ಭಾವಗೀತೆ -- ರಾಗಗಳಿಗೆ ಸ್ವರಗಳ ಸಂಗಮ

Поделиться
HTML-код
  • Опубликовано: 9 фев 2025
  • -- ಜೀವನ ರಾಗ --
    ರಾಗಗಳಿಗೆ ಸ್ವರಗಳ ಸಂಗಮ
    ಸ್ವರಗಳಿಗೆ ಭಾವವೇ ‌ಸಂಭ್ರಮ
    ಭಾವಕೆ ಗಾನವಿನ್ಯಾಸವೇ ನೇಮ
    ಸವಿಗಾನವೇ ಬಾಳಲಿ ಅನುಪಮ//
    ನೃತ್ಯ ನೋಟಕೆ ಮಧುರ ವಿಹಂಗಮ
    ಗೆಜ್ಜೆ ಹೆಜ್ಜೆಗಳಿಗೆ ನಾಟ್ಯದ ಸಂಭ್ರಮ
    ಸಂಗೀತ-ಸಾಹಿತ್ಯ ಕಾವ್ಯದ ಸಂಗಮ
    ವಾದ್ಯ ವೃಂದಕೇ ಮಿಂಚಿನ ವಿಭ್ರಮ//
    ಸುಖದಲಿ ಹೊಮ್ಮಿದೆ ಸಂತಸ ಛಾಯೆ
    ದುಃಖದಿ ಹಾಡಿರೆ ವಿಷಾದದ ಮಾಯೆ
    ಭಾವಾಭಿವ್ಯಕ್ತಿಯಲಿ ನವರಸ ನಲಿದಿರೆ
    ಭಾವ ಸಂಗಮವು ಬದುಕನು ಬೆಳಗಿರೆ//
    ಸಾ. ನಾ. ಶ್ರೀಲಕ್ಷ್ಮಿ

Комментарии • 3