🔴 ಉತ್ತಮ ಸೌದಾಮಿನಿ - ಯಕ್ಷಗಾನ | ಹನುಮಗಿರಿ ಮೇಳ | UTTAMA SAUDAMINI | HANUMAGIRI MELA | YAKSHAGANA
HTML-код
- Опубликовано: 7 фев 2025
- 🔴 ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಮೇಳ
ಪ್ರಸಂಗ: ಉತ್ತಮ ಸೌದಾಮಿನಿ
ಕವಿ: ಡಾ. ಕೆ. ಎಂ. ರಾಘವ ನಂಬಿಯಾರ್
ಆಯೋಜಕರು: ಆಡಳಿತ ಮತ್ತು ವ್ಯವಸ್ಥಾಪನಾ ಸಮಿತಿ,
ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೈವಸ್ಥಾನ, ಶ್ರೀಕ್ಷೇತ್ರ ಮೂರ್ಗೋಳಿಹಕ್ಲು, ಬೀಜೂರು, ಬೈಂದೂರು ತಾಲೂಕು, ಉಡುಪಿ ಜಿಲ್ಲೆ
ಹಿಮ್ಮೇಳ:
ರವಿಚಂದ್ರ ಕನ್ನಡಿಕಟ್ಟೆ
ಚಿನ್ಮಯ ಭಟ್ ಕಲ್ಲಡ್ಕ
ದೇಲಂತಮಜಲು ಸುಬ್ರಹಣ್ಯ ಭಟ್
ಚೈತನ್ಯಕೃಷ್ಣ ಪದ್ಯಾಣ
ಶ್ರೀಧರ ವಿಟ್ಲ
ಕೌಶಲ್ ರಾವ್ ಪುತ್ತಿಗೆ
ನಿಶ್ವತ್ ಜೋಗಿ ಜೋಡುಕಲ್ಲು
ದಿನೇಶ್ ನೀರ್ಕೆರೆ
ಮುಮ್ಮೇಳ:
ಧ್ರುವ: ಪ್ರಸಾದ ಸವಣೂರು
ಉತ್ತಮ 1: ಭವಿಷ್ ಕನ್ನಡಿಕಟ್ಟೆ
ಶಂಬರಾಸುರ: ಮುಖೇಶ್ ದೇವಧರ್
ಕುಂಭ: ವೇಣೂರು ಸದಾಶಿವ ಕುಲಾಲ್
ದೇವೇಂದ್ರ 1: ಪ್ರಸಾದ ಸವಣೂರು
ದೇವತೆಗಳು: ಸತೀಶ್ ಯೆಡಮೊಗೆ, ಸೋಹನ್ ರೈ, ತೇಜಸ್ ಕುಮಾರ್
ಶುಕ್ರಾಚಾರ್ಯ: ಸೀತಾರಾಮ ಕುಮಾರ್ ಕಟೀಲು
ಜ್ವಾಲಾಸುರ: ಜಗದಾಭಿರಾಮ ಪಡುಬಿದ್ರೆ
ಶಕಟ: ಶಿವರಾಜ ಬಜಕೂಡ್ಲು
ವಿಕಟ: ಅಜಿತ್ ಪುತ್ತಿಗೆ
ಶಚಿ: ಮಹೇಶ್ ಎಡನೀರು
ನಾರದ: ಬಂಟ್ವಾಳ ಜಯರಾಮ ಆಚಾರ್ಯ
ಉತ್ತಮ 2: ದಿವಾಕರ ರೈ ಸಂಪಾಜೆ
ಮಾತಲಿ: ಕೀರ್ತನ್ ಕಾರ್ಕಳ
ಸೌದಾಮಿನಿ: ಸಂತೋಷ್ ಕುಮಾರ್ ಹಿಲಿಯಾಣ
ಸೌರಭೇಯ: ಪೂರ್ಣೇಶ್ ಕಟೀಲು
ದುಸ್ಸಹ: ಉಬರಡ್ಕ ಉಮೇಶ್ ಶೆಟ್ಟಿ
ಹೆಂಡ ವ್ಯಾಪಾರಿ: ಸೀತಾರಾಮ ಕುಮಾರ್ ಕಟೀಲು
ಉತ್ತಮ 3: ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
ದಂಡನಾಯಕ: ಪೂರ್ಣೇಶ್ ಕಟೀಲು
ಸಾಲಪೋತಕ: ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ನಂದೆ: ರಕ್ಷಿತ್ ಶೆಟ್ಟಿ ಪಡ್ರೆ
ಸುಶರ್ಮ: ಪೆರ್ಲ ಜಗನ್ನಾಥ ಶೆಟ್ಟಿ
ಸುಶರ್ಮನ ಪತ್ನಿ: ಸತೀಶ್ ಯೆಡಮೊಗೆ
ವಲಾಕ: ಮುಖೇಶ್ ದೇವಧರ್
ಶಾಂತದಿ ಮುನಿ: ಪ್ರಸಾದ ಸವಣೂರೂ
ಶಿಷ್ಯ: ಅಜಿತ್ ಪುತ್ತಿಗೆ
ಕಂದರ: ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ
ಔತ್ತಮ: ಶಿವರಾಜ ಬಜಕೂಡ್ಲು
ದೇವೇಂದ್ರ 2: ರೂಪೇಶ್ ಆಚಾರ್ಯ
ಶ್ರೀಹರಿ: ಕೀರ್ತನ್ ಕಾರ್ಕಳ
ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
ಚಿತ್ರಕೃಪೆ:
ಸುನೀಲ್ ಬಂಗೇರ ಎಕ್ಕಾರು (ಹಿಲಿಯಾಣ)
ನವೀನಕೃಷ್ಣ ಭಟ್ (ಪೆರ್ಮುದೆ)
#ಯಕ್ಷಗಾನ #ಹನುಮಗಿರಿಮೇಳ #ಉತ್ತಮಸೌದಾಮಿನಿ
__________________________________________________
🔴 Diwanagraphy
Website:
www.shrisutha.com
Photography Page:
diwanagraphy.sh...
Instagram Page:
/ diwanagraphy
Facebook Page:
/ diwanagraphy
Copyright©2024 Diwanagraphy - All rights reserved.
Any reproduction or illegal distribution of the content in any form will result in immediate action against the person concerned.
#diwanagraphy #diwanagraphyvideos #kateel
Subscribe this RUclips channel for more Videos.
Thank you.
__________________________________________________ Развлечения
ದಿವಾಣಗ್ರಾಫಿಕ್ ಇವರ ಚಿತ್ರೀಕರಣ ಪ್ರಸರಣದಲ್ಲಿ ಯೂಟ್ಯೂಬಿನಲ್ಲಿ ಮೂಡಿದ, ಬೈಂದೂರಿನ ಬಿಜೂರುಮೂರ್ಗೋಳಿಹಕ್ಲು ಶ್ರೀಕ್ಷೇತ್ರ ಶ್ರೀನಂದಿಕೇಶ್ವರ ಹಾಗೂ ಸಪರಿವಾರ ದೈವಸ್ಥಾನದ ಆಸರೆಯಲ್ಲಾದ, ಗೌತಮ ತಗ್ಗರ್ಸೆ ಅವರ ಮುತುವರ್ಜಿಯಲ್ಲಿ ಸಂಯೋಜಿತವಾದ, ಶ್ರೀ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮೇಳ ಆಡಿದ ನನ್ನ ರಚನೆಯ ಪ್ರಸಂಗ 'ಉತ್ತಮಸೌದಾಮಿನಿ' ಯನ್ನು ನೋಡಿದೆ. ಹರುಷವಾಯಿತು. ಈ ಪ್ರಸಂಗ ಮೊದಲಾಗಿ ಗಜಮೇಳವಾದ ಧರ್ಮಸ್ಥಳ ಮೇಳದಲ್ಲಿ ಪ್ರದರ್ಶನಗೊಂಡು ೪೮ ವರ್ಷಗಳಾದವು. ಅನೇಕವರ್ಷಗಳ ಕಾಲ ಆ ಮೇಳದ ತಿರುಗಾಟದ ಮುಖ್ಯಪ್ರಸಂಗವಾಗಿತ್ತು ಇದು. ಅನಂತರ ಭಾಗವತ ಸರಪಾಡಿ ಶಂಕರನಾರಾಯಣ ಕಾರಂತರು, ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳು, ಬಲಿಪ ನಾರಾಯಣ ಭಾಗವತರು ಮೊದಲಾದವರ ಮಾರ್ಗದರ್ಶನದಲ್ಲಿ ಅನೇಕ ವರ್ಷಗಳಿಂದ ಕಟೀಲುಮೇಳದಲ್ಲೂ ಪ್ರದರ್ಶನ ಕಂಡು ಜನಪ್ರಿಯವಾಗಿದೆ ಎಂದು ಕೇಳಿದ್ದೇನೆ. ಇಡಿರಾತ್ರಿಯ ಪ್ರದರ್ಶನದಲ್ಲಿ ಇದನ್ನು ಆಡಿ ಕಳೆಗಟ್ಟಿಸಬೇಕಾದರೆ ಅದು ಗಜಮೇಳವೇ ಆಗಿರಬೇಕು. ಅಷ್ಟು ಸಂಖ್ಯಯ ಮುಖ್ಯಪಾತ್ರಗಳು ಇದರಲ್ಲಿವೆ. ಇದನ್ನು ಯಶಸ್ವಿಯಾಗಿ ಪ್ರದರ್ಶಿಸಿದ ಹನುಮಗಿರಿ ಮೇಳ ಗಜಮೇಳ ಎಂಬುದರಲ್ಲಿ ಸಂದೇಹವಿಲ್ಲ. ಸ್ಪಷ್ಟವಾಗಿ ಅರ್ಥವಾಗುವಂತೆ ಮತ್ತು ಗರಿಷ್ಟ ಯಕ್ಷಗಾನ ಶೈಲಿಯಲ್ಲಿ ಹಾಡಿದ ಭರವಸೆಯ ಭಾಗವತ ಚಿನ್ಮಯ ಭಟ್ ಕಲ್ಲಡ್ಕ, ಅನುಭವಿ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರ ಬಲು ಜಾಗೃತ ಕಾಯಕದಲ್ಲಿ ಮತ್ತು ಪಳಗಿದ ವೇಷಧಾರಿಗಳ ಪ್ರಯತ್ನದಲ್ಲಿ ಪ್ರದರ್ಶನ ಸಫಲಗೊಂಡಿರುವುದು ಸುಸ್ಪಷ್ಟ. ಒಡನೆಯೆ ಬೇರೆಡೆಯೂ ಈ ಪ್ರಸಂಗ ಪ್ರದರ್ಶನಕ್ಕೆ ಬೇಡಿಕೆ ಬಂದಿರುವುದಾಗಿ ಕೇಳಿದೆ. ಮೀಸೆಕಟ್ಟಿಕೊಳ್ಳವುದನ್ನು ಬಿಟ್ಟರೆ ಎಲ್ಲ ವೇಷಗಳೂ ಯಕ್ಷಗಾನ ರಂಗ ಹೆಮ್ಮೆಪಡುವಂತೆ ಪ್ರಸ್ತುತಪಟ್ಟಿದೆ. ಧ್ರುವನವೇಷದಂತೆ ಮೀಸೆಕಟ್ಟಿಕೊಂಡರೆ ವೇಷರಚನೆಯ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೇಳಿಕೊಳ್ಳುವ ಹಾಗಾಗುತ್ತದೆ. ರಾಜಾ ಉತ್ತಮ(೨+೩), ಸೌದಾಮಿನಿ, ಶುಕ್ರಾಚಾರ್ಯ, ದುಃಸಹ, ನಂದೆ, ಸಾಲಪೋತಕ, ವಲಾಕ, ಸುಶರ್ಮ, ಶಾಂತಧಿ, ಜ್ವಾಲಾಸುರ, ಶಚಿ, ನಾರದ, ಇವರನ್ನು ಮಾತ್ರ ವಿಶೇಷವಾಗಿ ಎತ್ತಿಹೇಳಿದರೆ ಉಳಿದವರನ್ನು ಕಡೆಗಣಿಸಿದಂತೆ ಆಗುತ್ತದೆ. ಯಾಕೆಂದರೆ ಎಲ್ಲ ಕಲಾವಿದರ ಯೂಥಸ್ಫೂರ್ತಿಯೆ ಇಲ್ಲಿಯ ಸಾಫಲ್ಯದ ಮೂಲ. ಪದಗಳ ಹೊಂದಿಕೆ ಇನ್ನಷ್ಟು ಗರಿಮುರಿಯಾದರೆ ಮತ್ತು ರಸಸ್ಥಾನದ ಪದಗಳನ್ನು ನ್ಯಾಯಯುತ ಲಯ ಮತ್ತು ಛಂದೋಬದ್ಧ ತಾಳಯೋಜನೆಯಲ್ಲಿ ನಡೆಸಿದರೆ ಸಾಫಲ್ಯದಲ್ಲಿ ಇನ್ನೂ ಶೇಕಡಾ
೨೫ರಷ್ಟು ವೃದ್ಧಿಯಾಗಲು ಸಾಧ್ಯ. ಸಂವಾದದಲ್ಲಿ ಪಾತ್ರಗಳ ಪರಸ್ಪರ ಸಂಬಂಧಕ್ಕೆ ಯೋಗ್ಯವಾದ ಸಾಭಿನಯ ಪದಪ್ರಯೋಗ ಬಂದರೆ , ಪ್ರದರ್ಶನಕ್ಕೆ ಇನ್ನೂ ಹೆಚ್ಚಿನ ಕಳೆ ಬರುತ್ತದೆ. ಎಲ್ಲರಿಗೆ ಅಭಿನಂದನೆಗಳು. ಯಕ್ಷಗಾನ ಗೆಲ್ಲಲಿ.
ನಮಸ್ತೇ ಸರ್...
ನಿಮ್ಮ ಪ್ರೀತಿ ಹಾಗೂ ಮಾರ್ಗದರ್ಶನದಿಂದ ಕೂಡಿದ ಈ ಬರೆಹವನ್ನು ನೋಡಿ ಸಂತೋಷವಾಯಿತು... ಅಪರೂಪದಲ್ಲಿ ಅಪರೂಪವಾದ ಇಂತಹ ಪ್ರಸಂಗಗಳನ್ನು ಏಕಾಏಕಿ ಯಾವುದೇ ಪೂರ್ವತಯಾರಿಗಳಿಲ್ಲದೇ ಪ್ರದರ್ಶಿಸುವುದು ಕಷ್ಟಸಾಧ್ಯ. ನಾ ತಿಳಿದಂತೆ ಈ ಹಿಂದೆ ಸಂಪಾಜೆ ಯಕ್ಷೋತ್ಸವದಲ್ಲೊಮ್ಮೆ ಈ ಪ್ರಸಂಗ ಪ್ರದರ್ಶಿತವಾಗಿದ್ದು ಬಿಟ್ಟರೆ (ಕಳೆದ ಕೆಲವು ವರ್ಷಗಳಲ್ಲಿ ನೋಡುವುದಾದರೆ) ಹನುಮಗಿರಿ ಮೇಳದಲ್ಲಿ ಪ್ರದರ್ಶಿತವಾಗಿಲ್ಲ. ಮೇಳದಲ್ಲಿರುಶ ಹೆಚ್ಚಿನ ಕಲಾವಿದರಿಗೆ ಈ ಪ್ರಸಂಗ ಒದಗಿ ಬಂದದ್ದು ಇದೇ ಮೊದಲು. ಅದಾಗ್ಯೂ ಸಹ ಮೇಳದ ಎಲ್ಲಾ ಕಲಾವಿದರು ಶಕ್ತಿಮೀರಿ ಪ್ರಸಂಗದ ಯಶಸ್ಸಿಗೆ ಶ್ರಮಿಸಿದ್ದಾರೆ... ಅದೂ ಮೊದಲ ಪ್ರದರ್ಶನದಲ್ಲಿ. ಇನ್ನೂ 2-3 ಪ್ರಸ್ತುತಿಗಳಿಗೆ ಅವಕಾಶ ಒದಗಿ ಬಂದಲ್ಲಿ ಇದರ ಅಂದ ಮತ್ತಷ್ಟು ಹೆಚ್ಚಬಹುದು.
ಮೊದಲಾಗಿ ಹನುಮಗಿರಿ ಮೇಳದವರಿಂದ ಈ ಪ್ರಸಂಗದ ಪ್ರದರ್ಶನವಿದೆ ಎಂದು ಗೊತ್ತಾದ ತಕ್ಷಣ ಇದನ್ನು ದಾಖಲಿಸಬೇಕು ಎಂದು ತೀರ್ಮಾನಿಸಿ ಬಹಳಷ್ಟು ದೂರವಾದರೂ (120+km) ಸಹ ತಪ್ಪಿ ಹೋದರೆ ಮತ್ತೆಲ್ಲಿ ಸಿಗದೇ ಹೋದೀತೋ ಎಂಬ ಸಣ್ಣ ಅಳುಕಿನಿಂದ ಹೋಗಿ ದಾಖಲಿಸಿದೆ. ಆದರೆ ಇದನ್ನು ದಾಖಲಿಸಿದ್ದಕ್ಕೆ ಸಾರ್ಥಕ್ಯ ದೊರೆತದ್ದು ನೀವಿಂದು ನಿಮ್ಮ ಮಾರ್ಗದರ್ಶನದ ಮಾತುಗಳನ್ನು ಪ್ರೀತಿಯಿಂದ ಮುಂದಿಟ್ಟ ಬಳಿಕ. ಈ ಹಿಂದೆ ತಮ್ಮ ಚಕ್ರೇಶ್ವರ ಪರೀಕ್ಷಿತ ಪ್ರಸಂಗವನ್ನು ಕಟೀಲು ಮೇಳದವರು ಆಡಿ ತೋರಿಸಿದ್ದರು. ಅದನ್ನೂ ದಾಖಲಿಸಿದ್ದೆ. ಆಗಲೂ ಸಹ ನೀವು ಸರಿ ತಪ್ಪುಗಳನ್ನು ವಿಶ್ಲೇಷಿಸಿ ಬರೆದು ಕಳುಹಿಸಿದ್ದೀರಿ. ಅದನ್ನು ಆಗ ಮೇಳದ ತಂಡಕ್ಕೆ ತಲುಪಿಸಿದ್ದೆ ಹಾಗೂ ನಿಮ್ಮ ಅಭಿಪ್ರಾಯವನ್ನು ಮೇಳದ ಮುಂದಿಟ್ಟಿದ್ದೆ. ಈಗಲೂ ಸಹ ನಿಮ್ಮ ಈ ಮಾತುಗಳನ್ನು ಹನುಮಗಿರಿ ಮೇಳಕ್ಕೆ ತಲುಪಿಸುತ್ತೇನೆ.
ಮತ್ತೊಮ್ಮೆ ಧನ್ಯವಾದಗಳು ಸರ್🙏🙏🙏
- ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
❤❤❤
ಉತ್ತಮ ಪ್ರಸಂಗ. ಮದ್ಯದಲ್ಲಿ ಕಲವು ಹೆಸರಾಂತ ಕಲಾವಿದರ ಅತೀ ಎನಿಸುವಂತ ಮಾತುಗಾರಿಕೆ ಇದ್ದುದರಿಂದ, ಪ್ರಸಂಗದ ಕೊನೆಯಲ್ಲಿ ತರಾತುರಿ ನಿರ್ವಹಣೆ ನೋಡಿ ಸ್ವಲ್ಪ ಬೇಸರವೂ ಆಯ್ತು. ಸಿದ್ದಕಟ್ಟೆಯಂತ ಅದ್ಬುತ ಕಲಾವಿದರನ್ನು, ಇನ್ನೂ ಸ್ವಲ್ಪಹೊತ್ತು ವೇದಿಕೆಯಲ್ಲಿ ನೋಡ್ಲಿಕೆ ಬಯಸುತ್ತೇವೆ.
❤️❤️❤️
Supper prasanga❤❤❤
❤️❤️❤️
ಉತ್ತಮಪ್ರಸಂಗವಿದು.ಪ್ರಸಂಗಕರ್ತರಿಗೆಮತ್ತುಕಾರಣಣರೀಗೆಅಭಿನಂದನೆಗಳು🙏🙏🙏🙏🙏
❤️❤️❤️❤️
❤❤❤
@@prakashbhat3532 🙏🙏🙏
ಗೋವಿಂದ ಭಟ್ ರಜಲಂಧರನನುನೆನಪಿಸಿತು
@@GanarajaBhat-x1f ❤️❤️❤️
Tq very much sir for uploading was eagerly waiting
Most welcome....❤
Very nice eksha, Ghana.
❤️❤️❤️
Prajwal ❤❤❤❤🔥🔥🔥
@@pramodbs8679 ❤️❤️❤️
ಪೆರ್ಮುದೆ ❤❤❤
❤️❤️❤️
ನಾನು ಸಹ ಈಪ್ರಸಂಗಕ್ಕೆ ಕಾಯ್ತಾ ಇದ್ದೆ 🙏
ಹೌದಾ... ಅಂದ್ರೆ ಬೈಂದೂರಿನಲ್ಲಿ ನಡೆದ ಇದೇ ಯಕ್ಷಗಾನವನ್ನಾ?
@@Diwanagraphy ಹಾಗಲ್ಲ ಹನುಮಗಿರಿ ಮೇಳದ ಉತ್ತಮ ಸೌದಾ ಮಿನಿ ಪ್ರಸಂಗವನ್ನು.ಇದು ಬೈಂದೂರಿನ ಲ್ಲಿ ನಡೆದದ್ದು ಅಂತ ಈಗ ಗೊತ್ತಾಯಿತು
@@shobhayacharya16 ಹೌದು... ನಾನು ಕಟೀಲಿನಿಂದ ಬೈಂದೂರಿಗೆ ಹೋಗಿದ್ದೆ 😀
@@Diwanagraphy 🥰🙏
ಧನ್ಯವಾದಗಳು 🥰🙏
ಸೂಪರ್ ಪ್ರಸಂಗ
❤️❤️❤️❤️
Olle prasanga good
🥰🥰🥰
Super 👌
❤️❤️❤️
Thank you for uploading
Most Welcome
Super 👌👌👌🙏🙏
❤️
❤
❤️
ಪೆರ್ಲ ಮತ್ತು ಎಡಮೊಗೆಯವರ ಹಾಸ್ಯ😂😂😂..
❤️
✨✨🤩
❤️❤️❤️❤️❤️
😅😅❤
Super
❤️❤️❤️
ಪ್ರಸಂಗ ಉತ್ತಮವಾಗಿದೆ. ಜಯರಾಮ ಆಚಾರ್ಯರು ನಾಪತ್ತೆ ಆಗಿದ್ದರೋ ಅಥವಾ ಅವರನ್ನು ನೋಡುವ ಅವಕಾಸವನ್ನು ನಾನು ಕಳೆದು ಕೊಂಡಿದ್ದೆನೋ ಗೊತ್ತಿಲ್ಲ ‼️🤣 ಅಂತಿಮ ಹಂತದಲ್ಲಿ ಪ್ರಸಂಗ ಓಡಿಸಿದ್ದಾರೆ.... ‼️ 😅 @ ಕುಡ್ಲ
ಜಯರಾಮ ಆಚಾರ್ಯರು ಇದ್ದರಲ್ಲಾ...
Sir nanige ide prasanga bekittu
Ivattu sanje 5 gantege prasaravagalide. Nodi protsahisi ❤️🙏
Kateelu meladavru kuriya shashtrigala samyojaneyalli e prasanga adiddaru
❤️
ಮೊನ್ನೆ ಉಡುಪಿ ಹತ್ತಿರ ಆಗಿತ್ತು
ಹೌದು... ಗುಂಡ್ಮಿಯಲ್ಲಿ.
ಆದರೆ ಅದು ಕಾಲಮಿತಿಯ ಆಟ.
ಇದು ಪೂರ್ಣ ರಾತ್ರಿಯ ಆಟ.❤️
ಧನ್ಯವಾದಗಳು ದಿವಾಣಗೃಪಿ
E prasangavannu nanu omme sampajeyalli nodidde
Hawdu ee hinde Sampaje yalli aagide
❤
@@BhaskarShetty-q5d ❤️❤️❤️