Kunidade Yenna Nalige Mele | Goddess Saraswathi | Ananth Kulkarni | Nadhotsava | RisingWaves

Поделиться
HTML-код
  • Опубликовано: 30 сен 2024
  • ನಲಿದಾಡೇ ಎನ್ನ ನಾಲಗೆ ಮ್ಯಾಲೆ
    ಈ ಕೃತಿ ಶ್ರೀ ಶ್ರೀಪಾದರಾಜತೀರ್ಥರಿಂದ ರಚಿಸಲ್ಪಟ್ಟಿದೆ. ಈ ಕೃತಿಯಲ್ಲಿ ದಾಸರು ತಾಯಿ ಶಾರದೆಯ ರೂಪ ಲಾವಣ್ಯ ಹಾಗು ಶೃಂಗಾರವನ್ನು ಪರಿಪರಿಯಾಗಿ ಹಾಡಿ ,ಆ ಜಗನ್ಮಾತೆಯನ್ನು ತಮ್ಮ ನಾಲಿಗೆಯ ಮೇಲೆ ನಲಿದಾಡಲು ಕರೆಯುತ್ತಾರೆ.
    ನಲಿದಾಡೇ ಎನ್ನ ನಾಲಗೆ ಮ್ಯಾಲೆ | ಶಾರದಾದೇವಿ || ಕುಣಿದಾಡೆ ಎನ್ನ ನಾಲಗೆ ಮ್ಯಾಲೆ | ಸರಸ್ವತಿ ದೇವಿ||
    ಘಿಲು ಘಿಲು ಘಿಲು ಗೆಜ್ಜೆಯ ನಾದ | ಹೊಳೆವ ಅಂದುಗೆ ರುಳಿ ಪೈಂಜಣವಿಟ್ಟ ಪುಟ್ಟ ಪಾದ | ಸುರವರನುತ ಪಾದ ಸರಸಿಜೋದ್ಭವನ ವದನ ನಿಲಯಳೆ| ಕರುಣದಿಂದ ಪರಿಪಾಲಿಸು ಮಾತೆ ||೧||
    ನಸುನಗೆ ಮುಖವು ನಾಸಾಭರಣ | ಎಸೆವ ಕಪೋಲ ಹೊಸ ಮುತ್ತಿನ ಚಳ ತುಂಬಿಟ್ಟ ಶ್ರವಣ | ತಿಲಕವು ಹಸನ ಶಶಿ ಸೂರ್ಯರ ಆಭರಣ ಶೋಭಿತಳೆ | ಕುಸುಮ ಮುಡಿದ ಮೂರ್ಧ್ವಜವುಳ್ಳವಳೆ ||೨||
    ಶೃಂಗಾರವಾದ ಜಡೆ ಬಂಗಾರ | ರಾಗುಟಿ ಶೌರಿ ಹೊಂಗ್ಯಾದಿಗೆ ಗೊಂಡೆ ಮುತ್ತಿನ ಹಾರ ರಂಗು ಮನೋಹರ | ಮಂದಗಮನೆ ಅರವಿಂದ ನಯನ ಸಿರಿ | ರಂಗ ವಿಟ್ಟಲನ ತೋರೇ ಶುಭಾಂಗಿ ||೩||
    Kunidade Yenna Nalige Mele Sharadha Devi- Song in praise of Goddess Saraswathi. The song praises the features and qualities of Mother Sharadha and seeks her blessings.
    ರೈಸಿಂಗ್ ವೇವ್ ಸಂಸ್ಥೆ ಧರ್ಮ ಕಲೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನಮ್ಮಸಂಸ್ಥೆ ನೀಡಿದೆ.
    ರಾಮನವಮಿಯ ಶುಭ ಪರ್ವಕಾಲದಲ್ಲಿ ನಾವು ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನಿಗೆ ನಾದೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
    ನಾದೋತ್ಸವ ಕಾರ್ಯಕ್ರಮದ ಮೊದಲನೆಯ ದಿನದಾಸ ಸಾಹಿತ್ಯ ರತ್ನ ಅನಂತ್ ಕುಲಕರ್ಣಿ ಮತ್ತು ತಂಡದಿಂದ ಭಜನ್ ಸಂಧ್ಯಾ ದೇವರ ನಾಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು
    Rising Waves is a premier production house and content creation firm with focus on local Culture, Tradition , Folklore, Art , Literature and Music
    Nadhotsava - the annual Musical festival was organized on occasion of Rama Grabha Navathri by Rising Waves at Bangalore .
    Shri Ananth Kulkarni and troupe rendered soulful Bhajan sandhya on day 1 . Songs included popular dasara padagalu and devranama.

Комментарии •