ಬಿ. ಸಿ. ರೋಡ್ TO ಪೊಳಲಿ : ಧ್ವಜಸ್ತಂಭದ ಮರದ ಮೆರವಣಿಗೆಯಲ್ಲಿ ಭಕ್ತರ ಉತ್ಸಾಹದ ಪಾದಯಾತ್ರೆ

Поделиться
HTML-код
  • Опубликовано: 24 авг 2024
  • ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜವು ಸೇವಾ ರೂಪದಲ್ಲಿ ನೀಡುವ ನೂತನ ಧ್ವಜಸ್ತಂಭದ ಮರವನ್ನು ಮೆರವಣಿಗೆಯಲ್ಲಿ ನ. 19ರಂದು ಶ್ರೀಕ್ಷೇತ್ರಕ್ಕೆಸಾಗಿಸಲಾಯಿತು. ತಾಲೂಕಿನ ಎಲ್ಲ ಭಜನ ಮಂದಿರ, ಯುವಕ ಸಂಘಗಳ ಸದಸ್ಯರು, ಧ.ಗ್ರಾ. ಯೋಜನೆಯ ಸ್ವಸಹಾಯ ಸದಸ್ಯರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಚೆಂಡೆ, ಬ್ಯಾಂಡ್‌, ಕೊಂಬು, ನಾಸಿಕ್ ಬ್ಯಾಂಡ್‌, ಸ್ಯಾಕ್ಸೋಫೋನ್‌, ಚಿಲಿಪಿಲಿ ಗೊಂಬೆ, ಭಜನ ತಂಡಗಳು ಭಾಗವಹಿಸಿದ್ದವು. ಸಮವಸ್ತ್ರಧಾರಿ ಮಹಿಳೆಯರು, ಪುರುಷರು ಶಿಸ್ತುಬದ್ಧವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
    95 ವರ್ಷ ಪ್ರಾಯದ ಮರ
    ಸುಳ್ಯ ತಾಲೂಕಿನ ಸಂಪಾಜೆ ರಕ್ಷಿತಾರಣ್ಯದಿಂದ ಅರಣ್ಯ ಇಲಾಖೆಗೆ 21.1 ಲಕ್ಷ ರೂ. ಪಾವತಿಸಿ ಮರ ಖರೀದಿಸಿದೆ. ಅರಣ್ಯ ಇಲಾಖೆ ಅಂಕಿ ಅಂಶದಂತೆ ಮರಕ್ಕೆ 95 ವರ್ಷ ಪ್ರಾಯವಾಗಿದೆ. ಬುಡ 14.5 ಅಡಿ ವ್ಯಾಸವನ್ನು ಹೊಂದಿತ್ತು. ಒಂದೇ ಮರ 80 ಅಡಿಗಳಷ್ಟು ಉದ್ದವಿದೆ.

Комментарии • 2