ಅಶ್ವಿನಿ ಕೊಂಡದಕುಳಿlರಂಗಸ್ಥಳದ ಅತಿಥಿl ಗಂಡು ಕಲೆಯಲ್ಲಿ ಹೆಣ್ಣುಮಗಳುlAshwini Kondadakuli Interview

Поделиться
HTML-код
  • Опубликовано: 27 дек 2024
  • ಇವತ್ತಿನ ರಂಗಸ್ಥಳ ಅತಿಥಿ ಅಶ್ವಿನಿ ಕೊಂಡದಕುಳಿ!
    ಯಕ್ಷಗಾನ ಎಂದರೆ ಅದು ಗಂಡುಕಲೆ ಇಲ್ಲಿ ಪುರುಷರು ಸ್ತ್ರೀ ವೇಷಗಳನ್ನು ಹೆಣ್ಣುಮಕ್ಕಳು ನಾಚಿಸುವಂತೆ ಮಾಡುತ್ತಾರೆ. ಆದರೆ ಇಡೀ ಬಡಗುತಿಟ್ಟಿನಲ್ಲಿ ರಂಗದಲ್ಲಿ ಹೊಸ ಬದಲಾವಣೆ ತಂದ ಅನೇಕ ಹೆಣ್ಣುಮಕ್ಕಳಿದ್ದಾರೆ. ಅದರಲ್ಲಿ ಹೆಣ್ಣುಮಗಳಾಗಿ ಒಂದಿಷ್ಟು ರಂಗದಲ್ಲಿ ಬದಲಾವಣೆಯನ್ನು ತಂದಂತಹ ಗಟ್ಟಿಗಿತ್ತಿ ಅಶ್ವಿನಿ ಕೊಂಡದಕುಳಿ ಯಕ್ಷ ಪ್ರೇಕ್ಷಕರಿಗೆ ಚಿರಪರಿಚಿತಳು. ಯಕ್ಷಗಾನ ನನ್ನುಸಿರು ಎಂದು ಯಕ್ಷಗಾನದಲ್ಲಿ ಗೆಜ್ಜೆಕಟ್ಟಿ ಹೆಜ್ಜೆ ಹಾಕಬೇಕು ಎಂದು ಅದೆಷ್ಟೋ ಸಾಧಕ-ಬಾದಕಗಳನ್ನು ಎದುರಿಸಿ ಬಡಗುತಿಟ್ಟಿನ ರಂಗಸ್ಥಳದಲ್ಲಿ ಮಿಂಚುತ್ತಿರುವ ಒಬ್ಬ ಮಹಿಳಾ ಕಲಾವಿದೆ ಇವರು. ಬಡಗುತಿಟ್ಟಿನ ಮೇರು ಕಲಾವಿದರಾದ ರಾಮಚಂದ್ರ ಕೊಂಡದಕುಳಿಯವರ ಸುಪುತ್ರಿ ರಂಗಸ್ಥಳಕ್ಕೆ ತಾನು ಪಾದರ್ಪಣೆ ಮಾಡಿದ ಕತೆಯೇ ಒಂದು ವಿಶೇಷ. ತಾನು ರಂಗದಲ್ಲಿ ಹೆಜ್ಜೆ ಹಾಕುತ್ತೇನೆ ಅಂದಾಗ ಆಕೆ ಹಿಂದೆ ಹಿಂಬಾಲಿಸಿದ್ದು ಒಂದಿಷ್ಟು ಪರ-ವಿರೋಧಗಳು ಅದನ್ನೆಲ್ಲವನ್ನೂ ಮೆಟ್ಟಿನಿಂತು ಇಂದು ಬಡಗುತಿಟ್ಟಿನಲ್ಲಿ ಒಬ್ಬ ಸ್ತ್ರೀ , ಪುರುಷ ವೇಶವನ್ನು ಮಾಡುತ್ತಿರುವುದನ್ನು ನೋಡಲು ಅದೆಷ್ಟು ಅಭಿಮಾನಿ ಬಳಗ ಕಾದುಕುಳಿತಿದ್ದಾರೆ. ರಂಗಸ್ಥಳದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕುತ್ತಿರುವಾಗಲೇ ವೇಷದಾರಿ ಒಬ್ಬನ ಮೇಲೆ ಪ್ರೇಮಾಂಕುರವಾಗಿ ಆತನನ್ನೇ ಮದುವೆಯಾಗಿ ಸುಂದರ ಕುಟುಂಬದ ಜೊತೆಗೆ ಇದೀಗ ತಮ್ಮ ಜೀವನ ಸಾಗಿಸುತ್ತಿದ್ದಾರೆ.ಪತಿ ಉದಯ್ ಕಡಬಾಳ್ ತನ್ನ ಪತ್ನಿಯ ರಂಗಸ್ಥಳದ ಆಸಕ್ತಿಗೆ ಪೂರಕವಾಗಿಯೇ ಸಹಕರಿಸುತ್ತಾ ಯಕ್ಷಗಾನದಲ್ಲಿ ಇನ್ನಷ್ಟು ಹೊಸ ಕನಸು ಯೋಜನೆಗಳನ್ನು ಹೊಂದಿದ್ದಾರೆ.ಇಂತಹ ಪ್ರತಿಭಾವಂತ ಕಲಾವಿದೆಯ ಸಂದರ್ಶನದಲ್ಲಿ ಇನ್ನಷ್ಟು ಕುತೂಹಲಕಾರಿ ವಿಷಯವನ್ನು ನೀವೇ ನೋಡಿ.

Комментарии •