Eke Mamathe Kottu | Sung by Pushpalatha and Anuradha | Dasara Padagalu

Поделиться
HTML-код
  • Опубликовано: 1 окт 2024
  • ಏಕೆ ಮಮತೆ ಕೊಟ್ಟು ದಣಿಸುವಿ ರಂಗ
    ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ || ಪ. ||
    ನಿನ್ನನು ಭಜಿಸಲು ಅನ್ಯ ವಿಷಯ೦ಗಳಿ-
    ಗೆನ್ನನೊಪ್ಪಿಸುವುದು ನೀತಿಯೆ
    ಮನ್ನಿಸಿ ದಯದಿ ನೀನೆನ್ನ ಪಾಲಿಸದಿರೆ
    ನಿನ್ನ ನೇಮಕ ಪ್ರತಿಕೂಲವೆ ರಂಗ || ೧ ||
    ತನುವು ತನ್ನದು ಅಲ್ಲ ತನು ಸಂಬಂಧಿಗಳಾರೋ
    ತನುವಾರೋ ತಾನಾರೋ ಅವರಿಗೆ
    ಧನ ಮೊದಲಾದ ವಿಷಯಗಳ ಅನುಭವ
    ಹಿ೦ದನ ಜನುಮ ದಂತಲ್ಲವೆ ರಂಗ || ೨ ||
    ಇ೦ದ್ರಿಯಗಳ ವಿಷಯದಿ೦ದ ಭೇದಿಸೆ
    ಗೋವಿ೦ದ ನಿನ್ನ ಮನಕೆ ಬಾರದೆ
    ಇ೦ದಿರೆ ಅರಸ ಬ್ರಹ್ಮಾದಿವ೦ದಿತ ನಿನ್ನ
    ಬ೦ಧಕಶಕುತಿಗೆ ನಮೋ ನಮೋ ರಂಗ || ೩ ||
    ಅರಿತು ಅರಿತು ಎನಗೆ ಅರೆಲವವಾದರು
    ವಿರಕುತಿವಿಷಯದಿ ಬಾರದು
    ಕರುಣಾಸಾಗರ ನಿನ್ನ ಸ್ಮರಣೆಯೊಂದಲ್ಲದೆ
    ಮರುಳು ನೀಗುವ ಬಗೆ ಕಾಣೆನೊ ರಂಗ || ೪ ||
    ಎ೦ದಿಗೆ ಇನ್ನು ನಿನ್ನ ಚಿತ್ತಕ್ಕೆ ಬರುವುದೊ
    ಅ೦ದಿಗೆ ಉದ್ಧರಿಸೋ ಕರುಣಿಯೆ
    ಸು೦ದರ ವಿಗ್ರಹ ಗೋಪಾಲವಿಠಲ ಸುಖ
    ಸಾ೦ದ್ರ ಭವಮೋಚಕ ನಮೋ ನಮೋ ರಂಗ|| ೫ ||
    ***
    Eke mamate kottu danisuvi ranga
    Ni karunadi enna paliso krushna || pa. ||
    Ninnanu bhajisalu anya vishayangali-
    Gennanoppisuvudu nitiye
    Mannisi dayadi neenenna palisadire
    Ninna nemaka pratikulave ranga || 1 ||
    Tanuvu tannadu alla tanu sambandhigalaro
    Tanuvaro tanaro avarige
    Dhana modalada vishayagala anubava
    Hindana januma dantallave ranga || 2 ||
    Indriyagala vishayadinda bhedise
    Govinda ninna manate barade
    Indire arasa brahmadivandita ninna
    Bandhakasakutige namo namo ranga || 3 ||
    Aritu aritu enage arelavavaadaru
    Virakutivishayadi baradu
    Karunasagara ninna smaraneyondallade
    Marulu niguva bage kaneno ranga || 4 ||
    Endige innu ninna cittakke baruvudo
    Andige uddhariso karuniye
    Sundara vigraha gopalavithala suka
    Sandra bavamocaka namo namo ranga || 5 ||

Комментарии • 5