ಮರುಳು ಮಾಡಿಕೊಂಡೆಯಲ್ಲೇ | ಪುರಂದರ ವಿಠಲ | Marulu Madikondeyalle | Purandara Vittala |With Lyrics| Lakshmi

Поделиться
HTML-код
  • Опубликовано: 13 окт 2024
  • dasarahadugalu...
    ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
    Kruti: Sri Purandara dasaru (Purandara vittala)
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಮರುಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ ||ಪ||
    ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ ||ಅಪ||
    ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ್ದಾಗ |
    ಹಲವು ಆಭರಣಗಳು ಜಲವು ಆಗಿ ಜಾಣತನದಿ ||೧||
    ಸರ್ವ ಸಂಗ ಬಿಟ್ಟು ಸನ್ಯಾಸಿಯಾದ ಕಾಲಕ್ಕು |
    ಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ ||೨||
    ಎಡಕೆ ಭೂಮಿ ಬಲಕೆ ಶ್ರೀಯು ಎದುರಿನಲ್ಲಿ ದುರ್ಗಾದೇವಿ
    ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಪ್ಪಂತೆ ||೩||
    ಮಕ್ಕಳ ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು
    ಪೊಕ್ಕುಳೊಳು ಮಕ್ಕಳ ಪಡೆದು ಕಕ್ಕುಲಾತಿ ಪಡುವಂತೆ ||೪||
    ಎಂದೆಂದಿಗು ಮರೆಯೆ ನಿನ್ನ ಆನಂದದಿ ಜನರಿಗೆಲ್ಲ |
    ತಂದು ತೋರೆ ಸ್ವಾಧೀನ ಪುರಂದರ ವಿಠಲರಾಯನ ||೫||
    maruLu mADikoMDeyallE mAyAdEviyE ||pa||
    iruLu hagalu EkavAgi hariyu ninna biDadippaMte ||apa||
    praLaya kAladalli Aladeleya mEle malagiddAga |
    halavu ABaraNagaLu jalavu Agi jANatanadi ||1||
    sarva saMga biTTu sanyAsiyAda kAlakku |
    sarvadA tannedeya mEle biDade ninna dharisippaMte ||2||
    eDake BUmi balake SrIyu edurinalli durgAdEvi
    toDeya mEle lakumiyAgi biDade muddADippaMte ||3||
    makkaLa paDedare ninna chokkatanavu pOpudeMdu
    pokkuLoLu makkaLa paDedu kakkulAti paDuvaMte ||4||
    eMdeMdigu mareye ninna AnaMdadi janarigella |
    taMdu tOre svAdhIna puraMdara viThalarAyana ||5||
  • ВидеоклипыВидеоклипы

Комментарии • 30