Это видео недоступно.
Сожалеем об этом.

Sex and Success | The Power of Sex Transmutation | Brahmacharya | Manjunatha B | Sadhana Academy

Поделиться
HTML-код
  • Опубликовано: 25 дек 2020
  • Motivation Session in Kannada
    #Manjunatha_B
    #Sadhana_Academy
    Brahmacharya
    Power to Super Power
    Sex Transmutation
    Mastrubation
    NoFap Movement
    No Fap in Kannada
    NoFap in Kannada
    The Way of to live as Successful Person
    New Year Resolutions 2021
    Our Telegram Link:
    t.me/sadhanaac...
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್‌-ನಲ್ಲಿ 36 ಕ್ಕೂ ಅಧಿಕ ಟೆಸ್ಟ್‌-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್‌ ಮತ್ತು ವಾರಕ್ಕೆ 3 ಟೆಸ್ಟ್‌ ಅಟೆಂಡ್‌ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    • Sadhana Academy All Vi...
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

Комментарии • 5 тыс.

  • @charankali6020
    @charankali6020 3 года назад +140

    ನಮಸ್ತೆ ಸರ್ ನನ್ನ 21 ದಿನಗಳು ನನ್ನ ಆತ್ಮ ಸಾಕ್ಷಿ ಯಾಗಿ ಮುಗಿಸಿದ್ದೇನೆ ಹಾಗೂ ನನ್ನಲಿ ಅದ ಬದಲಾವಣೆಯನ್ನು ಸಹ ನಾನು ಕಂಡು ಕೊಡಿದ್ದೇನೆ, 🙏🌱

  • @smashitreal791
    @smashitreal791 3 года назад +1740

    ಹತ್ತು ದಿಕ್ಕಿನಲ್ಲೂ ಯೋಚನೆ ಮಾಡುವ ಮಹಾನ್ ಗುರುಗಳು ನಮಗೆ ಸಿಕ್ಕಿರುವುದು ನಮ್ಮ ಭಾಗ್ಯ

    • @kichchabadshah1663
      @kichchabadshah1663 3 года назад +21

      ❤️❤️❤️

    • @hm.mongstories2753
      @hm.mongstories2753 3 года назад +11

      ♥️♥️♥️♥️💐

    • @stronger..m1838
      @stronger..m1838 3 года назад +14

      Poorvik.... nanage gottirodu 8 dikku nivu inneredu yellidave namagu heli plz..

    • @smashitreal791
      @smashitreal791 3 года назад +30

      @@stronger..m1838 dikkugalu saavira bekaadru ide nange thildirodu 10 nimge thildirodu 8 aytha innu extra 2 bhoomi matte aakasha ok

    • @stronger..m1838
      @stronger..m1838 3 года назад +8

      @@smashitreal791 👍
      thank you..😊🙏

  • @raghuhs391
    @raghuhs391 Год назад +45

    ಧನ್ಯವಾದಗಳು ಗುರುಗಳೇ.... ನಿಮ್ಮ ತರ ನಮ್ಮ ಟಿವಿ ವಾಹಿನಿಗಳಲ್ಲಿ ದಿನಕ್ಕೆ ಬರಿ ಒಂದೇ ಒಂದು ಗಂಟೆ. ಇ ತರಹದ ಕಾರ್ಯಕ್ರಮಗಳನ್ನು ಮಾಡಿದ್ರೆ ನಮ್ಮ ಯುವಕರು ತುಂಬಾ ಮುಂದೆ ಬರ್ತಿದ್ರು....

  • @dbossfan...9532
    @dbossfan...9532 Год назад +30

    God of my life...🙏 ನಿಮ್ಮಂತ ಗುರುಗಳನ್ನು ಪಡಿದಿರುವುದು ನಮ್ಮ ಹೆಮ್ಮೆ ಸರ್...🙏

  • @sirigannadabalaga8864
    @sirigannadabalaga8864 3 года назад +628

    SORRY Sir
    ಇಷ್ಟು ದಿನ ಮಾಡಿದ ತಪ್ಪುಗಳನ್ನು ಇನ್ನು ಮುಂದೆ ಮಾಡುವುದಿಲ್ಲ,
    ಬದಲಾವಣೆಯತ್ತ ನನ್ನ ಪಯಣ
    ಆಶೀರ್ವದಿಸಿ

    • @dolphinfxx5704
      @dolphinfxx5704 3 года назад +3

      Evag yeng ogthide

    • @Sachin-xg7xf
      @Sachin-xg7xf 2 года назад

      @@dolphinfxx5704 hlo

    • @munirajucn7561
      @munirajucn7561 2 года назад

      @@Sachin-xg7xf 😂

    • @anandnaykodi2419
      @anandnaykodi2419 3 месяца назад

      Bro ನಿಜ ಹೇಳಿ ಇವಗ ಅದೇ fallow ಮಾಡ್ತಾ ಇದಿರ😂

  • @sumangalajeevninusg6621
    @sumangalajeevninusg6621 3 года назад +61

    ಗುರುಗಳೇ ಇದು ಅತ್ಯಂತ ಅವಶ್ಯಕವಾಗಿತ್ತು ಆದರೆ ಸ್ವಾಮಿ ವಿವೇಕಾನಂದರ ಒಂದು ನಿದರ್ಶನವನ್ನು ಇಲ್ಲಿ ಕೊಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅದೇನೇ ಇರಲಿ ತುಂಬು ಹೃದಯದ ಧನ್ಯವಾದಗಳು ಇಂತಹ ಒಂದು ಸಂದೇಶವನ್ನು ಯುವಪೀಳಿಗೆಗೆ ಕೊಟ್ಟಿದ್ದಕ್ಕೆ

  • @malappa_ramaswamy
    @malappa_ramaswamy Год назад +22

    ಪ್ರಸ್ತುತ ಸಮಾಜಕ್ಕೆ ನಿಮ್ಮಂತಹ ಸಲೇಹೆಗರಾರ ಅವಶ್ಯಕತೆ ತುಂಬಾ ಇದೆ ಗುರುಗಳೆ, ದನ್ಯವಾದಗಳು ಉತ್ತಮ ಮಾಹಿತಿ ನೀಡಿದ್ದಕ್ಕೆ 💐🙏❤️

    • @malappa_ramaswamy
      @malappa_ramaswamy Год назад

      ಪ್ರತಿಯೊಬ್ಬರ ಕಮೆಂಟ್ಸ್ ಗು ನೀವು ಕೊಡೋ ಪ್ರೀತಿ...........unlimited sir 🙏❤️❤️❤️❤️❤️

  • @poojapoojauma6295
    @poojapoojauma6295 Год назад +6

    ಎಂಥಾ ವೈದ್ಯ ಮನೋವೈದ್ಯ ಅರ್ಥ ಮಾಡಿಸಲು ಆಗದ ವಿಷಯವನ್ನು ತುಂಬಾ ಸರಳವಾಗಿ ಮನದಟ್ಟು ಮಾಡಿದಿರಾ,ತುಂಬಾ ಧನ್ಯವಾದಗಳು

  • @nagarajy7990
    @nagarajy7990 3 года назад +416

    ಧನ್ಯವಾದಗಳು ಗುರುಗಳೇ ಯಾವುದೇ ಮುಜುಗರ ಇಲ್ಲದೇ ಇಂಥ ಅದ್ಭುತವಾದ ಸುದ್ದಿಯನ್ನು.ನಮ್ಮಂತ ಯುವಕರಿಗೆ ತಲುಪಿಸುತ್ತಿರುವು.... ಸಮಾಜಕ್ಕೆ ಮತ್ತು ಯುವಕರಿಗೆ ಒಂದು ಅಧ್ಬುತ ಸಂದೇಶ... ✊👏👏

    • @vijayamarla1209
      @vijayamarla1209 2 года назад +1

      😂😂😂😂😂😂

    • @daliyreels
      @daliyreels 2 года назад +1

      It is an good initiative your acadimy has taken.youngsters are our countries feuture, so by providing such kind of service,to the younger generation,is an "NOBEL SERVICE".So go on providing an nobel sevice to our beloved country to buildup strong in all starts.I selute to you and job.And pray, that the almighty GOD who is omni potent will accept your sevice and give an good sense to our younger generation,and follow your guidelines.thankyou.

    • @artexpression371
      @artexpression371 2 года назад

      Someone do not like to talk about this but really your explain was superb and, it will help us to our being exchange,your speach soo nice manjunath sir, Tq for given good information.

  • @rakeshbounceback
    @rakeshbounceback 3 года назад +155

    ಕಾಮುಕನನ್ನು ತೊಲಗಿಸಿ ಸಾಧಕನನ್ನು ಮಾಡುವ ನಿಮಗೆ ಅನಂತ ಧನ್ಯವಾದಗಳು 🤗

  • @rameshsr8944
    @rameshsr8944 Год назад +11

    👍ಸರ್ ಇದು ಅದ್ಭುತವಾದ ಮಾಹಿತಿ ಇಂತಹ ಒಂದು ಮಾಹಿತಿ ಕೊಟ್ಟಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್🙏

  • @ajitk3613
    @ajitk3613 Год назад +8

    ಸರ್ ನಾನು ಈ ವಿಡಿಯೋ ನೋಡಿರಲಿಲ್ಲಾ...ಈಗ ನೋಡಿದೆನೆ. ಅದ್ಭುತವಾದ ಸಂದೇಶ ಇದೆ.....
    ನಾನು ಕೂಡಾ ಬದಲಾಗಿ ಒಂದು ಒಳ್ಳೆಯ ಹುದ್ದೆಯನ್ನು ತೆಗೆದುಕೋಳ್ಳುತ್ತೆನೆ

  • @manu.g.ravichanran4152
    @manu.g.ravichanran4152 3 года назад +77

    ನನ್ನ ಜೀವನಕ್ಕೆ ಅತ್ತ್ತ್ಯುತ್ತಮ ಮೆಸೇಜ್ sir ..! ನನ್ನ ವಯಸು 27 ಇಲ್ಲಿವರೆಗಿನ ನನ್ನ ತಪ್ಪು ನನಗೆ ಅರ್ಥವಾಗಿರಲಿಲ್ಲ , ಇನ್ನು ಮುಂದೇ ಆ ತಪ್ಪನ್ನು ಮಾಡುವುದಿಲ್ಲ , ಇದು ನನಗೆ ಮಾತ್ರವಲ್ಲ ನನ್ನ ಗೆಳೆಯರಿಗೂ ಉಪಯುಕ್ತ ಮಾಹಿತಿ, ನಾನು ಇಧನ್ನ ನನ್ನ ಗೆಳೆಯರಿಗೆ ಹಾಗೂ ನನ್ನ ಸಹೋದರಿಗೆ ನನ್ನ ಹಿತೈಷಿಗಲಿಗೆ ತಲುಪಿಸುವೆ

  • @paramesh-Naik.1997
    @paramesh-Naik.1997 3 года назад +77

    ವಿದ್ಯಾರ್ಥಿಗಳ‌ ಪಾಲಿನ ಭಗವಂತ ಸರ್ ನೀವು .....ಉತ್ತಮ ವಿಚಾರವನ್ನು ಅದ್ಭುತವಾಗಿ ಮನಮುಟ್ಟುವಂತೆ ತಿಳಿಸಿದ್ದೀರಿ ಕೋಟಿ ನಮನಗಳು ಸರ್ ನಿಮ್ಮ ಈ ಒಳ್ಳೆಯ ಮಾರ್ಗದರ್ಶನಗಳಿಗೆ .

  • @yashvantha61
    @yashvantha61 Год назад +7

    Sir ಇದು ತುಂಬಾ ಚೆನ್ನಾಗಿ ಇನ್ಫಾರ್ಮಶನ್ ಕೊಟ್ಟಿದಿರಾ ತುಂಬಾ ಥ್ಯಾಂಕ್ಸ್.. ಬಹಳ ಇಷ್ಟ ಆಯಿತು

  • @Dr..J
    @Dr..J 2 года назад +114

    Dear Manjunath,
    As a science student, I completely agree with your work. You explained it well with examples, and you put it in the right place in the minds of the youngsters. Sometimes students know what is wrong and right, but always go for the easy way. They need someone to remind them for a while. I would really appreciate it if you came up with a video showing how to channel this immense energy to achieve their goals.
    Thanks again for your guidance and support for the youngsters.

  • @sushilanaik3150
    @sushilanaik3150 3 года назад +91

    ಈ ಸಮಯಕ್ಕೆ ಮಕ್ಕಳಿಗೆ ತುಂಬಾ ಅಗತ್ಯವಾಗಿರುವಂತಹ ವಿಷಯವಾಗಿದೆ ಇದು.. ಇದನ್ನು ಶಾಲೆಯ ಪಾಠದಲ್ಲಿ ಅಳವಡಿಸಬೇಕಾಗಿದೆ, ಆದರೆ ಅದು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಇದು ನಮ್ಮ ದುರಾದೃಷ್ಟ.. ನಿಮಗೆ ತುಂಬಾ ಧನ್ಯವಾದಗಳು ಸರ್..

    • @Mallikarjun_Haveri
      @Mallikarjun_Haveri 3 года назад +3

      Madam.. Govt has Implemented this Concept as Trial in 2004 n 2005 .
      but Some of the Outdated n Complex mentalities had Apposed for Sex Realted Awareness ... so this concept was Left to Depth in Trench ! Unfortunately ...these days ...There are Pocso Cases are Highly recorded in Police station .

    • @nishaan1341
      @nishaan1341 3 года назад

      Broo really true

    • @sushilanaik3150
      @sushilanaik3150 3 года назад

      @@Mallikarjun_Haveri yes sir.. Here problem is may be the teacher, why bcz nobody ready to teach the subject where the word " sex" comes..

    • @maheshyb639
      @maheshyb639 3 года назад

      @@sushilanaik3150 give me contact number

  • @narayanaari7136
    @narayanaari7136 3 года назад +85

    ಇದುವರೆಗೂ ಇತರ ಆದಂತಹ ಮಾಹಿತಿಯನ್ನು ಯಾರು ಕೂಡ ಮಾಡಿರಲಿಲ್ಲ ನಿಮ್ಮ ಆಲೋಚನೆ ಬಹಳ ಮಹತ್ತರವಾದದ್ದು

  • @RajuK-gu9xh
    @RajuK-gu9xh Год назад +3

    ತುಂಬಾ ಒಳ್ಳೆಯ ಸಂದೇಶ ಕೊಟ್ಟಿದಿರಾ ಸರ್. ಈ ವಿಷಯ ನಮ್ಮ ಯುವ ಪೀಳಿಗೆಯ ಜೀವನದಲ್ಲಿ ಉತ್ತುಂಗದ ಮಟ್ಟಕ್ಕೆ ಏರುವ ಇರುವ ಮೊದಲು ಸಮಸ್ಯೆ, ಈ ವಿಷಯವನ್ನು ಅಂಚಿಕೊಂಡಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು ಸರ್ 🙏🙏

  • @chandrashekarsr2706
    @chandrashekarsr2706 Год назад +18

    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಸರ್🙏

  • @vinayakap7014
    @vinayakap7014 3 года назад +72

    I think this is the real video is expecting from Young generation.... E thara vishya matadake dhairya beku adunna nivu torsidira tq sir

  • @sangamanathkalshetty792
    @sangamanathkalshetty792 3 года назад +47

    ಶಿಕ್ಷಣ , ಉದ್ಯೋಗ ಇತರೆ ಗಿಂತ
    ಮೂದಲು ಇದು ನಾವು ಕಲ್ಲಿಬೇಕಾಗಿರುವುದು
    👏👏👏
    🙏🙏🙏

  • @rajrajb7852
    @rajrajb7852 Год назад +14

    ಅದ್ಬುತ ಸಂದೇಶ ಸರ್ 🙏🙏 ನಿಮಗೆ ನನ್ನದೊಂದು ಸಲಾಂ🙏

  • @geethaacharya8606
    @geethaacharya8606 Год назад +2

    ಅದ್ಭುತ ಮತ್ತು ಅಮೂಲ್ಯವಾದ ಟಾಪಿಕ್ ಈ ವಿಚಾರ. ಧನ್ಯವಾದಗಳು ಸರ್ ಮಾಹಿತಿಗಾಗಿ.. 🙏🙏 ಯಾವಾಗಲೂ ಧನಾತ್ಮಕ ಚಿಂತನೆ, ಯೋಚನೆಗಳು ಇದ್ದಾಗ ಎಲ್ಲಾ ವಿಚಾರಗಳು ಉತ್ತಮವಾಗಿ ಕಾಣಿಸುತ್ತೆ. ಹಾಗಿದ್ದಾಗ ಮಾತ್ರ ನಾವು ಇನ್ನೊಬ್ಬರಿಗೆ ಆದರ್ಶ, ಹಾಗೂ ಸ್ಫೂರ್ತಿ ಆಗಲು ಸಾಧ್ಯ.. 🙏🙏 ಮನಸಿನ ಭಾವನೆಗಳನ್ನು ಕಂಟ್ರೋಲ್ ಮಾಡಲು ಯೋಗ ಪ್ರಾಣಾಯಾಮ ಧ್ಯಾನ ತುಂಬಾ ಮುಖ್ಯ ಆಗತ್ತೆ.. once again thanks Soo much sir 🙏🙏 for this wonderful topic.

  • @girishkcGiri
    @girishkcGiri 3 года назад +199

    ತುಂಬಾ ಅತ್ಯಅದ್ಭುತವಾಗಿ ಹಾಗೂ ಅರ್ಥಗರ್ಭಿತವಾಗಿ ಈ ವಿಷಯವಾಗಿ ಮಾತಾಡಿದೀರಾ ಗುರುಗಳೇ ತಮಗೇ ಅನಂತ ಅನಂತ ಧನ್ಯವಾದಗಳು...

  • @shivukaplimath4493
    @shivukaplimath4493 3 года назад +116

    ಯುವ ಪೀಳಿಗೆಗೆ ಉತ್ತಮ ಸಂದೇಶ.... ಧನ್ಯವಾದಗಳು ಸರ್

  • @maheshmashal
    @maheshmashal 2 года назад +24

    Sir one of the best video which everyone should watch... Really great work... Beautiful research... Thank you infinite for your struggle to help all of us...

  • @gopalakrishnaga4264
    @gopalakrishnaga4264 Год назад +2

    ತುಂಬಾ ಅಮೋಘ ಅಧ್ಭುತ ಅತ್ಯಾವಶ್ಯಕವಾದ ವಿಷಯವನ್ನೇ ಹೇಳಿದ್ದಿರಾ, ನಾನು ತುಂಬಾ ದಿನದಿಂದ ಇಂಥ ಒಂದು ವಿಡಿಯೋ ಯಾರು ಮಾಡಲಿಲ್ಲವಲ್ಲ ನಮ್ಮ ಯುವ ಜನತೆಗಾಗಿ ಎಂದು ಕೂಂಡಿದ್ದೆ .ಧನ್ಯವಾದಗಳು

  • @funwould9118
    @funwould9118 3 года назад +35

    ಕನ್ನಡದಲ್ಲಿ ಇಂತಹ ವಿಡಿಯೋಗಳು ಅವಶ್ಯಕತೆ ತುಂಬಾ ಇದೆ. ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @ulaveshvs1637
    @ulaveshvs1637 3 года назад +63

    ಎಂತ ಅದ್ಬುತ ವಿಚಾರ ಹೇಳಿದೇರಿ ಸರ್,,,, ಸಾರ್ಥಕ ನಿಮ್ಮ ಜೀವನ ಸರ್ 🌷🙏🙏🙏🙏🙏🙏🙏100% ಒಳ್ಳೇಯ ಸಾಧಕರು ದೇಶಕ್ಕೆ ನೀಡುತ್ತಿರಿ ಈ ವಿಡಿಯೋದಿಂದ ಥ್ಯಾಂಕ್ಸ್ lot lot sir🙏🙏🙏🙏🙏🙏🙏♥️♥️♥️

  • @kirankumarangadi7993
    @kirankumarangadi7993 Год назад +7

    ನಿಮ್ಮ ಮಾತಿನ ಪ್ರತಿ ಒಂದು ಅಕ್ಷರದಲ್ಲಿ ನಮ್ಮ ಜೀವನ ಪ್ರತಿ ವಿಷಯಾವು ನಮ್ಮ ಗಮನಕ್ಕೆ ಬಂದಿರುವುದು ಆದರೇ ಆ ವಿಷಯ ಸರಿಯಾಗಿ ತಿಳಿಸಿ ಹೇಳಿದ ನಿಮಗೆ ನಮ್ಮ ಕಡೆ ಇಂದ್ದ ತುಂಬು ಹೃದಯದ ಶುಭಾಶಯಗಳು 🙏

  • @ramakrishnachariramakrishn4393
    @ramakrishnachariramakrishn4393 Год назад +3

    100% ಇದು ಒಳ್ಳೆ ಮಾಹಿತಿ ಸರ್, ಇಂದಿನ ಭಾರತೀಯ ಯುವ ಶಕ್ತಿಯನ್ನು ಸಾಕಾರಾತ್ಮಕ ಹಾದಿಯಲ್ಲಿ ನಡೆಸುವ ಮಾಹಿತಿ 🙏🙏👍👌🤝

  • @thippeswamyrips7328
    @thippeswamyrips7328 3 года назад +63

    ಜಗತ್ತಿಗೆ ಜ್ಯೋತಿ ಆಗುವ ಎಲ್ಲ ಲಕ್ಷಣಗಳು ನಿಮ್ಮಲ್ಲಿ ಇದೆ ಗುರುಗಳೇ🙏🙏🙏 ಹಾಗೂ ಆ ಲಕ್ಷಣಗಳು ನಮ್ಮಲ್ಲಿಯು ಬೆಳೆಯುತಿದೇ..........

  • @Girish0313
    @Girish0313 3 года назад +179

    ಸರ್....ನಂಗೆ ಮಾತುಗಳೇ ಬರುತ್ತಿಲ್ಲ😷 thanks sir🙏
    ಬದಲಾಗುವ ಆ ಐದು ಜನರಲ್ಲಿ ನಾನು ಮೊದಲಿಗನಾಗಲೂ ತಿರ್ಮಾನಿಸಿದ್ದೇನೆ👍

    • @g.ravichandran6809
      @g.ravichandran6809 3 года назад

      Me too

    • @gkenterprises6487
      @gkenterprises6487 3 года назад +4

      ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ನಿಮ್ಮ ಮಾಹಿತಿಗೆ ಧನ್ಯವಾದಗಳು

    • @girijakumbar4954
      @girijakumbar4954 3 года назад +3

      Yellaru agona, 5 aste yake

    • @Girish0313
      @Girish0313 3 года назад +1

      @@girijakumbar4954 ಖಂಡಿತವಾಗಿಯೂ

    • @ramuk4680
      @ramuk4680 2 года назад

      ❤️

  • @theerthagowda1917
    @theerthagowda1917 2 года назад +60

    This should be taught in college life ❤️ Thanks for the wonderful content Sir!!🙌

  • @narasimhamurthy4104
    @narasimhamurthy4104 8 месяцев назад +1

    ನಿಮ್ಮ ಪರಿಪೂರ್ಣ ಮಾಹಿತಿಗೆ ಹೃದಯಪೂರ್ವಕ ಧನ್ಯವಾದ.. ನಮ್ಮ ಜೀವನಕ್ಕೆ ಅನುಸರಿಸಬೇಕಾದ ಮಾಹಿತಿ ಜ್ಞಾನ ನಮಗೆ ಇಲ್ಲದಿರುವುದು ನೀವು ತಿಳಿಸಿರುವುದು ಸತ್ಕಾರ್ಯದಲ್ಲಿ ಒಂದು..🙏🏽👌👏🏽👍🏽

  • @RaviRavi-cq4wq
    @RaviRavi-cq4wq 3 года назад +19

    ತಿಳಿದರೂ ಬಿಡಲಾರದ ಅಂತ ಕತ್ತಲೆಯಿಂದ ಹೊರ ತರುವ ನಿಮ್ಮ ಚಿಕ್ಕ ಪ್ರಯತ್ನ ಅದ್ಭುತ sir ...🙏

  • @laxmibhat9822
    @laxmibhat9822 3 года назад +51

    ಸರ್ ಇದು ಮುಂದಿನ ದಿನಗಳಲ್ಲಿ ಯುವಪೀಳಿಗೆ ತಿಳಿದುಕೊಳ್ಳ ಬೇಕಾದ ವಿಚಾರ ನಿಮ್ಮ ಮಾತಿನಲ್ಲಿ ಸತ್ಯ ಇದೆ ಅರ್ಥ ಪೂರ್ಣ ವಾಗಿದೆ ನನಗೆ ಸರಿ ಅನಿಸಿದೆ
    ಧನ್ಯವಾದಗಳು

  • @ambrishvbm7777
    @ambrishvbm7777 Год назад +2

    ತುಂಬಾ ಧನ್ಯವಾದಗಳು ಸರ್, ಅದ್ಭುತವಾದ ವೀಡಿಯೊ ನಾನು ಈ ಬಾರಿಯ ವೀಡಿಯೊವನ್ನು ಸಂಪೂರ್ಣವಾಗಿ ನೋಡದೆ, ನನಗೆ ತಿಳಿದಿದೆ 100% ನನ್ನ ಜೀವನಶೈಲಿಯನ್ನು ಬದಲಾಯಿಸುತ್ತೇನೆ, ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ,ಮತ್ತು ನಿಮ್ಮ ಯೂಟ್ಯೂಬ್ ಅನುಯಾಯಿಗಳೆಲ್ಲರೂ ಆಶೀರ್ವದಿಸಲ್ಪಟ್ಟ ಜನರು, ದೇವರು ನಿಮ್ಮ ತಲೆಮಾರುಗಳನ್ನು ಆಶೀರ್ವದಿಸಲಿ ಸರ್,ನಾನು ನಿನ್ನನ್ನು ಪ್ರೀತಿಸುತ್ತೇನೆ, ನಾನು ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಸರ್🤴🤝💐.

  • @anjanappak7999
    @anjanappak7999 Год назад +1

    ಅದ್ಭುತವಾದ ಮಾತುಗಳು ಸರ್, ನವಯುಕರಿಗಂತೂ ಅತಿ ಮುಖ್ಯವಾದ ಅಂಶ.ನಾನು ಅನೇಕರಿಗೆ ಈ ವೀಡಿಯೊ ಕಳಿಸಿ ಧನ್ಯನಾಗತ್ತೇನೆ. ಇಂತಹ ವೀಡಿಯೋಮಾಡಿ ಅನೇಕನೇಕರಿಗೆ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿರುತ್ತೀರಿ ನಿಮಗೂ ಧನ್ಯವಾದಗಳು.

  • @raghuKadursadhanaacademy
    @raghuKadursadhanaacademy 3 года назад +72

    ಉತ್ತಮ ಮಾಹಿತಿ ಮಂಜು ಸರ್, ಇಂದಿನ ಯುವಕರಿಗೆ ಇದೊಂದು ಉತ್ತಮ ಸಂದೇಶ...
    ಧನ್ಯವಾದಗಳು.

    • @ningappatelipsi602
      @ningappatelipsi602 3 года назад +1

      Nivu edira.... Bari magzine anta..... Nodi sir

    • @anandareddy7287
      @anandareddy7287 3 года назад

      Good

    • @rock798
      @rock798 3 года назад +4

      ನೀವು ಇದೀರ ಎಲ್ಲರನ್ನೂ ಕಾಲ್ ಎಳೆಯೋದು...motivation madi ದುಡ್ ಮಾಡೋದು......
      ಸುಳ್ಳು ಆಶ್ವಾಸನೆ ಕೋಡೋದನ್ನ ಮೋದಲು ಬಿಡಿ..........

    • @Kannadaplatformguru16
      @Kannadaplatformguru16 3 года назад +1

      Correct

  • @s.u.s.159
    @s.u.s.159 3 года назад +88

    ನಮ್ಮ ಈ ಗುರುಗಳನ್ನು ೨೧ನೇ ಶತಮಾನದ ಕನ್ನಡದ ವಿವೇಕಾನಂದರೆಂದರೇ ಅತಿಶಯೋಕ್ತಿಯಾಗಲಾರದು ಗೆಳೆಯರೆ!!!!!!

  • @ronalddsouza9915
    @ronalddsouza9915 Год назад +3

    ತುಂಬಾ ಚೆನ್ನಾಗಿದೆ ಸರ್
    ನಿಮಗೆ ತುಂಬಾ ದನ್ಯವಾದಗಳು.
    ಗ್ರೇಟ್
    Really helpful

  • @nagarajamashi5192
    @nagarajamashi5192 Год назад +5

    ತುಂಬಾ ಅದ್ಭುತವಾದ ಮಾತನ್ನು ಹೇಳಿದ್ದಿರಿ ಥ್ಯಾಂಕ್ಸ್ ಸರ್, 👌

  • @virhrt
    @virhrt 2 года назад +50

    ಅದ್ಬುತ, ಅತ್ಯದ್ಭುತವಾದ ಒಂದು ಸಂದೇಶ ಮತ್ತು ಜ್ಞಾನ . ಇದಕ್ಕೇ ಬೆಲೆ ಕಟ್ಟಲಾಗದು ನಾಡಿನ ಜನತೆಗೆ ಒದಗಿಸಿ ಕೊಟ್ಟಂತಹ ತಮಗೆ ಅನಂತ ವಂದನೆಗಳು 🙏
    Really a great job sir. Thanks for whole team.

  • @chaithraujvalkavya7161
    @chaithraujvalkavya7161 3 года назад +51

    Most of people using this kind of topics only for the attracting and gaining money but u for the good development of humans in a good manner tq u sir .

    • @globalshotakankarateclassmaste
      @globalshotakankarateclassmaste 3 года назад

      Sex with me Only garls call me 9353552917

    • @madhukd6672
      @madhukd6672 3 года назад

      Chaithra cl me 7892298228

    • @gsl1994
      @gsl1994 3 года назад

      @@globalshotakankarateclassmaste HSM

    • @gsl1994
      @gsl1994 3 года назад

      @@madhukd6672 real terror u ppls

    • @akhilnaik3743
      @akhilnaik3743 3 года назад

      Ayyo bolimakla helta irodna kelod bittkondu hudgir ge no kodtira😡

  • @prathaphl2088
    @prathaphl2088 2 года назад +3

    ನನ್ನನ್ನ ಬದಲಾಯಿಸಿದ್ದೀರಿ ಸರ್. ಈ ನಿಮ್ಮ ಮಾತುಗಳೇ ನನ್ನ ಸಾಧನೆಯ ಪಥ ನಿರ್ಮಾಣದ ಅಡಿಗಲ್ಲು.

  • @ravidas6023
    @ravidas6023 Год назад +8

    Very Acceptable msg for every one... These sessions should be done in colleges...

  • @anjalium7712
    @anjalium7712 3 года назад +8

    ಧನ್ಯತಾಭಾವ ಗಳು. ತಮ್ಮ ಒಂದು ವಿಡಿಯೋ ಸಾಕು ಜೀವನ ವನ್ನು ರೂಪಿಸಿಕೊಳ್ಳಲು.....ಸರ್ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಸಾಕು ಎಂತ ಹ ವ್ಯಕ್ತಿ ಯಾದರೂ ಬದಲಾಗಬಹುದು....ಅನಂತ ಅನಂತ ವಂದನೆಗಳು.....ಯುವ ಜನರಿಗೆ ಸೂರ್ತಿ.🙏🙏🙏🙏🙏🙏 thank you so much sir.

  • @Prathikraj_mysorean
    @Prathikraj_mysorean 3 года назад +73

    We need like you open minded people to make this world successfull

  • @amareshkumaramareshkumar6268
    @amareshkumaramareshkumar6268 Год назад +2

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದೀರಿ.........👌👌👌👌👌

  • @bavimane6522
    @bavimane6522 Год назад +2

    ಗುರುಗಳೇ ನಿಮ್ಮ ಮಾತುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ತುಂಬಾ ಬದಲಾವಣೆ ಕಂಡಿದ್ದೇವೆ ನಿಮಗೆ ಧನ್ಯವಾದಗಳು 🙏🙏💐

  • @manjuanathasp7517
    @manjuanathasp7517 3 года назад +7

    ನಾಚಿಕೆ ಮತ್ತು ಮಡಿವಂತಿಕೆ ಮಾಡುವುದರಿಂದ.... ಈ ವಿಷಯದ ಬಗ್ಗೆ ಯಾರೂ ಮಾತಾಡುವುದಿಲ್ಲ...
    ನಮ್ಮಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸಲು ಇದು ಉತ್ತಮ ಉಪನ್ಯಾಸ....🙏 ಧನ್ಯವಾದಗಳು 🙏

  • @bettusanju2298
    @bettusanju2298 3 года назад +34

    ಸರ್ ಇಲ್ಲಿವರೆಗೂ ಏನೋ ಹೇಗೋ ಬಡಕತಿದ್ವಿ ಆದರೆ ನಿಮ್ಮ ಮಾತುಗಳ್ಳನ ಕೇಳಿ ನನಗೆ ಅರಿವು ಆಗಿದೆ ಬಹಳ ಅದ್ಭುತ ವಾಗಿ ಹೇಳಿದಿರಿ ಖಂಡಿತವಾಗಿ ನಾನು ಕ್ಲೀನ್ ಮನುಷ್ಯ ಆಗತೀನಿಇವತ್ತಿಂದ ಇವಾಗಿಂದ ನನ್ನ ಗುರಿ ನಾ ನಾನು ಮುಟ್ಟೆ ಮುಟ್ಟತೀನಿ ಮಂಜುನಾಥ್ ಸರ್ ನಿಮಗೆ ಕೋಟಿ ಕೋಟಿ ನಮನಗಳು 🙏

  • @mallikarjunkarabasanavar2003
    @mallikarjunkarabasanavar2003 Год назад +8

    ಸರ್ ನೀವು ಹೇಳಿರುವ ಪ್ರತಿ ಮಾತು ಸತ್ಯ ಈ ಒಂದು ವಿಷಯ ಈಗಿನ ವಿದ್ಯಾರ್ಥಿಗಳಿಗೆ ತಿಳಿದುಕೊವ ಬಹುಮುಖ್ಯ ವಿಷಯವಾಗಿದೆ,

  • @Mangalore_poojary
    @Mangalore_poojary Год назад +4

    This is the video I watched without skip....excellent level of knowledge

  • @praneshb3946
    @praneshb3946 3 года назад +17

    ಅದ್ಬುತ ಸರ್ ನೀವು ಹೇಳಿದ್ದು ಅಕ್ಷರ ಸತ್ಯ...
    ಈ ಒಂದು ವಿಡಿಯೋ 100 ಒಳ್ಳೆ ತರಗತಿಗಳಿಗೆ ಸಮ ಸರ್....

  • @chikkegowdap6169
    @chikkegowdap6169 3 года назад +17

    ಇಂದಿನ ಮತ್ತು ಮುಂದಿನ ಪೀಳಿಗೆಯವರಿಗೂ ಕೂಡ ಈ ವೀಡಿಯೋ ಉತ್ತಮ ನಿದರ್ಶನವಾಗಿರುತದೆ.. ಧನ್ಯವಾದಗಳು ಸರ್ 🙏🙏🙏

  • @somashekarhuddar5310
    @somashekarhuddar5310 Месяц назад

    ತುಂಬು ಹೃದಯದ ಧನ್ಯವಾದಗಳು ನಿಮ್ಮ ಸರ್ ಮುಂದಿನ ದಿನಗಳಲ್ಲಿ ಹೇಗೆ ಬದುಕ ಬೇಕು ಎಂದು ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಇಂಥಹ ಸಪೋರ್ಟ್ ಇಲ್ಲದಿದ್ದರೆ ಮತ್ತೆ ನಾವು ಅದೇ ತಪ್ಪನ್ನು ಮಾಡುತ್ತಿದ್ದ್ವಿ. ನಮ್ಮ ಜೀವನಕ್ಕೆ ಒಂದು ದಾರಿ ಮಾಡಿ ಕೊಟ್ಟಿದ್ದೀರಿ god bless you sir 🙏🙏🙏

  • @holurramaraj9825
    @holurramaraj9825 11 месяцев назад +3

    Really a great job it applies to every one from child to old age people who are suffering from bodily weakness.

  • @shivamurthystudio2704
    @shivamurthystudio2704 3 года назад +36

    This is good information 👍👍 great job 🙏🙏 ಈ ರೀತಿಯ ಮಾಹಿತಿ ನಿಜಕ್ಕೂ ಇಂದಿನ ಯುವ ಜನತೆಗೆ ಬೇಕು

  • @narasappag9445
    @narasappag9445 3 года назад +16

    ಸರ್ ನೀವು ಏನೇ ಏಳಿದರು ಜೀವನ ಕ್ಕೆ ಸ್ಫೂರ್ತಿ. ದಾರಿ ದೀಪಾ ವಾಗಿರುತ್ತೆ tqqqqqq so much 🙏

  • @nagendan5883
    @nagendan5883 2 месяца назад +2

    ನಾನು ಎಲ್ಲಿ ತಪ್ಪು ಮಾಡುತಿದ್ದೇನೆ ಎಂದು ಅರಿತುಕೊಂಡೆ ತುಂಬಾ ಧನ್ಯವಾದಗಳು ಸರ್ 💐🌱

  • @tour3115
    @tour3115 3 месяца назад +1

    60 days complete ❤️💯💯💯💯💯 %%%%%% energy level is super confidence high level good msg for youths ❤❤❤❤

  • @sudeepak1672
    @sudeepak1672 3 года назад +20

    ಸರ್ ಇಂತಹ ಉಪಯುಕ್ತ ಮಾಹಿತಿ ಸಲಹೆ ನೀಡಿದ್ದಕ್ಕೆ ಧನ್ಯವಾದಗಳು🙏

  • @sagarpented569
    @sagarpented569 3 года назад +55

    ಒಬ್ಬ ಒಳ್ಳೆಯ ವ್ಯಕ್ತಿಯಾಗಿ ನಿಮ್ಮ ಮುಂದೆ ಬರುತ್ತೇನೆ ಸರ್

  • @rajeshbhapri457
    @rajeshbhapri457 2 года назад +3

    Dear sir as an science student I like ur inspirative talent.......And also like ur channel most..👍👍👍👍

  • @anjinappab9379
    @anjinappab9379 2 месяца назад +1

    ತುಂಬು ಹೃದಯದ ಅಭಿನಂದನೆಗಳು ಸರ್ ಜೀವನದ ಮಹತ್ವವನ್ನು ತಿಸಿದಕ್ಕೆ

  • @rangaswamysr1539
    @rangaswamysr1539 3 года назад +8

    Superb and very needed information to our young generation sir...
    ಮುಂದೆ ನಿಮ್ಮನ್ನ ನನ್ನ ಸಾಧನೆ ಮಾಡಿದ ನಂತರ ಬಂದು ಬೇಟಿ ಮಾಡ್ತಿನಿ..
    UPSC 2024 ಗುರಿ ಇಟ್ಟಿದ್ದೀನೆ... Clear madi bande barthini sir... I'm BSC student right Now..... 😊🙏🙏🙏🙏

  • @vinayakk8772
    @vinayakk8772 3 года назад +78

    ಶಿಕಾರಿಪುರದ ಸಿಂಹನ 🦁 ಮತ್ತೊಂದು ಮಾತು ! ಸಾಧಕರಿಗಾಗಿ ಸಾಧನೆಗಾಗಿ ಸಾಧಕರಿಗೊಸ್ಕರ 🦁🚩

    • @geetharamu1000
      @geetharamu1000 3 года назад +3

      Shikaripur namdu iam so happy 🙏🙏

    • @NitinPatil300
      @NitinPatil300 3 года назад +2

      Super

    • @malluwarad6455
      @malluwarad6455 3 года назад +3

      ಕನ್ನಡಿಗರ ಹೆಮ್ಮೆಯ ಗುರುಗಳು ❤️

  • @murthyg9906
    @murthyg9906 Год назад +4

    I tried for 3 months most powerful and iam now verymuch strong

  • @rakeshraxzz5148
    @rakeshraxzz5148 Год назад +9

    U opened my eyes
    And I'm 23 yrs old
    I completed my graduation last year
    I want focus on my carrier
    And I'll try this for 21 days
    For my better future
    #Appreciate Sir🙇🏻‍♂️

  • @skmineralsskminerals9143
    @skmineralsskminerals9143 3 года назад +93

    👍 Dear Manjunath ,
    great job and we are lucky to have you. It’s a most important topic and information to young generations society. There is no doubt thousands of people can change their attitude and they will concentrate their own goal. The way off information delivery and the way of explanation of topic is amazing. A common person can understand your speech. God bless you , really you did wonderful job, 🙏 hats of you ,have a long life.

  • @lohithbagath8130
    @lohithbagath8130 3 года назад +22

    ಧನ್ಯವಾದಗಳು ಸರ್..ಕಣ್ಣು-ಮನಸು ಎಲ್ಲವೂ ತೆರೆಸಿದಿರಿ...😊

  • @krupas5294
    @krupas5294 Год назад +3

    ತುಂಬಾ ಒಳ್ಳೆಯ ಮಾಹಿತಿ ಸರ್🙏🙏

  • @user-nn1lk5qn6z
    @user-nn1lk5qn6z Месяц назад

    😢😢 ಏನೋ ತಿಳಿಯದೆ ತಪ್ಪು ಮಾಡಿರುವ ಎಷ್ಟೋ ಯುವಕರಿಗೆ ಕತ್ತಲೆಯಿಂದ ಬೆಳಕಿನ ಕಡೆಗೆ ಕರೆ ತಂದ ನಮ್ಮ ಮಹಾನ್ ಗುರುಗಳಿಗೆ ಧನ್ಯವಾದಗಳು..🙏🙏
    ನಿಮ್ಮ ಈ ಮಾರ್ಗದರ್ಶನ ನಮ್ಮ ಅಂತಹ ಯುವಕರಿಗೆ ಸದಾ ಇರಲಿ ಎಂದು ಬೇಡಿಕೊಳ್ಳುವೇ .

  • @Gana_95
    @Gana_95 3 года назад +40

    ಗುರುಗಳೇ ನಿಮ್ಮ ಅದ್ಭುತವಾದ ಸಂದೇಶದಿಂದ ಐದು ಜನ ಹುಡುಗರಲ್ಲಿ ನಾನೊಬ್ಬ.
    🙏🙏🙏

  • @mutturajrathod7182
    @mutturajrathod7182 3 года назад +7

    ಮಂಜುನಾಥ ಸರ್ ಈ ರೀತಿಯ ವೀಡಿಯೊ ವೀಕ್ಷಿಸುವುದರಿಂದ ನಮ್ಮಲಿ ಇಲ್ಲದಂತಹ ಒಳ್ಳೆ ಪ್ರಜ್ಞೆಗಳು ಜಾಗುರುಕವಾಗುತ್ತದೆ ಇದರಿಂದ ನನಗೆ ಮಾತ್ರವಲ್ಲ ಅನೇಕ ವಿಧ್ಯಾರ್ಥಿಗಳ ಜೀವನ ಬದಲಿಸುವುದರಲ್ಲಿ ಸಂಶಯವಿಲ್ಲ.ಧನ್ಯವಾದಗಳೊಂದಿಗೆ

  • @Nagaraj-xo3pu
    @Nagaraj-xo3pu Год назад +1

    ಪ್ರತಿಯೊಬ್ಬರಿಗೂ ಒಳ್ಳೆಯ ಉಪಯುಕ್ತ ಮಾಹಿತಿ ಸರ್ ನಿಮಗೆ ಒಳ್ಳೆಯದಾಗಲಿ ಧನ್ಯವಾದಗಳು 🙏🙏🙏

  • @skvicky2314
    @skvicky2314 11 месяцев назад +2

    Really very good. While we were young we didn't have this kind of information. Thank you. 🎉

  • @amaranathmardi9276
    @amaranathmardi9276 3 года назад +59

    ಸ್ವಾಮಿ ವಿವೇಕಾನಂದರು ವೀರ್ಯ ರಕ್ಷಣೆಯ ಕುರಿತು ಹೇಳಿದ್ದು, ಮತ್ತು ಅವರ ಅಗಾಧ ನೆನಪಿನ ಶಕ್ತಿ ಹಿಂದೆ ಇರೋ ಶುಕ್ರ ಧಾತು ಹಾಗೂ ಮೆದುಳಿಗಿರುವ ಸಂಬಂಧ ಹೇಳಿದ್ದು ಎಡಿಟ್ ಮಾಡಿದ್ರೆ ಚೆನ್ನ್ನಾಗಿರ್ತಿತ್ತು

  • @basavarajahyankannanavar1748
    @basavarajahyankannanavar1748 2 года назад +30

    ಒಂದು dislike ಬಂದಿಲ್ಲ ಆಲ್ವಾ ಇದೆ ಅವ್ರ ವಿಡಿಯೋ ಮಾತ್ರ ಅಲ್ಲಾ ವ್ಯಕ್ತಿತ್ವಕ್ಕೆ ಬಂದಿರೋ ಜಯ..... 🙏💛❤🙏......

  • @bandrappas3998
    @bandrappas3998 Год назад +1

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದೀರಿ ಗುರುಗಳೇ ಹಾಗೂ ನಿಮ್ಮ ವೀಡಿಯೋಗಳು‌ ಸಾಕಷ್ಟು ಓದುಗರಿಗೆ ಸ್ಪೂರ್ತಿದಾಯಕವಾಗಿವೆ ಗರುಗಳೇ👍 🙏🙏

  • @MaheshMahi-vd8kg
    @MaheshMahi-vd8kg Год назад +2

    Dayavittu sir e Tara video galannu hati hecchagi Madi yuvakarige dari Deepa hagi sir dharmusthala majunatha swami e manjunatanige valled madli danyavadgalu

  • @veereshsipraygodentireworl7032
    @veereshsipraygodentireworl7032 3 года назад +11

    ಸರ್ ನೀಮಗೆ ಹೃತ್ಪೂರ್ವಕ ಧನ್ಯವಾದಗಳು ಇವ ಪಿಳ್ಳಿಗೆ ಸ್ಫೂರ್ತಿ ದಾಯಕ ನೀವು 🙏🙏🙏❤

  • @sharanappamarli7279
    @sharanappamarli7279 3 года назад +4

    ಇಂತಹ ವಿಚಾರಗಳಿಂದ ಹಲವಾರು ಮನಸ್ಸುಗಳು ಒಳ್ಳೆಯ ವಿಚಾರಗಳ ಕಡೆಗೆ ಪರಿವರ್ತನೆಯಾಗುತ್ತವೆ ಹಾಗೂ ಗುರಿಯನ್ನು ತಲುಪಲು ಉತ್ತಮ ಸಂದೇಶವಾಗಿದೆ ಆದರೆ ಇದರ ಅರ್ಥ ತಿಳಿದುಕೊಳ್ಳಬೇಕು ಆವಾಗ ಮಾತ್ರ ಸಾಧ್ಯ ಧನ್ಯವಾದಗಳು ಸರ್ 🙏🙏❤️❤️🔥

  • @user-xd2zz8hv5d
    @user-xd2zz8hv5d 7 месяцев назад +2

    Important in youth message sir inmagee anantta danyavadagaluu

  • @SanjaySHattarakihal
    @SanjaySHattarakihal 2 месяца назад +3

    Sir I am also accepted this 21 days challenge
    From June 06 12:56 pm

  • @Adarsh_Khot
    @Adarsh_Khot 3 года назад +142

    ಮಂಜುನಾಥ್ ಸರ್ ಗೆ ಒಂದು ಲೈಕ್ ಕೊಡಿ😍😍😍😍

  • @nitinsagar789
    @nitinsagar789 3 года назад +4

    Wow Sir
    What a great session
    ನೀವು ಮಾಡಿರೋ ಈ ವಿಡಿಯೋ ಲಕ್ಷಾಂತರ ಯುವಕರ ಯೋಚನಾ ಶೈಲಿಯನ್ನು ಖಂಡಿತವಾಗಿ ಬದಲಾಯಿಸುತ್ತದೆ

  • @ravichandra2760
    @ravichandra2760 Год назад +2

    ಉತ್ತಮ ವಿಚಾರ ತಿಳಿಸಿದ್ದೀರಿ ಸರ್ 👌

  • @jayakeerthijkp6560
    @jayakeerthijkp6560 Год назад +1

    ಅದ್ಭುತ ಯೋಚನೆ ಮತ್ತು ಯೋಜನೆ.... Thank u sir🙏

  • @user-vs4dv6bn6q
    @user-vs4dv6bn6q 3 года назад +11

    Success is not final failure is not fatal ......ನಿಮ್ಮ ಮಾತು ೧೦೦% true success is a journey

  • @chandrikachandu4379
    @chandrikachandu4379 3 года назад +45

    Exactly wt u spoke and it's very important fr competative aspirants

  • @dhananjayaalthar1778
    @dhananjayaalthar1778 2 месяца назад +1

    A bhagavanthane nimma mulaka namgella Guruvagi margadharshana madtha idare ansutte 🙏

  • @veeresh6392
    @veeresh6392 2 года назад +4

    Just Salute, sir..! No words..! You r the great in Karnataka teaching field...! Dhanyavadagalu sir..! Meet you soon...

  • @avsmadakari4845
    @avsmadakari4845 3 года назад +5

    ತುಂಬಾ ಹೃತ್ಪೂರ್ವಕ ವಂದನೆಗಳು ಸರ್......... ಓದುವ ವಿಷಯ ಎಲ್ಲರೂ ಹೇಳುತ್ತಾರೆ ಆದರೆ ನೀವು ಜೀವನ ವಿಷಯ etc ಹೇಳುತ್ತಿದ್ದೀರಿ....

  • @pramodnayak6429
    @pramodnayak6429 3 года назад +16

    ಮಂಜುನಾಥ್ ಸರ್. ನೀವು ನಮಗೆ ಆ ದೇವರ ಪ್ರತಿರೂಪ

  • @kruthigowda5502
    @kruthigowda5502 Год назад +3

    Good information for every one sir
    Very beautiful vedio sir🙏

  • @prasannahs2964
    @prasannahs2964 Год назад +2

    ಸರ್ ಮಹತ್ವದ ಮಾಹಿತಿ ನೀಡಿದ್ದೀರಿ ತುಂಬುಹೃದಯದ ಧನ್ಯವಾದಗಳು.