ಅತ್ಯಾಚಾರ ಎಸಗಿದ ಕೃತ್ಯದಲ್ಲಿ ಶಾಮೀಲಾಗಿರುವ ಎಲ್ಲಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂಪರಿಷತ್

Поделиться
HTML-код
  • Опубликовано: 12 сен 2024
  • ಕುಕ್ಕುಂದೂರು ಅಯ್ಯಪ್ಪ ನಗರ ಗರಡಿ ಬಳಿ ಪರಿಶಿಷ್ಟ ಪಂಗಡದ ಯುವತಿಯನ್ನು ಕೆಲ ದುಷ್ಕರ್ಮಿಗಳು ಪುಸಲಾಯಿಸಿ, ಮಾದಕ ವಸ್ತು ಒತ್ತಾಯಪೂರ್ವಕವಾಗಿ ಸೇವಿಸುವಂತೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಕೃತ್ಯದಲ್ಲಿ ಶಾಮೀಲಾಗಿರುವ ಎಲ್ಲ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಚಾಲಕ ಸುನಿಲ್ ಕೆ ಅರ್ ಹೇಳಿದರು. ಅವರು ನಗರದ ಹೋಟೆಲ್ ಪ್ರಕಾಶ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಾರ್ಕಳದ ಜನತೆ ಶಾಂತಿ ಪ್ರಿಯರಾಗಿದ್ದು ಇಷ್ಟರ ತನಕ ಈ ರೀತಿಯ ಘಟನೆ ಕಾರ್ಕಳ ನಡೆದಿಲ್ಲ. ಹಿಂದೂ ಸಮಾಜ ತಲೆ ತಗಿಸುವ ಕೆಲಸವಾಗಿದೆ.
    ಜಿಹಾದಿ ಮನಸ್ಥಿತಿಯವರಿಂದ ಹಿಂದೂ ಸಮಾಜದ ಮೇಲೆ ನಿರಂತರದ ದಬ್ಬಾಳಿಕೆ ನಡೆಯುತ್ತಿದೆ.ಈ ಘಟನೆಯಿಂದ ಸಮಾಜದಲ್ಲಿ ಮಹಿಳೆಯರಿಗೆ ಭಯದ ವಾತಾವರಣ ಉಂಟಾಗಿದ್ದು, ಈ ಜಿಹಾದಿ ಕೃತ್ಯವನ್ನು ಎಸಗಿದವರು ಕ್ರಿಮಿನಲ್ ಹಿನ್ನೆಲೆಯವರಾಗಿರುವ ಸಂಶಯವಿದೆ. ಇದೊಂದು ಪೂರ್ವಯೋಜಿತ ಕೃತ್ಯ ಎಂದು ಕಂಡುಬರುತ್ತದೆ. ಈ ಪೈಶಾಚಿಕ ಕೃತ್ಯದ ಹಿಂದೆ ಅಂತಾರಾಷ್ಟಿçÃಯ ಡ್ರಗ್ಸ್ ಮಾಫಿಯಾದ ಜಾಲ ಇದೆ. ಹೀಗಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ಪೊಲೀಸರು ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಘಟನೆಯಿಂದ ಸಮಾಜಕ್ಕೆ ದೊಡ್ಡ ಕಂಟಕ ಎದುರಾಗಲಿದೆ. ಹಿಂದುದು ಸಮಾಜ ಕೂಡ ಜಾಗೃತರಾಗಬೇಕು.ಘಟನೆಯಾ ವಿರುದ್ಧ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ, ಸುಧೀರ್ ನಿಟ್ಟೆ, ಹಿಂದೂ ಜಾಗರಣ ವೇದಿಕೆ ಪ್ರಮುಖ ಮಹೇಶ್ ಬೈಲೂರು, ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ ಉಮೇಶ್ ನಾಯಕ್, ಬಜರಂಗದಳ ತಾಲೂಕು ಪ್ರಮುಖ ಹರೀಶ್, ವಿಶ್ವ ಹಿಂದೂ ಪರಿಷತ್ ಕಾರ್ಕಳ ಪ್ರಖಂಡ ಕಾರ್ಯದರ್ಶಿ ಪ್ರಸಾದ್ ನಿಟ್ಟೆ, ಹಿಂದೂ ಜಾಗರಣ ವೇದಿಕೆಯ ಪ್ರಮುಖ ಶ್ರೀಕಾಂತ್ ಶೆಟ್ಟಿ, ಬಜರಂಗದಳ ಪ್ರಖಂಡ ಸಂಯೋಜಕ ಮನೀಷ್ ಶೆಟ್ಟಿ, ಜಾಗರಣ ವೇದಿಕೆಯ ಪ್ರಮುಖ ಸಂತೋಷ್ ಉಪಸ್ಥಿತರಿದ್ದರು.
    #udupi #mangalore #spandanatv #kannadanews #news #spandana

Комментарии •