ಬಿಡಬೇಡ ಸದ್ಗುಣವ | Bidabeda Sadgunava | song of moral values | Sung by Anand Kulkarni
HTML-код
- Опубликовано: 8 фев 2025
- ಬಿಡಬೇಡ ಸದ್ಗುಣವ ಬಾಳಿಗದು ಭೂಷಣವು
ಉಡಿಗೆ ತೊಡಿಗೆಗಳೆಲ್ಲ ದೇಹ ಶೃಂಗಾರವು||ಪ||
ಸತ್ಯಧರ್ಮಗಳೆಂಬ ದೃಷ್ಟಿ ಕಣ್ಣೊಳಗಿರಲಿ
ಉತ್ತಮರ ಉಪದೇಶ ವಾಣಿ ಕಿವಿಯೊಳಗಿರಲಿ
ನಿತ್ಯದಲಿ ಸುವಿಚಾರ ಚಂದ್ರ ಮೂಡುತಲಿರಲಿ
ಜ್ಞಾನದೀಪದ ಬೆಳಕು ದಾರಿತೋರುತ ಲಿರಲಿ ||1||
ಬಿರುನುಡಿಯ ನುಡಿಬೇಡ ಪರರೊಡವೆ ಕಳಬೇಡ
ದುರುಳ ಸಂಗವು ಬೇಡ ಯಾರಲ್ಲೂ ಹಗೆ ಬೇಡ
ಹುಟ್ಟಿಸಿದ ತಾಯ್ತಂದೆ ಮನವ ನೋಯಿಸಬೇಡ
ನರಜನ್ಮ ಸಾರ್ಥಕತೆ ಚಿಂತನೆಯ ಬಿಡಬೇಡ||2||
ಸುಳ್ಳನಾಡಲು ಬೇಡ ಕಳ್ಳನೆನಿಸಲು ಬೇಡ
ಒಳ್ಳೆತನ ಬಿಡಬೇಡ ಮದಮತ್ಸರವು ಬೇಡ
ಬಲ್ಲಿದನು ನಾನೆಂಬ ಹೆಮ್ಮೆಯೆಂದಿಗೂ ಬೇಡ
ಮಲ್ಲಿಗೆಯ ಹೂವಾಗು ಮಾಮರದ ಫಲವಾಗು ||3|| #anandkulkarni #anandamaya
#moralvalues
#kannada
#neetisongs