ಡೊಂಬೂತಿಯ ಜೋಗುಳ | ಜೋಗುಳ ಪದ | ತೊಟ್ಟಿಲ ಹಾಡು | Doori Pada |
HTML-код
- Опубликовано: 31 янв 2025
- #ShobhaSagaOfficial #ShobhaSagar
ಜೋಗುಳ ಪದ | ಲಾಲಿ ಹಾಡು | ಡೊಂಬೂತಿಯ ಜೋಗುಳ | ದೂರಿ ಪದ | kannada lullabies | janapada songs kannada
Original Credits
Singer - Shobha Sagar
Music Composer - Shobha Sagar
lyrics - Janapada
ಜೋಗುಳ ಪದ | Laali laali songs | Baby Music | Doori Pada | ತೊಟ್ಟಿಲ ಹಾಡು | Jo Jo Jogula | Indian Kannada Lullaby
#Jogulapada #Janapada #Doori #Lalihaadu #Jojolali #uttarakarnataka #Kalikannada #class4 #uttarakarnatakajanapadasong #NannaKanda #babymusic #laalihaadu #kannadaLullaby #babycalmingmusic
Lyrics 👇
ಅಡಕಿ ಸಂತ್ಯಾಗ ಅಡ್ಯಾಳ ಡೊಂಬೂತಿ|
ನೋಡಿ ಬಂದಣ್ಣ ಉಣವೊಲ್ಲ | ಡೊಂಬೂತಿ|
ನಾಳೆ ಬಂದಾಡ ನವಿಲಾಟ ||
ಕರಿಯಂಗಿ ಕಸೂತಿ ತಲೆತುಂಬ ಜಾವೂಳ |
ಅಂಗಳದಾಗ ನವಿಲಾಟ | ಅದಕಿಂತ |
ರಂಗಯ್ಯನಾಟ ವಿಪರೀತ ||
ಅತ್ತಾನ ಕಾಡ್ಯಾನ ಮತ್ತೇನು ಬೇಡ್ಯಾನ |
ಮೆತ್ತ ಮೆತ್ತನ ಧಿಮುಕವ | ಕೊಟ್ಟರ |
ಗಪ್ಪು ಚಿಪ್ಪಾಗಿ ಮಲಗ್ಯಾನ ||
ಕಾಡಿಗಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು |
ಮಾವೀನ ಹೋಳು ನಿನ ಕಣ್ಣು | ಕಂದಯ್ಯ |
ಮಾವ ಬಣ್ಣಿಸಿ ಕರದಾನ ||
ಕೂಸೊಂದು ಕುಂದಣ ಏನೊಂದು ಜಾವೂಳ |
ದೇಶಕ್ಕೆ ಜಾಣ ಅಗಸಾಲಾ | ಮಾಡ್ಯಾನ |
ಕೂಸ ಕಂದಯ್ಯನರಳೇಲೆ ||
ತೊಟ್ಟಿಲದಾಗೊಂದು ತೊಳದ ಮುತ್ತನು ಕಂಡೆ |
ಹೊಟ್ಟೆ ಮ್ಯಾಲಾಗಿ ಮಲಗ್ಯಾನ | ಕಂದಯ್ಯ|
ಮುತ್ತಿನ ದೃಷ್ಟಿ ತಗೆವೇನ ||
ಹವ್ವಲ್ಲೆ ಎಂದರ ಹೋಗೋನು ತಿರಿಗ್ಯಾನ |
ಎಲ ನಿನ್ನನಾರು ಕರದಾರ | ನಾವ್ ನಮ್ಮ|
ಗಿಣಿರಾಮನನ್ನು ಕರೆದೇವ ||
ಹಾರೈಸಿ ಹಡೆದವ್ವ ಒಳಗೇನು ಮಾಡೂತಿ |
ನೋಡು ಬಾ ತಾಯಿ ಮಗನಾಟ | ನನ ಬಾಲ |
ಗುಲಗಂಜಿ ಗಿಡಕ ಗುರಿಯಿಟ್ಟಾ ||
ಬಾರಯ್ಯ ಬಾ ನನ್ನ ಬಾಲ ಚಕ್ರಾವರ್ತಿ |
ನಾಲೀಗಿ ಮ್ಯಾಲ ಸರಸೋತಿ | ಇರುವಂಥ |
ನನ ಬಾಲ ಹಾಲ ಕುಡಿ ಬಾರೋ ||
ಅಳದೀರೊ ಕಂದಯ್ಯ ನಿನಗೊಂದು ಹೇಳುವೆನು |
ಅಮರವತಿಯೆಂಬ ಎಳದೋಟ| ದೊಳಗಿನ |
ಅರಗಿಳಿಯ ತಂದು ಕೊಡುವೇನ ||
ಕೂಸು ನನ ಕಂದಯ್ಯ ಕೇಸ ಬಿಟ್ಟಾಡಾಗ |
ದೇಶದಿಂದೆರಡು ಗಿಣಿ ಬಂದು | ಕೇಳ್ಯಾವ |
ಕೂಸ ನೀನ್ಯಾರ ಮಗನೆಂದು ||
ತೋಳುದ್ದ ತಲೆದಿಂಬು ಮಾರುದ್ಧ ಹಾಸೀಗಿ |
ಮಾಣಿಕದಂಥ ಮಗ ಮುಂದ | ಮಲಗಿದರ |
ಮಾರಾಯ್ರ ಗೊಡವೆ ನನಗೇನ |
ಗಂಡ ಹೆಂಡರ ಜೋಡು ದುಂಡುಮುತ್ತಿನ ಜೋಡು |
ಗಂಡೆರಳಿ ಜೋಡು ಅಡವ್ಯಾಗ | ನನ ಬಾಲಾ |
ನೀ ಜೋಡೋ ನನಗೆ ಮನಿಯಾಗ ||
ಬಾಲ ಹನುಮನ ಮುಂದ ಬಾಗಿ ಚಂಡಾಡ್ಯಾನ |
ಬಾವೂಲಿಗಿವಿಯ ನನ ಬಾಲ| ಕ೦ಡರ |
ಬಾಲ್ಯಾರು ಬಸಿರು ಬಯಸ್ಕಾರ |
ಹಿಂಡ ಮಕ್ಕಳೊಳಗ ಪುಂಡ ನನ ಕಂದಯ್ಯ |
ದುಂಡುಮಲ್ಲಿಗಿ ಮರನೇರಿ | ಹೂಕೊಯ್ದು|
ಗಂಡುಳ್ಳ ಬಾಲ ತುರಬಿಗಿ ||
ಚಿಕ್ಕ ನನ ಕಂದಯ್ಯ ಚಿಣಿದಾಂಡು ಆಡ್ಯಾನ |
ಚಿಕ್ಕ ಹೊಳಿ ದಾಟಿ ತೊರೆಗಲ್ಲ | ಬಾಲ್ಯಾರ |
ಚಿತ್ರದ ಕೊಡಕ ಚಿಣಿ ಬಡೆದು||
ಸಕ್ಕರಿ ಸವಿಗಾರಾ ವೀಳ್ಯದ ರುಚಿಗಾರಾ |
ವೀರಭದ್ರನ ಅವತಾರಾ | ನನ ಮಗನ |
ಹ್ಯಾ೦ಗ ಸಂಬಸಲೆ ಹಡೆದವ್ವ ||