ಬೆಂಝ್ ಕಾರಿಗಿಂತ ಕಮ್ಮಿ ಏನಿಲ್ಲ ಈ ಆಟೋ ರಿಕ್ಷಾ | Auto Rickshaw Better Than Benz Car | Vijay Karnataka

Поделиться
HTML-код
  • Опубликовано: 20 окт 2024
  • ಮಂಗಳೂರಲ್ಲಿ ಆಧುನಿಕ ಸೌಕರ್ಯಗಳನ್ನು ಹೊಂದಿರುವ ಆಟೋವೊಂದು ಇದೀಗ ಎಲ್ಲರ ಕೂತೂಹಲದ ಕೇಂದ್ರ ಬಿಂದುವಾಗಿದೆ. ಕೆ.ಎಂ.ಸಿ ಮೆಡಿಕಲ್ ಕಾಲೇಜಿನ ಬಸ್ ಚಾಲಕರಾಗಿರುವ ಶೇಖರ್ ಆಚಾರ್ಯರಿಗೆ ಆಟೋದ ಮೇಲೆ ವಿಪರೀತ ಪ್ರೀತಿ. ಹೀಗಾಗಿ ತಮ್ಮ ಆಟೋವನ್ನು ಆತ್ಯಾಧುನಿಕ ಕಾರಿಗಿಂತ ಕಡಿಮೆಯೇನಿಲ್ಲ ಎಂಬಂತೆ ವಿನ್ಯಾಸ ಮಾಡಿದ್ದಾರೆ. ಬಜಾಜ್ ಕಂಪೆನಿಯ ಎಲ್.ಪಿ.ಜಿ ಗ್ಯಾಸ್ ಚಾಲಿತ ರಿಕ್ಷಾವನ್ನು ಖರೀದಿಸಿದ ಇವರು ಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಕೇರಳದ ಉಪ್ಪಳದಲ್ಲಿ ಮರು ವಿನ್ಯಾಸ ಮಾಡಿಸಿದ್ದಾರೆ. ಈ ಆಟೋದಲ್ಲಿ ಬಿಸಿಲಿನ ಧಗೆಯಿಂದ ತಂಪಾಗಿಸಲು ಏರ್ ಕೂಲರ್ ಅಳವಡಿಸಲಾಗಿದೆ. ರಿಕ್ಷಾದಲ್ಲಿ ಟಿವಿ ಇದೆ. ರಿವರ್ಸ್ ತೆಗಿಯುವಾಗ ಹಿಂಭಾಗ ಗೋಚರವಾಗುವುದಕ್ಕೆ ರಿವರ್ಸ್ ಕ್ಯಾಮರ ಇದೆ. ಸುರಕ್ಷತೆಗಾಗಿ ನಾಲ್ಕೂ ಭಾಗದಲ್ಲೂ ಡೋರ್ ವ್ಯವಸ್ಥೆಯಿದ್ದು, ಸುರಕ್ಷತೆಗಾಗಿ ಸೆಂಟರ್ ಲಾಕ್ ಸಿಸ್ಟಂ ಸಹ ಇದೆ. ಬಿಡುವಿನ ವೇಳೆಯಲ್ಲಿ ಆಟೋವನ್ನು ಮಂಗಳೂರು ನಗರದಲ್ಲಿ ಓಡಿಸುವ ಇವರು ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ಖ್ಯಾತ ಹೃದಯ ತಜ್ಞ ಡಾ.ಪದ್ಮನಾಭ ಕಾಮತ್ ಅವರ ಕಟ್ಟಾ ಅಭಿಮಾನಿ. ಹೀಗಾಗಿ ಅವರಿಬ್ಬರ ಫೋಟೋವನ್ನು ತಮ್ಮ ಆಟೋದಲ್ಲಿ ಹಾಕಿಕೊಂಡಿದ್ದಾರೆ.
    #AutoRickshaw #Mangaluru #Karnataka
    Our Website : Vijaykarnataka...
    Facebook: / vijaykarnataka
    Twitter: / vijaykarnataka

Комментарии • 6

  • @BlueBird-zg7br
    @BlueBird-zg7br 2 года назад +3

    ದುಡ್ಡಿನಿಂದ ಬಡವ
    ಹೃದಯದಿಂದ ಶ್ರೀಮಂತ ಅಂದ್ರೆ ಇದೆ.👌👌👌🙏🙏

  • @BlueBird-zg7br
    @BlueBird-zg7br 2 года назад

    👌👌👌👌👌👌

  • @sanjaysuryadbossabhimani1979
    @sanjaysuryadbossabhimani1979 2 года назад

    Super ride

  • @funkyimran1
    @funkyimran1 2 года назад

    news sigde idre intha kelsa ne maadbeku alwa??? 😂😂😂
    Benz car inta enu kadime ilwalla 😂😂😂😂

  • @sridhars8740
    @sridhars8740 Год назад

    One of the best places in God's green earth