ಯಾರು ಸಂಗಡ ಬಾಹೋರಿಲ್ಲ || YARU SANGADA BAHORILLA ||

Поделиться
HTML-код
  • Опубликовано: 12 сен 2024
  • ರಾಗ : ಶಿವರಂಜಿನಿ
    ತಾಳ : ದೀಪ್ ಚಂದಿ
    ಯಾರೂ ಸಂಗಡ ಬಾಹೋರಿಲ್ಲ
    ನಾರಾಯಣನ ನಾಮ ನೆರೆಬಾಹೋದಲ್ಲದೆ ||
    ಹೊತ್ತು ನವಮಾಸ ಪರ್ಯಂತವು ಗರ್ಭದಲಿ
    ಹೆತ್ತು ಬಲು ನೋವು ಬೇನೆಗಳಿಂದಲಿ
    ತುತ್ತು ಬುತ್ತಿಯ ಕೊಟ್ಟು ಸಲಹಿದಂಥಾ ತಾಯಿ
    ಅತ್ತು ಕಳಹುವಳಲ್ಲದೆ ನೆರೆ ಬಹಳೆ ||
    ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನ
    ಭಾವಶುದ್ಧದಿ ಧಾರೆಯೆರೆಸಿಕೊಂಡ
    ದೇವಿ ತನ್ಸತಿ ತಲೆಗೆ ಕೈಯಿಟ್ಟುಕೊಂಡು ಇ-
    ನ್ನಾವ ಗತಿಯೋ ಎಂದು ಅಳುತುಳಿವಳಲ್ಲದೆ ||
    ಯಮನ ದೂತರು ಬಂದು ಪಾಶವನು ತಗಲ್ಹಾಕಿ
    ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು
    ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ
    ಕಮಲಾಕ್ಷ ಪುರಂದರವಿಠಲ ನೀನಲ್ಲದೆ ||

Комментарии • 73