ಉತ್ತರ ದಯಪಾಲಿಸಿದನು ! "ಇಕ್ಕಟ್ಟಿನಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ಆತನು ನನಗೆ ಸದುತ್ತರವನ್ನು ದಯಪಾಲಿಸಿದನು; ಪಾತಾಳದ ಗರ್ಭದೊಳಗಿಂದ ಕೂಗಿಕೊಂಡೆನು ಆಹಾ, ನನ್ನ ಧ್ವನಿಯನ್ನು ಲಾಲಿಸಿದಿ ". ಯೋನ 2:2. ದೇವರ ಚಿತ್ತವನ್ನು ಮೀರಿ ತಾರ್ಷೀಸಿಗೆ ಪ್ರಯಾಣ ಬೆಳೆಸಿದ ಪ್ರವಾದಿಯಾದ ಯೋನನು ಇಕ್ಕಟ್ಟಾದ ಪರಿಸ್ಥಿತಿಗೆ ಒಳಗಾದನು. ಅವನು ಪ್ರಯಾಣಿಸಿದ ಹಡಗು ವಿಪತ್ತಿಗೆ ಒಳಗಾಯಿತು, ಸಮುದ್ರದ ಮೇಲೆ ಬಿರುಗಾಳಿ ಬೀಸಿ ಹಡಗು ಸಮುದ್ರದ ಅಲೆಗಳ ಮಧ್ಯೆ ಹೊಯ್ದಾಡಲಾರಂಬಿಸಿತು . ಕೊನೆಯಲ್ಲಿ ಯೋನನು ಸಮುದ್ರದೊಳಗೆ ಬಿಸಾಡಲ್ಪಟ್ಟನು. ಒಂದು ಮೀನು ಯೋನನನ್ನು ನುಂಗಿ ಬಿಟ್ಟಿತು. ರಾತ್ರಿ ಹಗಲು ಮೂರು ದಿನಗಳು ಅದರ ಹೊಟ್ಟೆಯೊಳಗೆ ಇದ್ದನು. ಆ ಒಂದು ಪರಿಸ್ಥಿತಿಯಲ್ಲಿ ನಿಮ್ಮನ್ನು ಇಟ್ಟು ಯೋಚಿಸಿ ನೋಡಿರಿ. ಬದುಕಾ ? ಇಲ್ಲವೇ ಸಾವಾ? ತಿಳಿಯದು ಇನ್ನು ಬದುಕುತ್ತೇನೆ ಎಂಬ ನಂಬಿಕೆ ಇಲ್ಲ. ಅವನು ತನ್ನ ಅಂತರಂದ ಅಳಲನ್ನು ಯೋನ ಎರಡನೇ ಅಧ್ಯಾಯದಲ್ಲಿ ವಿವರಿಸಿ ಹೇಳುತ್ತಾನೆ. ಯೋನ.2:1-8. ಅಂತ್ಯದಲ್ಲಿ ಆತನ ತೀರ್ಮಾನ ಏನಾಗಿತ್ತು? "ನಾನಾದರೋ ಸ್ತೋತ್ರ ಧ್ವನಿಯಿಂದ ನಿನಗೆ ಯಜ್ಞವನ್ನು ಅರ್ಪಿಸುವೆನು, ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು". ಯೋನ 2:9 ಎಂಬುದೇ. ಆಗ ಯೆಹೋವನು ಮೀನಿಗೆ ಅಪ್ಪಣೆ ಮಾಡಲು ಅದು ಇವನನ್ನು ಒಣ ನೆಲದಲ್ಲಿ ಕಾರಿ ಬಿಟ್ಟಿತು. ಯೋನ 2:10. ಒಮ್ಮೆ ಒಬ್ಬ ಸಹೋದರಿಗೆ ಭಯಂಕರವಾದ ಸೋಂಕು ಉಂಟಾಯಿತು. ಹಾಸಿಗೆ ಹಿಡಿದಳು. ಸಹಾಯ ಮಾಡಲು ಯಾರು ಇಲ್ಲ, ಕೈ ಗೂಸನ್ನು ಎತ್ತಿಕೊಂಡು ಕೆಲಸಕ್ಕೆ ಹೋಗುವ ಗಂಡನಿಗೆ ಅಡುಗೆ ಮಾಡಲು ಆಗಲಿಲ್ಲ. ಆಕೆಗೋ ಸಹಿಸಲಾಗದ ಜ್ವರ. ಆಗ ಆಕೆ ದೇವರೇ, ಯಾಕೆ ಈ ವ್ಯಾದಿ ಬಂದಿತ್ತು? ಎಂದು ಗೋಳಾಡಿ ಅತ್ತಳು. ಆಗ ಕರ್ತನು ಒಂದು ಬರಿದಾದ ಬುಟ್ಟಿಯನ್ನು ತೋರಿಸಿ, ನಿನ್ನ ಬಾಯಲ್ಲಿ ಸ್ತುತಿಯ ಧ್ವನಿ ಇಲ್ಲದೇ ಇರುವುದರಿಂದ ನಿನ್ನ ಬುಟ್ಟಿ ಬರಿದಾಗಿದೆ ಎಂದು ಹೇಳಿದನು. ಆಗ ರಾತ್ರಿ ಒಂದು ಗಂಟೆ ಸಮಯ ತಕ್ಷಣ ಆ ಸಹೋದರಿ ಮೊಣಕಾಲೂರಿ ಕರ್ತನನ್ನು ಸ್ತುತಿಸಿ ಸ್ತೋತ್ರ ಮಾಡಲಾರಂಬಿಸಿದಳು. ಆಯಾಸಗೊಂಡು ಹಾಗೆಯೇ ನಿದ್ರೆ ಹೋದಳು. ಬೆಳಿಗ್ಗೆ ಎದ್ದು ನೋಡಲು ಜ್ವರವೂ ಇಲ್ಲ, ತನ್ನ ಶರೀರವೆಲ್ಲಾ ಸ್ವಸ್ಥ ಗೊಂಡಿರುವುದನ್ನು ಕಂಡಳು. ಸ್ತುತಿ ಸ್ತೋತ್ರವು ಕರ್ತನನ್ನು ಸಂತೋಷ ಗೊಳಿಸುವುದು. ಕರ್ತನಲ್ಲಿ ಪ್ರೀತಿಯ ದೇವರ ಮಕ್ಕಳೇ, ಒಂದು ವೇಳೆ ನೀವು ಯೋನನಂತೆ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರಬಹುದು. ಕೆಲವು ತಪ್ಪುಗಳನ್ನು ಮಾಡಿ ಇಕ್ಕಟ್ಟಿಗೆ ಸಿಲುಕಿರಬಹುದು. ಕರ್ತನನ್ನು ಸ್ತುತಿಸಿ ಸ್ತೋತ್ರ ಮಾಡಲು ತೀರ್ಮಾನಿಸಿರಿ. ನಿಶ್ಚಯವಾಗಿ ಕರ್ತನು ನಿಮ್ಮ ಸಮಸ್ಯೆಗಳನ್ನು ಪರಿಹರಿಸುವನು. ಇಬ್ರಿಯರಿಗೆ ಬರೆದ ಪತ್ರಿಕೆ 13:15 ತಿಳಿಸುತ್ತದೆ, "ಆತನ ಮೂಲಕವಾಗಿಯೇ ದೇವರಿಗೆ ಸ್ತೋತ್ರ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ" ಎಂದು. ಆದುದರಿಂದ ಉತ್ತರ ದಯಪಾಲಿಸಲು ಶಕ್ತನಾದ ಕರ್ತನು ನಿಮ್ಮ ಸಕಲ ಇಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಹತ್ತಿರವಿದ್ದು ಸದುತ್ತರವನ್ನು ದಯಪಾಲಿಸಿ ಕಾಯ್ದು ಕಾಪಾಡಲಿ ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 ramusiddappa1964@gmail.com
Praise the lord 🙏 amen 🙏
Nice
Song...❤
Prise the Lord.haleluya Amen.
Praise the Lord🙏 Glory to God❤🙏 🙌🙌🙌💐
Amen My Jesus I love you my Jesus Amen Jesus ⛪⛪🌼🌼🙏🙏✝️✝️🛐🛐
🙏🙌sogas
Thank u lord jesus🙏🙏🙏🙏🙏
Amen
ಉತ್ತರ ದಯಪಾಲಿಸಿದನು !
"ಇಕ್ಕಟ್ಟಿನಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ಆತನು ನನಗೆ ಸದುತ್ತರವನ್ನು ದಯಪಾಲಿಸಿದನು; ಪಾತಾಳದ ಗರ್ಭದೊಳಗಿಂದ ಕೂಗಿಕೊಂಡೆನು ಆಹಾ, ನನ್ನ ಧ್ವನಿಯನ್ನು ಲಾಲಿಸಿದಿ ".
ಯೋನ 2:2.
ದೇವರ ಚಿತ್ತವನ್ನು ಮೀರಿ ತಾರ್ಷೀಸಿಗೆ ಪ್ರಯಾಣ ಬೆಳೆಸಿದ ಪ್ರವಾದಿಯಾದ ಯೋನನು ಇಕ್ಕಟ್ಟಾದ ಪರಿಸ್ಥಿತಿಗೆ ಒಳಗಾದನು. ಅವನು ಪ್ರಯಾಣಿಸಿದ ಹಡಗು ವಿಪತ್ತಿಗೆ ಒಳಗಾಯಿತು, ಸಮುದ್ರದ ಮೇಲೆ ಬಿರುಗಾಳಿ ಬೀಸಿ ಹಡಗು ಸಮುದ್ರದ ಅಲೆಗಳ ಮಧ್ಯೆ ಹೊಯ್ದಾಡಲಾರಂಬಿಸಿತು . ಕೊನೆಯಲ್ಲಿ ಯೋನನು ಸಮುದ್ರದೊಳಗೆ ಬಿಸಾಡಲ್ಪಟ್ಟನು. ಒಂದು ಮೀನು ಯೋನನನ್ನು ನುಂಗಿ ಬಿಟ್ಟಿತು. ರಾತ್ರಿ ಹಗಲು ಮೂರು ದಿನಗಳು ಅದರ ಹೊಟ್ಟೆಯೊಳಗೆ ಇದ್ದನು.
ಆ ಒಂದು ಪರಿಸ್ಥಿತಿಯಲ್ಲಿ ನಿಮ್ಮನ್ನು ಇಟ್ಟು ಯೋಚಿಸಿ ನೋಡಿರಿ. ಬದುಕಾ ? ಇಲ್ಲವೇ ಸಾವಾ? ತಿಳಿಯದು ಇನ್ನು ಬದುಕುತ್ತೇನೆ ಎಂಬ ನಂಬಿಕೆ ಇಲ್ಲ. ಅವನು ತನ್ನ ಅಂತರಂದ ಅಳಲನ್ನು ಯೋನ ಎರಡನೇ ಅಧ್ಯಾಯದಲ್ಲಿ ವಿವರಿಸಿ ಹೇಳುತ್ತಾನೆ. ಯೋನ.2:1-8. ಅಂತ್ಯದಲ್ಲಿ ಆತನ ತೀರ್ಮಾನ ಏನಾಗಿತ್ತು? "ನಾನಾದರೋ ಸ್ತೋತ್ರ ಧ್ವನಿಯಿಂದ ನಿನಗೆ ಯಜ್ಞವನ್ನು ಅರ್ಪಿಸುವೆನು, ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು".
ಯೋನ 2:9 ಎಂಬುದೇ. ಆಗ ಯೆಹೋವನು ಮೀನಿಗೆ ಅಪ್ಪಣೆ ಮಾಡಲು ಅದು ಇವನನ್ನು ಒಣ ನೆಲದಲ್ಲಿ ಕಾರಿ ಬಿಟ್ಟಿತು. ಯೋನ 2:10. ಒಮ್ಮೆ ಒಬ್ಬ ಸಹೋದರಿಗೆ ಭಯಂಕರವಾದ ಸೋಂಕು ಉಂಟಾಯಿತು. ಹಾಸಿಗೆ ಹಿಡಿದಳು. ಸಹಾಯ ಮಾಡಲು ಯಾರು ಇಲ್ಲ, ಕೈ ಗೂಸನ್ನು ಎತ್ತಿಕೊಂಡು ಕೆಲಸಕ್ಕೆ ಹೋಗುವ ಗಂಡನಿಗೆ ಅಡುಗೆ ಮಾಡಲು ಆಗಲಿಲ್ಲ. ಆಕೆಗೋ ಸಹಿಸಲಾಗದ ಜ್ವರ. ಆಗ ಆಕೆ ದೇವರೇ, ಯಾಕೆ ಈ ವ್ಯಾದಿ ಬಂದಿತ್ತು? ಎಂದು ಗೋಳಾಡಿ ಅತ್ತಳು. ಆಗ ಕರ್ತನು ಒಂದು ಬರಿದಾದ ಬುಟ್ಟಿಯನ್ನು ತೋರಿಸಿ, ನಿನ್ನ ಬಾಯಲ್ಲಿ ಸ್ತುತಿಯ ಧ್ವನಿ ಇಲ್ಲದೇ ಇರುವುದರಿಂದ ನಿನ್ನ ಬುಟ್ಟಿ ಬರಿದಾಗಿದೆ ಎಂದು ಹೇಳಿದನು. ಆಗ ರಾತ್ರಿ ಒಂದು ಗಂಟೆ ಸಮಯ ತಕ್ಷಣ ಆ ಸಹೋದರಿ ಮೊಣಕಾಲೂರಿ ಕರ್ತನನ್ನು ಸ್ತುತಿಸಿ ಸ್ತೋತ್ರ ಮಾಡಲಾರಂಬಿಸಿದಳು. ಆಯಾಸಗೊಂಡು ಹಾಗೆಯೇ ನಿದ್ರೆ ಹೋದಳು. ಬೆಳಿಗ್ಗೆ ಎದ್ದು ನೋಡಲು ಜ್ವರವೂ ಇಲ್ಲ, ತನ್ನ ಶರೀರವೆಲ್ಲಾ ಸ್ವಸ್ಥ ಗೊಂಡಿರುವುದನ್ನು ಕಂಡಳು. ಸ್ತುತಿ ಸ್ತೋತ್ರವು ಕರ್ತನನ್ನು ಸಂತೋಷ ಗೊಳಿಸುವುದು.
ಕರ್ತನಲ್ಲಿ ಪ್ರೀತಿಯ ದೇವರ ಮಕ್ಕಳೇ, ಒಂದು ವೇಳೆ ನೀವು ಯೋನನಂತೆ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರಬಹುದು. ಕೆಲವು ತಪ್ಪುಗಳನ್ನು ಮಾಡಿ ಇಕ್ಕಟ್ಟಿಗೆ ಸಿಲುಕಿರಬಹುದು. ಕರ್ತನನ್ನು ಸ್ತುತಿಸಿ ಸ್ತೋತ್ರ ಮಾಡಲು ತೀರ್ಮಾನಿಸಿರಿ. ನಿಶ್ಚಯವಾಗಿ ಕರ್ತನು ನಿಮ್ಮ ಸಮಸ್ಯೆಗಳನ್ನು ಪರಿಹರಿಸುವನು.
ಇಬ್ರಿಯರಿಗೆ ಬರೆದ ಪತ್ರಿಕೆ 13:15 ತಿಳಿಸುತ್ತದೆ, "ಆತನ ಮೂಲಕವಾಗಿಯೇ ದೇವರಿಗೆ ಸ್ತೋತ್ರ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ"
ಎಂದು.
ಆದುದರಿಂದ ಉತ್ತರ ದಯಪಾಲಿಸಲು ಶಕ್ತನಾದ ಕರ್ತನು ನಿಮ್ಮ ಸಕಲ ಇಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಹತ್ತಿರವಿದ್ದು ಸದುತ್ತರವನ್ನು ದಯಪಾಲಿಸಿ ಕಾಯ್ದು ಕಾಪಾಡಲಿ ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು.
ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು.
9448493381
ramusiddappa1964@gmail.com
29:37
Amen amen amen 🖐️🖐️🖐️🖐️🖐️🖐️🖐️
God is always great and pure
Thank u jesus with my pure heart
Praise the lord hallelujah
Praise the lord
Praise the Lord Amen