Bideno ninnanghri Srinivasa - ಬಿಡೆನೋ ನಿನ್ನಂಘ್ರಿ ಶ್ರೀನಿವಾಸ | With lyrics
HTML-код
- Опубликовано: 8 сен 2024
- ರಚನೆ : ಪ್ರಸನ್ನ ವೆಂಕಟದಾಸರು
ಗಾಯನ : ಪುತ್ತೂರು ನರಸಿಂಹ ನಾಯಕ
ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ
ದುಡಿಸಿ ಕೊಳ್ಳೆಲೋ ಶ್ರೀನಿವಾಸ ನಿನ್ನ
ನುಡಿಯೇ ಜಿತಲ್ಲೊ ಶ್ರೀನಿವಾಸ ನನ್ನ
ನಡೆತಪ್ಪು ಕಾಯೋ ಶ್ರೀನಿವಾಸ ||ಪ||
ಬಡಿಯೋ ಬೆನ್ನಲಿ ಶ್ರೀನಿವಾಸ ಎ
ನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾ
ಬಡವ ಕಾಣೆಲೋ ಶ್ರೀನಿವಾಸ ನಿ
ನ್ನೊಡಲ ಹೊಕ್ಕೆನೋ ಶ್ರೀನಿವಾಸ. ||೧||
ಪಂಜು ಪಿಡಿವೆನೋ ಶ್ರೀನಿವಾಸ ನಿ
ನ್ನೆಂಜಲ ಬಳದುಂಬೆ ಶ್ರೀನಿವಾಸ ನಾ
ಸಂಜೆ ಉದಯಕೆ ಶ್ರೀನಿವಾಸ ಕಾ
ಳಂಜಿಯ ಪಿಡಿವೇ ಶ್ರೀನಿವಾಸ. |೨||
ಸತ್ತಿಗೆ ಚಾಮರ ಶ್ರೀನಿವಾಸ ನಾ
ನೆತ್ತಿನಲಿವೆನೋ ಶ್ರೀನಿವಾಸ ನೆನ್ನ
ರತ್ನದ ಹಾವಿಗೆ ಶ್ರೀನಿವಾಸ ನಾ
ಹೊತ್ತು ಕುಣಿವೆನೋ ಶ್ರೀನಿವಾಸ. ||೩||
ಹೇಸಿ ನಾನಾದರೆ ಶ್ರೀನಿವಾಸ ಹರಿ
ದಾಸರೊಳು ಪೊಕ್ಕೆ ಶ್ರೀನಿವಾಸ ಅವರ
ಭಾಷೆಯ ಕೇಳಿಹೆ ಶ್ರೀನಿವಾಸ ಆ
ವಾಸಿಯ ಸೈರಿಸೋ ಶ್ರೀನಿವಾಸ ||೪||
ನಿನ್ನವ ನಿನ್ನವ ಶ್ರೀನಿವಾಸ ನಾ
ನನ್ಯವನರಿಯೆನೊ ಶ್ರೀನಿವಾಸ ಅಯ್ಯಾ
ಮನ್ನಿಸೊ ತಾಯ್ತಂದೆ ಶ್ರೀನಿವಾಸ ಪ್ರ
ಸನ್ನವೆಂಕಟಾದ್ರಿ ಶ್ರೀನಿವಾಸ. ||೬||
#kannada #devotional #song