LAKSHMI KANNADA SHORT FILM /PADMAJA RAO/ NALINI PUROHIT/ ABHIJIT PUROHIT

Поделиться
HTML-код
  • Опубликовано: 31 дек 2024

Комментарии • 1,1 тыс.

  • @krishnaadabaddi8571
    @krishnaadabaddi8571 Месяц назад +8

    *ನಾ ಕಂಡ ಲಕ್ಷ್ಮೀ*
    ಒಂದು ಚಿತ್ರದ ಯಶಸ್ಸಿನ ಹಿಂದೆ ಕಲಾವಿದರ ಪಾತ್ರ ಎಷ್ಟು ಮುಖ್ಯವೋ, ಆ ಚಿತ್ರದ ಎಲ್ಲ ಪಾತ್ರಗಳನ್ನು ಹುಟ್ಟಿಸಿ...ಕಥೆ ಹೆಣೆದು...ಪರದೆ ಮೇಲೆ, ಬರೆದ ಕಥೆಗೆ ಜೀವ ತುಂಬುವ ನಿರ್ದೇಶಕನ ಪಾತ್ರವೂ ಅಷ್ಟೇ ಮುಖ್ಯ.
    ಲಕ್ಷ್ಮೀ ಒಂದು ಕಿರುಚಿತ್ರ ಅನ್ನೋದಕ್ಕಿಂತ ಅದೊಂದು ಸುಂದರ ಅನುಭವ ಎಂದರೆ ಅತಿಶಯೋಕ್ತಿ ಅಲ್ಲ. ಈ ಸುಂದರ ಅನುಭವದ ಕಾರಣೀಭೂತರಾದ ಅಭಿಜಿತ್ ಪುರೊಹಿತ್ ಅವರೆ, ನಿಮಗೆ ಅಸಂಖ್ಯ ಧನ್ಯವಾದ...!!
    ನಾನು ಈ ಕಿರುಚಿತ್ರವನ್ನು ತುಂಬ ಸೂಕ್ಷ್ಮವಾಗಿ ನೋಡಿದಿನಿ. ನೀವು ಚಿತ್ರದಲ್ಲಿ ನೀಡಿರೊ ಚಿಕ್ಕ ಪುಟ್ಟ ವಿವರಗಳು, ಈ ಚಿತ್ರವನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗಿದೆ.
    ಸಣ್ಣ ಸಣ್ಣ ವಿವರಗಳಿಗೆ ನೀವು ನೀಡಿದ ಗಮನವು ಅದ್ಭುತವಾಗಿದೆ. ಉದಾಹರಣೆಗೆ,
    ಆರಂಭದ ದೃಶ್ಯದಲ್ಲಿ ನಳಿನಿಯ ಚಿತ್ರಕಲೆ ಬಗ್ಗೆ ಪ್ರೇಕ್ಷಕರಿಗೆ ಪರಿಚಯಿಸಿದಿರಿ ಮತ್ತು ಕಥೆಯ ಅಂತ್ಯದಲ್ಲಿ ಅದಕ್ಕೆ ಒಂದು ಸೂಕ್ತ ಮುಕ್ತಾಯ ನೀಡಿದಿರಿ.
    ನಳಿನಿ ಆಕೆಯ ಮನೆ ಒಳಗೆ ಹೋಗೊವಾಗ, ಆಕೆ ಮೊಮ್ಮಗ ಗೋಲಿ ಆಡುವ ದೃಶ್ಯ ಕಾಣಿಸುತ್ತೆ, ಅವನಿದ್ದ ಸ್ಥಳವನ್ನು ಪ್ರೇಕ್ಷಕರಿಗೆ ತಿಳಿಸುವ ಸರಳ ಪರಿಕಲ್ಪನೆ, ಬಹಳ ಸೂಕ್ಷ್ಮವಾಗಿದೆ. ಈ ಪುಟ್ಟ ವಿವರ ಪ್ರೇಕ್ಷಕನಾದ ನನಗೆ ಅವಳ ಮೊಮ್ಮಗ ಎಲ್ಲಿಗೆ ಹೋದ ಎಂಬ ಗೊಂದಲ ಉಂಟು ಮಾಡಲಿಲ್ಲ.
    ತುಳಸಿಕಟ್ಟೆ ದೃಶ್ಯ ಬಂದಾಗ ನನಗೆ ಅಳುವೆ ತಡೆಯಲಾಗಲಿಲ್ಲ.
    ನಳಿನಿಯ ತಾಯಿಯೇ ಇಲ್ಲಿ ತುಳಸಿಕಟ್ಟೆ ಆಗಿರಬಹುದೆ ಅನಿಸಿತ್ತು (ನನಗನಿಸಿದ್ಧು). ಏಕೆಂದರೆ,
    ಆರಂಭದಲ್ಲಿ ತುಳಸಿ ಕಟ್ಟೆ ಹಳೆಯದಾಗಿ ಒಣಗಿದ ಕೊಂಬೆಗಳಿಂದ ಆವರಿಸಿ, ಮತ್ತು ದೀಪವಿಲ್ಲದ ಸ್ಥಿತಿಯಲ್ಲಿರುತ್ತೆ. ಅವಳ ಅಮ್ಮನೂ ಸಹ ಒಬ್ಬಳೆ ನಿರ್ಲಕ್ಷ್ಯಗೊಂಡು ಮುದಿ ಜೀವನ ನಡೆಸಿರುತ್ತಾಳೆ ಹಾಗಾಗಿ...
    ಆಮೇಲೆ ಅನಿಸಿದ್ದು ತುಳಸಿಕಟ್ಟೆ ನಳಿನಿಯ ಮನಸ್ಸಾಗಿರಬಹುದ ಅಂತ, ಏಕೆಂದರೆ ನಾನು ನನ್ನ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂಬ ನಳಿನಿಯ ಪಶ್ಚಾತ್ತಾಪವನ್ನು ಹಳೆಯದಾದ ತುಳಸಿಕಟ್ಟೆ ಪ್ರತಿಬಿಂಬಿಸುವಂತಿತ್ತು. ಆದರೆ ಅಂತ್ಯದಲ್ಲಿ, ಆಕೆ ತನ್ನ ತಾಯಿ ಯಾವತ್ತೂ ತನ್ನಿಂದ ನಿರ್ಲಕ್ಷ್ಯಗೊಂಡಿಲ್ಲ ಮತ್ತು ಅತೀ ತೃಪ್ತಿಯಿಂದ ಉಸಿರು ಬಿಟ್ಟಳು ಎಂಬುದು ಸ್ಪಷ್ಟವಾದಾಗ ತುಳಸಿಕಟ್ಟೆಯನ್ನು ಸ್ವಚ್ಛಗೊಳಿಸಿ ದೀಪವನ್ನು ಹಚ್ಚಿದ ದೃಶ್ಯವು ನಳಿನಿಯ ಮನಸ್ಸಿನ ಶಾಂತಿಯನ್ನು ಬಿಂಬಿಸುವಂತಿತ್ತು.
    ಇದೆಲ್ಲ ನನಗನಿಸಿದ್ಧು...ಇದನ್ನು ಬಿಟ್ಟು ತುಳಸಿ ಕಟ್ಟೆಯ ಬಗ್ಗೆ ಬೇರೆ ದೃಷ್ಟಿಕೋನ ನಿಮ್ಮಲ್ಲಿದ್ಧರೆ ದಯವಿಟ್ಟು ತಳಿಸಿ ಅಭಿಜಿತ್ ಅಣ್ಣ..!! @abhijitpurohit
    ಆಮೇಲೆ ಲಕ್ಷ್ಮೀ ಮಾತಾಡ್ತ ನಳಿನಿಗೆ ತೋರಿಸಿದ ಸೀರೆ, ಮತ್ತು ಅದೇ ಸೀರೆ ಕಂಬದ ಪೂಜೆಯಲ್ಲಿ ಕಾಣಿಸಿಕೊಂಡಿದ್ದು, ನಳಿನಿ ಲಕ್ಷ್ಮಿಗೆ ಹೂ ಮಾಲೆ ಕೊಡುವುದು ಮತ್ತು ಕೊನೇಲಿ ಅದೇ ಮಾಲೆ ಕಂಬದ ಮೇಲೆ ಕಾಣುವುದು-ಈ ಎಲ್ಲ ಸಣ್ಣ ಸಣ್ಣ ವಿವರಗಳು ಕಥೆಯನ್ನು ಇನ್ನೂ ಶಕ್ತಿಯುತವಾಗಿ ಕಟ್ಟಿಕೊಟ್ಟಿವೆ.
    ಸಾಮಾನ್ಯವಾಗಿ ಇಂತಹ ಸಣ್ಣ ಸಣ್ಣ ಅಂಶಗಳನ್ನು ಯಾರೂ ಗಮನಿಸಲ್ಲ, ಆದರೆ ನೀವು ಅದನ್ನು ತುಂಬ ಜವಾಬ್ದಾರಿಯಿಂದ ನಿರ್ವಹಿಸಿದ್ದು, ಈ ಸಿನಿಮಾಗೆ ವಿಭಿನ್ನತ್ವವನ್ನು ತಂದಿದೆ.
    ಇನ್ನು,
    ನಳಿನಿ ಲಕ್ಷ್ಮೀ ಜೊತೆ ಮಾತಾಡುತ್ತಿದ್ದ ಕ್ಷಣಗಳು ಬೇರೆಯೇ ಮಟ್ಟದಲ್ಲಿದ್ದವು. ಈ ದೃಶ್ಯಗಳು ನನಗೆ ಆಳವಾದ ತೃಪ್ತಿ ಕೊಟ್ಟಿದೆ. ಅಬ್ಬಾ!! ನಮ್ಮ ನಳಿನಿ ಮೇಲೆ ಅವರ ಅಮ್ಮನಿಗೇನೂ ಕೋಪ ಇಲ್ಲ ಅನ್ನೋ ನಿಟ್ಟುಸಿರು...ನೋಡುತ್ತ ನೋಡುತ್ತ ನಳಿನಿ ಲಕ್ಷ್ಮಿಯ ಜೊತೆ ಪ್ರೇಕ್ಷಕನಾಗೆ ನಾನು ಹರಟೆ ಹೊಡಿತಿದ್ಧೆ...!!
    ಲಕ್ಷ್ಮಿಯ ಪಾತ್ರ ಕಾಣಿಸಿದಾಗ, ಆಕೆಯನ್ನು ಮನೆಗೆ ಹೋಲಿಸಿರಬಹುದು, ನಳಿನಿ ಮನೆಯ ಜೊತೆನೇ ಮಾತಾಡುತ್ತಿರಬಹುದು ಎಂದು ಮೊದಲಿಗೆ ಊಹಿಸಿದೆ. ಆದರೆ ನೀವು ಅದನ್ನು ಮತ್ತೊಂದು ಭಾವನಾತ್ಮಕ ಹಂತಕ್ಕೆ ತೆಗೆದುಕೊಂಡು ಲಕ್ಷ್ಮೀ ಕಂಬ ಎಂಬ ರೀತಿಯಲ್ಲಿ ತೋರಿಸಿದ್ದು ನನಗೆ ಕಣ್ಣೀರು ತರಿಸಿತು. ಇದು ನನಗೆ ತುಂಬಾ ಹತ್ತಿರದ ಸಂಬಂಧದಂತೆ ಅನಿಸಿತು, ಏಕೆಂದರೆ ನಮ್ಮ ಮನೆಯಲ್ಲೂ ಲಕ್ಷ್ಮೀ ಕಂಬವಿದೆ. ನಮ್ಮ ಲಕ್ಷ್ಮೀ ಕೂಡ ನಮ್ಮನ್ನು ಕಾಯುತ್ತಾಳೆ ಮತ್ತು ನಮ್ಮ ಕುಟುಂಬವನ್ನು ನೋಡುತ್ತಿರಬಹುದು ಅನಿಸಿತು. ನನಗೆ ಈ ಧೈರ್ಯವನ್ನು & ಈ ಭರವಸೆಯನ್ನು ಕೊಟ್ಟಿದ್ದು "ಲಕ್ಷ್ಮೀ" . ಈ ಭಾವನೆ ಹುಟ್ಟುವಂತೆ ಮಾಡಿದ ನಿಮಗೆ ಮತ್ತೊಮ್ಮೆ ಅನಂತ ಧನ್ಯವಾದಗಳು.
    ಪಾತ್ರಗಳ ಅಭಿನಯ ತುಂಬ ಚೆನ್ನಾಗಿತ್ತು ಅಂತ ಹೇಳಿದರೆ ತಪ್ಪಾಗ್ಬೋದೇನೊ...!! ಯಾಕಂದ್ರೆ ಎಲ್ಲರೂ ತುಂಬ ಸಹಜವಾಗಿ ಮೂಡಿಬಂದಿದ್ಧಾರೆ. ಆಮೇಲೆ
    ನಮ್ಮ ನಳಿನಿ ಮತ್ತು ಲಕ್ಷ್ಮೀ, ಬರೀ ಪಾತ್ರಗಳು ಅಂತ ಮನಸ್ಸು ಒಪ್ಕೊಳ್ಳ್ತಿಲ್ಲ....
    ಇನ್ನು ಸಂಗೀತ ಮತ್ತು ಹಿನ್ನಲೆಯಲ್ಲಿ ಬರುವ ಹಾಡುಗಳು, ಮನಸ್ಸನ್ನು ನೇವರಿಸಿದಂತಿತ್ತು...ತುಂಬ ಸೂಕ್ತವಾಗಿ ಇತ್ತು. ಅಮ್ಮ ಹಚ್ಚಿದೊಂದು ಹಣತೆ...ಈಗಲೂ ಕಣ್ಣು ಒದ್ದೆಮಾಡುತ್ತೆ.
    ಈ ಸಿನಿಮಾ ಪರಿಪೂರ್ಣ ಕಲೆ, ಅದ್ಭುತ ನಿರ್ದೇಶನ ಮತ್ತು ಅಚ್ಚುಕಟ್ಟಾದ ಛಾಯಾಗ್ರಹಣಕ್ಕೆ ಒಳ್ಳೆಯ ಮಾದರಿ. ಇಂತಹ ಆತ್ಮೀಯ ಅನುಭವಕ್ಕಾಗಿ ಧನ್ಯವಾದಗಳು! 🙏
    ಮನಸಾರೆ ಅತ್ತು ತುಂಬ ದಿನ ಆಗೋಗಿತ್ತು...
    ಒಳಗೆ ಮುಚ್ಚಿಟ್ಟಿದ್ದ ಭಾವನೆಗಳ ತಲೆ ಮೇಲೆ "ಲಕ್ಷ್ಮೀ" ನೇ ಕೈ ಸವರಿ
    "ಏಯ್ ಹುಚ್ಚಪ್ಪ ನಾ ಇದ್ದೀನಿಲ್ಲೋ..!! ಇರ್ಲಿ ಅತ್ತಬಿಡು"
    ಅಂತ ಅಂದಹಾಗಿತ್ತು ಈ ಕಿರುಚಿತ್ರ...😊
    - ಕೃಷ್ಣ ಅಡಬಡ್ಡಿ✍️

    • @abhikamalhassan
      @abhikamalhassan  Месяц назад +1

      ತುಂಬು ಹೃದಯದ ಧನ್ಯವಾದಗಳು ಗೆಳೆಯ ❤️. ಇಷ್ಟು ವಿವರವಾಗಿ ಹಾಗು ಸೂಕ್ಷ್ಮವಾಗಿ ನೀ ನೋಡಿದ್ದು ಹಾಗು ಅದನ್ನ ಆನಂದಿಸಿ ಬರೆದದ್ದು ತುಂಬಾ ಖುಷಿ ಕೊಡ್ತು ❤️.. ನೀ ತುಳಸಿ ಕಟ್ಟೆ ಬಗ್ಗೆ ಅನ್ಕೊಂಡಿದ್ದ ದೃಷ್ಟಿಕೋನ ಕೂಡ ಸುಂದರವಾಗಿದೆ 👌👌👌

    • @veenakolkar5120
      @veenakolkar5120 22 дня назад

    • @ratipati2007
      @ratipati2007 13 дней назад

      Everybody's contribution is great and very much needed. More than that, since the main theme is about our JaganmAta Lakshmi, Her blessing made this very successful movie. When Maha Lakshmi is pleased, her Vallabha our lord Narayana will definitely be pleased.

    • @channabasammaa7852
      @channabasammaa7852 11 дней назад

      Wonderful movie, 🙏

    • @pradeepgowda7962
      @pradeepgowda7962 День назад

      ಎಷ್ಟು ಅಚ್ಚುಕಟ್ಟಾಗಿ ವಿವರಣೆ ನೀಡಿದಿರ ಸರ್ ಸೂಪರ್ 🙏

  • @krishnaadabaddi8571
    @krishnaadabaddi8571 Месяц назад +4

    ಮನಸಾರೆ ಅತ್ತು ತುಂಬ ದಿನ ಆಗೋಗಿತ್ತು...
    ಒಳಗೆ ಮುಚ್ಚಿಟ್ಟಿದ್ದ ಭಾವನೆಗಳ ತಲೆ ಮೇಲೆ ಕೈ ಸವರಿದಂತೆ ಇತ್ತು ಈ ಕಿರುಚಿತ್ರ...😊
    ಧನ್ಯವಾದ..!!

    • @abhikamalhassan
      @abhikamalhassan  Месяц назад +1

      Thanks❤️. Do share the film link with your family and friends🙂

    • @Rehana2028
      @Rehana2028 16 дней назад

      Me too...

  • @bluealien6109
    @bluealien6109 Месяц назад +3

    ಹೃದಯ ಸ್ಪರ್ಶಿ ಕಿರುಚಿತ್ರ 👌🏻🙏🏻👏🏻

  • @kavyabhat5740
    @kavyabhat5740 Месяц назад +38

    ವ್ಹಾ!! ಎಂತಾ ಅದ್ಭುತ ಕಿರುಚಿತ್ರ... ಕಣ್ಣಾಲಿಗಳು ತುಂಬಿದ್ದಲ್ಲದೇ, ಕೊನೆ ಕೊನೆಗೆ ಎದೆ ಬಿಗಿದು ಉಸಿರು ಸಿಕ್ಕಿದಷ್ಟು ಭಾವೋದ್ವೇಗ ಆಯ್ತು! ಭಾವನೆಗಳನ್ನು ತುಂಬಾ ಚೆನ್ನಾಗಿ ಕಟ್ಟಿ ಕೊಟ್ಟಿದ್ದೀರಿ... ❤🎉

    • @abhikamalhassan
      @abhikamalhassan  Месяц назад +2

      Thank you❤️. Do share the film link with your friends and groups so that it reaches more people

    • @sandhyakini7631
      @sandhyakini7631 Месяц назад +1

      ಅಮಿತಾ ನನ್ನ ಮಾಮನ ಮಗಳು, ಅವಳ ಸಂಗೀತ ಪ್ರೇಮ ಅದ್ಭುತವಾಗಿ ಬೆಳಗಲಿ ❤

  • @darshitkanchan5
    @darshitkanchan5 2 месяца назад +15

    I really had tears while watching this, can't express enough of the lovely feel! Thank you for this art ❤️

    • @abhikamalhassan
      @abhikamalhassan  2 месяца назад +1

      Thank you so much❤️❤️❤️.. Do share to others and help the film reach more people🙂

  • @sharadak4193
    @sharadak4193 Месяц назад +1

    A wonderful film. Tradition and beautiful rituals in North Karnataka families.❤
    We should take oth to protect this and carry this to the next generation.🎉

    • @abhikamalhassan
      @abhikamalhassan  Месяц назад

      Thanks a lot🙂. Do share the film link with your contacts

  • @mrunalaraghavendra3466
    @mrunalaraghavendra3466 Месяц назад +4

    ಮನ ಮುಟ್ಟುವ ಚಿತ್ರಣ, ಬಹಳ ಸಂತೋಷ ಆಯಿತು. ಭಾವನೆ ವ್ಯಕ್ತಪಡಿಸಲು ಪದಗಳು ಸಿಗುತ್ತಿಲ್ಲ 👌👌🙏🙏🙏🙏

    • @abhikamalhassan
      @abhikamalhassan  Месяц назад +1

      Thank you for watching❤️ do share the film link with your contacts

  • @sanathpoornabhandarkar55
    @sanathpoornabhandarkar55 Месяц назад +1

    No words to explain. Just tears are rolling out. Superb acting and direction.

    • @abhikamalhassan
      @abhikamalhassan  Месяц назад

      Thank you so much 🙂. Do share the film link with your contacts

  • @nagamanishrigiri984
    @nagamanishrigiri984 2 месяца назад +46

    Super, even I went one of the village where we lived for only 4 years when I was 12. Went to one of friends house very similar to the shown in the movie. Met their daughter, talked whole heartedly for an hour remembered everything after 28 years, showed my place of play to my children and husband felt the kadapa kallu, touches the photos who is not alive, took the phone nos, exchanged news with each other, talked about other persons in the village who was known to me, it was truly memorable and worth more than a foreign trip.

    • @shamalas422
      @shamalas422 2 месяца назад +5

      Foreign trip has become a fashion now a days as if they don't have any places in india.

    • @abhikamalhassan
      @abhikamalhassan  2 месяца назад +2

      Im happy you could relate to the film so much❤️..Do share to others and help the film reach more people🙂

  • @MANJUJMJ
    @MANJUJMJ 25 дней назад +1

    Super Story with excellent narration. Super related songs for the scene. Many mid 40's people will relate the story for their parents and relatives.

    • @abhikamalhassan
      @abhikamalhassan  25 дней назад

      Thanks Manju❤️. Do share the film link with your family and friends 🙂

  • @bharatipatwari8990
    @bharatipatwari8990 2 месяца назад +10

    ಭಾಳ ಚಲೋ ಅದ.ತವರುಮನೆ ನೆನಪು ಹೋಗೋದೆ ಇಲ್ಲ...... ಮತ್ತೆ ಮತ್ತೆ ಬರತಾ ...... ಮನಸ್ಸು ಮುದಗೊಳುತ್ತೆ......

    • @abhikamalhassan
      @abhikamalhassan  2 месяца назад

      Thank you so much❤️❤️❤️.. Do share to others and help the film reach more people🙂

  • @raghavendrad8479
    @raghavendrad8479 Месяц назад +1

    Very beautiful story..and the character played by Lakshmi is superb

    • @abhikamalhassan
      @abhikamalhassan  Месяц назад

      Thank you❤️. Do share the film link with your contacts

  • @rajannav8540
    @rajannav8540 2 месяца назад +18

    ಇದು ಕಿರುಚಿತ್ರವಾಗಿದ್ದರೂ ಕೂಡ ಹ್ರೃದಯಸ್ಪರ್ಶಿ ಚಿತ್ರವಾಗಿ ಮೂಡಿ ಬಂದಿದೆ, ಅಭಿಜಿತ್ ಮತ್ತು ಈ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರುಗಳಿಗೆ ನನ್ನ ಅಭಿನಂದನೆಗಳು. ಇದೇ ರೀತಿ ಇನ್ನೂ ಹೆಚ್ಚಿನ ಸದಭಿರುಚಿಯ ಚಿತ್ರಗಳು ಮೂಡಿಬರಲಿ. 🙏👌👍

    • @abhikamalhassan
      @abhikamalhassan  2 месяца назад

      Thank you so much❤️❤️❤️.. Do share to others and help the film reach more people🙂

    • @veenamaheshchandra3916
      @veenamaheshchandra3916 Месяц назад

      ಸುಂದರವಾದ ಹೃದಯಸ್ಪರ್ಶಿ ಚಿತ್ರ.❤👌
      ನನ್ನ ಅಮ್ಮನ ನೆನಪಿನಲ್ಲಿ ಮನದಲ್ಲಿ ಮುಚ್ಚಿಟ್ಟ ಭಾವನೆಗಳೆಲ್ಲಾ ಕಣ್ಣೀರಿನಲ್ಲಿ ಹೊರಬಂದು ಮನಸ್ಸು ಹಗುರವಾಯ್ತು .
      ಈ ಚಿತ್ರತಂಡದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು.🙏

    • @abhikamalhassan
      @abhikamalhassan  Месяц назад

      ​@@veenamaheshchandra3916Thank you so much❤️❤️❤️.. Do share to others and help the film reach more people🙂

  • @soujanyarai9082
    @soujanyarai9082 Месяц назад +1

    Waw beautiful movie❤all the best abijith purohit

  • @anupamasachar8476
    @anupamasachar8476 Месяц назад +8

    Very touchy story.... this is the story of every woman,her feelings, guilts, her desires, sacrifices, her passions, interests and mainly her interaction with Mahathayi, and the satisfaction she gets after that, is very nicely depicted.... thank you for giving us such a beautiful movie with so many social values..... looking forward for more short films with good messages

    • @abhikamalhassan
      @abhikamalhassan  Месяц назад

      Thanl you mam❤️. Do share the film link with your contacts

  • @andvyas
    @andvyas Месяц назад +2

    Very emotional narration of our culture and traditions
    Well done team! Super photography and music

    • @abhikamalhassan
      @abhikamalhassan  Месяц назад

      Thank you❤️. Do share the film link with your friends and groups so that it reaches more people

  • @basavarajurraju998
    @basavarajurraju998 2 месяца назад +10

    ನಾವು ಏನೂ ಮರೆತರೂ ನಮ್ಮ ಕಾಲದ ನೆನಪುಗಳೇ ಚಂದ ಅದ್ರೆ ಅದನ್ನ ಅನುಭವಿಸೋ ಮನಸೂ ಇರಬೇಕಷ್ಟೇ 😢❤, ಒಳ್ಳೆ ನೆನಪು..

  • @bvrajalakshmi123
    @bvrajalakshmi123 Месяц назад +1

    Mystic music takes us to another world.😊 I too travelled in time to my childhood with Nalini and was immersed in the memories. Well made movie.😍😍👍👍☺️

    • @abhikamalhassan
      @abhikamalhassan  Месяц назад

      Thank you❤️. Do share the film link with your contacts

  • @vandanakulkarni7597
    @vandanakulkarni7597 Месяц назад +9

    ಕಥೆ ತುಂಬಾ ಇಷ್ಟ ಆಯಿತು ಅಭಿಜಿತ್ ಅವರೇ ನಮ್ಮ ಸಂಪ್ರದಾಯ ಈ ಚಿತ್ರದ ಮೂಲಕ ಬಹಳ ಅರ್ಥಪೂರ್ಣವಾಗಿ ಚಿತ್ರೈಸಿದ್ದಿರಿ ಲಕ್ಷ್ಮಿ ಕಂಬದ ಮಹತ್ವ ತಿಳಿಸಿದ್ದಿರಿ ಹಳೆಯ ಮತ್ತು ತವರು ನೆನಪಿಸಿದ್ದಿರಿ ತುಂಬಾ ಮನ ಮುಟ್ಟಿತು 🙏🙏🙏💐💐 ನಿಮ್ಮ ಪಯಣವು ಹೀಗೆ ಮುಂದುವರೆಯಲಿ

    • @abhikamalhassan
      @abhikamalhassan  Месяц назад

      Thank you ❤️. Plz do share and help the film reach more people

  • @pushpalathaj4161
    @pushpalathaj4161 Месяц назад +1

    ಅದ್ಭುತವಾದ ಕಿರುಚಿತ್ರ.... ಭಾವಗಳ ಸುಲಲಿತ ಹರಿವು....

    • @abhikamalhassan
      @abhikamalhassan  Месяц назад

      Thanks❤️. Do share film link with your contacts

  • @shamalaramesh9555
    @shamalaramesh9555 Месяц назад +10

    ಸಂತೋಷ, ದುಃಖ ಗಳಿಂದ ಕಣ್ಣೀರು ತರಿಸಿದ ಈ ಕಿರು ಚಿತ್ರ ಮನ ಮುಟ್ಟಿದೆ,ಧನ್ಯವಾದಗಳು,🙏🙏🙏🙏🙏🙏

    • @abhikamalhassan
      @abhikamalhassan  Месяц назад +1

      Thank you❤️. Do share the film link with your friends and groups so that it reaches more people

    • @lakshmik29372
      @lakshmik29372 Месяц назад +1

      I do notknow kannada. But language is not a barriet. I felt emotional. Took me to my childhood iam eighty years old

  • @shobhalaxani8160
    @shobhalaxani8160 19 дней назад

    What a beautiful short film! The acting and direction were superb. Nalini took me from America to my small village in North Karnataka. Tears streamed down my face; it was so heart-touching.

    • @abhikamalhassan
      @abhikamalhassan  19 дней назад

      Ur comment made my day mam❤️. Thank you so much 🙏. Do share the film link with your contacts

  • @vmala6528
    @vmala6528 Месяц назад +11

    ಅಭಿಜಿತ್ ಅವರೇ ಕಥೆ ಬಹಳ ಸುಂದರವಾಗಿದೆ . ನನ್ನ ತಾಯಿ ನೆನಪುಗಳ ಪರ್ವತವೇ ಮನ ತುಂಬಿ... ಕಣ್ಣು ತುಂಬಿ ಬಂತು 🙏

    • @abhikamalhassan
      @abhikamalhassan  Месяц назад

      Thanks a lot ❤. Plz do share the film with others and help the film reach more people

    • @vmala6528
      @vmala6528 Месяц назад

      @abhikamalhassan ಹೇಳುವ ಅಗತ್ಯ ಇಲ್ಲ ನಾನು ನೋಡಿದ ಕೂಡಲೇ ಶೇರ್ ಮಾಡಿದ್ದೀನಿ.

  • @sujatashetty8805
    @sujatashetty8805 Месяц назад +1

    Such a beautiful movie, so emotional, so different, so divine.🙏🏼

    • @abhikamalhassan
      @abhikamalhassan  Месяц назад

      Thank you ❤️. Do share the film link with your contacts

  • @roopinilifestyle5968
    @roopinilifestyle5968 2 месяца назад +6

    Wonderful movie...I am remebering my mother's sacrifices seeing this short movie....

    • @abhikamalhassan
      @abhikamalhassan  2 месяца назад +1

      Thanks a lot Roopini❤️. If it touched you.. I feel thats the films victory.. Plz do Share on ur social media and help the film reach more

  • @sudhamani5343
    @sudhamani5343 Месяц назад +1

    ತುಂಬಾ ಚೆನ್ನಾಗಿ ಮೂಡಿಬಂದಿದೆ,🎉ಅಭಿನಂದನೆಗಳು🎉

    • @abhikamalhassan
      @abhikamalhassan  Месяц назад

      Thank you so much ❤️. Plz do share the film link with ur contacts

  • @vishnucoolguy1722
    @vishnucoolguy1722 Месяц назад +7

    What a short film, I really loved it, Esto varshadinda albeku andru alu bartiddila, idu nodid mele namma hale mani, Lakshmi Kamba Ella nenapagi Kanniru tana Bandhu, hatts off.

    • @abhikamalhassan
      @abhikamalhassan  Месяц назад

      Im happy my film touched u so much🙏.Thank you❤️. Do share the film link with your friends and groups so that it reaches more people

  • @sheelak05
    @sheelak05 27 дней назад +1

    Super sir, ur imagination of lakshmi in the story.. Should be there in everyone's life.. So everyone cleared their sarrows with that.. And lived happily.. Tq😊

    • @abhikamalhassan
      @abhikamalhassan  27 дней назад

      Thank you❤️. Do share film link with your family and friends

  • @Hakunamatata56217
    @Hakunamatata56217 Месяц назад +8

    Thumba thumba hrudaya thattuva sundara chitrana ...couldnt stop crying throughout,tears of sorrow and joy ... beautiful...thank you

    • @abhikamalhassan
      @abhikamalhassan  Месяц назад

      Thank you ❤️. Plz do share and help the film reach more people

  • @hairyporter6544
    @hairyporter6544 19 дней назад

    We should encourage more directors like abhijit.. Kannada film industry should support directors like him..

    • @abhikamalhassan
      @abhikamalhassan  19 дней назад

      Thank you brother❤️. Means a lot. Do share the film link with your contacts

  • @vanihegde8040
    @vanihegde8040 Месяц назад +4

    ನೈಜವಾಗಿ ಮತ್ತು ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ ಹೆಣ್ಣಿಗೆ ತವರಿನ ಮೇಲೆ ಇರುವ ಆಸೆ ಮತ್ತು ಮತ್ತೆ ಮಗುವಾಗುವ ಮನಸ್ಸು ಭಾವನೆಗಳ ಹದವಾದ ಹಂದರ. ಚಂದದ ಕಲ್ಪನೆ👌

    • @abhikamalhassan
      @abhikamalhassan  Месяц назад

      Thank you❤️. Do share the film link with your friends and groups so that it reaches more people

  • @prahladjahagirdar3728
    @prahladjahagirdar3728 Месяц назад +2

    ಅದ್ಭುತ ಚಿತ್ರ! ಕಿರುಚಿತ್ರವನ್ನು ಒಮ್ಮೆ ನೋಡಿ...ನಿಮ್ಮ ಹೃದಯದ ಮೂಲೆಯನ್ನು ಮುಟ್ಟುವುದು ಖಚಿತ....ನಿಮ್ಮ ಮುಂಬರುವ ಚಿತ್ರಗಳಿಗೆ ಆಲ್ ದಿ ಬೆಸ್ಟ್.... ಕನ್ನಡ ಇಂಡಸ್ಟ್ರಿಯಲ್ಲಿ ಇಂತಹ ಚಿತ್ರಗಳಿಗಾಗಿ ನಾವು ಕಾಯುತ್ತಿದ್ದೇವೆ

    • @abhikamalhassan
      @abhikamalhassan  Месяц назад

      Thank you❤️. Do share the film link with your friends and relatives

  • @pallavisrinath6659
    @pallavisrinath6659 Месяц назад +5

    ಒಂದು ಒಳ್ಳೆಯ ಕಿರು ಚಿತ್ರ👌👌 ಇನ್ನು ಮುಂದೆ ಹೀಗೆ ಒಳ್ಳೆಯ ಚಿತ್ರ ಬರಲಿ.

    • @abhikamalhassan
      @abhikamalhassan  Месяц назад

      Thanks a lot ❤. Plz do share the film with others and help the film reach more people

  • @bharathb8822
    @bharathb8822 Месяц назад +2

    ಅದ್ಭುತವಾಗಿದೆ..... ನನ್ನ ಅಮ್ಮನ ಹೆಸರು ಕೂಡ ನಳಿನ, ನನ್ನ ಅಜ್ಜಿ ಹೆಸರು ಗಿರಿಜಾ ♥️ ಈ ಕಿರುಚಿತ್ರ ನೋಡಿದ ಮೇಲೆ ಹೇಳ್ಬೇಕಾಗಿರೋ ವಿಷ್ಯ ಬೇಕಾದಷ್ಟು ಇದ್ರೂ ಹೇಳೋಕೆ ಆಗ್ದೇ ಮನ್ಸಲ್ಲೇ ಇಟ್ಟ್ಕೊಬೇಕು ಅನ್ನಿಸ್ತಿದೆ.... ಈ ಸುಂದರ ಅನುಭವ ಕೊಟ್ಟ ನಿಮಗೆ ಅನಂತ ಅನಂತ ನಮನಗಳು 🙏🙏😇

    • @abhikamalhassan
      @abhikamalhassan  Месяц назад +2

      Nim taayi hesru nan taayi hesru onde anta tilidu khushi aytu🙂.Thank you❤️. Do share the film link with your friends and groups so that it reaches more people

  • @mamathargowda6927
    @mamathargowda6927 Месяц назад +3

    🙏🏻🙏🏻 ತುಂಬಾ ಖುಷಿ ಯಾಯಿತು.,.. ಸಧಾ ಪೂಜಿಸುವರಿಗೆ ತಲೆ ಕಾಯಿತಾಳೆ ಅನ್ನುವುದು ಮನದಟ್ಟು ಮಾಡಿದಾಗಿದೆ... 🌹🌹🌹💞💞

    • @abhikamalhassan
      @abhikamalhassan  Месяц назад

      ತುಂಬಾ ಥ್ಯಾಂಕ್ಸ್ ಮೇಡಂ ❤️.. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ.. ಇನ್ನು ಹೆಚ್ಚು ಜನಕ್ಕೆ ಚಿತ್ರವಣ್ಣ ತಲುಪಿಸುವ ಆಸೆ ❤

  • @KarnaJagadish
    @KarnaJagadish Месяц назад +1

    ಅದ್ಭುತ, ಕಣ್ಣುಗಳಿಗೆ ಅರಿವಿಲ್ಲದೆ ಕಣ್ಣುಗಳಲ್ಲಿ ನೀರು ಬಂತು. ವಾವ್❤❤❤❤❤❤❤❤🙏

  • @Bharathi-joshi
    @Bharathi-joshi Месяц назад +4

    ನಮ್ಮ ತವರೂರಿನ ಮನೆಯಲ್ಲೂ ಒಂದು ಲಕ್ಷ್ಮಿ ಕಂಬ ಇದೆ. ನಾವು ಅದಕ್ಕೆ ಪೂಜೆ ಮಾಡ್ತಿವಿ. ಸೀರೆನೂ ಉಡುಸ್ತಿವಿ.
    ಇದರ ಮೇಲೆ ನೀವು ಚಿತ್ರ ಮಾಡಿದ್ದು ತುಂಬಾ ವಿಭಿನ್ನ ಹಾಗೂ ಮೆಚ್ಚುವಂತಹದು. ತುಂಬಾ ಚೆನ್ನಾಗಿದೆ ಕಿರುಚಿತ್ರ 👌👌👌

    • @veenaumesh3879
      @veenaumesh3879 Месяц назад

      Abhijith purohith....team ಗೆ 🎉
      ಎದೆಗಡಲಿನಲ್ಲಿ ಎದ್ದ ಮಧುರ ಸ್ಮೃತಿಗಳ ಮಧುರ ತರಂಗಗಳು ಹಿತವಾಗಿ ಹರಿದಂತೆ ಭಾಸ.... ತವರೆಂದರೆ ಅದೊಂದು ಮಮತೆಯ ದೊಡ್ಡ ಭಂಡಾರ... ನೋಡುತ್ತಾ ನೋಡುತ್ತಾ ಆ ಪಾತ್ರಗಳೇ ನಾವೇನೋ ಅನಿಸುವಷ್ಟು ಹೃದಯಕ್ಕೆ ಹತ್ತಿರ......

    • @abhikamalhassan
      @abhikamalhassan  Месяц назад

      Thanks a lot ❤. Please do share with your contacts and help the film reach more people

    • @abhikamalhassan
      @abhikamalhassan  Месяц назад

      ​@@veenaumesh3879tumba chandada saalu bardidiri❤.. Thanks

  • @anamikaananya1134
    @anamikaananya1134 Месяц назад +1

    Heart touching and beautifully depicted there no words to Express my appreciation to this short film. Thanks to one and all who have participated in this short film ❤

    • @abhikamalhassan
      @abhikamalhassan  Месяц назад

      Thank you❤️. Do share film link with ur contacts

  • @jyothisollapur3353
    @jyothisollapur3353 Месяц назад +4

    ಕಣ್ಣು ತುಂಬಿ ಬಂದವು, ಮನಸ್ಸೂ ತುಂಬಿತು🙏🙏ಇಂದಿನ ಪೀಳಿಗೆಗೆ ಇಂತಹದೊಂದು ಕಿರುಚಿತ್ರ ಕೊಟ್ಟ ನಿಮಗೆ ಶರಣು ಶರಣಾರ್ಥಿ🙏🙏ನಮ್ಮ ಅಜ್ಜಿ, ಅಮ್ಮನಿಂದ ಕೆಲವು ಅವರ ಸವಿನೆನಪುಗಳನ್ನ ಕೇಳಿದ್ದೆವು, ಈ ಚಿತ್ರವನ್ನು ನೋಡಿ ಬಹಳ ಸಂತೋಷವಾಯಿತು🙏🙏ನಿಮಗೆ ಒಳಿತಾಗಲಿ, ಶುಭವಾಗಲಿ 🪔🪔🙏

    • @abhikamalhassan
      @abhikamalhassan  Месяц назад

      Thanks a lot ❤. Please do share with your contacts and help the film reach more people

  • @chopnotch1850
    @chopnotch1850 Месяц назад +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌..

    • @abhikamalhassan
      @abhikamalhassan  Месяц назад +1

      Thank you❤️. Do share the film Link with family and friends

  • @chaithrar249
    @chaithrar249 2 месяца назад +6

    ತುಂಬಾ ದಿನಗಳ ನಂತರ ನೋಡಿದಂತ ಅದ್ಭುತ ಕಿರುಚಿತ್ರ ❤

  • @Sown_2_Sizzle
    @Sown_2_Sizzle Месяц назад +1

    just too beautiful, still cant stop crying...very well made

    • @abhikamalhassan
      @abhikamalhassan  Месяц назад

      Thanks❤️. Do share the film link with your family and friends

  • @PoornimaM-k7f
    @PoornimaM-k7f Месяц назад +4

    ಅದ್ಭುತ ಪರಿಕಲ್ಪನೆ.... ಮನ ಮುಟ್ಟಿದ ಕಿರು ಚಿತ್ರ 🙏🏻👏🏻👏🏻

    • @abhikamalhassan
      @abhikamalhassan  Месяц назад

      Thank you ❤️. Plz do share and help the film reach more people

  • @jyothianand3482
    @jyothianand3482 Месяц назад +1

    ತುಂಬಾ ಚೆನ್ನಾಗಿದೆ ಪರಿಕಲ್ಪನೆ.ಪಾತ್ರಗಳು ಕೂಡ ಭಾವುಕ ನೆಲೆಯಲ್ಲಿ ನಿಂತು ಮಾತಾಡುತ್ತವೆ.ಲಕ್ಷ್ಮೀ ಕಂಭದ ಅವಲೋಕನ ಬಲು ಚಂದ.ಹಾಡು ಮನಸನ್ನು ಹಿಂದಕ್ಕೋಡಿ ಸ್ವಯಂ ಭೂತದ ಬದುಕನ್ನು ಹಣಕುವಂತೆ ಮಾಡುತ್ತದೆ.ಸಾಹಿತ್ಯ ತುಂಬಾ ಚೆನ್ನಾಗಿದೆ 👏😍

    • @abhikamalhassan
      @abhikamalhassan  Месяц назад

      Thank you❤️. Do share the film link with your friends and groups so that it reaches more people

  • @ramajayasimha4307
    @ramajayasimha4307 2 месяца назад +4

    Brilliant short film with super acting!!

    • @abhikamalhassan
      @abhikamalhassan  2 месяца назад

      Thanks❤️. Plz do share and make it reach to more people

  • @ReyanshAarush
    @ReyanshAarush 5 дней назад

    Heart touching really salute to director who beautifully crafted the feelings of women

    • @abhikamalhassan
      @abhikamalhassan  День назад

      ಧನ್ಯವಾದಗಳು ❤️. ಫಿಲಂ ಲಿಂಕ್ ನಿಮ್ಮ ಪರಿಚಯದವರಿಗೆ ಶೇರ್ ಮಾಡಿ 🙂

  • @gopalachara3359
    @gopalachara3359 2 месяца назад +5

    ತುಂಬಾ ಚೆನ್ನಾಗಿ ಮೂಡಿಬಂದಿದೆ.❤

  • @subhashinijoshi2615
    @subhashinijoshi2615 Месяц назад +1

    ಹರಿಃ 🕉️🙏
    ಮನ ತುಂಬಿ.... ಕಣ್ಣೂ.. 😭ತುಂಬಿ ಬಂತು
    ಹಳೆಯ ನೆನಪುಗಳು... ಮತ್ತೆ ಕಣ್ಣ್ ಮುಂದೆ ಬಂತು....!!
    ತುಂಬಾ ಚನ್ನಾಗಿ ಮೂಡಿ ಬಂದಿದೆ 👌👏👏👍👍🙏ಧನ್ಯವಾದಗಳು 🙏

    • @abhikamalhassan
      @abhikamalhassan  Месяц назад

      Thank you ❤️. Do share the film link with your contacts

  • @gajendragunjur8752
    @gajendragunjur8752 2 месяца назад +5

    ಬಹಳ ಚೆನ್ನಾಗಿದೆ ಅಭಿಜಿತ್, Climax ಅಂತೂ Amazing. ದೀಪಾವಳಿ ಶುಭಾಶಯಗಳು ಹಾಗೂ ಅಭಿನಂದನೆಗಳು 💐👍👌

    • @abhikamalhassan
      @abhikamalhassan  2 месяца назад

      Thanks a lot for watching sir. Do share and help the film reach more people

    • @gajendragunjur8752
      @gajendragunjur8752 2 месяца назад

      ನನ್ನೆಲ್ಲ ಸ್ನೇಹ ವಲಯಕ್ಕೆ ಕಳಿಸಿದ್ದು ಅಲ್ಲದೆ, ಒಂದೊಳ್ಳೇ Concept ಇದೆ ನೋಡಿ ಅಂತ ಒತ್ತಡ ಹೇರ್ತಿದೇನೆ. ನೋಡಿದವರು ಖುಷಿಯಿಂದ ಪ್ರತಿಕ್ರಿಯಿಸ್ತಿದಾರೆ 😊

  • @shanthalarajagopal1923
    @shanthalarajagopal1923 Месяц назад +1

    ಬಹಳ ಚಂದದ ಮನಸ್ಸಿಗೆ ತಟ್ಟಿದ ಕಿರುಚಿತ್ರ . ಒಮ್ಮೆ ಬಾಲ್ಯಕ್ಕೆ ಕರೆದೊಯ್ದು ಕಣ್ಣಂಚು ಒದ್ದೆ ಮಾಡಿತು . ಇನ್ನಷ್ಟು ಕಿರುಚಿತ್ರಗಳು ನಿಮ್ಮ ನಿರ್ದೇಶನದಲ್ಲಿ ಬರಲಿ . ಅಭಿನಂದನೆಗಳು ಸರ್ 💐

    • @abhikamalhassan
      @abhikamalhassan  Месяц назад

      Thanks a lot❤️ do share film link with your family and friends

  • @banavasikannadigaru
    @banavasikannadigaru 2 месяца назад +6

    ಮತ್ತೆ ಮತ್ತೆ ನೋಡಬೇಕು ಅನಿಸುವ ಸಿನಿಮಾ 😊🙏

    • @abhikamalhassan
      @abhikamalhassan  2 месяца назад

      Thanks a lot❤️. Plz do share and help the film reach more people

  • @vibhayn3352
    @vibhayn3352 Месяц назад +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತವರು ಮನೆ ಕುಟುಂಬ , ಬಾಲ್ಯದ ನೆನಪುಗಳು, ತಪ್ಪಿತ ಮನೋಭಾವ, ಪಶ್ಚಾತ್ತಾಪದ ನೋವು, ಕಲ್ಪನೆ. ಬಹಳ ಭಾವನಾತ್ಮಕವಾಗಿ. ದುಃಖದಿಂದ ಕಣ್ಣಿರು ಬರಿಸುವ ಕಿರು ಚಿತ್ರ.
    Hats off to the entire Team.
    👏

    • @abhikamalhassan
      @abhikamalhassan  Месяц назад +1

      ತುಂಬಾ ಥ್ಯಾಂಕ್ಸ್ ❤️. ಫಿಲಂ ಲಿಂಕ್ ಅನ್ನು ನಿಮ್ಮ ಎಲ್ಲಾ ಸ್ನೇಹಿತರಿಗು ಶೇರ್ ಮಾಡಿ

  • @suvarnamrityunjayhiremath4083
    @suvarnamrityunjayhiremath4083 Месяц назад +8

    Laxmi khambakke jeeva bandu, taanu kandiddu heluva haage iddare eshtu chenda iratittu ❤

    • @abhikamalhassan
      @abhikamalhassan  Месяц назад

      Thank you❤️. Do share the film link with your friends and groups so that it reaches more people

  • @shobhavbssm
    @shobhavbssm Месяц назад +2

    Very beautiful heart touching film,padmaja rao acted very well,happy ending also we can expect more films from this team 🎉🎉❤❤

    • @abhikamalhassan
      @abhikamalhassan  Месяц назад

      Thank you so much❤️❤️❤️.. Do share to others and help the film reach more people🙂

  • @adityaravisuryavlogs2514
    @adityaravisuryavlogs2514 2 месяца назад +8

    Superb bro....... Awesome presentation!

  • @pradeepgowda7962
    @pradeepgowda7962 День назад

    ಮಾತುಗಳೇ ಬರುತ್ತಿಲ್ಲ ಅಭಿ ಸರ್ ನಿಮ್ಮ ಪ್ರಯತ್ನ ಅದ್ಭುತ ವಾಗಿದೆ ಅಮ್ಮ ನ ಪಾತ್ರ ಅತ್ಯದ್ಭುತ ನಾ ಕಂಡ ಮನ ಮಿಡಿಯುವ ಅದ್ಭುತ ಕಿರುಚಿತ್ರ 💐🙏

    • @abhikamalhassan
      @abhikamalhassan  День назад

      ಧನ್ಯವಾದಗಳು ❤️. ಫಿಲಂ ಲಿಂಕ್ ನಿಮ್ಮ ಪರಿಚಯದವರಿಗೆ ಶೇರ್ ಮಾಡಿ 🙂

  • @varshapurohit616
    @varshapurohit616 2 месяца назад +4

    Love the movie🤗

  • @sandhyabhat9841
    @sandhyabhat9841 Месяц назад +1

    ಸೂಪರ್ ತುಂಬಾ ಚೆನ್ನಾಗಿದೆ... 👍🤗

    • @abhikamalhassan
      @abhikamalhassan  Месяц назад +1

      ಥ್ಯಾಂಕ್ಸ್ ❤️. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂

  • @Pramithrajvlogs
    @Pramithrajvlogs 2 месяца назад +5

    Very meaningful movie... every scene has its own meaning. We can connect it to our old memories and lifes.

    • @abhikamalhassan
      @abhikamalhassan  2 месяца назад

      Thanks a lot❤️. Plz do share and help the film reach more people

  • @nivedithas9709
    @nivedithas9709 25 дней назад +1

    Super Abhijit sir well done🙏👏

    • @abhikamalhassan
      @abhikamalhassan  25 дней назад

      Thank you❤️. Do share the film link with your contacts

  • @lalithavirupakshaiah8
    @lalithavirupakshaiah8 Месяц назад +5

    ಚಿತ್ರ ಅದ್ಭುತವಾಗಿದೆ. ಅಮ್ಮನ ಬಾಲ್ಯದ ನೆನಪಿನೊಂದಿಗೆ ಕಥೆ ಸಾಗುವ ಪರಿ ಚೆನ್ನಾಗಿದೆ. ಗೀತೆಗಳು ಸೂಪರ್.

    • @abhikamalhassan
      @abhikamalhassan  Месяц назад

      Thank you ❤️. Plz do share and help the film reach more people

  • @Luxmi1317
    @Luxmi1317 Месяц назад +1

    Super sir gantalu bigiyitu, no words .... Innu hechchu kiruchitragalu nimminda rachitavagali.....❤

    • @abhikamalhassan
      @abhikamalhassan  Месяц назад

      Thank you❤️. Do share the film link with your contacts

  • @rukminimb5874
    @rukminimb5874 Месяц назад +6

    ಸುಂದರ ಕಲ್ಪನೆ.. ನೈಜ ನಟನೆ.. ಮನ ಒಮ್ಮೆ ತೇವ ಆಯಿತು..
    ನಾವು ಮಧ್ಯ ವಯಸಿನಲ್ಲಿ ಇದೀವಿ..
    ನಾಳೆ ನಮ್ಮದೂ ಇದೇ ಅವಸ್ಥೆ..
    ಆಸೆ ನಿರಾಸೆ ವಾಸ್ತವದ ನಡುವೆ ಸಾಗಬೇಕು

    • @abhikamalhassan
      @abhikamalhassan  Месяц назад +1

      Thanks a lot ❤. Plz do share the film with others and help the film reach more people

  • @veenachandrashekar
    @veenachandrashekar Месяц назад +1

    ಮನ ಮುಟ್ಟುವ ಮಾತುಗಳು, ಕಣ್ಣು ತುಂಬುವ ದೃಶ್ಯಗಳು, ಎಲ್ಲರದ್ದೂ ಅತ್ಯುತ್ತಮ ಅಭಿನಯ... ತುಂಬಾ ಚೆನ್ನಾಗಿ ಮೂಡಿ ಬಂದಿದೆ. 👌🏻👏🏻❤️🙏🏻

    • @abhikamalhassan
      @abhikamalhassan  Месяц назад

      ತುಂಬಾ ಥ್ಯಾಂಕ್ಸ್ ❤️.. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂

    • @veenachandrashekar
      @veenachandrashekar Месяц назад

      @abhikamalhassan already shared☺️

  • @sukanyavanahalli3313
    @sukanyavanahalli3313 Месяц назад +2

    ಸುಂದರ ಕಲ್ಪನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮಗೆ ಧನ್ಯವಾಗಳು 🙏

    • @abhikamalhassan
      @abhikamalhassan  Месяц назад

      Thank you❤️. Do share the film link with your friends and groups so that it reaches more people

  • @swaroops3316
    @swaroops3316 24 дня назад

    ಹಳ್ಳಿ, ಹಳ್ಳಿಯ ಆತ್ಮೀಯತೆ , ಹಳ್ಳಿಯ ನಂಬಿಕೆಗಳು ಎಷ್ಟು ಚಂದ. ನಿಮ್ಮ ಪರಿಕಲ್ಪನೆ ಮತ್ತು ನಿರ್ದೇಶನ ಅದ್ಭುತ. ಮನಮುಟ್ಟುವ ಕಥೆ. 🙏🙏

    • @abhikamalhassan
      @abhikamalhassan  24 дня назад +1

      Thank you so much❤️❤️❤️.. Do share to others and help the film reach more people🙂

  • @Dad-Dot
    @Dad-Dot 21 день назад

    Sir, movie takes us back to our Olden days for the generation born before 90's which present generation will never see and feel. Thanks for making this movie and bringing us back out old memories. @Abhijit Purohit Sir

  • @anitapatil7694
    @anitapatil7694 День назад

    ಬಹಳ ದಿನಗಳ ನಂತರ ಒಂದು ಒಳ್ಳೆಯ ಕಥೆ ನೋಡಿದಂತಾಯಿತು ಧನ್ಯವಾದಗಳು

    • @abhikamalhassan
      @abhikamalhassan  День назад

      ಧನ್ಯವಾದಗಳು ❤️. ಫಿಲಂ ಲಿಂಕ್ ನಿಮ್ಮ ಪರಿಚಯದವರಿಗೆ ಶೇರ್ ಮಾಡಿ 🙂

  • @komalavenkataramu9202
    @komalavenkataramu9202 Месяц назад +1

    ತುಂಬಾ ಸರಳ ಸುಂದರ ಕಿರು ಚಿತ್ರ ಚೆನ್ನಾಗಿದೆ ಮೂಡಿ ಬಂದಿದೆ. ನಮ್ಮ ಬಾಲ್ಯ, ತವರು ಮನೆ, ಅಪ್ಪ ಅಮ್ಮ ನೆನಪಾಗಿ ಕಣ್ಣುಗಳು ತುಂಬಿ ಬಂದವು. ಧನ್ಯವಾದಗಳು ಚಿತ್ರ ತಂಡಕ್ಕೆ🙏🙏❤❤

    • @abhikamalhassan
      @abhikamalhassan  Месяц назад

      Thanks ❤️. Do share the film link with ur contacts

  • @narayanprakash2266
    @narayanprakash2266 27 дней назад +1

    Very nice short film with a nice info at the end. Dhanyavadagalu

    • @abhikamalhassan
      @abhikamalhassan  27 дней назад

      Thank you ❤️. Do share the film link with your family and friends

  • @sumitapatil876
    @sumitapatil876 Месяц назад +2

    Innu e tara kategalanna madi.... Very heart touching.... 👏👏👏👏👏❤🙏

    • @abhikamalhassan
      @abhikamalhassan  Месяц назад

      Thanks ❤️. Do share the film link with your friends and groups

  • @jayashreekn7880
    @jayashreekn7880 Месяц назад +1

    ತುಂಬಾ ಚೆನ್ನಾಗಿದೆ ,ಕಣ್ಣಾಲಿಗಳು ತುಂಬಿ ಬಂತು,ಧನ್ಯವಾದಗಳು

    • @abhikamalhassan
      @abhikamalhassan  Месяц назад

      Thank you❤️. Do share the film link with your friends and groups so that it reaches more people

  • @saraswathiashok1979
    @saraswathiashok1979 Месяц назад +1

    Thumbaa hrudayasparshiyagide. . Mundenu nimminda olle kiru chithragalu barali.👌👌👏👏

    • @abhikamalhassan
      @abhikamalhassan  Месяц назад

      Thanks a lot ❤. Please do share with your contacts and help the film reach more people

  • @unplannednomads8446
    @unplannednomads8446 18 дней назад

    ತುಂಬಾ ಅಮೋಘವಾಗಿದೆ ನಿಮ್ಮ ಕಲ್ಪನೆ...❤🎉

    • @abhikamalhassan
      @abhikamalhassan  18 дней назад

      ಧನ್ಯವಾದಗಳು ❤️. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂

  • @dharmashreesadugemane5948
    @dharmashreesadugemane5948 Месяц назад +2

    ಬಹಳ ಸುಂದರವಾದ ಅನುಭವ ಕೊಟ್ಟ ಚಿತ್ರ.. ಅಭಿನಂದನೆಗಳು ಅಭಿಜಿತ್ 💐💐💐 ಹೀಗೆಯೇ ಇನ್ನೂ ಹೆಚ್ಚಿನ ಚಿತ್ರಗಳು ಮೂಡಿಬರಲಿ 💐💐💐

    • @abhikamalhassan
      @abhikamalhassan  Месяц назад

      ತುಂಬಾ ಥ್ಯಾಂಕ್ಸ್ ಮೇಡಂ ❤️.. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ.. ಇನ್ನು ಹೆಚ್ಚು ಜನಕ್ಕೆ ಚಿತ್ರವಣ್ಣ ತಲುಪಿಸುವ ಆಸೆ ❤

  • @Itsharinair
    @Itsharinair Месяц назад

    Beautiful concept, great acting and direction😍👏👏

    • @abhikamalhassan
      @abhikamalhassan  Месяц назад

      Thank you so much, I’m so glad you enjoyed it! Do share the film link with your family and friends! ❤️

  • @RadhaDeshpande-u9j
    @RadhaDeshpande-u9j Месяц назад +2

    🎉ಬಹಳ ಚೆನ್ನಾಗಿದೆ ದೇವರ ಆಶೀರ್ವಾದ ನೀಮ್ಮ ಮೇ ಲೆ ಸದಾ ಇರಲಿ

  • @apoorvayadav6976
    @apoorvayadav6976 25 дней назад

    ಅಧ್ಬುತವಾದ ಕಿರುಚಿತ್ರ ಎಲ್ಲರ ಪಾತ್ರಗಳು ಸನ್ನಿವೇಶಗಳು ಸಂಭಾಷಣೆ ಎಲ್ಲವೂ ತುಂಬ ಸುಂದರವಾಗಿ ಅಧ್ಬುತವಾಗಿ ಮೂಡಿ ಬಂದಿದೆ ಅಭಿನಂದನೆಗಳು ❤

    • @abhikamalhassan
      @abhikamalhassan  24 дня назад +1

      Thank you❤️. Do share the film link with your friends and groups so that it reaches more people

  • @navyanavya6655
    @navyanavya6655 Месяц назад

    ❤❤super yabba 👌

    • @abhikamalhassan
      @abhikamalhassan  Месяц назад

      Thank you❤️. Do share the film link with your family and friends

  • @Jayeshtr
    @Jayeshtr Месяц назад +2

    ಅತ್ಯದ್ಭುತವಾದ ಹೃದಯಸ್ಪರ್ಶಿ ಕಥೆ... ನಿರ್ದೇಶಕ ರಿಗೆ ಹೃತ್ಪೂರ್ವಕ ಅಭಿನಂದನೆಗಳು...🎉🎉

    • @abhikamalhassan
      @abhikamalhassan  Месяц назад

      Thank you❤️. Do share film with your contacts

  • @shanthareddy96
    @shanthareddy96 Месяц назад +2

    ತುಂಬಾ ಅದ್ಭುತವಾದ ಕಿರುಚಿತ್ರ. ಮನಮುಟ್ಟುವ ಹಾಗಿದೆ. ನೋಡುವಾಗ ಕಣ್ಣಲ್ಲಿ ತಂತಾನನೇ ಕಣ್ಣೀರು ಬರುತ್ತೆ 🙏🙏🙏

    • @abhikamalhassan
      @abhikamalhassan  Месяц назад +1

      Thanks a lot ❤. Please do share with your contacts and help the film reach more people

  • @nagarajaudupamegaravalli1346
    @nagarajaudupamegaravalli1346 4 дня назад

    ನಮನಗಳು ತಮಗೆ, ದುಃಖ ಬರುತ್ತಲೇ ಇತ್ತು, ನನ್ನ ಅಮ್ಮನ ಜ್ಞಾಪಕ ಬರುತ್ತಲೇ ಇತ್ತು, 😢 ಧನ್ಯವಾದಗಳು ಮತ್ತೊಮ್ಮೆ 💐💐🙏🏻🙏🏻

    • @abhikamalhassan
      @abhikamalhassan  День назад

      ಧನ್ಯವಾದಗಳು ❤️. ಫಿಲಂ ಲಿಂಕ್ ನಿಮ್ಮ ಪರಿಚಯದವರಿಗೆ ಶೇರ್ ಮಾಡಿ 🙂

  • @paramyuva3021
    @paramyuva3021 Месяц назад +1

    ಮನಸಿನ ಭಾವನೆಗಳಿಗೆ ಸ್ಪಂದಿಸುವ ಒಂದು ಸುಂದರವಾದ ತವರೂರು

    • @abhikamalhassan
      @abhikamalhassan  Месяц назад

      Thank you❤️. Do share the film link with your friends and groups so that it reaches more people

  • @gayathrikrishna1113
    @gayathrikrishna1113 Месяц назад

    Very very nice no words to express my wishes 🤗 TQ very much memorize my mother I miss her lot 😭🙏

    • @abhikamalhassan
      @abhikamalhassan  Месяц назад

      Thanks for watching ❤️. Do share film link with your loved ones

  • @Manogeetham
    @Manogeetham 20 дней назад

    Very much touching ❤
    Music is just devine 🔥
    Effects add the beauty ❤️
    You made me cry...
    Thanks to Abhi and team ❤️🔥❤️

    • @abhikamalhassan
      @abhikamalhassan  19 дней назад

      Thanks a lot ❤️.. Do share film link with ur contacts

  • @yogeshg7077
    @yogeshg7077 Месяц назад

    Fantastic music and song . And lakshmi kamba story

    • @abhikamalhassan
      @abhikamalhassan  Месяц назад

      Thank you❤️. Do share the film link with your contacts

  • @navya7448
    @navya7448 Месяц назад

    Beautiful, I just loved it..full of emotions

    • @abhikamalhassan
      @abhikamalhassan  Месяц назад +1

      ಥ್ಯಾಂಕ್ಸ್ ❤️. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂

  • @raghavendrakaradgi3903
    @raghavendrakaradgi3903 Месяц назад

    Kathe sundarvagide.

    • @abhikamalhassan
      @abhikamalhassan  Месяц назад

      Thank you❤️. Do share the film link with your contacts

  • @RenukaJoshi-wr5kh
    @RenukaJoshi-wr5kh Месяц назад

    Khare bhal chanda ada
    Na bhal sari nodini super

    • @abhikamalhassan
      @abhikamalhassan  Месяц назад

      Thanks a lot❤️ do share film link with your family and friends

  • @shanthammagp135
    @shanthammagp135 Месяц назад

    Super Anna hrudayakke mutti kannanchalli neeru tarisuva e nimma prayatnakke manah poorvaka abhinandanegalu

    • @abhikamalhassan
      @abhikamalhassan  Месяц назад

      Thanks❤️. Do share film link with your contacts

  • @vijayavanik5614
    @vijayavanik5614 Месяц назад

    A beautiful short film. Takes the viewer on a Very emotional journey.
    Thank you for such wonderful writing and filming 🙏❤

    • @abhikamalhassan
      @abhikamalhassan  Месяц назад

      Thanks a lot ❤. Plz do share the film with others and help the film reach more people

  • @vidyajamkhandi9930
    @vidyajamkhandi9930 Месяц назад

    Super fantastic .l remembered my child hood and my grandmother and mother in her tavarumane .
    All my memories became fresh .thank you very much .

    • @abhikamalhassan
      @abhikamalhassan  Месяц назад

      Thank you❤️. Do share the film with your contacts

  • @sudharavikanzal3629
    @sudharavikanzal3629 Месяц назад

    ತುಂಬಾ ಮನ ಸೆಳೆದ ಕಥೆ...👏👏

    • @abhikamalhassan
      @abhikamalhassan  Месяц назад

      Thank you❤️. Do share the film link with your contacts

  • @UthkrishtaNatyaKalashaal-uo4vd
    @UthkrishtaNatyaKalashaal-uo4vd Месяц назад

    ❤thumba chennagi moodibandide...

    • @abhikamalhassan
      @abhikamalhassan  Месяц назад

      ಥ್ಯಾಂಕ್ಸ್ ❤️. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂

  • @rashmibhat8546
    @rashmibhat8546 Месяц назад

    ತುಂಬಾ ತುಂಬಾ ಚೆನ್ನಾಗಿದೆ ❤🙏, ಎಲ್ಲಾ ಕಲಾವಿದರ ಅಭಿನಯ ತುಂಬಾ ತುಂಬಾ ಚೆನ್ನಾಗಿದೆ 🙏❤😍

    • @abhikamalhassan
      @abhikamalhassan  Месяц назад +1

      Thanks❤️. Do share film link with your contacts

  • @sripathi30
    @sripathi30 Месяц назад

    ಸುಂದರ ದೃಶ್ಯಕಾವ್ಯ. ಕಲಾವಿದರ ಅಭಿನಯ ಮನಮುಟ್ಟುವಂತಿದೆ. ಆಂಗ್ಲ ಉಪಶೀರ್ಷಿಕೆಗಳೊಂದಿಗೆ ಬಂದರೆ ಅನ್ಯಭಾಷಿಕರಿಗೂ ಅನುಕೂಲ ಆದೀತು.

    • @abhikamalhassan
      @abhikamalhassan  Месяц назад

      ಥ್ಯಾಂಕ್ಸ್ ಸರ್. ಇಂಗ್ಲಿಷ್ ಉಪಶ್ರೇರ್ಷಿಕೆ ಇದೆ. ಅದನ್ನ ಆಯ್ಕೆ ಮಾಡಬಹುದು. ಯೌಟ್ಯೂಬ್ ನಲ್ಲಿ ವಿಡಿಯೋ ಮೇಲೆ CC ಅಂತ ಇರತ್ತೆ. ಅದನ್ನ ಕ್ಲಿಕ್ ಮಾಡಿದರೆ ಉಪರೇರ್ಷಿಕೆ ಕಾಣುತ್ತದೆ

  • @soundaryakashyap4924
    @soundaryakashyap4924 Месяц назад

    A very sensitive emotional movements for every girl,with out knowing my eyes were full....this story filled my heart ❤️😢

    • @abhikamalhassan
      @abhikamalhassan  Месяц назад

      Thanks for watching❤️. Do share the film link with your contacts

  • @TheCreativeFrontier
    @TheCreativeFrontier 21 день назад

    Very nice and realistic , emotional movie !! Loved it !! ❤❤

    • @abhikamalhassan
      @abhikamalhassan  21 день назад +1

      Thanks a lot sir❤️. Do share the film link with your family and friends

  • @Happyworld229
    @Happyworld229 Месяц назад

    What a heart touching movie! I felt so nastalgic .. How beautifully made .. lots of good luck .. pls make more movies

    • @abhikamalhassan
      @abhikamalhassan  Месяц назад +1

      Thanks ❤️. Do share the film link with your friends and groups

    • @Happyworld229
      @Happyworld229 Месяц назад

      @@abhikamalhassan definitely sir

  • @vanibangalore9204
    @vanibangalore9204 Месяц назад

    ಅದ್ಭುತವಾದ ಕಿರುಚಿತ್ರ 👌👌👏👏👏ಕಣ್ಣಲಿಗಳು ತುಂಬಿ ಬಂದವು

    • @abhikamalhassan
      @abhikamalhassan  Месяц назад

      ಚಿತ್ರ ನೋಡಿದ್ದಕ್ಕೆ ಥ್ಯಾಂಕ್ಸ್ 🙏. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ