ಪರಿಸರ ಸ್ನೇಹಿ ಗಣಪ...ದಶಕಗಳಿಂದ ಕೈಹಿಡಿದ ಕಾಯಕ...ಸುಂದರ ವಿಗ್ರಹಗಳನ್ನ ರೂಪಿಸುತ್ತಿರುವ ಕಲಾವಿದ ಕುಟುಂಬ...

Поделиться
HTML-код
  • Опубликовано: 20 сен 2024
  • ಪರಿಸರ ಸ್ನೇಹಿ ಗಣಪ...ದಶಕಗಳಿಂದ ಕೈಹಿಡಿದ ಕಾಯಕ...ಸುಂದರ ವಿಗ್ರಹಗಳನ್ನ ರೂಪಿಸುತ್ತಿರುವ ಕಲಾವಿದ ಕುಟುಂಬ...
    ನಂಜನಗೂಡು,ಸೆ2,Tv10 ಕನ್ನಡ
    ಗಣಪತಿ ಹಬ್ಬದ ದಿನದಂದು ವಿಘ್ನವಿನಾಯಕನ ಆರಾಧನೆಗಾಗಿ ನಾಡಿನ ಜನತೆ ಸಜ್ಜಾಗುತ್ತಿದ್ದಾರೆ.ಗೌರಿ ಗಣಪತಿ ವಿಗ್ರಹಗಳನ್ನ ಪ್ರತಿಷ್ಠಾಪಿಸಿ ವಿಘ್ನಗಳನ್ನ ನಿವಾರಿಸುವಂತೆ ಪೂಜಿಸಲಿದ್ದಾರೆ.ಇದಕ್ಕಾಗಿ ಪರಿಸರ ಗಣಪನ ವಿಗ್ರಹಗಳಿಗೆ ಬಹು ಬೇಡಿಕೆ ಬಂದಿದೆ.ದಶಕಗಳಿಂದ ಪರಿಸರ ಸ್ನೇಹಿ ಗಣಪಗಳನ್ನ ತಯಾರಿಸಿ ಭಕ್ತರ ಬೇಡಿಕೆಗೆ ಸ್ಪಂದಿಸುತ್ತಿದೆ ನಂಜನಗೂಡಿನ ಹುಲ್ಲಹಳ್ಳಿ ರಸ್ತೆಯಲ್ಲಿರುವ ಕಲಾವಿದ ಶಿವಕುಮಾರ್ ಕುಟುಂಬ.ತಾತನ ಕಾಲದಿಂದ ಬಂದ ಮಣ್ಣಿನ ಗಣಪತಿ ವಿಗ್ರಹಗಳನ್ನ ತಯಾರಿಸುವ ಕಾಯಕ ಇವರ ಕುಟುಂಬದ ಕೈ ಹಿಡಿದಿದೆ.ಅಲ್ಲದೆ ಪರಿಸರ ರಕ್ಷಣೆಗಾಗಿ ಒತ್ತು ನೀಡುತ್ತಾ ಬಂದಿದೆ.
    ನಂಜನಗೂಡು ಹುಲ್ಲಹಳ್ಳಿ ಮುಖ್ಯರಸ್ತೆಯಲ್ಲಿರುವ ಶೆಡ್ ನಲ್ಲಿ ಕಲಾವಿದ ಶಿವಕುಮಾರ್ ಕುಟುಂಬದ ಕೈ ಚಳಕದಲ್ಲಿ ಆಕರ್ಷಕ ಮಣ್ಣಿನ ಗಣಪತಿ ವಿಗ್ರಹಗಳು ಮೂಡಿ ಬರುತ್ತಿದೆ.ವಿವಿದ ಗಾತ್ರದ ಸುಂದರವಾದ ಮನಮೋಹಕ ವಿಗ್ರಹಗಳು ಅರಳಿವೆ.ಪರಿಸರ ರಕ್ಷಣೆಗೆ ಮೊದಲ ಆಧ್ಯತೆ ನೀಡುತ್ತಿರು ಈ ಕುಟುಂಬ ಕೇವಲ ಮಣ್ಣಿನ ಗಣಪನನ್ನ ಮಾತ್ರ ತಯಾರಿಸುತ್ತದೆ.ರಾಸಾಯನಿಕ ವಸ್ತುಗಳನ್ನ,ಪಿಓಪಿ ಗಳನ್ನ ಬಳಸದೆ ಪರಿಸರ ರಕ್ಷಣೆಗೆ ಇಡೀ ಕುಟುಂಬ ಕಾಯಕ ನಡೆಸುತ್ತಿದೆ.ಬೇಡಿಕೆಗೆ ಅನುಗುಣವಾಗಿ ವಿಗ್ರಹಗಳನ್ನ ತಯಾರಿಸುತ್ತಾರೆ.ಒಂದೊಂದು ವಿಗ್ರಹಗಳಲ್ಲೂ ಜೀವ ತುಂಬುತ್ತಾರೆ.ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಿಂದಲೇ ವಿಗ್ರಹಗಳ ತಯಾರಿಕೆಗೆ ಸಿದ್ದತೆ ಮಾಡಿಕೊಳ್ಳುತ್ತಾರೆ.ಗುಣಮಟ್ಟದ ವಿಗ್ರಹಗಳಿಗೆ ಇವರ ಪ್ರಥಮ‌ ಆಧ್ಯತೆ.ಪ್ರತಿವರ್ಷ ಸುಮಾರು 6 ರಿಂದ 7 ಲಕ್ಷ ದುಡಿಯುವ ಈ ಕುಟುಂಬ ಇಡೀ ವರ್ಷ ಇದೇ ಆದಾಯವನ್ನ ಅವಲಂಬಿಸಿದೆ.ಹಬ್ಬದ ಕೆಲಸ ಮುಗಿದ ನಂತರ ಜೀವನಕ್ಕಾಗಿ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.ರಾಜ್ಯದ ಮೂಲೆ ಮೂಲೆಗಳಿಂದ ಬರುವ ಗ್ರಾಹಕರು ಶಿವಕುಮಾರ್ ಕುಟುಂಬದ ಕಲಾ ನೈಪುಣ್ಯಕ್ಕೆ ಮೆಚ್ಚುಗೆ ಸೂಚಿಸುತ್ತಾರೆ.ಶಿವಕುಮಾರ್ ಕುಟುಂಬದ ಪರಿಶ್ರಮಕ್ಕೆ ಜನರ ಸ್ಪಂದನೆಯೂ ಉತ್ತಮವಾಗಿದೆ.ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಗ್ರಹಗಳನ್ನ ತಯಾರಿಸಿ ಕೊಡುವ ಕಲಾವಿದ ಶಿವಕುಮಾರ್ ಗೆ ಒಂದು ಥ್ಯಾಕ್ಸ್ ಹೇಳೋಣ...

Комментарии •