ದಾಖಲೆ ಇಲ್ಲದ 81.90 ಲಕ್ಷ ಹಣ ಸೀಜ್...ರಮ್ಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ ವಶ...

Поделиться
HTML-код
  • Опубликовано: 20 сен 2024
  • ದಾಖಲೆ ಇಲ್ಲದ 81.90 ಲಕ್ಷ ಹಣ ಸೀಜ್...ರಮ್ಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ ವಶ...
    ಮೈಸೂರು,ಏ25,Tv10 ಕನ್ನಡ
    ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 81,90,900/- ರೂ ನಗದು ವಶಪಡಿಸಿಕೊಳ್ಳಲಾಗಿದೆ.ರಮ್ಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆ ಇಲ್ಲದ ಹಣ ದೊರೆತಿದೆ.ಮೂರು ಮಂದಿ KA 09 MB 4996 ನೊಂದಣೆ ಸಂಖ್ಯೆಯ ಕಾರಿನಲ್ಲಿ ಸಾಗಿಸಲಾಗುತ್ತಿದ್ದರು.ದಾಖಲೆಗಳನ್ನ ಒದಗಿಸದ ಕಾರಣ ಹಣ ಸೀಜ್ ಮಾಡಲಾಗಿದೆ.ಖಾಸಗಿ ಸಂಸ್ಥೆಯ ಹಣ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಆದ್ರೆ ಇದಕ್ಕೆ ಸೂಕ್ತ ದಾಖಲೆಗಳು ಒದಗಿಸುವಲ್ಲಿ ವಿಫಲರಾಗಿದ್ದಾರೆ.ಎಟಿಎಂ ನಲ್ಲಿ ಹಣ ಡೆಪಾಸಿಟ್ ಮಾಡಲು ಹಣ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ.ಭಾರಿ ಮೊತ್ತದ ಹಣ ಸಾಗಿಸುವ ವೇಳೆ ಸೂಕ್ತ ಭದ್ರತೆ ಇಲ್ಲದೆ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.FST ಕಾರಿಯಪ್ಪ SST ನವೀನ್ ಸಿ ರವರ ತಂಡ ತಪಾಸಣೆ ನಡೆಸುವ ವೇಳೆ ಹಣ ದೊರೆತಿದೆ.ಉಪವಿಭಾಗಾಧಿಕಾರಿ ನಂದೀಶ್ ಹಾಗೂ ತಹಸೀಲ್ದಾರ್ ಮಹೇಶ್ ಕುಮಾರ್ ಹಾಗೂ ಉಪತಹಸೀಲ್ದಾರ್ ವಿಶ್ವನಾಥ್ ಸಮ್ಮುಖದಲ್ಲಿ ಜಪ್ತಿ ಮಾಡಲಾದ ಹಣವನ್ನ ಜಿಲ್ಲಾ ಖಜಾನೆಗೆ ರವಾನಿಸಲಾಗಿದೆ.ಮಾಹಿತಿಯನ್ನ ಐಟಿ ಅಧಿಕಾರಿಗಳಿಗೂ ಸಹ ನೀಡಲಾಗಿದೆ.ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಾದ ಗುರುಚೇತನ್,ಸತೀಶ್ ಪಾಲ್ ಹಾಗೂ ಮಹೇಶ್ ಭಾಗಿಯಾಗಿದ್ದಾರೆ....

Комментарии •