ಮೂಡಲಗಿಯಲ್ಲಿ ಸಡಗರ ಸಂಭ್ರಮದಿಂದ ಜರಗಿದ ಬಸವ ಉತ್ಸವ ಮೆರವಣಿಗೆ

Поделиться
HTML-код
  • Опубликовано: 27 ноя 2024
  • ಸಡಗರ ಸಂಭ್ರಮದಿಂದ ಜರುಗಿದ ಬಸವ ಉತ್ಸವದ ಮೆರವಣಿಗೆ
    ಬಸವ ಸೇವಾ ಯುವಕ ಸಂಘದದಿಂದ ಬಸವ ಜಯಂತಿ ನಿಮಿತ್ಯ ಹಮ್ಮಿಕೊಂಡ ಮೂಡಲಗಿ ತಾಲೂಕಾ ಮಟ್ಟದ ಬಸವ ಉತ್ಸವ ಕಾರ್ಯಕ್ರಮ ಶುಕ್ರವಾದಂದು ಸಡಗರ ಸಂಭ್ರಮದಿಂದ ಜರುಗಿತು.
    ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪ ಮತ್ತು ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಬಸವ ಸೇವಾ ಯುವಕ ಸಂಘದವರು ಮತ್ತು ಗಣ್ಯರು ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.
    ಬಸವ ಉತ್ಸವದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಆನೆ ಜಂಬೂ ಸವಾರಿ, ವಿವಿಧ ವಾದ್ಯ ಮೇಳೆ, ಎತ್ತುಗಳ ಮೇರವಣಿಗೆ, ಮಹಿಳೆಯರ 408 ಕುಂಭಮೇಳದೊಂದಿಗೆ ಬಸವೇಶ್ವರರ ವೈಭವದ ಉತ್ಸವಕಕ್ಕೆ ಮೆರಗು ನೀಡಿದವು.
    ಮೆರವಣಿಗೆಯು ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಿಂದ ಸಂಗಪ್ಪನ ವೃತ್ತ, ಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ, ಕರೇಮ್ಮಾದೇವಿ ವೃತ್ತಗಳ ಮಾರ್ಗವಾಗಿ ಬಸವೇಶ್ವರ ಕಲ್ಯಾಣ ಮಂಟಪಕ್ಕೆ ಅಂತ್ಯಗೊಂಡಿತು.
    #mudalagi
    #belagavi
    #stimesnews
    #karnataka

Комментарии •