Kodamanithaya Nema, Deraje Betta- Marody
HTML-код
- Опубликовано: 8 фев 2025
- ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದಲ್ಲಿರುವ ದೇರಾಜೆಬೆಟ್ಟ, ಶ್ರೀ ಕೊಡಮಣಿತ್ತಾಯ ದೈವವು ತನ್ನ ಉದಿಪನವಾದ ಹೊತ್ತಲ್ಲಿ ದೃಷ್ಟಿಯಿಟ್ಟು ಕಾರ್ಣಿಕ ಮೆರೆದ ಜಾಗಗಳಲ್ಲಿ ಒಂದಾಗಿದೆ. ಇದರೊಂದಿಗೆ ಶ್ರೀ ಕೊಡಮಣಿತ್ತಾಯ ದೈವದ ಮೂಲ ಕ್ಷೇತ್ರವಾದ ಪಡ್ಯಾರಬೆಟ್ಟಕ್ಕೂ ದೇರಾಜೆಬೆಟ್ಟಕ್ಕೂ ಅವಿನಾಭಾವ ಸಂಬಂಧವಿದೆ, ಈ ಕುರಿತು ಪಾರ್ಧನದಲ್ಲೂ ಉಲ್ಲೇಖವಿರುವುದು ವಿಶೇಷ. ತುಳುನಾಡಿನಲ್ಲಿ ಶ್ರೀ ಕೊಡಮಣಿತ್ತಾಯ ದೈವದ ಕಾರ್ಣಿಕ ಮೆರೆದ ಪಡ್ಯಾರಬೆಟ್ಟ, ಆರಮಲೆ ಬೆಟ್ಟ, ತಿಬಾರು, ಎಕ್ಕಾರು ಏರಿಕೆಯ ಮಣ್ಣು ಅರ್ಥಾತ್ ಬೆಟ್ಟ ಗುಡ್ಡದಂತಹ ಪ್ರದೇಶ, ಇಂತಹದೆ ಒಂದು ಎತ್ತರದ ಪ್ರದೇಶದಲ್ಲಿರುವ ಕೊಡಮಣಿತ್ತಾಯ ದೈವದ ಸಾನಿಧ್ಯ ಅದು ದೇರಾಜೆಬೆಟ್ಟ, ಈ ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಹಿನ್ನಲೆ ಇತಿಹಾಸವಿದೆ. ಆದರೆ ಘತಕಾಲದಲ್ಲಿ, ಇಲ್ಲಿ ನೇಮೋತ್ಸವ ನಿಂತಿತ್ತು ಹಾಗು, ಕ್ಷೇತ್ರವು ಪಾಳು ಬಿದ್ದ ಸ್ಥಿತಿಗೆ ತಲುಪಿತ್ತು. ಆದರೆ ಗ್ರಾಮಸ್ಥರಿಗೆ ಮಾತ್ರ ಈ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ದೈವವೂ ಸೂಚನೆ ನೀಡುತ್ತಿತ್ತು. ಈ ಹೊತ್ತಿನಲ್ಲಿ ಸಮೀಪದ ಪೊಸರಡ್ಕ ಗರಡಿಯ ಪ್ರಶ್ನಾ ಚಿಂತನೆಯ ಸಂದರ್ಭ ದೇರಾಜೆಬೆಟ್ಟದ ಜಿರ್ಣೋದ್ಧಾರ ಬಗ್ಗೆ ಸೂಚನೆ ದೊರೆತಿತ್ತು, ಅಂತೆಯೇ ಬೂಡು, ಗುತ್ತು, ಬರ್ಕೆ ಹಾಗು ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ 2022ರಲ್ಲಿ ಶ್ರೀ ಧರ್ಮರಸು ಹಾಗು ಶ್ರೀ ಕೊಡಮಣಿತ್ತಾಯ ದೈವಗಳ ಸಾನಿಧ್ಯಗಳ ಬ್ರಹ್ಮಕುಂಭಾಭಿಷೇಕ ವಿಜೃಂಭಣೆಯಿಂದ ನಡೆದು ಇಂದಿಗೆ ಕ್ಷೇತ್ರವೂ ಸಾವಿರಾರು ಭಕ್ತರ ಆರಾಧ್ಯ ತಾಣವಾಗಿ ಮಾರ್ಪಟ್ಟಿದೆ. ಪ್ರತಿ ವರ್ಷ ಶ್ರೀ ಧರ್ಮರಸು ಹಾಗು ಕೊಡಮಣಿತ್ತಾಯ ದೈವಗಳ ನೇಮೋತ್ಸವದ ಶ್ರದ್ಧಾ ಭಕ್ತಿಯಿಂದ ನೆರವೇರುತ್ತಿದ್ದು, ಮುಂದೊಂದು ದಿನ ದೇರಾಜೆಬೆಟ್ಟದ ಶ್ರೀ ದೈವ ಕೊಡಮಣಿತ್ತಾಯ ದೈವಗಳ ಕಾರ್ಣಿಕವೂ ತುಳುನಾಡಿನೆಲ್ಲೆಡೆ ಪಸರಿಸಿ, ಅಪಾರ ಪ್ರಮಾಣದಲ್ಲಿ ಭಕ್ತಗಣ ಕ್ಷೇತ್ರಕ್ಕೆ ಆಗಮಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.. ಭವಿಷ್ಯದಲ್ಲಿ ಪಡ್ಯಾರಬೆಟ್ಟ, ಅರಮಲೆ ಬೆಟ್ಟದ ರೀತಿಯಲ್ಲೆ ದೇರಾಜೆಬೆಟ್ಟವೂ ಕಂಗೊಳಿಸುವುದು ಸತ್ಯವಾದ ಮಾತು ಹಾಗು ಇದು ದೈವದ ಅಭಯವೂ ಹೌದು..
ಮರೋಡಿ ದೇರಾಜೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ
31.01.2024
Join my channel to get access to perks:
/ @nagarajbhat
Bhatre mast kaala ayi bokka onji long video.I have learnt so much about dhaivaradhane from your videos comments section and Solmelu.🙏
Thank you 🙏♥️♥️♥️
Love from puttur❤
Hi is there any kola today ?
Ullalthi nema, Uliya (Thokkottu)
Suresha na kola edde apundu❤❤❤
Andh 🙏♥️
Apudu
Hi sir is there any nema today 25/2/24
Mattu, Malali- Kaikamba
👌🙏
🙏🙏
Avu 2janak yenne boolya daye korpun anna
Dharmarasu (ullaya) & Kodamanithaya.. 1st nemada video padijji.
🙏🙏
🙏🙏🙏