Narayana Krishna | Raichur Sheshagiri Das | Sripada Vitthala Dasarapada | kannada Devotional |

Поделиться
HTML-код
  • Опубликовано: 1 июл 2024
  • #music #kannadadevotionalsongs #devotionalsongs #song #bhaktigeethegalu #kannadadevotionalsongs #sheshagiridasaru #rayachuru #Udupikrishna #narayana
    Narayana Krishna...
    Lyrics : Sripada Vitthala Dasaru
    Music and Rendition : Raichur Sheshagiri Das
    ---------------------------------------------------------------------------
    ನಿನ್ನ ಗುಣಗಾನವೆನ್ನ ಕಿವಿಗೆ ಕೇಳಿಸದು ಕೃಷ್ಣ l
    ನಾನು ಮೊರೆಯಿಡುವುದು ನಿನಗೆ ಕೇಳಿಸದೆ ಕೃಷ್ಣ
    ಎನ್ನ ಕರ್ಮದಿಂದಾಗಿ ಕಿವುಡದು ಸಹಜ l
    ನೀ ಎನಗೆ ಆಸರೆಯ ನೀಡೆಯಾ ಕೃಷ್ಣ
    ನಾರಾಯಣ ಕೃಷ್ಣ ನಾರಾಯಣ
    ಎನ್ನ ಕಣ್ಣುಗಳೆರಡು ಕುರುಡಾದಾವು ಕೇಳು|
    ಎನ್ನ ನೀ ನೋಡದಿಹ ಕಾರಣವ ಪೇಳು|
    ನನ್ನ ಹೊರಗಣ್ಣು ನಿನ್ನ ನೋಡಲಿಲ್ಲ ಅನುಕ್ಷಣ|
    ಎನ್ನ ಒಳಗಣ್ಣು ತೆರೆಸಿ ಕಾಪಾಡು ಕೃಷ್ಣ
    ನಾರಾಯಣ ಕೃಷ್ಣ ನಾರಾಯಣ
    ನಿನ್ನ ಶಾಲಗ್ರಾಮವ ಸ್ಪರ್ಶಿಸಲೆಯಿಲ್ಲ l
    ಎನ್ನ ಗೃಹ ಸತಿ ಸುತರ ಮೋಹವನು ಬಿಡಲಿಲ್ಲ |
    ಬನ್ನ ಬಡುತಿಹೆ ನಾನು ದಿನ ದಿನ ಪ್ರತಿಕ್ಷಣ l
    ಘನ್ನ ಮಹಿಮನೇ ಎನ್ನ ಕಾಪಾಡು ಕೃಷ್ಣ
    ನಾರಾಯಣ ಕೃಷ್ಣ ನಾರಾಯಣ
    ಹರಿಯ ನೈವೇದ್ಯವ ಒಪ್ಪೊತ್ತು ಉಣಲಿಲ್ಲ l
    ಪರಿ ಪರಿಯ ನಾಲಿಗೆಯ ಚಪಲವಾ ಬಿಡಲಿಲ್ಲ |
    ತಿರಿ ತಿರಿದು ತಿರುಗಾಡಿ, ತಿಂದು ತೇಗಿದೆ ಅಶನ l
    ಸರಿ ಪಡಿಸಿ ಇಂಬಿಟ್ಟು ಸಲಹೆನ್ನ ಕೃಷ್ಣ
    ನಾರಾಯಣ ಕೃಷ್ಣ ನಾರಾಯಣ
    ಹರಿಯ ನಿರ್ಮಾಲ್ಯವ ನಾಸಿಕದಿ ಮೂಸಿಲ್ಲ|
    ಹರಿಯ ಪಾದೋದಕವ ಜಿಹ್ವೆ ಸವಿದಿಲ್ಲ|
    ಹರಿ ಮಂದಿರಕೆ ಒಮ್ಮೆಯೂ ಗಮನಿಸಲೆ ಇಲ್ಲ l
    ಹರಿಯೇ ನೀ ಮನ್ನಿಸಿ ಸಲಹೆನ್ನ ಕೃಷ್ಣ
    ನಾರಾಯಣ ಕೃಷ್ಣ ನಾರಾಯಣ
    ಇಂದ್ರಿಯಂಗಳ ಸುಖಕೆ ವ್ಯರ್ಥವಾಯಿತು ಜನುಮ l
    ಇಂದಿರಾಪತಿಯೆನದೆ ನಾನಾದೆ ಅಧಮ|
    ಇಂದಿರೇಶನೆ ಎನ್ನ ಅವಗುಣವ ಮನ್ನಿಸಿ l
    ಇಂದೆನ್ನ ಸಲಹಯ್ಯ ಶ್ರೀಪಾದವಿಠಲ
    ನಾರಾಯಣ ಕೃಷ್ಣ ನಾರಾಯಣ
    ********
    All rights reserved.
    © & ℗ Copyright & Produced by : Raichur Sheshagiri Das
    Published by : Raichur Sheshagiri Das
  • ВидеоклипыВидеоклипы

Комментарии • 27

  • @surekhamulgund4544
    @surekhamulgund4544 День назад +1

    ಅರ್ಥಗರ್ಭಿತವಾದ ಈ ಸುಂದರ ರಚನೆ ಮತ್ತು ಅದಕ್ಕೆ ರಾಗ ಸಂಯೋಜಿಸಿ ಆ ಕೃತಿಗೆ ಒಂದು ಧನ್ಯತೆಯನ್ನು ತಂದು ಕೊಟ್ಟಂತಹ ತಮಗೆ ಹೃತ್ಪೂರ್ವಕ ಧನ್ಯವಾದಗಳು

  • @prasannakumar7372
    @prasannakumar7372 2 дня назад

    ಏಕಾದಶಿ ದಿವಸ ಎಂತಹ ಅದ್ಭುತ ಹಾಡು ಸ್ವಾಮಿ ಕೇಳುವ ನಾವೇ ಧನ್ಯರು
    🌷🌷🌷ಧನ್ಯವಾದಗಳು ಸ್ವಾಮಿ 🙏

  • @vanikulkarni5315
    @vanikulkarni5315 2 дня назад

    ಇಂದು ಹರಿದಿನ ಸುಮಧುರವಾದ ಕಂಠದಿಂದ ಹರಿಯ ಸ್ಮರಣೆ ಕೇಳಿ ಮನ ತುಂಬಿತು ಧನ್ಯವಾದಗಳು ಗುರುಗಳೇ🎉🙏🙏

  • @bharathisangam2505
    @bharathisangam2505 2 дня назад

    ಸುಂದರ ಗಾಯನ 🙏🙏
    ಹರೇಶ್ರೀನಿವಾಸ

  • @siriprabhasiriprabha4694
    @siriprabhasiriprabha4694 2 дня назад

    ಜೈ ಶ್ರೀ ಕೃಷ್ಣ ಅದ್ಭುತವಾದ ಸಾಹಿತ್ಯ ನಿಮ್ಮ ಧ್ವನಿಯಲ್ಲಿ ಕೇಳುವುದು ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼🙏🏼💓

  • @sujathaananthapadmanabhan5805
    @sujathaananthapadmanabhan5805 2 дня назад +1

    Super meaningful song

  • @manonmani-fi4wu
    @manonmani-fi4wu 2 дня назад

    ಭಕ್ತಿಪೂರ್ವಕ ಗಾಯನ ನಮ್ಮನ್ನು ತನ್ಮಯವಾಗಿಸುತ್ತದೆ.

  • @sriraghavendrasangeethasev2328
    @sriraghavendrasangeethasev2328 2 дня назад

    ಹರೇ ಶ್ರೀ ನಿವಾಸ ನಿಮ್ಮ ಗಾಯನದಲ್ಲಿ ಒಂದು ಭಕ್ತಿಯ ಚೈತನ್ಯ ಇದೆ ಆಭಿಂದನೆ ಸರ್.

  • @ramachandradixitdixit4175
    @ramachandradixitdixit4175 2 дня назад

    ನಿಮ್ಮ್‌ ದ್ವನಿ ಕೆಳುವದೆ ನಮಗೆ ಹಬ್ಬ ಸರ್...

  • @trivenikp1225
    @trivenikp1225 2 дня назад

    ಮಧುರವಾದ ಹಾಡು 👌👌🙏🙏

  • @gururajarao1945
    @gururajarao1945 День назад

    Very nice devotional song

  • @srigururajabhajanamandalir7551
    @srigururajabhajanamandalir7551 2 дня назад

    🙏🏻devine singing Sir 🙏🏻👍🏻👌🏻👌🏻👌🏻👌🏻👍🏻

  • @ashwathacharyakulkarni1814
    @ashwathacharyakulkarni1814 День назад

    Excellent.singing dasre 👌👌🙏

  • @tatwaum9237
    @tatwaum9237 2 дня назад

    ಬಹಳ ಅದ್ಭುತ

  • @vanisree1052
    @vanisree1052 День назад

    Super 🙏🙏

  • @lakshmiaralikatti8171
    @lakshmiaralikatti8171 2 дня назад +1

    👌👌🙏

  • @umagodakhindi3815
    @umagodakhindi3815 2 дня назад

    Very nice singing sir

  • @sujathaananthapadmanabhan5805
    @sujathaananthapadmanabhan5805 2 дня назад

    Heart touching song

  • @sujathaananthapadmanabhan5805
    @sujathaananthapadmanabhan5805 2 дня назад

    Dhanyavadagalu Dassare

  • @PraveenKumar-ow8uz
    @PraveenKumar-ow8uz 2 дня назад

    1st view

  • @indunrao-mg3oi
    @indunrao-mg3oi День назад

    🙏🙏

  • @mukundmg4208
    @mukundmg4208 День назад

    👌👌🙏🙏

  • @sujathaananthapadmanabhan5805
    @sujathaananthapadmanabhan5805 2 дня назад

    😢

  • @vlnprasad2510
    @vlnprasad2510 2 дня назад

    Pl english lyrics

  • @sujathaananthapadmanabhan5805
    @sujathaananthapadmanabhan5805 2 дня назад

    Super meaningful song