ಬ್ರಹ್ಮಾಂಡ ದೊಳಗೆ ಅರಸಿ ನೋಡಲು ನಮ್ಮೂರೇ ವಾಸಿ.. Brahmandadolage Arasi Nodalu Nammoore Vaasi..

Поделиться
HTML-код
  • Опубликовано: 11 окт 2024
  • ಉಗಾಭೋಗ
    ಕೆಲವು ಕಾಲದಲ್ಲಿ ಆನೆ ಕುದುರೆ ಮೇಲೆ ಮೆರೆಸುವೆ
    ಕೆಲವು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ
    ಕೆಲವು ಕಾಲದಲ್ಲಿ ಉಪವಾಸವೆರಿಸುವೆ
    ಕೆಲವು ಕಾಲದಲ್ಲಿ ಮೃಷ್ಟಾನ್ನವನು ಉಣಿಸುವೆ
    ನಿನ್ನ ಲೀಲೆಯ ನೀನೇ ಬಲ್ಲೆಯೂ ಶ್ರೀ ಪುರಂದರ ವಿಠಲನೇ ನಿನ್ನ ಲೀಲೆಯ ನೀನೇ ಬಲ್ಲೆಯೋ..
    ನಮ್ಮೆಲ್ಲರನು ಕಾಯೋ ಅನವರತ ಪುರಂದರ ವಿಠಲರಾಯ....
    ಕೀರ್ತನೆ
    ಬ್ರಹ್ಮಾಂಡದೊಳಗೆ ಅರಸಿನೋಡಲು ನಮ್ಮೂರೆ ವಾಸಿ
    ರಮೆಯರರಸನು ಸರ್ವದಾ ವಾಸಿಪ ಸಮ್ಮಾನದಿ ತಾನು ||ಪ||
    ಜನನ ಮರಣವಿಲ್ಲ ಉಣ್ಣುವ ದುಃಖವಿಲ್ಲ
    ಅನುಜ ತನುಜರು ಅಲ್ಲಿಲ್ಲ
    ಅನುಮಾನದ ಸೊಲ್ಲೇ ಇಲ್ಲ ||೧||
    ನಿದ್ದೆಯು ಅಲ್ಲಿಲ್ಲ ರೋಗೋಪದ್ರವಗಳಿಲ್ಲ
    ಕ್ಷುದ್ರಜನಂಗಳು ಅಲ್ಲಿಲ್ಲ
    ಸಮುದ್ರಶಯನ ಬಲ್ಲ ಎಲ್ಲಾ ||೨||
    ಸಾಧುಜನರಕೂಡೆ ಮೋಕ್ಷಕೆ ಸಾಧನ ಮಾಡೆ
    ಮಾಧವ ಪುರಂದರ ವಿಠಲ
    ಆದರಿಸುವನಲ್ಲೆ ಬಲ್ಲೆ ||೩||

Комментарии •