ಗೀತಾ ವಿವೃತಿ- ಭಾಗ - 353,ಅಧ್ಯಾಯ 17

Поделиться
HTML-код
  • Опубликовано: 5 фев 2025
  • ದಾನದ ಪವಿತ್ರತೆಯ ಬಗ್ಗೆ ಶಿಬಿರಾಜನ ಕತೆಯನ್ನು ಭಾರತದಲ್ಲಿ ಉದಾಹರಿಸಲಾಗಿದೆ. ಒಮ್ಮೆ ನಾರದರು ಕ್ಷತ್ರಿಯರಾದ ಶಿಬಿ, ವಸುಮಂತ ಪ್ರತರ್ದನ, ಅಷ್ಟಕರೊಡನೆ ಧರ್ಮಚರ್ಚೆಯನ್ನು ನಡೆಸುತ್ತಿದ್ದಾಗ ಒಂದು ಪ್ರಶ್ನೆಯು ಉದ್ಭವಿಸಿತು. ಈ ಐದು ಜನರು ಸ್ವರ್ಗವನ್ನು ಏರುವ ಸಂದರ್ಭದಲ್ಲಿ ಮೊದಲು ಕೆಳಗೆ ಇಳಿಯುವ ಪ್ರಸಂಗವು ಇವರಲ್ಲಿ ಯಾರಿಗೆ ಬರುವುದು ಎಂದು.
    250
    ಗೀತಾಸಾರೋದ್ದಾರ
    ಅಷ್ಟಕನೇ ಮೊದಲು ಕೆಳಗಿಳಿಯುತ್ತಾನೆಂದು ನಾರದರೆಂದರು. "ಅಷ್ಟಕನು ಸಾಕಷ್ಟು ದಾನನೀಡಿ ಕೀರ್ತಿಗಳಿಸಿದ್ದಾನೆ. ಆದರೆ ಒಮ್ಮೆ ನಾನು ಆತನೊಡನೆ ಸಂಚರಿಸುತ್ತಿದ್ದಾಗ ಒಂದೆಡೆ ನೂರಾರು ಗೋವುಗಳನ್ನು ನೋಡಿ 'ಇವು ಯಾರವು?' ಎಂದು ನಾನು ಕೇಳಿದರೆ, ತಾನು ಬ್ರಾಹ್ಮಣರಿಗೆ ದಾನ ಮಾಡಿದ ಗೋವುಗಳಿವು ಎಂದು ಹೆಮ್ಮೆಯಿಂದ ಅವನು ನುಡಿದನು. ದಾನದ ಜೊತೆಗೆ ಈ ಅಹಂಭಾವ, ಹೆಗ್ಗಳಿಕೆಗಳು ಬೆರೆತಿರುವುದರಿಂದ ಅವನೇ ಮೊದಲು ಕೆಳಗಿಳಿಯುತ್ತಾನೆ'' ಅವನ ನಂತರ ಪ್ರತರ್ದನನೇ ಕೆಳಗಿಳಿಯುವನೆಂದು ನಾರದರು ನುಡಿದರು. "ಪ್ರತರ್ದನನು ರಥದಲ್ಲಿ ಸಂಚರಿಸುತ್ತಿದ್ದಾಗ ಬ್ರಾಹ್ಮಣನೊಬ್ಬನು ಅವನಲ್ಲಿ ದಾನವನ್ನು ಬೇಡಿದನು. ಮತ್ತೆ ಕೊಡುವೆನೆಂದರೂ ಈಗಲೇ ಕೊಡಬೇಕೆಂದು ಬ್ರಾಹ್ಮಣನು ಅವಸರಪಡಿಸಿದಾಗ ತನ್ನ ರಥದ ಒಂದು ಕುದುರೆಯನ್ನು ಅಲ್ಲಿಯೇ ನೀಡಿದನು. ಹೀಗೆಯೇ ಒತ್ತಾಯಪಡಿಸಿ ಬೇಡಿದ ಸಾಧು-ಸಂತರಿಗೆ ತನ್ನ ರಥದ ಒಂದೊಂದು ಭಾಗವನ್ನು ನೀಡುತ್ತ ರಥದ ಎಲ್ಲ ಭಾಗಗಳನ್ನು ಕೊಟ್ಟು ಮುಗಿಸಿದನು. ಇನ್ನು ತನ್ನಲ್ಲಿ ಬೇಡಲು ಸಾಧುಗಳಿಗೆ ಏನೂ ಇಲ್ಲವೆಂದು ಅವರನ್ನು ಅಣಕಿಸಿ ಆ ಸಂದರ್ಭದಲ್ಲಿ ಪ್ರತರ್ದನನು ಮಾತಾಡಿದ್ದಾನೆ. ಇಷ್ಟು ಉದಾರವಾಗಿ ನಿರ್ಲೋಭದಿಂದ ದಾನಮಾಡಿದರೂ ಅದರ ಜೊತೆಗೆ ಈ ಕೊಂಕು ನುಡಿಯನ್ನು ಆಡಿದುದರಿಂದ ಪ್ರತರ್ದನನು ಕೆಳಗಿಳಿಯುವನು." ಎಂದು ನಾರದರು ಸಮರ್ಥಿಸಿದರು. "ಆಮೇಲೆ ಕೆಳಗಿಳಿಯುವ ಸರದಿ ವಸುಮಂತನದು. ಒಂದು ಸುಂದರವಾದ ಪುಷ್ಪರಥದ ಸ್ವಸ್ತಿವಾಚನದ ಸಂದರ್ಭದಲ್ಲಿ ಆ ರಥವನ್ನು ಪ್ರಶಂಸೆ ಮಾಡಿದ ಬ್ರಾಹ್ಮಣನಿಗೆ ಆ ರಥವನ್ನೇ ಉದಾರತೆಯಿಂದ ವಸುಮಂತನು ದಾನ ಮಾಡಿದನು. ಇನ್ನೊಂದು ಸಂದರ್ಭದಲ್ಲಿಯೂ ರಥವನ್ನು ಪ್ರಶಂಸಿಸಿದ ಆ ವ್ಯಕ್ತಿಗೇ ಪುನಃ ರಥವನ್ನು ದಾನಮಾಡಿದನು. ಮೂರನೆಯ ಪ್ರಸಂಗದಲ್ಲಿಯೂ ಆ ವ್ಯಕ್ತಿಯು ಇಂತಹ ಸಂದರ್ಭದಲ್ಲಿಯೇ ರಥದ ಪ್ರಶಂಸೆಯನ್ನು ಮಾಡಿದಾಗ ಈ ರಾಜನು ಆತನನ್ನು ಸ್ವಲ್ಪ ಮೂದಲಿಸಿ ವಿನೋದವಾಗಿ ಮಾತಾಡಿದನು. ದಾನದ ಜೊತೆಗಿರುವ ಈ ಅಪಸ್ವರದಿಂದಾಗಿ ವಸುಮಂತನು ಕೆಳಗಿಳಿಯುತ್ತಾನೆ" ಮುಂದಿನ ಇಬ್ಬರಲ್ಲಿ ಮೊದಲು ಕೆಳಗಿಳಿಯುವರಾರು ಎಂದು ಪ್ರಶ್ನಿಸಿದಾಗ
    ತಾವೇ ಕೆಳಗಿಳಿಯುವುದಾಗಿಯೂ ಶಿಬಿರಾಜನೇ ಮುಂದೆ ಸಾಗುವುದಾಗಿಯೂ ನಾರದರು ಹೇಳಿದರು. ''ಶಿಬಿರಾಜನ ಶುದ್ಧಮನೋಭಾವದ ತ್ಯಾಗದ ಮುಂದೆ ಎಲ್ಲರೂ ಅಲ್ಪರೆನಿಸುತ್ತಾರೆ. ಶರಣಾಗತವಾದ ಪಾರಿವಾಳವನ್ನು ಉಳಿಸುವುದಕ್ಕಾಗಿ ತನ್ನ ಸಮಗ್ರ ಜೀವನವನ್ನೇ ಸಮರ್ಪಿಸಿದ, ಆಸಕ್ತಿ-ಮಮತೆಗಳ ಲೇಶವೂ ಇಲ್ಲದೆ ವಿನಯ-ತ್ಯಾಗಗಳ ಪ್ರತಿಮೂರ್ತಿಯಾಗಿ ನಿರಪೇಕ್ಷ ಬುದ್ಧಿಯ ದಾನಶೀಲನಾದ ಶಿಬಿರಾಜನ ಮುಂದೆ ನಾನೇ ನನ್ನ ಸೋಲನ್ನೊಪ್ಪ ಬೇಕಾಗುವುದು. ಅವನ ನಿರ್ಮಲ ಕೃತಿಯಲ್ಲಿ ಕಲೆ, ಕಲಂಕಗಳು ಎಲ್ಲಿಯೂ ಕಾಣಸಿಗವು'' ಎಂದು ನಾರದರು ಶಿಬಿರಾಜನ ತ್ಯಾಗವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಜಗತ್ತಿನಲ್ಲಿ ದಾತೃಗಳು ವಿಪುಲ ಸಂಖ್ಯೆಯಲ್ಲಿ ಇರಬಹುದು. ಆದರೆ ಆ ಔದಾಯದ ಹಿನ್ನೆಲೆಯಲ್ಲಿ ಹೆಮ್ಮೆ, ಪರಿಹಾಸ, ಕುಹಕಗಳು ಏನೂ ಇಲ್ಲದೆ ನಮ್ರತೆ ಹಾಗೂ ಪವಿತ್ರ ಭಾವವನ್ನು ಕಾಣುವುದು ಬಹಳ ವಿರಳ. ಇಂತಹ ದಾನವನ್ನು ಸಾತ್ವಿಕವೆಂದು ಗೀತೆಯು ಕರೆದಿದೆ.

Комментарии •