78th Independence Day Celebration

Поделиться
HTML-код
  • Опубликовано: 19 авг 2024
  • 78ನೆಯ ಸ್ವಾತಂತ್ರ್ಯ ದಿನಾಚರಣೆಯ - 2024
    ಮೈಸೂರಿನ ವಿಜಯನಗರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರವು ದಿನಾಂಕ 15-8-2024ರಂದು 78ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣದ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭಾರತಾಂಬೆ, ರಾಷ್ಟ್ರಪಿತ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಶಾಲಾ ಘೋಷ್ ತಂಡದ ತಾಳದೊಂದಿಗೆ ಶಾಲೆಯ ವಿವಿಧ ತಂಡಗಳ ವಿದ್ಯಾರ್ಥಿಗಳು ಪಥಸಂಚಲನವನ್ನು ನೆರವೇರಿಸಿ ಕೊಟ್ಟರು. ಘೋಷ್ ಪ್ರದರ್ಶನ ಹಾಗೂ ದೇಶಭಕ್ತಿಯನ್ನು ಮೆರೆಯುವಂತಹ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ ಸೆಳೆದವು.
    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಹನುಮಂತಾಚಾರ್ ಜೋಷಿರವರು "ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಮಯ ಪಾಲನೆ ಹಾಗೂ ದೇಶಭಕ್ತಿಯು ಬಹಳ ಮುಖ್ಯವೆಂದು" ಹೇಳುತ್ತಾ ವಿದ್ಯಾರ್ಥಿಗಳ ವರ್ತನೆ ಮತ್ತು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಹುವಾಗಿ ಮೆಚ್ಚಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಶ್ರೀ ಕಾರ್ಯಪ್ಪ ಪಿ.ಪಿ ಅವರನ್ನು ಸನ್ಮಾನಿಸಲಾಯಿತು.
    ಶಾಲಾ ಕಾರ್ಯದರ್ಶಿಗಳಾದ ಶ್ರೀ ಮಲ್ಲರಾಜೇ ಅರಸ್, ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಎನ್, ಆಡಳಿತ ಅಧಿಕಾರಿಗಳಾದ ಚಂದ್ರಶೇಖರ್ ಕೆ. ಎಲ್, ಶಾಲಾ ಶೈಕ್ಷಣಿಕ ಸಂಯೋಜಕರಾದ ಶ್ರೀಮತಿ ದಿವ್ಯ ಗಣೇಶ್, ಬೋಧಕ-ಬೋಧಕೇತರ ವರ್ಗ ಹಾಗೂ ಪೋಷಕರು ಕಾರ್ಯಕ್ರಮವನ್ನು ಕಣ್ತುಂಬಿ ಕೊಂಡರು. ಕೊನೆಯದಾಗಿ ಸಿಹಿಯನ್ನು ಸವಿಯುತ್ತ ಕಾರ್ಯಕ್ರಮವನ್ನು ಮೆಲುಕು ಹಾಕುತ್ತ ಸಡಗರದಿಂದ ಮಕ್ಕಳೆಲ್ಲ ಮನೆಗೆ ತೆರಳಿದರು.

Комментарии •