ನಾಡ ನುಡಿ | Naada Nudi Kannada Poem | Poet Virupakshayya

Поделиться
HTML-код
  • Опубликовано: 1 сен 2022
  • Naadi Nudi Kannada Poem for 6th Standard from the book "Siri Kannada Parichaya".
    ನಾಡ ನುಡಿ
    - ಶ್ರೀ ವೈ. ವಿರೂಪಕ್ಷಯ್ಯ
    ನಾಡ ನುಡಿಯ ಕಲಿಯುವಾ
    ನಾಡಿಗಾಗಿ ದುಡಿಯುವಾ
    ನಾಡ ಶಕ್ತಿ ಬೆಳೆಸಿ ನಾವು
    ನಾಡ ಪ್ರಗತಿ ಪಡೆಯುವಾ || 1 ||
    ಒಂದೇ ನಾಡ ಮಕ್ಕಳು
    ಒಂದೇ ಭಾಷೆ ಕಲಿಯುವ
    ತಾಯಿ ನುಡಿಯ ಕಲಿತು ನಾವು
    ತಾಯಿ ಸೇವೆಯ ಮಾಡುವ || 2 ||
    ಕನ್ನಡ ನುಡಿಯ ಹಿತವನು
    ಕನ್ನಡಿಗರಲಿ ಬೆಳೆಸುತ
    ಹೊನ್ನ ಕಿರಣ ಸೂಸುವಂತೆ
    ಕನ್ನಡ ನುಡಿಯ ಹರಡುವ || 3 ||
    ಪಂಪ ರನ್ನ ಮುದ್ದಣರ
    ರಾಘವಾಂಕ ಹರಿಹರರ
    ಕಬ್ಭಗಳ ಸಿರಿಗನ್ನಡವ
    ನಿಚ್ಚ ಬದುಕಲಿ ಬಳಸುವ || 4 ||
    ಸಹನ ಶೀಲ ಸೋದರರು
    ಸಹಜೀವನ ನಡೆಸುವಾ
    ಇಹ ಪರದ ಭೇದವ ತೊಡೆದು
    ಬಹು ಸುಖದಲಿ ಬದುಕುವ || 5 ||
    ಕನ್ನಡಾಂಬೆಯ ಕುಲಜರು
    ಭಿನ್ನ ಮತವನು ಕಾಣೆವು
    ಅನ್ನ ನೀರು ಗಾಳಿ ಕೊಡುವ
    ಕನ್ನಡತಿ ಭೇರೆನ್ನೆವು || 6 ||
    Thank you😊

Комментарии •