ಸೀಗಿ ಗೌರಿ ಹಾಡು|ಸೀಗಿ ಹುಣ್ಣಿಮಿ ಹಾಡು|seegy gowry haadu|Padmaja Vasudevachar
HTML-код
- Опубликовано: 8 фев 2025
- ಸೀಗಿ ಗೌರಿ ಪೂಜೆಯನ್ನ ಆಶ್ವೀಜ ಶುದ್ಧ ದ್ವಾದಶಿಯಿಂದ ಹುಣ್ಣಿಮೆದನದ ತನಕ ಪೂಜೆ ಮಾಡಬೇಕು. ಈ ಗೌರಿಯನ್ನು ಮದುವೆ ಆಗದಿರುವ ಹೆಣ್ಣು ಮಕ್ಕಳು ಶ್ರದ್ಧಾಭಕ್ತಿ ಉತ್ಸಾಹಗಳಿಂದ ಪೂಜಿಸಿದರೆ ಶೀಘ್ರದಲ್ಲಿ ಕಲ್ಯಾಣವಾಗುತ್ತದೆ🙏
1
ಆರುತಿ ಬೆಳಗಿದೆವ ಗೌರಿಗೊಂದಾರುತಿ ಬೆಳಗಿದೆವ |
ನಾರಿಯರೆಲ್ಲರು ಪಾರ್ವತಿ ದೇವಿಗೊಂದಾರುತಿ ಬೆಳಗಿದೆವ||
ಒಂದು ತಳೀಗ್ಯಾಗ ಗೌರಿಗೆ ಒಂದು ಆರುತಿನಿಟ್ಟು|
ಒಂದುಮಾಣಿಕದಾ ಹರಳಿಟ್ಟೂಂದಾರುತಿ ಬೆಳಗಿದೆವ||1||
ಎರಡು ತಳೀಗ್ಯಾಗ ಗೌರಿಗೆ ಎರಡು ಆರುತಿನಿಟ್ಟು|
ಎರಡು ಮಾಣಿಕ್ಯದ ಹರಳಿಟ್ಟೊಂದಾರರುತಿ ಬೆಳಗಿದೆವ||2||
ಮೂರು ತಳೀಗ್ಯಾಗ ಗೌರಿಗೆ ಮೂರು ಆರುತಿನಿಟ್ಟು|
ಮೂರು ಮಾಣಿಕ್ಯದ ಹರಳಿಟ್ಟೂಂದಾರುತಿ ಬೆಳಗಿದೆವ ||3||
ನಾಲ್ಕು ತಳೀಗ್ಯಾಗ ಗೌರಿಗೆ ನಾಲ್ಕು ಆರುತಿನಿಟ್ಟು|
ನಾಲ್ಕು ಮಾಣಿಕ್ಯದ ಹರಳಿಟ್ಟೊಂದಾರರುತಿ ಬೆಳಗಿದೆವ ||4||
ಐದು ತಳೀಗ್ಯಾಗ ಗೌರಿಗೆ ಐದು ಆರುತಿನಿಟ್ಟು |
ಐದು ಮಾಣಿಕ್ಯದ ಹರಳಿಟ್ಟೂಂದಾರುತಿ ||5||
-----------------------------------------------------------2
ಒಂದು ಪಲ್ಲಡಿ ಹೂವನ ಕೊಯ್ದ ದಾವ ತೋಟದ ಜಾಣನ|
ಇಂದು ನಮಗ ಸೀಗಿಯ ಹುಣ್ಣಿಮಿ ಹೂವನ್ಯಾತಕ ತರೋಣ|
ಮರನೇರಿ ಮಾಲಿಂಗ ಮಾಲಿಂಗ ಮಲ್ಲೀಗಿ ಹೂವಕೊಯ್ದನ|
ಶರಗೊಡ್ಡಿ ಗೌರವ್ವ ಶಾವಂತಿಗೆ ಹೂವ ಮುಡಿದಾಳ|
ಎಡಕಿಟ್ಟು ಮುಡಿಯೆಂದರ ಗೌರವ್ವ ಬಲಕಿಟ್ಟು ಮುಡಿದಾಳಲ್ಲೆ|
ಹಾದ್ಯಗ ಬಿಟ್ಟ ಧೀರ ನಿನ್ನ ಗಂಡ ಹರದೇರಿಗೆ ಕೊಟ್ಟಬಂದ|
ಕಲ್ಲದಾಟಿದ ಧೀರ ನಿನ್ನ ಗಂಡ ಕೆಳದೇರಿಗೆ ಕೂಟ್ಟ ಬಂದ|
ಹಾಲೀನ ನೈವೇದ್ಯ ಬಾಲೇರು ತಂದಾರ ಬಾಲೆ ಗೌರವ್ವ ಉಣಲೇಳ|
ಕಂಬಳ ರಾಗ ಮಾಡ ಶಿವತಾನು ದಂಡೆತ್ತಿ ಕರೆಯ ಬಂದ|
ಸಾಕ್ಷಾತ್ ಶಿವನೆ ಬಂದ ಗೌರಿಗೆ ಸಾದಿನ ಬಟ್ಟನಿಡ|
ಜಂಗಮ ಲಿಂಗ ಬಂದ ಗೌರಿಗೆ ಗಂಧದ ಬಟ್ಟನಿಡ|
ಮಲಕಾದ್ರಿತಿಲಕ ಬಂದ ಗೌರಿಗೆ ತಿಲಕದ ಬಟ್ಟನಿಡ|
ತನ್ನ ತೌರ ಮನೆಗೆ ಗೌರಿ ನಿನಗೆ ಹೂವಿನ ತೋರಣ |
ಮಾವನವರ ಮನೆಗೆ ಗೌರಿ ನಿನಗ ಮಾವೀನ ತೋರಣ|
ಅಜ್ಜ ನವರ ಮನೆಗೆ ಗೌರಿ ನಿನಗೆ ಗೆಜ್ಜೀಯ ತೋರಣ|
----------------------------------------------------------
3
ಅರಿಶಿಣ ಹಚ್ಚಿರೆ ಅರಸಿ ಗೌರವ್ವಗೆ ಅರಸ ಮಾಲಿಂಗನ ಮಡದಿಗೆ ಕೋಲ ಕೋಲೇನ ಕೋಲ||
ಅರಸ ಮಾಲಿಂಗನ ಮಡದಿ ಗೌರವ್ವಗೆ ಅರಿಶಿಣ ಹಚ್ಚ ಬನತೇರ ಕೋಲ ಕೋಲೇನ ಕೋಲ||
ಕುಂಕುಮ ಹಚ್ಚಿರೆ ಕಾಂತಿ ಗೌರವ್ವಗೆ ಕಾಂತ ಮಾಲಿಂಗನ ಮಡದಿಗೆ ಕೋಲ ಕೋಲೇನ ಕೋಲ||
ಕಾಂತ ಮಾಲಿಂಗನ ಮಡದಿ ಗೌರವ್ವಗೆ ಕುಂಕುಮ ಹಚ್ಚ ಬನತೇರ ಕೋಲ ಕೋಲೇನ ಕೋಲ||
ಶೀರಿ ಉಡಿಸೀರೆ ನಾರಿ ಗೌರವ್ವಗೆ ರಾಯ ಮಾಲಿಂಗನ ಮಡದಿಗೆ ಕೋಲ ಕೋಲೇನ ಕೋಲ||
ರಾಯ ಮಾಲಿಂಗನ ಮಡದಿ ಗೌರವ್ವಗೆ ಸೀರಿ ಉಡಸ ಬನತೇರ ಕೋಲ ಕೋಲೇನ ಕೋಲ||
ಕುಬಸ ತೊಡಿಸೀರೆ ಅಕ್ಕ ಗೌರವ್ವಗ ಶೃಷ್ಟಿಗೀಶ್ವರನ ಮಡದೀಗೆ ಕೋಲ ಕೋಲೇನ ಕೋಲ||
ಶೃಷ್ಟಿಗೀಶ್ವರನ ಮಡದಿ ಗೌರವ್ವಗೆ ಕುಬಸ ತಡಸ ಬನತೇರ ಕೋಲ ಕೋಲೇನ ಕೋಲ||
-----------------------------------------------------------4
ಆರುತಿ ಬೆಳಗುವೆ ಗೌರಿಗೊಂದಾರುತಿ ಬೆಳಗುವೆನ ಆರಾರುಳ್ಳ ಶೀಗಿಯ ಗೌರಿಗೊಂದಾರುತಿ ಬೆಳಗುವೆನ||ಪ||
ಹಣ್ಣೀನಾರುತಿ ನೋಡ ಇದು ನಮ್ಮ ಹುಣ್ಣಿಮೆ ಗೌರೀಗೆ ಬನ್ನಿಯ ಮುಡಿಯೆ ಗೌರವ್ವ ತಾಯಿಗೊಂದಾರುತಿ ಬೆಳಗುವೆನ||1||
ಹಿಟ್ಟಿನಾರುತಿ ನೋಡ ಇದು ನಮ್ಮ ವಿಠ್ಠಲ ಗೌರಿಗೆ ಮಲ್ಲಿಗಿ ಮುಡಿಯೆ ಗೌರವ್ವ ತಾಯಿಗೊಂದಾರುತಿ ಬೆಳಗುವೆನ||2||
ಸಾರಾವಳಿ ಉಡಿಸುವೆನ ಗೌರಿ ನಿನಗೆ ಸರದ ಮುತ್ತು ಕಟ್ಟುವೆನ ಬಾಲರ ಎತ್ತಿಕೊಂಡು ನೀಲದ ಆರುತಿ ಭಾಗ್ಯದಿ ಬೆಳಗುವೆನ||3||
ಕೋಲು ಕೋಲೆನ್ನ ಕೋಲ ಕೋಲು ಮುತ್ತಿನ ಕೋಲ ಕೋಲು ಕೋಲೆನ್ನ ಕೋಲ||
-----------------------------------------------------------
5
ಕೋಲಾರ ಪದ್ಮಾಬಾಯಿಯವರ ರಚನೆ. ಸೀಗಿ ಗೌರಿ ಹಾಡು.
ಆಶ್ವೀಜ ಶುದ್ಧದಲ್ಲಿ | ಆಸು ದ್ವಾದಶಿಯಲ್ಲಿ ||
ಲೇಸಾದ ಸಂಜೆಯ | ಗೋಧೂಳಿ ಕೋಲೆ ||
ಲೇಸಾದ ಸಂಜೆಯ ಗೋಧೂಳಿ ಲಗ್ನಕ್ಕೆ |
ಲಾಸಾಧಿಪನ ಸತಿ ಬರುತಾಳೆ ಕೋಲೆ ||1||
ಶುದ್ಧಾದ ಸ್ಥಳದಲ್ಲಿ | ಭದ್ರ ಮಂಟಪ ಮಧ್ಯ |
ಶುದ್ಧ ತಂಡುಲವ | ಹಾಸಮ್ಮ ಕೋಲೆ ||
ಮುದ್ದಾದ ಕದಳೀಯ | ಕಂಭ ತೋರಣ ಕಟ್ಟಿ |
ಸಿದ್ಧಿ ಗೌರಮ್ಮನ ಸ್ಥಾಪಿಸು ಕೋಲೆ ||2||
ಮೃತ್ತೀಕೆಯಲಿ ಎರಡು ಕೊಂತೀಯ ಮಾಡಿ |
ಕೃತ್ತಿವಾಸನ ಗೌರಿ ಎನ್ನುತ್ತ ಕೋಲೆ ||
ಕೃತ್ತಿವಾಸನ ಗೌರಿ | ಹತ್ತೀರದಲಿ ಸಪ್ತ |
ಮಾತೃಕೆಯರನಿಟ್ಟು | ಪೂಜಿಸು ಕೋಲೆ ||3||
ಹದಿನಾರು ಬಗೆಯ | ವಿಧದಲ್ಲಿ ಪೂಜೆಯ |
ಮದನಾರಿ ಸತಿಗೆ | ಅರ್ಪಿಸು ಕೋಲೆ ||
ಮದನಾರಿ ಸತಿಗೆ | ಅರ್ಪಿಸು ವಂದಿಸಿ |
ಮುದದಿಂ ಮುತ್ತೈದೆತನ | ಬೇಡಿಕೊ ಕೋಲೆ ||4||
ಹುಣ್ಣಿಮೆ ದಿನದಲಿ | ಸಣ್ಣ ಶ್ಯಾವಿಗೆ ಪರ |
ಮಾನ್ನ ದಧ್ಯೋದನ | ಚಿತ್ರಾನ್ನ ಕೋಲೆ ||
ಬೆಣ್ಣೆ ಚಕ್ಕುಲಿ ಪಕ್ವಾನ್ನ ಬೆಳದಿಂಗಳು |
ಚೆನ್ನ ಗೌರಿಗೆ ಶುಭ || ಔತಣ ಕೋಲೆ ||5||
ಕಡೆಯ ಐದನೆ ದಿನ ಉಡುರಾಜ ವದನೆಗೆ |
ಮೃಡನರಸಿ ಗೌರಿಗೆ ಉಡಿ | ತುಂಬು ಕೋಲೆ ||
ಮೃಡನರಸಿ ಗೌರಿಗೆ ಉಡಿ ತುಂಬಿ ಪುಷ್ಪದ |
ಬೆಡಗಿನ ವನದಲ್ಲಿ ಬಿಡಬೇಕು ಕೋಲೆ ||6||
ಸೀಗೆ ಗೌರಮ್ಮಗೆ ಸಕ್ಕರೆ ಆರುತಿ |
ಭೋಗೇಂದ್ರ ವೇಣಿಗೆ ಬೆಲ್ಲದ ಆರುತಿ ||
ಬೇಗನೆ ಎತ್ತುತ ತಂಬಿಟ್ಟಿನಾರುತಿ |
ನಾಗೇಶ ಶಯನಗೆ ಅರ್ಪಿಸು ಕೋಲೆ ||7||
-----------------------------------------------------------*ಸೀರಂ ಗಮಯತಿ ಇತಿ ಸೀಗಃ* ಸೀರ ಎಂದರೆ ನೇಗಿಲು ಹೊಡೆಯುವದು , ರೈತರು ಈ ಸಮಯದಲ್ಲಿ ಹೊಲದಲ್ಲಿ ನೇಗಿಲು ಹೊಡೆಯೋಕೆ ಪ್ರಾರಂಭ ಮಾಡ್ತಾರಾ , ನೇಗಿಲು ಹೊಡೆಯುವದು ಆಂದರೆ , ಮಳೆ ಬಂದು ಭೂಮಿ ಹಸಿ ಹಸಿ ಆಗಿರತ್ತೆ ಆ ಸಂದರ್ಭದಲ್ಲಿ ಎತ್ತುಗಳಿಗೆ ನೊಗ ಕಟ್ಟಿ ಹೊಲದಲ್ಲಿ ಭೂಮಿಯನ್ನು ಹದಮಾಡುವ ಪ್ರಕ್ರಿಯೆ .
ಭೂಮಿರ್ಧೇನುಧರಿಣಿ ಲೋಕ ಧಾರಿಣಿ |ಉಧೃತಾಸಿ ವರಾಹೇಣ ಕೃಷ್ಣೇನ ಶತಬಾಹುನಾ || ಎಂಬ ಪದ್ಮ ಪುರಾಣದ ಉಕ್ತಿಯಂತೆ ಇಡೀ ಚರಾಚರ ಜಗತ್ತನ್ನೇ ಧಾರಣಮಾಡಿದ , ವರಾಹರೂಪಿ ಭಗವಂತನಿಂದ ಸಾಗರದ ತಳದಲ್ಲಿ ಹಿರಣ್ಯಾಕ್ಷನಿಂದ ಒಯ್ಯಲ್ಪಟ್ಟ ಭೂದೇವಿಯನ್ನು ಹೊರತಂದು ಸಕಲ ಜೀವರಾಶಿಗಳಿಗೆ ಬದುಕಲು ತನ್ನ ಮಡಿಲನ್ನೇ ಅರ್ಪಿಸಿರುವ ಆ ಭೂತಾಯಿ ಅರ್ಥಾತ್ ಪ್ರಕೃತ್ಯಾಭಿಮಾನಿ ಲಕ್ಷ್ಮೀದೇವಿಯನ್ನು ಭಕ್ತಿಪೂರ್ವಕ ಪ್ರಾರ್ಥಿಸಿಕೊಂಡು ಈ ನೇಗಿಲು ಹೊಡೆಯುವದರಿಂದ ಉಂಟಾದ ನನ್ನ ಪಾಪವನ್ನು ನಾಶ ಮಾಡಿ ಸಕಲ ಜೀವರಾಶಿಗಳು ಬದುಕಲು ಧವಸ ಧಾನ್ಯಗಳನ್ನು ಪುಷ್ಕಳವಾಗಿ ಅನುಗ್ರಹಿಸು ಭೂತಾಯಿಯೇ ಎಂದು ಪ್ರಾರ್ಥಿಸಿಕೊಳ್ಳುವ ಪೂರ್ಣಿಮೆ ಇದದಾದ್ದರಿಂದ ಇದನ್ನು ಸೀಗೆ ಹುಣ್ಣಿಮೆ ಎಂದು ಕರೆಯಲಾಗುವದು . ಶ್ರೀಮಹಾಲಕ್ಷ್ಮಿಯ ಪರಿವಾರದವರಾದ ಪಾರ್ವತಿ ಪರಮೇಶ್ವರರು ಧವಸ ಧಾನ್ಯಗಳಿಗೆ ಅಭಿಮಾನಿಯಾದ್ದರಿಂದ ಈ ಸಂದರ್ಭದಲ್ಲಿ ಗೌರಿ ಯನ್ನು ಸ್ಥಾಪಿಸಿ ಪ್ರತಿನಿತ್ಯ ಬೇರೆ ಬೇರೆ ತರಹದ ಆರತಿಗಳನ್ನು ಮಾಡಿ ಎಲ್ಲ ಜೀವರಾಶಿಗಳಿಗೂ ಧವಸಧಾನ್ಯಗಳನ್ನು ಸಮೃದ್ಧಿಯಾಗುವಂತೆ ಒದಗಿಸಿಕೊಡು ತಾಯಿಯೇ ಎಂದು ವಿಶೇಷವಾಗಿ ಪ್ರಾರ್ಥಿಸಿಕೊಳ್ಳುವ ಅವಧಿ ಇದಾದ್ದರಿಂದ ಸೀಗಿಗೌರೀ ವೃತಾಚರಣೆ ಮಾಡಬೇಕು 🙏🏼
Very nice singing
ತುಂಬಾ ಚೆನ್ನಾಗಿದೆ ಹಳೆಯ ನೆನಪು ಮರುಕಳಿಸಿ ಹೃದಯ ಸ್ಪರ್ಶಿ ಅನುಭವ ಕೊಟ್ಟ ನಿಮಗೆ ಹೃದಯಪೂರ್ವಕ ಧನ್ಯವಾದಗಳು 🙏🙏🙏
ಶುದ್ದ ಹಾಗೂ ಸ್ಪಷ್ಟವಾಗಿ ಹಾಡಿದ್ದೀರಿ. ಮತ್ತೆ ಮತ್ತೆ ಹೇಳಿದರು ಕೇಳಬೇಕು ಅನಿಸುತ್ತದೆ.
Janapada shailiyalli chenda haadiri...sannaki iddaga gouri gouri ..gaano gouri..antidvi..nenapatu
Thumba chennagi haadiddarey nanathu kelirley Ella thumba upayogavayithu dhannvadagalu amma❤❤
Ella hadu tumba chanagede , na first madide nimma hakida Hadapsar ande bahala channage anisitu.
Mahaadbutavagide.madam👌👌🙏🙏
ತುಂಬಾ ಸಂತೋಷವಾಯಿತು ಚೆನ್ನಾಗಿತ್ತು
ನಮ್ಮ ತಾಯಿಯವರು ಈ ಗೌರಿ ಹಾಡನ್ನು ಹೇಳುತಿದ್ದರು ಹಾಗೆ ನಮ್ಮಿಂದ ಗೌರಿ ಪೂಜೆ ಮಾಡಿಸುತ್ತಿದ ರು ನಮ್ಮ ಹಳೆಯ ನೆನಪುಗಳು ಬಂದಿತು ಈ ಹಾಡು ಕೇಳಿ ತುಂಬಾ ಸಂತೋಷ ವಾಯಿತು ಧನ್ಯವಾದಗಳು
🙏😊
Nimma haadu keli Gowri thayi prasannaraadalu🙏🙏😊😊
ಮೆಡಂ ತುಂಬಾ ಚೆನ್ನಾಗಿ ಹಾಡಿದ್ದಿರಿ 🙏🙏. ತುಂಬಾ ಇಷ್ಟವಾಯ್ತು.🙏🙏
🙏😊
ತುಂಬಾ ಶ್ರಾವ್ಯವಾಗಿದೆ ರೀ. ಕಿವಿಗೆ ಇಂಪಾಗಿದೆ.
Awesome madam....ನಿಮ್ಮ ಹಾಡುಗಾರಿಕೆಯಲ್ಲಿ ಬರುವ ಕನ್ನಡ ಪದಗಳ ಉಚ್ಚಾರ ಕೇಳೋಕೆ ಸೊಗಸು.....
ತುಂಬಾ ಚೆನ್ನಾಗಿದೆ ಚನ್ನಾಗಿ ಹಾದಿದ್ದಿರಿ
ಧನ್ಯವಾದಗಳು💐😊
Wow,, aunti,,, e haadugalannu nam ammaa,,, egalu haaduttaevae..... Naav seegae gouri hunnivae,,, haaduttaevae.... Nim voice sooooooooper,,,, maarvaelous...
Like nightingale.... Tq Tq Tq Tq Tq u mam Nam vaishanavaa,brahmins haadugalu tumbane amazing.... 😇😇😇😇😇😇😇😇😍😍😍😍😍🙏🙏🙏🙏🙏🙏🙏🙏🙏
🙏🙏
ಮೆಡಂ ಎ ಎಷ್ಟು ಸಾರಿ ಕೇಳಿದರು ಕಡಿಮೆಯೆ ನಿಮ್ಮ ಹಾಡುಗಳು ತುಂಬಾ ಧನ್ಯವಾದಗಳು 🙏🙏🙏🙏🙏
ಧನ್ಯವಾದಗಳು😊🙏
Super ❤
ತುಂಬಾ ಧನ್ಯವಾದಗಳು ಮೇಡಂ 💐💐💐💐🙏🙏🙏🙏
ದಿವ್ಯ ಶುಭೋದಯ
ನಮಸ್ತೆ
ಶುಭೋದಯ 🙏
Nanna amma kooda ee song haaduttiddaru, , Hadu tumba chennagude
Namma manelu eechaadu hadtivi. Ega kudisidivi seegi gowramma na
Very beautiful sung 👏👏👏✌👍👍🙏
Tumba chennagide amma thank you.
ಸೂಪರ್ ಮೇಡಂ 🙏🙏🙏🙏
Thank you for the video. After seeing the pooja, it made me feel that I too have received the blessing from paramatma from your rendition
ಧನ್ಯವಾದಗಳು ಅಮ್ಮ😊
👌👌🙏🙏🙏
Thumba chennagi haadidira 🙏
Nice singing, Dhanyavadagalu🙏🙏
ತುಂಬಾ ಚೆನ್ನಾಗಿದೆ ಅಮ್ಮ ಈ ಹಾಡುಗಳನ್ನು ಪರಿಚಯ ಮಾಡಿದ್ದಕ್ಕೆ ನಮಸ್ಕಾರ ಗಳು.
Super.
Became very happy to Listen. 🙏🙏🙏. Remembered my mother. She was also singing the same song during shigehunnime festval. God bless all of us.
🙏🙏🙏🙏👏👏👌👌
Thank you for keeping these precious traditional kritis alive🙏
Beautiful . It remembered our childhood. Songs . Excellent singing
Tumba chennagide. I loved the tune and your singing as always... 🙏
Not a day goes by without listening to your voice...
🙏Thank you Akka 🙏
I m so touched by ur response to me mam............can't express my gratitude towards u in words mam.....🙏🙏🙏🙏🙏🙏
Tumba chennagide hadu
Superb rendering 👌 👏 👏 👏 👏
Awesome akkavarey...blessed with madhu dhwani...
Thanks, really beautifully u sang,and keep such traditional songs alive by recording.
Awesome singing ma’am !! Thaa as nak for sharing such traditional songs 🙏🏿🙏🏿🙏🏿 learning so much from you !!!
🙏
Tumba chennagide
ಸುಂದರವಾಗಿದೆ ಹಾಡು. ಮೇಡಂ 🙏🙏🙏
Haresrinivasa very nice
Super super song
Thank you😊
Jai gowri devi🙏🙏
Gowri hunnive hadu Tulasi lagnada hadugalannu arati hadu hakiri🙏🙏
Aagli haadtini
very nice madam ...
हब्बद संदर्भानुसार हाडू पोस्ट माडोदरल्ली निमगे नीवे साटी.🙏🙏👌👌
🙏🙏tumba ಧನ್ಯವಾದಗಳು
I respect you mam , so beautiful voice 🙏🙏
Wow Thank you mam
Superb Rendition Madam 🙏
ಅಮ್ಮ ನೀವು ಹಾಡಿದ ಶೀಗಿಗೌರಿ
ಹಾಡು ತುಂಬಾ ಚೆನ್ನಾಗಿದೆ ಅದು ಎಲ್ಲಿ
ಸಿಗುತ್ತದೆ.ತಿಳಿಸ್ತಿರಾ😊
Description nalli lyrics ide nodi
Super
👌👌🙏🏼 🙏🏼
🙏🏼🙏🏼🙏🏼👌👌
Wow madam how I express 😍👌
❤
🙏🏼🙏🏼🙏🏼🙏🏼🙏🏼
Very nice
Good voice
Very nice supper
ದಯವಿಟ್ಟು ಸಾಹಿತ್ಯ ಹಂಚಿಕೊಳ್ಳಿ
Description nalli lyrics ide nodi
Superrr voice madam
🙏🙏🌹🌹🙏🙏👌👌
Thank you😊
🙏 🙏
ಇದಕ್ಕೆ ಕಲಶ ಇಡ್ಬೇಕಾ, ಹುಡಿ ಏನ್ ಏನ್ ತುಂಬಬೇಕು, ಯಾವ ಹಿಟ್ಟಿನ ಅರುತಿ ಮಾಡ್ಕೋಬೇಕು.......
🙏🙏👌
🙏🙏🙏🙏🙏
ನಮಸ್ಕಾರ padmaja ಅವರೇ , narakachaturdashiyandu ಹಾಡುವ ಹಾಡುಗಳು ಮತ್ತು ಮನುಷ್ಯರಿಗೆ ಮಾಡುವ arati ಹಾಡುಗಳನ್ನು lyrics ಸಮೇತ ದಯವಿಟ್ಟು ಹಾಕಿ.
Sigi Gouri Devi yannu Maneyalli Padatti iddare Matra Kudasabeko or Hage nu Kudasabahuda Padatti illadiddaru Sister
Dodda gouri haadu haki
🙏🙏🙏🙏
🙏🙏🙏🙏🙏🙏
ದಯವಿಟ್ಟು ತಿಳಿಸಿ ಕೊಡಿ
Very nice. Most needed.
One request - "ಬೀಸಣಕಿ ಬೀಸಿದಳು" ಅಂತ ಚೈತ್ರ ಗೌರಿಗೆ ಒಂದು ಹಾಡು. ನಿಮಗೆ ಗೊತ್ತಿದ್ರೆ ಹಾಡ್ತಾರಾ ಪ್ಲೀಜ್...
ನನಗೆ ಗೊತ್ತಿಲ್ಲದ ಹಾಡು ಇದು.
ಸಿಕ್ಕರೆ ಹಾಡ್ತಿನಿ
Superb ma. Pls translate in english
👍
Lyrics joti hakri pls bhal chalo irut namga..
Haaktini😊
Namaskara amma
Can u please tell how to do doddagouramma pooja.
When to start and how many days we have to keep.
Thanking you amma
ಶೀಗಿ ಗೌರಿ ಲಿರಿಕ್ಸ್ ಹಾಕಿ 😊
Pls share the lyrics
🙏🙏🙏👌👌👌pls send me pdf
Please send lyrics
Description nalli lyrics ide nodi
ಪುಟ್ಟಿ ಪದ್ದು
ಸೀಗ್ಯ್ ಗೌಜಿ ಹಾಡು ಪದೇ
Lyrics sigi gouri hadu
ಇನ್ನೂಂದಿಷ್ಟು ಅಪ್ಲೋಡ್ ಮಾಡಿ
ಆಗಲಿ🙏
Nimage namaskar🙏🙏🙏
🙏
Damodar sloka heli mam please
Helidini
ruclips.net/video/LeXKJiUrcLk/видео.html
Damodara stotra link
Lyrics pls
Pls check description for lyrics
@@puttipaddu17152:55
Hadu please English letter
Okk
Very nice
🙏🙏
🙏🙏🙏🙏
🙏🙏
🙏🙏