ಶ್ರೀ ರಾಮಾವತಾರ ಮಹಿಮಾ ಸುಳಾದಿ | ಶ್ರೀ ವಾದಿರಾಜರ ಕೃತಿ | Sri Ramavatara Mahima Suladi |Sri Vadirajara Kruti
HTML-код
- Опубликовано: 11 окт 2024
- ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್
ಶ್ರೀ ರಾಮಾವತಾರ ಮಹಿಮಾ ಸುಳಾದಿ
ದಶರಥ ನಂದನ ಋಷಿಯಾಗ ಸಂರಕ್ಷಣ
ಶಶಿಮುಖಿ ಶಾಪ ವಿಮೋಚನ ಪಶುಪತಿ ಧನುಭಂಜನ
ಬಿಸಜನೇತ್ರ ಜಾನಕಿ ಕುಶಲ ಮನೋರಂಜನ ಪ-
ರಶುರಾಮ ಗರ್ವನಾಶ ಅಸುರ ಸಂಹಾರಕ
ದಶರಥನಾಜ್ಞಾಧಾರಕ ದಶಶಿರೋಭಗಿನಿ ಶಿಕ್ಷಕ
ರಸಿಕ ಸುಗ್ರೀವ ಪೋಷಣ ರೌದ್ರವತಿ ನಿಗ್ರಹಣ
ಅಸಮ ಸೇತು ಬಂಧನ ಅರಿಮದ ಖಂಡನ
ಶಶಿನಿಕರ ಲಾವಣ್ಯ ಶ್ರೀಮುದ್ದು ಹಯವದನ ||೧||
ಲಂಕಾನಗರ ಪರಿಸ್ತರಣ ವಾಲಸ್ಯ
ಗೈಯದೆ ಮಾಡಿದ ಹನುಮ
ಹುಂಕರಿಪ ಕುಂಭಕರ್ಣನ ಹೊಡೆದು
ಕೆಡಹಿದಂಥ ಜಾಣ ನಿಶ್ಯಂಕ ಮುದ್ದು ಹಯವದನ
ಶರಣು ಹೊಕ್ಕೆ ಕಾಯೋ ಎನ್ನ ||೨||
ದಶಶಿರ ಛೇದನ ಧರಣಿ ಭಯಹರಣ
ಕುಶಲಗಂಧಿನಿ ಗ್ರಹಣ ಕೋವಿದ ಭರತ ಪ್ರಾಣ
ನಿಶಿಚರ ವಿಭೀಷಣಾರಿಷ್ಟ ಪರಿಹರಣ
ಶಶಿಮಂಡಲ ಭೂಷಣ ಶ್ರೀಮುದ್ದು ಹಯವದನ ||೩||
ಅಯೋಧ್ಯಪುರಿಗಾಗತ ಅನುಜ ಮುನಿಸ್ತೋಮ ಗೀತ
ಪ್ರೀಯ ಪಟ್ಟಾಭಿಷೇಕಿತ ಪತಿ ಸೀತಾ ಸಮೇತ
ಶ್ರೀಪವನಸುತಪಾಲ ಶ್ರೀವೇದಗೀತ ಲೋಲ
ಭಯಹರ ಹಯವದನ ಭಕ್ತ ಜನಮೋಹನ ||೪||
ಭೂದೇವಿ ಮನೋಹರ ಭೂಷಿತ ಪ್ರೀಯಕರ
ಸಾಧು ಬೋಧಾನಂದ ಸಜ್ಜನಾನಂದ
ವಾದಿರಾಜಗೊಲಿದ ಸೋಮನಿಸ್ಸೀಮ
ಮೋದಿತ ಬುಧಜನ ಮುದ್ದು ಹಯವದನ ||೫||
ಜತೆ
ಮುದ್ದು ಹಯವದನ ದೇವ ಮಾಮವ ಸರ್ವಾ
ರಾಧ್ಯ ಶ್ರೀರಾಘವ ರಾಜಾಧಿರಾಜ
shrI raamaavataara mahimaa suLaadi
daSaratha naMdana RuShiyaaga saMrakShaNa
SaSimukhi Saapa vimOcana paSupati dhanubhaMjana
bisajanEtra jaanaki kuSala manOraMjana pa-
raSuraama garvanaaSa asura saMhaaraka
daSarathanaaj~jaadhaaraka daSaSirObhagini SikShaka
rasika sugrIva pOShaNa raudravati nigrahaNa
asama sEtu baMdhana arimada KaMDana
SaSinikara laavaNya SrImuddu hayavadana ||1||
laMkaanagara paristaraNa vaalasya
gaiyade maaDida hanuma
huMkaripa kuMbhakarNana hoDedu
keDahidaMtha jaaNa niSyaMka muddu hayavadana
SaraNu hokke kaayO enna ||2||
daSaSira CEdana dharaNi bhayaharaNa
kuSalagaMdhini grahaNa kOvida bharata praaNa
niSicara vibhIShaNaariShTa pariharaNa
SaSimaMDala bhUShaNa SrImuddu hayavadana ||3||
ayOdhyapurigaagata anuja munistOma gIta
prIya paTTaabhiShEkita pati sItaa samEta
SrIpavanasutapaala SrIvEdagIta lOla
bhayahara hayavadana bhakta janamOhana ||4||
bhUdEvi manOhara bhUShita prIyakara
saadhu bOdhaanaMda sajjanaanaMda
vaadiraajagolida sOmanissIma
mOdita budhajana muddu hayavadana ||5||
jate
muddu hayavadana dEva maamava sarvaa
raadhya SrIraaghava raajaadhiraaja - Видеоклипы
ಜೈ ಶ್ರೀ ರಾಮ್
ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏
Superb maam. Rama nama rathna hara dorakithu yenege... Please haadi
👌👌🙏🏻🙏🏻
🙏🙏🙏👌
🙏🙏🙏🙏
ಜೈ ಶ್ರೀ ರಾಮ್
👌👌🙏🙏👏👏
🙏🙏🙏👏👏👌
🙏🙏