ಕರ್ನಾಟಕದ ಪರಿಹಾರ ಕಾಮಗಾರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. 25 ಕೋಟಿ

Поделиться
HTML-код
  • Опубликовано: 16 авг 2019
  • ಈ ಬಾರಿಯ ಮಳೆಗಾಲದಲ್ಲಿ ನಮ್ಮ ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ನೆರೆ ಹಾನಿ ಸಂಭವಿಸಿರುತ್ತದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾಮ್, ಧಾರವಾಡ, ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಗದಗ, ಹಾವೇರಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯಾಗಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಸಮೀಕ್ಷೆಯಂತೆ ರಾಜ್ಯದಾದ್ಯಂತ 20,827 ಮನೆಗಳು ಹಾನಿಗೊಳಗಾಗಿವೆ. 28,288 ಕುಟುಂಬಗಳ ಕೃಷಿಭೂಮಿಗಳು ನೀರು ಪಾಲಾಗಿವೆ. ಕಡುಬಡವರು ಕಷ್ಟಪಟ್ಟು ಗಳಿಸಿಕೊಂಡ ಗೃಹೋಪಯೋಗಿ ವಸ್ತುಗಳು 22,711 ಕುಟುಂಬಗಳಲ್ಲಿ ನಾಶವಾಗಿವೆ. ಇದೊಂದು ಭೀಕರ ದುರಂತವಾಗಿದ್ದು ಇದರಿಂದ ಚೇತರಿಸಿಕೊಳ್ಳಲು ರಾಜ್ಯಕ್ಕೆ ಬಹಳಷ್ಟು ಸಮಯ ಬೇಕಾಗಬಹುದಾಗಿದೆ.
    ತನ್ನ ವಿವಿಧ ಸಂಸ್ಥೆಗಳ ಮುಖಾಂತರ ಸಮಾಜ ಸೇವಾ ಕೆಲಸಗಳಲ್ಲಿ ತೊಡಗಿಕೊಂಡಿರುವ ಕ್ಷೇತ್ರ ಧರ್ಮಸ್ಥಳವು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ.
    ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಿಂದ ನೆರವು :
    ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ತನ್ನ ಬೆಳ್ತಂಗಡಿ ತಾಲೂಕಿನ ಶಾಲಾ ಕಾಲೇಜಿಗಳÀಲ್ಲಿ ಓದುತ್ತಿರುವ ಬಾಧಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಘೋಷಿಸಿದೆ. ಯೂನಿಫಾರ್ಮ್ ಕಳೆದುಕೊಂಡವರಿಗೆ ಎರಡು ಜೊತೆ ಯೂನಿಫಾರ್ಮ್, ಅಗತ್ಯ ಬಿದ್ದಿರುವ ವಿದ್ಯಾಥಿಗಳಿಗೆ ಪಠ್ಯಪುಸ್ತಕಗಳು, ನೋಟ್‍ಬುಕ್, ಸ್ಕೂಲ್ ಬ್ಯಾಗ್, ಬಟ್ಟೆ, ಸಂಸ್ಥೆಯ ವಾಹನ ಹೋಗುತ್ತಿರುವಲ್ಲಿ ವಾಹನದ ವವಸ್ಥೆ, ಅಗತ್ಯವಿರುವ ಮಕ್ಕಳಿಗೆ ಉಚಿತ ಹಾಸ್ಟೆÉಲ್ ವ್ಯವಸ್ಥೆಯನ್ನು ಘೋಷಿಸಿದೆ. ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂತ್ರಸ್ಥ ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು, ಪ್ರಿನ್ಸಿಪಾಲರನ್ನು ತುರ್ತಾಗಿ ಭೇಟಿಯಾಗಲು ತಿಳಿಸಿದೆ.
    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ :
    1. ಇದುವರೆಗೆ ಸುಮಾರು 19,000 ಬೆಡ್‍ಶೀಟ್‍ಗಳನ್ನು ಹಂಚಲಾಗಿದೆ.
    2. ಮುಳುಗಡೆಯಾದ ಮನೆಗಳನ್ನು ಸ್ವಚ್ಛಗೊಳಿಸಲು ಸುಮಾರು 2 ಟನ್‍ನಷ್ಟು ಬ್ಲೀಚಿಂಗ್ ಪೌಡರ್‍ಗಳನ್ನು ಒದಗಿಸಿಕೊಡಲಾಗಿದೆ.
    3. ನೆರೆ ಇಳಿದ ನಂತರ ಮನೆಗೆ ತೆರಳುತ್ತಿರುವ 4,990 ಕುಟುಂಬಗಳಿಗೆ ತಲಾ ರೂ. 1,000 ಮೌಲ್ಯದ ತುರ್ತು ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸಲಾಗಿದೆ
    4. ಬೆಳ್ತಂಗಡಿ ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು ಕಡಿಮೆಯಾಗಿರುವ ಹಿನ್ನಲೆಯಲ್ಲಿ ತೀರ್ಥಹಳ್ಳಿಯಿಂದ ತಾಲೂಕಿನಿಂದ ಎರಡು ಲೋಡ್ ಹುಲ್ಲು ತರಿಸಲಾಗುತ್ತಿದ್ದು, ಹೊಳೆನರಸೀಪುರದಿಂದ ಸೋಮವಾರ ಮೂರು ಲೋಡ್ ಹುಲ್ಲನ್ನು ಒದಗಿಸಲಾಗುವುದು.
    5. ಇದಲ್ಲದೆ ಸಮಸ್ಯೆಗೊಳಗಾಗಿರುವ ಕುಟುಂಬಗಳಿಗೆÉ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ.
    6. ಸ್ವಸಹಾಯ ಸಂಘಗಳ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಯೋಜನೆಯ ಕಾರ್ಯಕರ್ತರು ನೆರೆಪರಿಹಾರ ಕಾರ್ಯಕ್ರಮದಲ್ಲಿ ಈಗಾಗಲೇ ತೊಡಗಿಕೊಂಡಿದ್ದಾರೆ.
    ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ :
    ಪ್ರವಾಹ ಪೀಡಿತ ಕುಟುಂಬಗಳಿಗೆ ನೆರವಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ರೂ. 25 ಕೋಟಿ ಮೊತ್ತವನ್ನು ಮಂಜೂರು ಮಾಡಲಾಗಿದ್ದು, ಈ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸಲಾಗುವುದು. ಈ ಸಂಬಂಧ ಪೂಜ್ಯರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪರಿಹಾರದ ಮೊತ್ತವನ್ನು ಪಾವತಿಸಲಿರುವರು.
    ಬೆಳ್ತಂಗಡಿ ತಾಲೂಕಿನ ಪುನರ್‍ನಿರ್ಮಾಣಕ್ಕಾಗಿ ದೇಣಿಗೆ :
    ಬೆಳ್ತಂಗಡಿ ತಾಲೂಕಿನಲ್ಲಿ 174 ಮನೆಗಳು ಹಾನಿಯಾಗಿರುವ ವರದಿ ಲಭ್ಯವಿದ್ದು ಮಾನ್ಯ ಶಾಸಕರ ಮುಂದಾಳತ್ವದಲ್ಲಿ ಪುನರ್‍ನಿರ್ಮಾಣದ ಕೆಲಸ ಪ್ರಾರಂಭಗೊಂಡಿರುತ್ತದೆ. ಶಾಸಕ ಹರೀಶ್ ಪೂಂಜಾರವರು ಈ ನಿಟ್ಟಿನಲ್ಲಿ ಕೈಗೊಮಡಿರುವ ಪ್ರಯತ್ನಗಳು ಶ್ಲಾಘನಾರ್ಹವಾಗಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತಗಳು ಉತ್ತಮ ಸಹಕಾರವನ್ನು ನೀಡುತ್ತಿವೆ. ಬೆಳ್ತಂಗಡಿ ತಾಲೂಕಿನ ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆಯ ವತಿಯಿಂದ ರೂ. 50 ಲಕ್ಷ ಮೊತ್ತವನ್ನು ‘ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್‍ಫಂಡ್‍ಗೆ’ ವರ್ಗಾಯಿಸಲಾಗುವುದು.
    ವಿಪತ್ತು ನಿರ್ವಹಣಾ ವೇದಿಕೆ ಸ್ಥಾಪನೆ :
    ನೆರೆ ಹಾವಳಿ, ಭೂಕುಸಿತ, ಬಿರುಗಾಳಿ ಮುಂತಾದ ಪ್ರಕೋಪಗಳು ಪುನರಾವರ್ತಿಸುತ್ತಿರುವ ಹಿನ್ನಲೆಯಲ್ಲಿ ತುರ್ತು ರಕ್ಷಣೆಗೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋeನೆಯ ಅಂಗಸಂಸ್ಥೆಗಳ ಪೈಕಿ ಜನಜಾಗೃತಿ ವೇದಿಕೆ, ಪ್ರಗತಿಬಂಧು ಒಕ್ಕೂಟಗಳು, ಜ್ಞಾನವಿಕಾಸ ಕೇಂದ್ರಗಳು, ಸ್ವಸಹಾಯ ಸಂಘಗಳು ಜಂಟಿ ಬಾಧ್ಯತಾ ಗುಂಪುಗಳು, ಸಕ್ರಿಯವಾಗಿದ್ದು ಇವರುಗಳಿಂದ ಆಯ್ದ ಸದಸ್ಯರ ತಂಡವೊಂದನ್ನು ಪ್ರತಿ ತಾಲೂಕು ಮಟ್ಟದಲ್ಲಿ ರಚಿಸಲಾಗುವುದು. ಪ್ರತಿಯೊಂದು ತಾಲೂಕಿನಲ್ಲಿಯೂ 100 ಸದಸ್ಯರುಗಳ ವಿಪತ್ತು ನಿರ್ವಹಣಾ ತಂಡವೊಂದನ್ನು ರಚಿಸಲಾಗುವುದು. ರಾಜ್ಯದಾದ್ಯಂತ ಸುಮಾರು 2 ಲಕ್ಷ ಸದಸ್ಯರುಗಳುಳ್ಳ ‘ವಿಪತ್ತು ನಿರ್ವಹಣಾ ವೇದಿಕೆ’ಯನ್ನು ಸ್ಥಾಪಿಸಲಾಗುವುದು. ಇವರಿಗೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯಿಂದ ತರಬೇತಿ ದೊರಕಿಸುವುದಲ್ಲದೆ, ಅಗತ್ಯವಿರುವ ಉಪಕರಣಗಳನ್ನು ದಾಸ್ತಾನು ಇರಿಸಲಾಗುವುದು. ಮುಂದಿನ ದಿನಗಳಲ್ಲಿ ಯಾವುದೇ ತಾಲೂಕಿನಲ್ಲಿ ಯಾವುದೇ ಪ್ರಾಕೃತಿಕ ವಿಕೋಪ ಉಂಟಾದಲ್ಲಿ ಕೂಡಲೇ ಸ್ಪಂದಿಸುವಂತೆ ವೇದಿಕೆಯು ಕಾರ್ಯನಿರ್ವಹಿಸುವುದು.

Комментарии •