ನಿನ್ನ ನೋಡಿ ಧನ್ಯನಾದೆನೊ ಹೇ ಶ್ರೀನಿವಾಸ ನಿನ್ನ ನೋಡಿ ಧನ್ಯನಾದೆ ಎನ್ನ ಮನೋನಯನಕೀಗ- ಇನ್ನು ದಯಮಾಡು ಸುಪ್ರಸನ್ನ ಸ್ವಾಮಿ ಪಾಂಡುರಂಗ ಪಕ್ಷಿವಾಹನ ಲಕ್ಷ್ಮೀರಮಣ ಲಕ್ಷ್ಮಿ ನಿನ್ನ ವಕ್ಷದಲ್ಲಿ ರಕ್ಷ ಶಿಕ್ಷಣದಕ್ಷ ಪಾಂಡವ ಪಕ್ಷ ರಕ್ಷ ಕಮಲಾಕ್ಷ ದೇಶದೇಶ ತಿರುಗಿ ನಾನು ಆಶಾಬದ್ಧನಾದೆ ಸ್ವಾಮಿ ದಾಸನು ನಾನಲ್ಲವೆ ಜಗ- ದೀಶ ಶ್ರೀಶ ಶ್ರೀನಿವಾಸ ಕಂತುಜನಕ ಕೇಳೊ ನೀ ನಿ- ರಂತರದಿ ನಿನ್ನ ಸೇವೆ ಅಂತರಂಗದಿ ಪಾಲಿಸಯ್ಯ ಹೊಂತಕಾರಿ ಪುರಂದರವಿಠಲ
Haresrinivasa superb jaisriram
ನಿನ್ನ ನೋಡಿ ಧನ್ಯನಾದೆನೊ ಹೇ ಶ್ರೀನಿವಾಸ
ನಿನ್ನ ನೋಡಿ ಧನ್ಯನಾದೆ ಎನ್ನ ಮನೋನಯನಕೀಗ-
ಇನ್ನು ದಯಮಾಡು ಸುಪ್ರಸನ್ನ ಸ್ವಾಮಿ ಪಾಂಡುರಂಗ
ಪಕ್ಷಿವಾಹನ ಲಕ್ಷ್ಮೀರಮಣ
ಲಕ್ಷ್ಮಿ ನಿನ್ನ ವಕ್ಷದಲ್ಲಿ
ರಕ್ಷ ಶಿಕ್ಷಣದಕ್ಷ ಪಾಂಡವ
ಪಕ್ಷ ರಕ್ಷ ಕಮಲಾಕ್ಷ
ದೇಶದೇಶ ತಿರುಗಿ ನಾನು
ಆಶಾಬದ್ಧನಾದೆ ಸ್ವಾಮಿ
ದಾಸನು ನಾನಲ್ಲವೆ ಜಗ-
ದೀಶ ಶ್ರೀಶ ಶ್ರೀನಿವಾಸ
ಕಂತುಜನಕ ಕೇಳೊ ನೀ ನಿ-
ರಂತರದಿ ನಿನ್ನ ಸೇವೆ
ಅಂತರಂಗದಿ ಪಾಲಿಸಯ್ಯ
ಹೊಂತಕಾರಿ ಪುರಂದರವಿಠಲ
Om namo venkatesaya
Please post lyrics 🙏
Om here srinivasa