ಗರತಿ ಹಾಡು | ಬ್ಯಾಸಗಿ ದಿವಸಕ ಬೇವಿನ ಮರ | ತಾವರೆಯ ಗಿಡ ಹುಟ್ಟಿ | Janapada songs kannada

Поделиться
HTML-код
  • Опубликовано: 12 сен 2024
  • ಗರತಿ ಹಾಡು | ಮೂಲ ಜನಪದ | Janapada songs kannada | ತವರು ಮನೆ ಹಾಡು
    ಗರತಿಯ ಹಾಡುಗಳು
    ತವರು ಮನೆಯ ನೆನೆದು ಹಾಡುವ ಹಾಡು
    ಜೋಕುಮಾರನ ಪದ | Jokumara pada #janapada #uttarakarnataka #janapada_geete #janapada_geethegalu #folk #folksongs #ಜಾನಪದ_ಹಾಡುಗಳು #ಜಾನಪದ_ಹಾಡುಗಳು_ಡಿಜೆ #ಜಾನಪದಹಾಡುಗಳುಡಿಜೆ #jaanapada
    ಬ್ಯಾಸಗಿ ದಿವಸಕೆ ಬೇವಿನ ಮರ ತಂಪು,
    ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾದೆ,
    ರಾಗ ಸಂಯೋಜನೆ ಮತ್ತು ಗಾಯನ - shobha sagar
    lyrics
    ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾದೆ,
    ನಾ ಹುಟ್ಟಿ ಮನೆಗೆ ಎರವಾದೆ | ಹಡೆದವ್ವ
    ನೀ ಹುಟ್ಟಿ ಮನೆಗೆ ಹೆಸರಾದೆ.
    ಬ್ಯಾಸಗಿ ದಿವಸಕೆ ಬೇವಿನ ಮರ ತಂಪು,
    ಭೀಮರತಿಯಂಬ ಹೊಳಿ ತಂಪು | ಹಡೆದವ್ವ
    ನೀ ತಂಪ ನನ್ನ ತವರೀಗಿ.
    ಹೆಣ್ಣು ಹಡೆಯಲಿ ಬ್ಯಾಡ ಹೆರವರಿಗೆ ಕೊಡಬ್ಯಾಡ,
    ಹೆಣ್ಣು ಹೋಗಾಗ ಅಳಬ್ಯಾಡ | ಹಡೆದವ್ವ
    ಸಿಟ್ಟಾಗಿ ಶಿವನ ಬೈಬ್ಯಾಡ.
    ತಾಯಿಮಕ್ಕಳ ದನಿಯು ತಾಳ ಬಾರಿಸಿದಾಂಗ,
    ಜೋಡ ಕಿನ್ನೂರಿ ನುಡಿದಾಂಗ | ಹಲಸಂಗಿ
    ಹೋತ್ತೇರಿ ತಾಸೆ ಬಡೆದಾಂಗ.
    ತಾಯಿ ಕಾಣದ ಜೀವ ತಾವೂರಿ ಬಾವೂರಿ,
    ಬಾಳ ಬಿಸಲಾನ ಅವರೀಯ | ಹೂವಿನ್ಹಾಂಗ
    ಬಾಡತೀನಿ ತಾಯಿ ಕರೆದೊಯ್ಯ.
    ಗಂಜೀಯ ಕುಡಿದರು ಗಂಡನ ಮನಿ ಲೇಸ,
    ಅಂದಣದ ಮ್ಯಾಲ ಚವುರವ | ಸಾರಿದರ
    ಹಂಗೀನ ತವರ ಮನಿ ಸಾಕ.
    ತಾಯಿಲ್ದ ತವರೀಗಿ ಹೋಗದಿರು ನನ ಮನವ,
    ನೀರಿಲ್ದ ಕೆರೆಗೆ ಕರ ಬಂದು | ತಿರುಗಾಗ
    ಆಗ ನೋಡವರ ದುಃಖಗಳ.
    ಅಡಗೀಯ ಮನಿಯಾಗ ಮಡದೀಯ ಸುಳಿವಿಲ್ಲ,
    ಅಡಗಿ ಬಾಯೀಗಿ ರುಚಿಯಿಲ್ಲ | ಹಡೆದವ್ವ
    ಮಡದಿ ತವರೀಗಿ ಹೋಗ್ಯಾಳ.
    ಹಚ್ಚಡದ ಪದರಾಗ ಅಚ್ಚ ಮಲ್ಲಿಗಿ ಹೂವ,
    ಬಿಚ್ಚಿ ನನಮ್ಯಾಲ ಒಗೆವಂಥ | ರಾಯರನ
    ಬಿಟ್ಯಾಂಗ ಬರಲೇ ಹಡೆದವ್ವ.
    ಬಟ್ಟಲಗಣೀಲಿ ದಿಟ್ಟೀಸಿ ನೋಡ್ಯಾರ,
    ಸಿಟ್ಯಾಕೋ ರಾಯ ನನಮ್ಯಾಲ | ನಾ ಅಂಥ
    ಹುಟ್ಟಸ್ಯಾಡವರ ಮಗಳಲ್ಲ.
    ರಾಯ ಬರುತಾರಂತ ರಾತ್ರಿಯಲಿ ನೀರಿಟ್ಟ,
    ರನ್ನ ಬಚ್ಚಲಕ ಮಣಿಹಾಕಿ | ಕೇಳೇನ
    ಸಣ್ಣವಳ ಮ್ಯಾಲ ಸಂವತ್ಯಾಕ.
    ಯಾಲಕ್ಕಿಕಾಯ್ ಸುಲಿದು ಯಾವಡಗಿ ಮಾಡಲಿ, ಊರಿಗೋಗ್ಯಾರ ರಾಯರು | ಬಾರದೆ
    ಯಾವಡಗಿ ಮಾಡಿ ಫಲವೇನ.
    ಅಳುವ ಕಂದನ ತುಟಿಯು ಹವಳದ ಕುಡಿಹಂಗೆ,
    ಕುಡಿಹುಬ್ಬು ಬೇವಿನ ಎಸಳಂಗೆ | ಕಣ್ಣೋಟ
    ಸಿ ಕೈಯಲಗು ಹೊಳೆದಂಗೆ.
    ತಾಯಿದ್ರ ತವರ್ಹೆಚ್ಚು ತಂದಿದ್ರ ಬಳಗ್ಹೆಚ್ಚು,
    ಸಾವಿರಕೆ ಹೆಚ್ಚು ಪತಿಪುರುಷ | ಹೊಟ್ಟೀಯ
    ಮಾಣಿಕದ ಹರಳು ಮಗ ಹೆಚ್ಚು.
    ನನ್ನ ಅಂಗಳದಾಗ ಮಲ್ಲೀಗಿ ಗಿಡ ಹುಟ್ಟಿ,
    ಝಲ್ಲೀಸಬ್ಯಾಡೋ ಗಿಣಿರಾಮ | ನಿಮ್ಮಂಥ
    ಬಾಲಾರ್ಹೋಗ್ಯಾರ ಝಳಕಾಕ.
    ಬಾಲಕರಿಲ್ಲದ ಬಾಳೀದ್ಯಾತರ ಜನ್ಮ,
    ಬಾಡೀಗಿ ಎತ್ತು ದುಡಿದಂಗ | ಬಾಳೇಲಿ
    ಹಾಸ್ಯುಂಡ ಬೀಸಿ ಒಗೆದಂಗ.
    ಕಂದನ ಕೊಡು ಶಿವನೆ ಬಂಧನ ಪಡಲಾರೆ,
    ಹಂಗೀನ ಬಾಣ ಉಣಲಾರೆ | ಮರ್ತ್ಯದಾಗ
    ಬಂಜೆಂಬ ಶಬುದ ಹೊರಲಾರೆ.
    Janapada
    Janapada songs kannada
    Janapada dj song
    Janapada geete
    Janapada songs Telugu
    Janapada new song
    Janapada geethegalu
    Janapada kannada
    Janapada geethalu
    Kannada folk songs
    Kannada folk dance
    Kannada folk songs for dance
    Kannada folk songs for singing competition
    Kannada folk
    Kannada folk dance for boys
    Kannada folk songs dj
    Kannada folk songs c ashwath
    Kannada folk songs in villages
    Kannada folk dance for school

Комментарии • 103