸ್ವಾಮಿಗಳು
    ಚೈತ್ರ ಶುದ್ಧ ನವಮಿ .... ಶ್ರೀರಾಮನವಮಿ ದಿನದಂದು
    ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳು ಆ ರಾಮಮಂದಿರದಲ್ಲಿಯೇ ರಾಮನವಮಿ ಉತ್à²

Комментарии • 23