ಅನಂತ ಅಪ್ಪೆ ಮಿಡಿ ಉಪ್ಪಿನಕಾಯಿ ! Appemidi mango pickle recipe ! आम का अचार कैसे बनाते हैं !

Поделиться
HTML-код
  • Опубликовано: 8 сен 2024
  • ಈ ವೀಡಿಯೋ ಪೂರ್ತಿಯಾಗಿ ನೋಡಿ. ಇಷ್ಟವಾದರೆ, ದಯವಿಟ್ಟು ಲೈಕ್ ಮಾಡಿ, ಶೇರ್ ಮಾಡಿ, ಹೊಸ updates ಗಾಗಿ ಈ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಆಗಿ. support ಮಾಡಿ!
    / @nakshatranerale
    ಅನಂತ ಅಪ್ಪೆಮಿಡಿ ಉಪ್ಪಿನಕಾಯಿ!
    ಊಟಕ್ಕೆ ಪದಾರ್ಥ ಇಲ್ಲದಿದ್ದರೂ ಸರಿ, ಒಳ್ಳೆಯ ಉಪ್ಪಿನಕಾಯಿ ಒಂದಿದ್ದರೆ ಸಾಕು ಹೇಗಾದರೂ ಊಟ ಆಗಿಯೇ ಬಿಡುತ್ತದೆ.
    ಹಳ್ಳಿಗರಿಗೆ ವರ್ಷಕ್ಕೊಮ್ಮೆ ಉಪ್ಪಿನಕಾಯಿ ಮಾಡುವುದೇ ಒಂದು ದೊಡ್ಡ ಕೆಲಸ.
    ಉಪ್ಪಿನಕಾಯಿಗೆ ಯೋಗ್ಯವಾದ ಅಪ್ಪೆ ಮಿಡಿ, ಜೀರಿಗೆ ಮಾವಿನ ಮಿಡಿ, ಅನಂತ ಅಪ್ಪೆ ಮಿಡಿ ಎಂಬ ಮಾವಿನ ಮಿಡಿಗಳು ಸಿಕ್ಕರೆ ಊಟಕ್ಕೆ ದಿನವೂ ಹಬ್ಬವೇ ಸರಿ!
    ವರ್ಷಕ್ಕೊಮ್ಮೆ ಉಪ್ಪಿನಕಾಯಿ ಮಾಡಿ ಭರಣಿ ತುಂಬಿ, ಬಟ್ಟೆಯಿಂದ ಭರಣಿಯ ಬಾಯಿ ಕಟ್ಟಿ ಇಟ್ಟರೆ, ಉಪ್ಪಿನಕಾಯಿ ಕೆಡದೇ ವರ್ಷ ಪೂರ್ತಿ ಬರುತ್ತದೆ. ಬೇಕಾದಾಗ ಬಳಸಲು ಸ್ವಲ್ಪ ಸ್ವಲ್ಪವೇ ತೆಗೆದು ಯಥಾ ಪ್ರಕಾರ ಇಡಬೇಕು.
    ಮುಂಚಿತವಾಗಿ ತಯಾರಿಸಿಡುವ ಉಪ್ಪಿನಕಾಯಿಗೆ ಮಾವಿನ ಮಿಡಿಗಳನ್ನು ಕತ್ತರಿಸುವುದಿಲ್ಲ. ಮತ್ತು ಅರಿಶಿನ ಪುಡಿಯನ್ನು ಸಹ ಒಗ್ಗರಣೆಗೆ ಬಳಸುವುದಿಲ್ಲ.
    ನಿತ್ಯ ಉಪಯೋಗಕ್ಕೆ, ಸ್ವಲ್ಪ ಪ್ರಮಾಣದಲ್ಲಿ ಉಪ್ಪಿನಕಾಯಿ ತಯಾರಿಸಿ ಕೆಲವೇ ತಿಂಗಳುಗಳಲ್ಲಿ ಖಾಲಿಯಾಗುವಂತಿದ್ದರೆ ಅಂತಹ ಉಪ್ಪಿನಕಾಯಿಗೆ ಮಾವಿನಮಿಡಿ ಯನ್ನು ಚಿಕ್ಕದಾಗಿ ಕತ್ತರಿಸಬಹುದು. ಹಾಗೂ ಅರಿಶಿನ ವನ್ನೂ ಬಳಸಬಹುದು. ಒಗ್ಗರಣೆಗೆ ಸಾಸಿವೆಯ ಬದಲು, ಮಾರುಕಟ್ಟೆಯಲ್ಲಿ ಸಿಗುವ ಸಾಸಿವೆ ಬೇಳೆಯನ್ನು ಸಹ ಬಳಸಬಹುದು. ಶೇಖರಿಸಿಡುವ ಉಪ್ಪಿನಕಾಯಿಗೆ ಪ್ಯಾಕೆಟ್ ಮೆಣಸಿನ ಪುಡಿಯ ಬದಲು, ಕೆಂಪು ಒಣ ಮೆಣಸನ್ನು ಒಣಗಿಸಿ, ಹುರಿದು, ಮನೆಯಲ್ಲಿಯೇ ಪುಡಿ ಮಾಡಿ ಬಳಸುತ್ತಾರೆ.
    ಈ ವೀಡಿಯೋದಲ್ಲಿ ಮುಖ್ಯವಾಗಿ ಅನಂತ ಅಪ್ಪೆಮಿಡಿ ಉಪ್ಪಿನಕಾಯಿ ಮಾಡುವ ವಿಧಾನವನ್ನು ತಿಳಿಸಲಾಗಿದೆ.
    ಉಪ್ಪಿನಕಾಯಿ ಮಾಡಲು ಹೊಂ ಮೇಡ್ ಪುಡಿ ಮಾಡುವುದಾದರೆ ಸರಿಯಾದ ಅಳತೆಯ video ಗಾಗಿ ಲಿಂಕ್ 👇
    • ಹೊಂ ಮೇಡ್ ಜೀರಿಗೆ ಮಾವಿನಮ...
    Ananta Appemidi Pickle!
    watch the full video.If you like this video, please like, share, subscribe to this RUclips channel. Support me this RUclips channel by subscribing.
    / @nakshatranerale

Комментарии • 13