ಅರಣ್ಯಾಧಿಕಾರಿಗಳು ಸೀಜ್ ಮಾಡಿದ ಮರಗಳು ನಾಪತ್ತೆ...ಸಂಘಟಕರ ಆಕ್ರೋಷ...

Поделиться
HTML-код
  • Опубликовано: 20 сен 2024
  • ಅರಣ್ಯಾಧಿಕಾರಿಗಳು ಸೀಜ್ ಮಾಡಿದ ಮರಗಳು ನಾಪತ್ತೆ...ಸಂಘಟಕರ ಆಕ್ರೋಷ...
    ನಂಜನಗೂಡು,ಏ8,Tv10 ಕನ್ನಡ
    ಸರ್ಕಾರಿ ಜಾಗದಲ್ಲಿದ್ದ ಬೆಲೆಬಾಳುವ ಮರಗಳನ್ನು ನೆಲಕ್ಕುರುಳಿಸಿದ ಖದೀಮರ ವಿರುದ್ದ ಪ್ರಕರಣ ದಾಖಲಾದರೂ ರಾತ್ರೋರಾತ್ರಿ ಮರಗಳು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ನಂಜನಗೂಡು ತಾಲ್ಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಭೂಮಿಯಲ್ಲಿ ಬಾರಿ ಗಾತ್ರದ ಬೆಲೆಬಾಳುವ ಮರಗಳು ಬೆಳೆದು ನಿಂತಿದವು.ಇವುಗಳ ಮೇಲೆ ಕಣ್ಣುಹಾಕಿದ ಜಮೀನು ಒತ್ತುವರಿ ಮಾಡಿಕೊಂಡಿದ್ದ ವ್ಯಕ್ತಿಗಳು ಮರಗಳನ್ನು ಕಡಿದು ಮಾರಾಟ ಮಾಡಲು ಯತ್ನಿಸಿದ್ದಾರೆ. ಈ ಮಾಹಿತಿ ಅರಿತ ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ಮುಳ್ಳೂರು ಸ್ವಾಮಿ ಮತ್ತು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಕೂಡಲೇ ನಂಜನಗೂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ಮುಟ್ಟಿಸಿದ್ದಾರೆ . ಲಕ್ಷಾಂತರ ಬೆಳೆ ಬಾಳುವ ಹತ್ತಕ್ಕೂ ಹೆಚ್ಚು ಮರಗಳನ್ನು ಕಟಾವು ಮಾಡಲಾಗಿತ್ತು. ಇದನ್ನು ಕೂಡಲೇ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲು ಸಂಘಟಕರು ಆಗ್ರಹಿಸಿದ್ದಾರೆ. ಈಗಾಗಲೇ ಗ್ರಾಮದ ದಲ್ಲಾಳಿ ನಾಸೀರ್ ಎಂಬಾತನ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಆದರೂ ತಡ ರಾತ್ರಿ ಮರಗಳನ್ನು ಬೇರೆ ಕಡೆ ಸಾಗಿಸಲು ಖದೀಮರು ಮುಂದಾಗಿದ್ದಾರೆ. ಕೆಲವು ಮರಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ‌. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಸಂಘಟಕರು ಆಗ್ರಹಿಸಿದ್ದಾರೆ...

Комментарии •