ನಾಡಗೀತೆ (Nadageete - Mysore Anantaswamy ) ಜಯ ಭಾರತ ಜನನಿಯ ತನುಜಾತೆ.
HTML-код
- Опубликовано: 20 дек 2024
- ✨️🪔❤️💛ಸಮಸ್ತ ನಾಡಿನ ಜನತೆಗೆ 67ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು❤️💛✨️🪔
.
.
.
.
.
ರಚನೆ :- ರಾಷ್ಟ್ರ ಕವಿ ಕುವೆಂಪು.
ರಾಗ ಸಂಯೋಜನೆ :- ಮೈಸೂರು ಅನಂತಸ್ವಾಮಿ.
ಸಾಹಿತ್ಯ :-
❤️💛🪔ನಾಡಗೀತೆ🪔❤️💛
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ.🪔✨️
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ.
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.🪔✨️
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ.
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.🪔✨️
ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ.
ಕುಮಾರವ್ಯಾಸರ ಮಂಗಳಧಾಮ,
ಕವಿಕೋಗಿಲೆಗಳ ಪುಣ್ಯಾರಾಮ.
ನಾನಕ ರಮಾನಂದ ಕಬೀರರ
ಭಾರತ ಜನನಿಯ ತನುಜಾತೆ🪔✨️
ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ.
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗ.
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ🪔✨️
ಸರ್ವಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ.
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ.🪔✨️
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ.
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ.🪔✨️
ಜಯ ಹೇ ಕರ್ನಾಟಕ ಮಾತೆ.
ಜಯ ಹೇ ಕರ್ನಾಟಕ ಮಾತೆ.
ಜಯ ಹೇ ಕರ್ನಾಟಕ ಮಾತೆ.❤️💛
.
.
.
.
#kannadarajyotsava #karnataka #kannada #patrotic
#Petroticsong #festival #kanndasongs #viral #viralvideo #Naadageete #trending #musicvideo #lyrics #lyrical #lyricalvideo #likeforlikes #like #share #subscribe #subscribers #fans #Nadageete #kannadafans #song #like #views #karaoke
#dailyupdates #kannada #kannadaupdates #trending #youtuber #instagram #istagood
#shortvideo #trending #viral #dailyupdates
❤️💛 ಭಕ್ತಿ ಲೋಕ ಮಾಧ್ಯಮದಲ್ಲಿ ಬರುವ ಹಾಡುಗಳನ್ನು ವೀಕ್ಷಿಸಿದ ವೀಕ್ಷಕರಿಗೆ ತುಂಬು ಹೃದಯದ ಧನ್ಯವಾದಗಳು ❤️💛
✨️❤️💛ನಿಮ್ಮ ಸಹಕಾರ ಸಲಹೆ ಹೀಗೆ ಇರಲಿ ❤️💛✨️