Kariya Ajalaya Kadya Puttur, Kuppe Panjurli gaggara sandhi

Поделиться
HTML-код
  • Опубликовано: 2 дек 2024
  • Work is worship., ನರನಲ್ಲಿ ನಾರಾಯಣನನ್ನು ಕಾಣು. ಕೆಲಸದಲ್ಲಿ ಕೈಲಾಸವ ಕಾಣು, ಎಂದು ನಮ್ಮ ಪೂರ್ವಜರು ನಮಗೆ ಸಾರಿದರು. ಆದರೆ ಈ ಎಲೆಕ್ಟ್ರಾನಿಕ್ ಯುಗದಲ್ಲಿ ಯಾರಿದನ್ನು ಅಚ್ಚುಕಟ್ಟಾಗಿ ಪಾಲಿಸುತ್ತಾರೆ ಎಂಬ ಗೋಜಿನಲ್ಲಿ ಇರುವಾಗಲೇ, ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಡ್ಯ ಪ್ರದೇಶದ ಸುಮಾರು 85 ವರ್ಷದ ಯುವಕ (ಕೆಲಸದ ವಿಷಯದಲ್ಲಿ ಯಾಕೋ ಕಾಲ ಪುರುಷ ಮುಂದೆ ಸಾಗಲಿಲ್ಲ ಎಂದುಕೊಳ್ಳಬಹುದು) ನನ್ನು ನೋಡಿದೆ. ತುಳುನಾಡಿನ ಅನಾದಿ ಕಾಲದಿಂದಲೂ ಬಂದ ಭೂತಾರಾಧನೆ ಪದ್ಧತಿಯ ಪ್ರಕಾರ 7 ಗ್ರಾಮದಲ್ಲಿ ಗ್ರಾಮ ದೈವವಾದ ಶಿರಾಡಿ ರಾಜನ್ ದೈವಕ್ಕೆ ನೇಮ ಕಟ್ಟುತ್ತಿದ್ದಾರೆ, ಕರಿಯ ಅಜಲಾಯರವರು. ವರುಷ ಸುಮಾರು 85 ಆದರೂ, ಕಾಲುಗಳು ನಡುಗುತ್ತಿದ್ದರೂ, ಧ್ವನಿ ಗದ್ಗದಿತವಾದರೂ ಪದ್ಧತಿಯನ್ನು ಅಚ್ಚುಕಟ್ಟಾಗಿ ಪಾಲಿಸುತ್ತಾರೆ ಕರಿಯ ಅಜಲಾಯರವರು. ಒಂದು ಇಡೀ ದಿನ ನಡೆವ ದೈವದ ನೇಮಕ್ಕೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಭಕ್ತಿಯಿಂದ ಪದ್ಧತಿಯನ್ನು ಪಾಲಿಸುತ್ತಾರೆ. ತನಗೆ ಸಿಗುವ ಕಿಂಚಿತ್ ವೇತನದ ಬಗ್ಗೆ ಬೇಸರವಿದ್ದರೂ ತನಗೆ ವಹಿಸಿದ ಕೆಲಸವನ್ನು ಚಾಚೂ ತಪ್ಪದೆ ಮಾಡುವ ಈ ಮನುಷ್ಯನ ಬಗ್ಗೆ ಕೇಳುವಾಗ ಅಗಾಧ ಗೌರವ ಹಾಗೂ ಬೇಸರ ಒಟ್ಟಿಗೆ ಮೂಡುವುದು ಸುಳ್ಳಲ್ಲ. ದೇವರು, ದೈವ, ದೇವಸ್ಥಾನಗಳೆಲ್ಲಾ ಕೇವಲ ಆಡಂಬರವಾಗಿರುವ ಈ ಕಾಲದಲ್ಲಿ ಧರ್ಮ ಪದ್ಧತಿಯ ಹೆಸರಲ್ಲಿ ಲಕ್ಷ ಲಕ್ಷ ದೋಚುವ ಜನರ ನಡುವೆಯೂ, ಕರ್ತವ್ಯವನ್ನು ಎದುರಿಟ್ಟು ಈ ಮುದಿ ವಯಸ್ಸಿನಲ್ಲಿಯೂ ನೇಮ ಕಟ್ಟುತ್ತಿರುವ ಕರಿಯ ಅಜಲಾಯರವರಿಗೆ ಯಾರೂ ಸಾಟಿ ಇಲ್ಲ ಎನ್ನಬಹುದು. ಮುದಿ ದೇಹಕ್ಕೆ ಶಕ್ತಿ ಕೈ ಕೊಟ್ಟರೂ ಎದೆಯಲ್ಲಿ ಕಿಚ್ಚು ಮನದಲ್ಲಿ ಭಕ್ತಿ ಇಟ್ಟು ನೇಮಕ್ಕೆ ನಿಂತರೆ ಅದನ್ನು ನೋಡುವ ಸುಖವೇ ಬೇರೆ. ಇಂತಹ ಅಪರಂಜಿಗಳಿಗೆ ನಮ್ಮ ಸಮಾಜದಲ್ಲಿ ಸ್ಥಾನಮಾನ ಸಿಗಲಿ. ಜಾತಿಯ ಮೀರಿ ಮನುಷ್ಯತ್ವ ತೋರಿಸುವ ದಾರಿ ನಮ್ಮವರಿಗೆ ಕಾಣಲಿ ಎಂಬುದೊಂದೇ ಈ ಬರಹದ ಆಶಯ.

Комментарии • 15