ಕಾರಂತರು ಎಂಬ ಹೃದಯಹೀನ..!! ಮೋಹನ್ ಎಂಬ ಚಾಡಿಕೋರ..!!! | B Ganapati | Hariharapriya | Books | Part 10

Поделиться
HTML-код
  • Опубликовано: 25 авг 2024
  • ಕಾರಂತರು ಎಂಬ ಹೃದಯಹೀನ..!! ಮೋಹನ್ ಎಂಬ ಚಾಡಿಕೋರ..!!! | B Ganapati | Hariharapriya | Books | Part 10
    Discover the enchanting world of "Hariharapriya," a profound literary masterpiece penned by Satavalli Venkata Vishwanatha Bhatta. Delving deep into the tapestry of Indian mythology and spiritual philosophy, this book weaves a compelling narrative that intertwines divine elements with profound human experiences.
    As a remarkable contribution to Kannada literature, "Hariharapriya" not only showcases the linguistic elegance but also celebrates the rich literary traditions of the Kannada-speaking world.
    More than just a book, "Hariharapriya" serves as a gateway to the divine realms and stands as a testament to the enduring power of mythological storytelling. Whether you are a devoted reader, a mythology enthusiast, or someone in pursuit of spiritual enrichment, this literary gem promises a deeply rewarding journey through its pages.
    Explore "Hariharapriya" today and embark on an unforgettable odyssey of spiritual discovery and literary brilliance. Don't miss out on adding this enriching masterpiece to your collection!
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #Hariharapriya #SatavalliVenkataVishwanathaBhatta #KannadaLiterature #SpiritualBooks #KannadaAuthors #MythologicalFiction #DivineNarrative #KannadaReads #LiteraryGems #CulturalHeritage #EpicTales #IndianMythology #KannadaStories #DevotionalLiterature #SacredNarratives

Комментарии • 212

  • @thimmareddys7561
    @thimmareddys7561 Месяц назад +20

    ಗಣಪತಿ ಯವರೇ ಕಾರಂತ ರ ಬಗ್ಗೆ ಅವರೀಗನಿಸಿದ್ದು ಅವರು ಹೇಳಿದ್ದಾರೆ. ಇವರ ಟೀಕೆ ಯಿಂದ ಅವರ ಘನತೆ ಕಡಿಮೆ ಯಾಗುವುದಿಲ್ಲ. ಎಲ್ಲಾರೊಡನೆ ಎಲ್ಲರೂ ಬೆರೆ ಯಲು ಆಗುವುದಿಲ್ಲ ಮನುಷ್ಯ ಸ್ವಭಾವ ಇರಲಿ ಅವರ ಸಂದರ್ಶನ ಮುಂದುವರಿಯಲಿ ಧನ್ಯವಾದಗಳು 🎉

  • @sursadhaka
    @sursadhaka Месяц назад +64

    ನಾನು ಹರಿಹರ ಪ್ರಿಯರವರನ್ನು ತುಂಬಾ ಹತ್ತಿರದಿಂದ ಬಲ್ಲೆ. ಮಲ್ಲೇಶ್ವರಂನಲ್ಲಿರುವ "ಅನನ್ಯ" ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಾಗ ಈ ವ್ಯಕ್ತಿ ಅಲ್ಲಿಗೆ ಬರುತ್ತಿದ್ದರು.ಅಲ್ಲಿಗೆ ಅವರು ಬಂದರು ಎಂದರೆ ಯಾಕಾದರೂ ಬಂದರೊ ಎನಿಸುತ್ತಿತ್ತು. ಅನಗತ್ಯವಾಗಿ ಮನಸ್ಸಿಗೆ ನೋವಾಗುವಂತೆ ಮಾತನಾಡುತ್ತಿದ್ದರು. ನಾವೆಲ್ಲ ಅವರು ಬಂದರು ಎಂದರೆ ಕಿರಿಕಿರಿ ಪ್ರಿಯ ಬಂದರು ಎನ್ನುತ್ತಿದ್ದೆವು. ಅವರ ಕನ್ನಡ ಪ್ರೀತಿಗೆ ತಕರಾರಿಲ್ಲ, ಆದರೆ ತಾವೊಬ್ಬರೇ ಶ್ರೇಷ್ಠರು ಇನ್ನುಳಿದವರು ಕನಿಷ್ಠರು ಎನ್ನುವ ಭಾವ ಬಿಟ್ಟರೆ ಅವರು ಇನ್ನೂ ಶ್ರೇಷ್ಠರಾಗುತ್ತಿದ್ದರು.

    • @ramamurthynn6349
      @ramamurthynn6349 Месяц назад +2

      ನಾನು ಅನ್ನೋದು ಬಿಟ್ಟರೆ ಶ್ರೇಷ್ಠರಾಗುತ್ತಿದ್ದರು.

    • @vasudevaraobk424
      @vasudevaraobk424 Месяц назад +1

      @@sursadhaka we can find irritation in face of B Ganapathi also. That is why he is responding to the minimum. No reply can satisfy such people of verbal diaria.

    • @himu_36dev09
      @himu_36dev09 Месяц назад

      ಒಂದೊಂದು ಸಲ ಅವರು ಅನುಭವಿಸಿದ ಅವಮಾನಗಳು ಅವರನ್ನು ಹಾಗೆ ನೆಡೆದುಕೊಳ್ಳುವ ಹಾಗೆ ಮಾಡಿರಬಹುದು ಅಲ್ವಾ

    • @BC-ky7ps
      @BC-ky7ps Месяц назад +5

      ತಾವು ಹೇಳುವುದು ಸರಿಇದ್ದರೂ, ಎಲ್ಲೂ ಒಂದು ಕಡೆ ಸತ್ಯದ ಬೆಳಕು ಇಣುಕುತ್ತಿದೆ

    • @manjunupparahatty6780
      @manjunupparahatty6780 Месяц назад

      ಹೌದು ಸರ್ ನೀವು ಹೇಳುವುದು ಸತ್ಯ. ಎಲ್ಲಾ ಎಪಿಸೋಡ್ ಗಳು ಬರೀ ಹೊಟ್ಟೆಕಿಚ್ಚಿನ ಮಾತುಗಳೇ ಎನಿಸುತ್ತದೆ, ನಾನೊಬ್ಬನೇ ಶ್ರೇಷ್ಠ ಎನ್ನುವ ಅಹಂ ಬಿಟ್ಟಿದ್ದರೆ, ಶ್ರೇಷ್ಠರ ಸಾಲಿಗೆ ಸೇರುತ್ತಿದ್ದರು.

  • @AnilKumar-il6ul
    @AnilKumar-il6ul Месяц назад +7

    ಏನೇ ಆದರೂ ಹರಿಹರಪ್ರಿಯ ಅನುಭವಿಸಿದ ನೋವುಗಳನ್ನು ಕೇಳುವ ಅಗತ್ಯವಿದೆ

  • @sridharsanjeev3050
    @sridharsanjeev3050 Месяц назад +50

    "ಕಾರಂತರು ಅದ್ಭುತ ಬರಹಗಾರ. ಆದ್ರೆ ವ್ಯಕ್ತಿಯಾಗಿ ನಾನು ಇಷ್ಟಪಡಲ್ಲ" ಎಂಬ ಹರಿಹರಪ್ರಿಯರ ಅಭಿಪ್ರಾಯದ ಬಗ್ಗೆ ನಮ್ಮ ತಕರಾರಿಲ್ಲ.! ಯಾಕಂದ್ರೆ. ಕಾರಂತರೂ ಕೂಡ ಒಬ್ಬಮನುಷ್ಯ.!

    • @yallappamalali1318
      @yallappamalali1318 Месяц назад +2

      ನೀವು ಹೇಳಿದ್ದು ಸರಿಯಾಗಿದೆ. ನಾವು ಹೀಗೆ ಭಾವಿಸುವುದು ಉತ್ತಮ...ಯಾಕೆಂದರೆ ವೈಯಕ್ತಿಕ ಭಿನ್ನತೆ ಇದ್ದೆ ಇರುತ್ತೆ... ಆದರೆ ಅವರ ಸಾಹಿತ್ಯಕ್ಕೂ ವ್ಯಕ್ತಿತ್ವಕ್ಕೂ ತಳುಕು ಹಾಕಿ ಇದು ತಪ್ಪು ಅದು ತಪ್ಪು ಎನ್ನುವುದಕ್ಕಿಂತ ಒಳ್ಳೆ ಸಾಹಿತ್ಯ ರಚನೆಗೆ nirbhanditavagi ಬದುಕು ಕಳೆಯಬೇಕೆಂದೇನಿಲ್ಲ.... ಅಲ್ವೇ?

  • @shridharrao3725
    @shridharrao3725 Месяц назад +18

    ಕುವೆಂಪು ಮತ್ತು ಕಾರಂತರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರ ಇಬ್ಬರೂ ಶ್ರೇಷ್ಠ ರು ಹಿೇಗಿರುವಾಗ ವ್ಯತ್ಯಾಸ ಮಾತನಾಡುವುದು ತಪ್ಪು ಇವರಿಬ್ಬರನ್ನು ಕೂಡಿ ಎಲ್ಲಾ ಸಾಹಿತಿಗಳಿಗೆ ನನ್ನ ನಮನ ಗಳು ಜೈ ಕನ್ನಡ 1947 ರಲ್ಲಿ ಜನಿಸಿದ ಹಿರಿಯ ಭಾರತೀಯ ಗಡಹದ್ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ

    • @mahadevappan3923
      @mahadevappan3923 Месяц назад +3

      ಸತ್ಯ ಯಾವಾಗಲೂ ಕಹಿ, ಈರ್ವರೂ ಅವರವರ ಕ್ಷೇತ್ರಗಳಲ್ಲಿ ಶ್ರೇಷ್ಠರು.
      ಆದರೆ ಮಾನವೀಯತೆಯ ನೆಲೆಯಲ್ಲಿ ನಿಂತು ನೋಡಿದರೆ ವ್ಯತ್ಯಾಸ ಇರುತ್ತದೆ.

    • @shridharrao3725
      @shridharrao3725 Месяц назад

      ನಿಮಗೆ ಧನ್ಯವಾದಗಳು ಹುಟ್ಟಿದ ಯಾರೂ ನೂರು ಪರ್ಸೆಂಟ್ ಸಂಭಾವಿತ ರಲ್ಲ ಒಳ್ಳೆಯ ವರೂ ಅಲ್ಲ ಇದು ಎಲ್ಲರೂ ಬಲ್ಲರು ಗಡಹದ್ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ

    • @janardhanl9285
      @janardhanl9285 Месяц назад

      💯

    • @shridharrao3725
      @shridharrao3725 Месяц назад

      ನಿಮಗೆ ಧನ್ಯವಾದಗಳು ಉಡುಪಿ

  • @b.s.kumaraswsmyb.s.kumaras5675
    @b.s.kumaraswsmyb.s.kumaras5675 Месяц назад +8

    ಯಾವಾಗಲೂ ಅಷ್ಟೇ ಸತ್ಯ ಹೇಳುವವರನ್ನು,ನಿಜ ಹೇಳುವವರನ್ನು,ಮಾನಸಿಕ ಅಸ್ವಸ್ಥ,ಹುಚ್ಚ,ಮತಿಗೆಟ್ಟವ,ಅಂತಲೇ ಅನ್ನೋದು.ಜಗತ್ತೇ ಹಾಗೆ.

  • @sridharsanjeev3050
    @sridharsanjeev3050 Месяц назад +17

    "ಹರಿಹರಪ್ರಿಯರೊಂದಿಗೆ ಮಾತುಕತೆ ಸರಣಿ ಚನ್ನಾಗಿ ಬರ್ತಿದೆ.. ಮುಂದುವರಿಸಿ.. ಗಣಪತಿ ಸರ್❤️

  • @prasadithal1916
    @prasadithal1916 Месяц назад +33

    ಇವರು ಎಲ್ಲದರಲ್ಲೂ,ಎಲ್ಲರಲ್ಲೂ ಹುಳುಕು ಹುಡುಕುವ ಸ್ವಭಾವದವರು .

    • @srinivaschari2574
      @srinivaschari2574 Месяц назад

      ಸಾಹಿತ್ಯ ಕ್ಷೇತ್ರದಲ್ಲಿ ಎಡಪಂತಿಯ ಕ್ರಿಶ್ಚಿಯನ್ ಮಿಷನರಿ ವಿಕೃತಿ ಇವೆಲ್ಲ ಯೋಗೇಶ್ ಮಾಸ್ಟರ್ ಗೌರಿ ಲಂಕೇಶ್ ಎಲ್ಲಾ ಕನ್ವರ್ಟಡ್ ಕ್ರಿಶ್ಚಿಯನ್

  • @ssudheendraseetharamaiah
    @ssudheendraseetharamaiah Месяц назад +14

    ಯಾರೂ ಕೂಡಾ ಪರಿಪೂರ್ಣ ರಲ್ಲ... ಇವರು ಎಲ್ಲರನ್ನೂ ಟೀಕಿಸುವುದು ನೋಡಿದರೆ ಇವರಲ್ಲೇ ಏನೋ ಸಮಸ್ಯೆ ಇದೆ ಅನ್ನಿಸುತ್ತೆ....

    • @Saguvali
      @Saguvali Месяц назад +2

      ಇವರೂ ಪರಿಪೂರ‌್ಣರಲ್ಲ(ಯಾರೂ)

    • @himu_36dev09
      @himu_36dev09 Месяц назад +1

      ಅವರಿಗೆ ಮಾಡಿರುವ ಅವಮಾನವನ್ನೂ ಕೇಳಿ ಆವಾಗ ನಿಮಗೆ ಅವರ ಬಗ್ಗೆ ಅರ್ಥ ಆಗುತ್ತೆ

  • @narendras.v907
    @narendras.v907 Месяц назад +2

    ಹರಿಹರ ಪ್ರಿಯರ ಅವರದು ಸತ್ಯವಾದ ಮಾತು🎉🙏🙏

  • @kulkarnigururajs8963
    @kulkarnigururajs8963 Месяц назад +16

    ಇವರ ಮನಸ್ಥಿತಿಯ ಆರೋಗ್ಯದ ಬಗ್ಗೆ ಅನುಮಾನ. ಯಾರನ್ನೂ ಬಿಟ್ಟಿಲ್ಲ 😮

    • @sreekanthanv9469
      @sreekanthanv9469 Месяц назад

      😂

    • @Sharada-eye
      @Sharada-eye 28 дней назад

      Avarellaru manushyare avaralli huluku ide. Ivru kashtagalu anubhavisiddare. Kelavaru heluttare kelavaru helalla

  • @shivalingashettiudagani1404
    @shivalingashettiudagani1404 Месяц назад +24

    ಹರಿಹರ ಪ್ರಿಯ ಮಾನಸಿಕವಾಗಿ ಅಸ್ವಸ್ಥ ಆಸ್ಪತ್ರೆಗೆ ದಾಖಲು ಮಾಡುವದು ಒಳ್ಳೆಯದು

  • @TNTBHARATH000
    @TNTBHARATH000 Месяц назад +9

    Vasista and vishwamitra are different.but great sages.

  • @pbk1963
    @pbk1963 Месяц назад +8

    Ganapathi yavare , regarding the word used for Kuvempu as ' Maha Jipuna ' , i would like to narrate this incident . I have a relative from my wife's side - who was once a leading journalist , editor of some publications , once D Urs wanted him as MLC etc . He is in his 90s now and having age relared issues . Once , D Urs told him that this Kuvempu is a jugga . D Urs continued saying that Kuvempu does not even give at least one coffee to his visitors . This gentlemen ( my relative ) gave the following explanation and D Urs accepted it and changed his opinion
    1. There will be always viotors in Kuvempu house on all days , and at any time
    2. It will be tiring for Kuvempu wife and other house people to keep preparing coffee from morning till night
    3. Kuvempu is also having limited earning from his salary . He can not use all that money for providing coffee to his visitors

  • @shankark837
    @shankark837 Месяц назад +10

    ಹರಿಹರ ಪ್ರಿಯ ಅವರು ಕಾರಂತರ ಬಗ್ಗೆ
    ಹೇಳಿದ್ದು 100%ಸತ್ಯ.
    ನಾನು 80ರ ದಶಕದಲ್ಲಿ ಪತ್ರಿಕಾ ಲೇಖನಗಳಲ್ಲಿ ಓದಿದ್ದ ನೆನಪಾಯಿತು.

  • @gangadharam7528
    @gangadharam7528 Месяц назад +20

    ಗಣಪತಿಯವರೆ ದಯಮಾಡಿ ಕಾರಂತರ ಬಗ್ಗೆ ಇರುವ ಟೈಟಲನ್ನು ಬದಲಾಯಿಸಿ ಮಾತಿನ ಮಧ್ಯ ಬೇಕಾದ್ರೆ ಬಂದು ಹೋಗಲಿ.

    • @Raju12398
      @Raju12398 Месяц назад +7

      @gnagadharam7528
      ಸಣ್ಣ ದೋಷವನ್ನು ದೊಡ್ಡದಾಗಿ ಬಿಂಬಿಸಿದ ಶೀರ್ಷಿಕೆ ವೀಕ್ಷಕರನ್ನು
      ಆಕರ್ಷಿಸಬಲ್ಲದು, ಎಷ್ಟೇ ದೊಡ್ಡ ವ್ಯಕ್ತಿಯಾದರೂ ದೋಷ ಸಹಜ.

    • @filterlesskrishna2162
      @filterlesskrishna2162 Месяц назад +3

      ​@@Raju12398ಹೌದು ಸಾರ್ .‌ಮನುಷ್ಯ ಅಂದ್ಮೇಲೆ ಪರಿಸ್ಥಿತಿ ಹಾಗೂ ಕೆಲವೂ ಸನ್ನಿವೇಶಗಳಿಗೆ ಆತನ ವರ್ತನೆ ಬದಲಾಗುತ್ತೆ .

    • @janardhanl9285
      @janardhanl9285 Месяц назад

      ​@@Raju12398ಟಿಆರ್ ಪಿ....

    • @Sharada-eye
      @Sharada-eye 28 дней назад

      Karantarenu devaralla avru manushyare

  • @vijayalakshmiadiga2256
    @vijayalakshmiadiga2256 Месяц назад +17

    ನಾನೊಬ್ಬನೇ ಸಂಪನ್ನ

  • @janakirama4849
    @janakirama4849 Месяц назад +24

    ಈಗ ಇಲ್ಲದವರ ಬಗ್ಗೆ ಕೇವಲವಾಗಿ ಯಾರೂ ಮಾತನಾಡಕೂಡದು.

    • @Sharada-eye
      @Sharada-eye 28 дней назад

      Ivrenu kevalavagi matadilla. Nadediddu heliddare

  • @surishetty39
    @surishetty39 Месяц назад +48

    ಆಡುಮುಟ್ಟದ ಸೊಪ್ಪಿಲ್ಲ ಶಿವರಾಮ ಕಾರಂತರು ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ ಸಾಹಿತ್ಯ ಸಾಧನೆ ಈಗ ಅವರ ಬಗ್ಗೆ ಕೆಟ್ಟದು ಮಾತನಾಡೋದು ಇವರಲ್ಲಿ ಮಾತನಾಡಿಸುವುದು ಎಷ್ಟು ಸರಿ ಗಣಪತಿ ಸರ್ ನಮ್ಮಂತ ಯುವಕರಿಗೆ ಸಾಹಿತಿಗಳು ಸಕಾರಾತ್ಮಕವಾಗಿರಲಿ ಅವರ ಕೆಟ್ಟದನ್ನು ತೋರಿಸಿ ಏನು ಮಾಡಬೇಕಾದ ಅಗತ್ಯವಿಲ್ಲ ಮತ್ತೊಂದು ಅವರಿಗೆ ಇಲ್ಲ ಒಂದು ಘಟನೆಗೆ ಅನೇಕ ಆಯಾಮಗಳು ಉಂಟು ಸಮರ್ಥನೆಗಳು ಇರುತ್ತದೆ ಒಬ್ಬರು ಹೋದ ಮೇಲೆ ಅವರ ನಡುವೆ ವಿಮರ್ಶೆ ಮಾಡುವುದು ನಕಾರಾತ್ಮಕವಾಗಿ ದೊಡ್ಡ ತಪ್ಪು ನೀವು ಯಾವುದನ್ನು ಹೇಳುವುದಕ್ಕೆ ಹೊರಟಿದ್ದೀರಾ ನಾಳೆ ಮಾತಾಡ್ತಾರೆ ಕಾರಂತರು ಸರಿ ಇಲ್ಲ ಅಂತ ಇದು ಬೇಕಾ ನಮಗೆ ಅವರ ಸಾಧನೆ ಮಾಡಿದರೆ ಸಕಾರಾತ್ಮಕ ಒಂದು ಮಾತು ತೆಗೆದುಕೊಳ್ಳುವ ನಿಮ್ಮ ಚಾನೆಲ್ ನಲ್ಲಿ ಇಂಥ ಕೆಲಸ ಆಗೋದು ಬೇಡ

    • @rgowravee6239
      @rgowravee6239 Месяц назад +13

      ಸಾಧನೆ,ಪ್ರತಿಭೆ ಬೇರೆ ಮನಸ್ಸು ಹೃದಯ ಬೇರೆ

    • @hssrilakshmi7805
      @hssrilakshmi7805 Месяц назад

      ಒಬ್ಬ ಸಾಹಿತಿ ಅಂದ್ರೆ ಅವರಲ್ಲಿ ಒಳ್ಳೆ ಗುಣ ಕೆಟ್ಟ ಗುಣ ಎರಡೂ ಇರುತ್ತೆ ಅದನ್ನ ಸಾಂಧರ್ಭಿಕವಾಗಿ ತೋರಿಸಬೇಕಾಗಿ ಬಂದಿದೆಯೇ ಹೊರತು ಉದ್ದೇಶ ಪೂರ್ವವಾಗಿ ಅಲ್ಲ.. ನಮಗೆ ಯಾವುದು ಬೇಕೋ ಅದನ್ನ ತಗೊಂಡ್ರೆ ಆಯ್ತು

    • @hssrilakshmi7805
      @hssrilakshmi7805 Месяц назад

      ಒಬ್ಬ ಸಾಹಿತಿ ಅಂದ್ರೆ ಅವರೂ ಮನುಷ್ಯ ರೇ ಮಾನವ ಸಹಜ ಗುಣ ಅವರಲ್ಲೂ ಇದ್ದೆ ಇರುತ್ತೆ ಉದ್ದೇಶ ಪೂರ್ವಕವಾಗಿ ಪ್ರಸ್ತಾಪ ಮಾಡಿಲ್ಲ ಸಾಂದರ್ಭಿಕವಾಗಿ ವಿಷಯ ಬಂದಿದೆ ಅಷ್ಟೇ ನಿಮಗೆ ಬೇಡ ಅಂದ್ರೆ ಬಿಟ್ಟು ಬಿಡಿ ಬೇಕಾದ್ದು ತಗೋಳಿ ಅಷ್ಟೇ...

    • @klsaraswathi1217
      @klsaraswathi1217 Месяц назад

      ಗಣಪತಿಯವರೆ ಈ ರೀತಿ ಮಾತನಾಡುವವರನ್ನು ದಯವಿಟ್ಟು ಸಂದರ್ಶನಕ್ಕೆ ಕರೆಯಬೇಡಿ.ತನಗೆ ಹಿತವಾದವರ ಬಗ್ಗೆ ಹಿತವಾಗಿ ಹೇಳುವುದು , ತನಗೆ ಸಹಿಸಲಿಲ್ಲ ಅಂತವರನ್ನ ಮಾನ ಹರಾಜು ಹಾಕುವುದು.

    • @surishetty39
      @surishetty39 Месяц назад

      @@rgowravee6239 ಅವರು ಇಲ್ಲದಿದ್ದಾಗ ಹೃದಯ ಚಿಕಿತ್ಸೆ ಅಗತ್ಯ ಇಲ್ಲ ಇದ್ದಾಗ ಮಾಡಬೇಕಿತ್ತು ಅದು ಹೃದಯವು ಅದು ಚಿಂತನೆಯು ಇವರಿಗೆ ಅವರು ಯಾಕೆ ಹಾಗೆ ಹೇಳಿದರು ಎಲ್ಲ ಗೊತ್ತಾಗ್ತದೆ ಒಂದು ಘಟನೆಗೆ ಅನೇಕ ಆಯಾಮಗಳು ಉಂಟು ಉಳಿದವರು ಕಂಡಂತೆ

  • @AryankmKm
    @AryankmKm Месяц назад +4

    Please continue 🙏

  • @chaithrahegde5965
    @chaithrahegde5965 Месяц назад +4

    Karatharu ,hariharapriya tharave nisturavadi..

  • @BasavarajappaBasappa-in5sv
    @BasavarajappaBasappa-in5sv Месяц назад +1

    ಹರಿಹರಪ್ರಿಯ ರವರೆ ನಿಮ್ಮ ನಿಷ್ಠೂರ ಮಾತುಗಳು ಕಠಿಣ ಶಬ್ದಗಳ ನಿಂದನೆ ನಿಮ್ಮ ಅಭಿವೃದ್ಧಿಗೆ ಮಾರಕವಾಗಿದೆ ಸಂಶಯವೇ ಇಲ್ಲ. ತುಂಬಾ ಓದಿಕೊಂಡ ಜ್ಞಾನವಂತರು ಬೆಲೆ ಕಟ್ಟಲಾಗದ ಕೂಡಿಟ್ಟ ಪುಸ್ತಕ ಭಂಡಾರದ ಜೊತೆ ವಿನಯವೂ ಸೇರಿದ್ದರೆ ಎತ್ತರಕ್ಕೆ ಬೆಳೆಯಬಹುದಿತ್ತು. ಅಹಂಕಾರ ಅವನತಿಗೆ ದಾರಿ ನೀವೆ ಜ್ವಲಂತ ಸಾಕ್ಷಿ.

    • @Sharada-eye
      @Sharada-eye 28 дней назад

      Ne evu eshtu dudidaru yaru nimmannu gurutisadiddare nimge novu agallve.

  • @kiiiiii419
    @kiiiiii419 Месяц назад +3

    ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುದಕ್ಕೆ ಇವರು ಒಳ್ಳೆ ಉದಾಹರಣೆ

  • @prashanthkamath6105
    @prashanthkamath6105 Месяц назад +1

    I do not understand why people do not like his comments on Karanth. He actually praised Karanth's work and achivements. As a person Karanth could have been pricisely the way he was discribed by here. It is necessarily to speak truth. Have many persons that object met Karanth? I have met him couple of times, with just a couple of persons around. I have no opinion on Karanth at an individual level, as those were short meatings lasting about fifteen minutes each.

  • @kmpandit
    @kmpandit Месяц назад +8

    I can not type in kannada, Speaking about Shri Shivaram Karant ji, MrHaripriya could stoop to such low level can't be imagined. In front of Shri Karant, this man is like a mustard seed, He is projecting himself like Dharmaraja of Mahabharat, probably age is catching up with Me Haripriya, I appreciate his effort in preserving books, but can't appreciate his statements about Karant ji, He is speaking as if he is a nobel Prize winner for literature

    • @SURYASUDAINVENTIVE
      @SURYASUDAINVENTIVE Месяц назад

      well said

    • @srk.krs.9633
      @srk.krs.9633 Месяц назад +2

      SR karanth only .some novels,dramas, yakshagana. In front of National poet Laureate Dr. KUVEMPU all r in 4 place . Bcz kv puttappA writes great epic Sriee Ramayana dharshanam. Novels. Dramas. Revolutionary, patriotic, songs. Vishvamanava geete, nada geete, Farmer song. from Geetha Satish DMK Reddy. From Hyderabad, Bombay, London cities

    • @Sharada-eye
      @Sharada-eye 28 дней назад

      Avru sariyagi heliddare. Neevu karantara abhimani

  • @bhimarao555
    @bhimarao555 Месяц назад +1

    I have neither seen kuvempu or Harihara priya. But my respect towards kuvempu has increased after hearing this episode
    Karanth appears to be a strict person as I perceive from his books

  • @rammohanpg4510
    @rammohanpg4510 Месяц назад +7

    Ivara abhipraya nodidaga naanobba mathra sari. Jagathey sari illa andahaagidey swaprashamsey mithimeeridey

    • @Sharada-eye
      @Sharada-eye 28 дней назад

      Nija jagattu sari illa. Ivru neravagi iddare valagondu horagobdu illa

  • @shashidharakuppalli5414
    @shashidharakuppalli5414 Месяц назад +2

    ನೀವು ಕು ವೆಂ ಪು ಅವರ ಬಗ್ಗೆ ಹಂಚಿ ಕೊಂಡ ಅನುಭವ ನನ್ನ ಹೃದಯ ಮುಟ್ಟಿತು ಅನಂತಾನಂತ ಧನೈವಾದಗಳು

  • @nagarajus8760
    @nagarajus8760 Месяц назад +4

    Bahala kiri kiri atriptha athma.

  • @HemanthKumar-uc2tz
    @HemanthKumar-uc2tz Месяц назад +1

    🙏🙏🙏

  • @maheshs5921
    @maheshs5921 Месяц назад

    What a memory hatts of u sir

  • @RaviKumar-mq4xn
    @RaviKumar-mq4xn Месяц назад

    Super open taking❤

  • @channakeshavamurthy3941
    @channakeshavamurthy3941 Месяц назад +15

    ಇದು ಒನ್ ಸೈಡ್ ಕಾಮೆಟ್ರಿ ಆಯ್ತು ನೆಕ್ಸ್ಟ್ ಶಿವರಾಮ್ ಕಾರಂತರ ಕಡೆ ಅವರ ಕುಟುಂಬದಿಂದ ಸಂದರ್ಶನ ಪಡೆಯಿರಿ ಆಗಬಹುದ😮ಇಲ್ಲದಿದ್ದರೆ ವೀಕ್ಷಕರಿಗೆ ಕನ್ಫ್ಯೂಸ್ ಆಗುತ್ತದೆ

  • @sangappakaranalagi6714
    @sangappakaranalagi6714 Месяц назад +1

    ಗಣಪತಿ ಯಾಕ ಈ ಮನುಷ್ಯನ 👏

    • @Sharada-eye
      @Sharada-eye 28 дней назад

      Satyakke belene illanta anta nimaantavridle gottagutte

  • @ceell8089
    @ceell8089 Месяц назад +2

    He is honest

  • @lokeshraip2237
    @lokeshraip2237 Месяц назад +6

    ಕಾರಂತರು ನಾಸ್ತಿಕರು,ಆದರೂ ಬ್ರಾಹ್ಮಣರು ನಮ್ಮವರು ಎನ್ನುತ್ತಾ ಬೆಂಬಲಿಸುತ್ತಾರೆ.

    • @himu_36dev09
      @himu_36dev09 Месяц назад

      ಕಾರಂತರೂ ಬ್ರಾಹ್ಮಣರು

  • @ashwathks7660
    @ashwathks7660 Месяц назад +5

    He thinks himself as a perfect person.

    • @Sharada-eye
      @Sharada-eye 28 дней назад

      Nimage vara maatalli kashtagalu kanalillave sir.

  • @sridharsanjeev3050
    @sridharsanjeev3050 Месяц назад +6

    3:21😇😀ನಗೆ ತಡೆಯಲಾಗಲಿಲ್ಲ.!! (ದೇವ್ರಿಗಿಂತ ಪೂಜಾರಿದೇ ಭಯ ಅಂದಂಗಾಯ್ತು😀)

  • @rktejas928
    @rktejas928 Месяц назад +2

    Hope he speaks about Tejaswi in the coming series

  • @Shan56566
    @Shan56566 Месяц назад +6

    ನಮಗೆ ಗೊತ್ತಿಲ್ಲದ ಕಾರಂತರ ಸ್ವಭಾವ!!

  • @ShreeMadh
    @ShreeMadh Месяц назад

    ಎಂಥಾ ನೇರ ದಿಟ್ಟ ಮಾತು...!🙏🙏

  • @prakash7564
    @prakash7564 Месяц назад

    Manushyaraaru devaralla, vimarshege avakaasha ide, charche thappalla, munduvariyali, nirdaragalu janarige bedona allave, 🙏🙏🙏🙏

  • @prasannakumar1021
    @prasannakumar1021 Месяц назад +4

    ಪಾಪ, ಪಾಪ !
    ಆಕಾಶಕ್ಕೆ ಉಗೀತಿದಾರೆ !

  • @grishrrr
    @grishrrr Месяц назад

    Thanks

  • @jayanthshetty3376
    @jayanthshetty3376 Месяц назад +2

    ಸೂಪರ್

  • @nageshkumar7898
    @nageshkumar7898 Месяц назад

    Shivaratri Karanth is a towering personality amon these biased dwarfs . He has sharpened the logical thinking of generation. Such people are missing and hence the society is getting disintegrated. These time pass interviews will serve no puy.

  • @santhupsi
    @santhupsi Месяц назад +1

    Howdu karantara bagge helirodu nijia

  • @vijaykumarsiddaramaiah6372
    @vijaykumarsiddaramaiah6372 Месяц назад +1

    Let it continue pl

  • @vijayrk7329
    @vijayrk7329 28 дней назад

    Aralu maralu marayre..ellarottige jagala. Ellara mele munisu, dooru!

  • @manjugowda857
    @manjugowda857 Месяц назад

    ❤❤❤

  • @premarl3553
    @premarl3553 28 дней назад

    ಆತ್ಮ ಸ್ತುತಿ ಪರ ನಿಂದೆ

  • @vidhvath_7463
    @vidhvath_7463 Месяц назад +1

    ಇವರ ಇಷ್ಟು ದಿನದ ಸಂದರ್ಶನಗಳನ್ನು ನೋಡಿದ ಮೇಲೆ ನನಗೆ ಅರ್ಥವಾದದ್ದು,
    ಇವರದ್ದು ಬರೀ,
    ಆತ್ಮ ಪ್ರಶಂಸೆ, ಪರ ನಿಂದೆ..,
    😂😂😂😂😂😂

  • @Agnimissile
    @Agnimissile Месяц назад +3

    Evarudu baree apreeya mathugale,

  • @vishwanathgowda7138
    @vishwanathgowda7138 27 дней назад

    No one is perfect in this world, great people always commit silly mistakes, one can excuse and think and follow their ideas, that is the only solution, one or other day everyone showing such attitudes

  • @bhimarao555
    @bhimarao555 Месяц назад +1

    What is his opinion on Mr A R Krishna shastry& otherpeople like Byrappa etc?

  • @BNRao-uq9yl
    @BNRao-uq9yl Месяц назад

    Nobody is perfect and I am nobody ಅನ್ನೋದು ಈತನಿಗೆ ಕಳಸ ಪ್ರಾಯ

  • @vishwanathmn1751
    @vishwanathmn1751 Месяц назад

    Ganapathi sir, please ask him to speak on Aa Na Kru and his oratory....
    Many kannada scholars opine even till now no one has surpassed Aa Na Kru in the art of public speaking

  • @nagarajus8760
    @nagarajus8760 Месяц назад

    Harihara priya nim swantha ooru k.r.nagarana. hebbalge nim thande Bartha idru. Jnapaka ideya

    • @Sharada-eye
      @Sharada-eye 28 дней назад

      Avrigiddashtu jnapaka shakti nimga illa bidi

  • @kvnagabhushana
    @kvnagabhushana Месяц назад

    No one is perfect,If any one is having extract talent, definitely he will be having some weakness.

  • @HARISHKARANAM
    @HARISHKARANAM Месяц назад

    ಇವ ದೊಡ್ಡ ಹುಚ್ಚ ಇದ್ದಂತಿದೆ....ತಿಕ್ಕಲು ಮಾತು

    • @Sharada-eye
      @Sharada-eye 28 дней назад

      Ne evu huccharu sir vara maatinalli nijayiti. Nera nudi. Hana korate. Kelasakke pratiphale kaleyuvudu
      Kansta ilva

    • @HARISHKARANAM
      @HARISHKARANAM 27 дней назад

      @@Sharada-eye houda maa...hucharige huchare ista agodu..👍

  • @prasannakumar1021
    @prasannakumar1021 Месяц назад +6

    ಸತ್ತವರ ಬಗ್ಗೆ ಮಾತಾಡಿದರೆ ಏನು ಪ್ರಯೋಜನ, ದೇವರಿಗೇ ಗೊತ್ತು !
    ಇಂತ ಬೇಡದ ವಿಷಯಗಳನ್ನು ನೋಡುವಂತ ಕನ್ನಡಿಗರು ಹೆಚ್ಚು ಇಲ್ಲ ಎಂದು ನನ್ನ ನಂಬಿಕೆ.

  • @svdivakararao7183
    @svdivakararao7183 Месяц назад +6

    ಈತ ಒಬ್ಬ ಸ್ಯಾಡಿಸ್ಟ್ ಅಂತ ಅನಿಸುತ್ತದೆ

    • @Sharada-eye
      @Sharada-eye 28 дней назад

      Nimge sadist ansidre ne evu ade manasinavru irbeku

  • @santhoshjain2753
    @santhoshjain2753 Месяц назад

    ಈ ದರಿದ್ರ ಇದುವರೆಗೆ ಎಲ್ಲರನ್ನು ಬೈಯುವ ಈ ಮನುಷ್ಯ ಯಾರನ್ನಾದರೂ ಉದ್ದಾರ ಮಾಡಿದ್ದಾನೋ ಪ್ರಥಮವಾಗಿ ಕೇಳಿ.....ಕೇವಲ ಪ್ರಚಾರಕೊಸ್ಕರ ಇಂತಹ ಕೀಳು ಮಟ್ಥದ ವ್ಯಕ್ತಿಗಳಿಗೆ ಪ್ರಚಾರ ಕೊಡುವ ಅಗತ್ಯ ತಮಗಿಲ್ಲ ಅನಿಸುತ್ತದೆ

    • @Sharada-eye
      @Sharada-eye 28 дней назад

      Avrenu daridra alla bidi yakendre avru nadeda ghatanegalu heliddare. Karantarigu gottittu avru hehabadittu

  • @someoneenoem
    @someoneenoem 13 дней назад

    Evara maatu keluttale erabeku ansutte.

  • @p.s.raghavendrarao1122
    @p.s.raghavendrarao1122 Месяц назад +7

    ನಮ್ಮ ನಡುವೆ ಈಗ ಇಲ್ಲದವರ ಬಗ್ಗೆ ಮಾತಾಡುದಕ್ಕೆ ಇವರಿಗೆ ಯಾವ ಅರ್ಹತೆ ಇಧೆ

    • @rgowravee6239
      @rgowravee6239 Месяц назад +1

      ನಿಮ್ಮ ಪ್ರಕಾರ ಇಲ್ಲದವರ ಬಗ್ಗೆ ಮಾತನಾಡುವಂತಿಲ್ಲವೆ

    • @Sharada-eye
      @Sharada-eye 28 дней назад

      Nimge ee maatu helodakku arhate illa

  • @sreedharamurthy6151
    @sreedharamurthy6151 Месяц назад

    We dig into the past, to learn lessons. What have you learnt in life? Perhaps nothing! It is very evident in your interviews

  • @nagegowda4047
    @nagegowda4047 Месяц назад +2

    ಶಿವರಾಮ ಕಾರಂತರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ.

  • @murulim1965
    @murulim1965 Месяц назад

    Where to Read Preface of Lankesh am

  • @gunduraosubbarao1610
    @gunduraosubbarao1610 Месяц назад

    ನಾನೊಬ್ಬನೆ ಸರಿ ನಾನು ಮಾಡಿದ್ದೆ ಸರಿ ಎನ್ನೊ ಮನೋಬಾವ

  • @GovindeGowda1
    @GovindeGowda1 Месяц назад

    ಕಾರಂತರ ಬಗ್ಗೆ ಲಂಕೇಶ್ ಕೂಡ ಹಾಗೆ ಹೇಳಿದ್ದಾರೆ

  • @vidyashankar3916
    @vidyashankar3916 Месяц назад +1

    Ganapathi sir,
    By showing Sri Hariharapriya's interview, you are litterally spoiling the minds of people. I think he is spreading only Negativity. People are having some value on so many people now. This fellow may be good but he is Not adjustable to any body and he feels he is the only correct person on earth.

  • @danish8280
    @danish8280 Месяц назад

    Kuvempu poorti story heli gurugale

  • @vasudevaraobk424
    @vasudevaraobk424 Месяц назад +2

    He is speaking as if his opinions are whole worlds opinion. What we search in others will certainly find. This man is searching only negative things in others except a few chosen people. First he should about all negative things about himself. Also he should tell both positive and negative aspects of all the personalities he is talking about. Only then his opinions can be accepted. Otherwise he is partial and nothing special.

  • @Saguvali
    @Saguvali Месяц назад

    ಸಂಚಿಕೆ ನಂಬರ್ ಮೊದಲು ಬರಲಿ😮😮

  • @channayyapujeri7863
    @channayyapujeri7863 Месяц назад

    ಕಾರಂತರ ಬರವನಿಗೆಯಲ್ಲಿರುವ ಜ್ಞಾನ ಭಂಡಾರ ನೋಡಿದ್ರೆ ಅವರಲ್ಲಿ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡಲು ಕೂಡ ಸಮಯ ಸಿಕ್ಕಿರಲ್ಲ ಅನ್ಸುತ್ತೆ...ಎಸ್ಟೊಂದು ವಿಶಾಲತೆ ಮತ್ತು ಎಸ್ಟೊಂದು ಅಗಾಧತೆ... ನಿಮಗೆ ಅದಂತ ಅನುಭವ ಅವರ ಮುಂದೆ ಮಾತ್ರ ಹೇಳಿ... ಇಡೀ ಕರ್ನಾಟಕ.ಇದನ್ನು ನಂಬಲ್ಲ..

    • @Sharada-eye
      @Sharada-eye 28 дней назад

      Baraha nodi manasu henge helteera sir neevenu avra sahavaasa madeera. Geleya na avra sahodyogi na

    • @channayyapujeri7863
      @channayyapujeri7863 27 дней назад

      @@Sharada-eye ಹಾಗಲ್ಲ ಸರ್... ಅವರು ಹೇಳಿದ್ದು ನಿಜವೇ ಆಗಿದ್ದರೆ ಅದು ಅವರ ವೈಯಕ್ತಿಕ ವಿಷಯ ಆಗುತ್ತದೆ... ಇಡೀ ಕನ್ನಡ ಓದುಗರ ಮುಂದೆ ಹೇಳಿದಾಗ ಯಾರೂ ನಂಬಲ್ಲ ಮತ್ತು ಇವರೆ ಎಲ್ಲರ ಮುಂದೆ ಕೆಟ್ಟದಾಗಿ ಕಾಣುತ್ತಾರೆ... ಅಷ್ಟೆ ನನ್ನ ಅನಿಸಿಕೆ

  • @vibin8193
    @vibin8193 Месяц назад

    Karathara bagge maathadi ... Episode size ?

  • @KLRaju-xc7gv
    @KLRaju-xc7gv Месяц назад

    Swamy yhella ru vishwamanava shandhesha yheke khodalilla sir

  • @NagsCoffeeChannel
    @NagsCoffeeChannel Месяц назад +4

    This person is making allegations which is not good for the literary world. It is better to wind up this type of allegation discussions. He may have frustrations about some of the well known personalities. But that doesn't give him blanket permission to target as per his whims and fancies. Better windup or restrict. Let us have positive discussions.

  • @sathyanarayanams8022
    @sathyanarayanams8022 Месяц назад +1

    This man Harihara Priya seems to hate everyone because of his frustration.

  • @shanthigramalakshminarayan9336
    @shanthigramalakshminarayan9336 Месяц назад

    ಅಯೋಗ್ಯ ಗಣಪತಿಯಿಂದ ಅಯೋಗ್ಯ ಹರಿಹರಪ್ರಿಯನ ಸಂದರ್ಶನ....

    • @Sharada-eye
      @Sharada-eye 28 дней назад

      Ayogya ninda ayogya msg

  • @netpsychology
    @netpsychology Месяц назад +2

    Ivne dodda bakeetu idiyavnu
    Bayig bandange heltavne

  • @muralimohangr8396
    @muralimohangr8396 Месяц назад

    Ivara matanaduva reetiye ivara vyatitva helittade

  • @nandeeshaponnachi200
    @nandeeshaponnachi200 Месяц назад

    Adakke e yappa yargu gottilla

  • @NaveenKumar-kj3hg
    @NaveenKumar-kj3hg Месяц назад

    ಡಿವಿಜಿ ಅವರ ಬಗ್ಗೆ ಹೇಳಿ

  • @Pavi261
    @Pavi261 Месяц назад

    ಕಿರಿ ಕಿರಿ ಪ್ರಿಯ😅

  • @shrinidhibhat7240
    @shrinidhibhat7240 Месяц назад +2

    He may not like Dr Karanth but no one likes arrogant person like this HariharaPriya 😅

  • @KLRaju-xc7gv
    @KLRaju-xc7gv Месяц назад

    Pampa mhana va jaathi than ondhe vallam next kuvempu vishwa mhanava next who sir!? Of course Bha shveshwara ravaru in 12 th century. In 1904 to 1994 who sir!?

  • @abijith9236
    @abijith9236 Месяц назад +4

    Please stop interviewing this person. According to him -
    1.only he is ethical and good, everyone else in the world is unethical and bad.
    2. World should have recognised him and celebrated him, he's so hungry for praise and recognition, at his age, it's frankly vulgar.
    3. He talks ill of dead people who can't defend themselves against his foul tongue.
    Overall he's an abrasive, hateful and bitter person. His achievements don't give him the right to be disrespectful and hateful towards others. Also he brings caste in everything. My sincere request , don't provide a platform to spread hate

    • @meenarajan250
      @meenarajan250 Месяц назад +1

      Very true. Please stop this idiocracy. Your channel has its standard...... this interview is not up to it.

    • @navibhat2126
      @navibhat2126 Месяц назад

      No ways - plz relook once @abhijith9236 - given his age experience service - deeply delved in Kannada sahitya and other languages writings too... We need someone like him in Sahitya prapancha who talks straight unambiguous spic and span quip and quibble not mincing meat razor like critique unguillible no baffonery no sychophancy far away from lobbying - in a way it is a land mark interview in Kannada - my honest view..

  • @nagarathnas2204
    @nagarathnas2204 Месяц назад

    Yard pari pakvavalla..ivaru yellarannu bayyuttare...

  • @holymoly3566
    @holymoly3566 Месяц назад +1

    Losing respect on this man.

  • @savithribc9925
    @savithribc9925 Месяц назад +1

    ನೀವೆನು ದೇವಮಾನವನಾ?

    • @Sharada-eye
      @Sharada-eye 28 дней назад

      Iddaddu iddange heluva maanava

    • @Sharada-eye
      @Sharada-eye 28 дней назад

      Deva maanava nannu neevu nodiddeera ?

  • @sravikumarkumar6475
    @sravikumarkumar6475 Месяц назад +1

    E sahitigalu kachadagalu hoochu manasina voyagrhagalu

  • @SURYASUDAINVENTIVE
    @SURYASUDAINVENTIVE Месяц назад

    stop this interview..

  • @manjunathlegal7617
    @manjunathlegal7617 Месяц назад

    Sir
    Pl stop his interview..... Boring....he is depressed & frustrated pl...

  • @nagarajus8760
    @nagarajus8760 Месяц назад

    Famous agalla anta ellarnu comment madthare.

  • @mahendranathkm6991
    @mahendranathkm6991 Месяц назад

    Ganapathy shut your channel.

  • @pramodb6562
    @pramodb6562 Месяц назад

    Khandithavaadi lokavirodhi 😂