Ee Pariya Shantiyanu - Sri Sridhara Swamiji | Vishweshwar Bhat Kharwa

Поделиться
HTML-код
  • Опубликовано: 25 авг 2024
  • About Sadguru Bhagawan Sri Sridhara Swami Maharaj,Varadapura
    Singer - Vishweshwar Bhat Kharwa
    Lyrics -
    ಈ ಪರಿಯ ಶಾಂತಿಯನು ಯಾರೊಳಗೂ ನಾ ಕಾಣೆ
    ಅಪಾರ ಮಹಿಮಗುರು ಶ್ರೀಧರರಿಗಲ್ಲದೇ
    ಉದಯದಿಂದಲಿ ಪುನಃ ಉದಯವಾಗುವವರೆಗು
    ಮುದವ ಬೀರುತ ಎಲ್ಲ ವಿಧದ ಜನರೊಳಗೆ
    ಆದರದಿ ಬೆರೆಯುತಲಿ ನಿದ್ರಾಆಹಾರವ ತೊರೆದು
    ಮೋದದಲಿ ನಲಿವ ಶ್ರೀ ಶ್ರೀಧರರಿಗಲ್ಲದೇ ||1||
    ಪರಮ ಆರ್ತರ ನೋಡಿ ಕರುಣದಿಂದಲಿ ಮರುಗಿ
    ಪಾರಮಾರ್ಥದೊಳವರ ಬರವೆ ನೀಗಿಸಲು
    ವರತಪೋಬಲವೆಲ್ಲ ಧಾರೆ ಎರೆಯುತ ಮುದದಿ
    ಕಾರುಣ್ಯದಿಂ ಪೊರೆವ ಶ್ರೀಗುರುವಿಗಲ್ಲದೇ ||2||
    ಅನುದಿನವು ಬರುತಿರುವ ಮಾನವರ ಪರಿ ತಿಳಿದು
    ಮನದಿಮಿಡುಕುತ ಬರುವ ಜನರ ಆದರಿಸಿ
    ತನುವ ಸವೆಸುತ ತನ್ನ ಧನವ ದಾನವಗೈದು
    ಆನಂದದಿಂ ಪೊರೆವ ಶ್ರೀನಾಥಗಲ್ಲದೇ ||3||

Комментарии • 124