Kapu pili kola 2022: ಹುಲಿಯನ್ನು ದೈವವಾಗಿ ಪೂಜಿಸುವ ಪಿಲಿಕೋಲ | vijay karnataka

Поделиться
HTML-код
  • Опубликовано: 21 сен 2024
  • ಪರಶುರಾಮ ಸೃಷ್ಠಿಯ ತುಳುನಾಡು ದೈವಾರಾಧನೆಯ ನೆಲೆವೀಡು..ಇಲ್ಲಿ ದೇವರಿಗಿಂತ ಜಾಸ್ತಿ ಜನ ದೈವಗಳನ್ನು ಆರಾಧಿಸುತ್ತಾರೆ .ಪೃಕೃತಿಯ ಆರಾಧಕರಾಗಿರುವ ತುಳುವರು ಪೃಕೃತಿಯ ಶಕ್ತಿಗಳನ್ನೇ ದೈವಗಳಾಗಿ ನಂಬಿ ಆರಾಧಿಸುತ್ತಿದ್ದಾರೆ. ಅಂತಹ ಆರಾಧನೆಗಳಲ್ಲಿ ಅತೀ ವಿಶೇಷವಾಗಿರೋದು ಉಡುಪಿ ಜಿಲ್ಲೆಯ ಕಾಪು ಪಿಲಿ ಕೋಲ..
    ತುಳುವಿನಲ್ಲಿ ಪಿಲಿ ಅಂದರೆ ಹುಲಿ ಎಂದರ್ಥ. ಇಲ್ಲಿ ಹುಲಿಯನ್ನು ದೈವವಾಗಿ ಕಂಡು ಆರಾಧಿಸಲಾಗುತ್ತದೆ. ಇತಿಹಾಸ ಪ್ರಸಿದ್ದ ಕಾಪು ಪಿಲಿಭೂತ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಪಿಲಿ ಕೋಲ ಆರಂಭಾಗಿ ಸತತ ಐದು ಗಂಟೆಗಳ ಕಾಲ ನಡೆಯುತ್ತದೆ. .ಪಿಲಿ ದೈವ ಐದು ಗಂಟೆಗಳ ಕಾಲ ಕಾಪು ಮಾರಿಗುಡಿ ಪರಿಸರದಲ್ಲಿ ಸುತ್ತಾಡಿ ,ಬೇಟೆಯಾಡಿ, ಮುಟ್ಟಲು ಬರುವ ಅಪಾರ ಸಂಖ್ಯೆಯ ಜನರನ್ನು ಚದುರಿಸುತ್ತದೆ. ಐದು ಗಂಟೆಗಳ ಧೀರ್ಘ ಸುತ್ತಾಟದ ಬಳಿಕ ಹುಲಿ ಮಾರಿಯಮ್ಮ ಮುಂದೆ ಬಂದು‌ನಿಂತ ಬಳಿಕ ಪಿಲಿ ಕೋಲ ಮುಕ್ತಾಯ ಆಗುತ್ತದೆ.
    ಈ ಹಿಂದೆ ಕಾಪು ಜಾತ್ರೆ ಆರಂಭವಾಗಿ ಒಂಭತ್ತು ದಿನಗಳ ಬಳಿಕ ಪಿಲಿ ಕೋಲ‌ನಡೆಯುತಿತ್ತು .ಆದರೆ ಕಾಲ‌ಕ್ರಮೇಣ ಮಾರ್ಪಾಟುಗಳಾಗಿ ಈಗ ಜಾತ್ರೆ ಆರಂಭವಾದ ಐದು ದಿನಗಳ ಬಳಿಕ ನಡೆಯುತ್ತಿದೆ. ಈ ಹಿಂದೆ ಈ ಪಿಲಿಕೋಲವನ್ನು ನಿಲ್ಲಿಸಲು ಕಾರ್ಕಳ ಕೋರ್ಟ್ ಕೂಡಾ ಆದೇಶ ನೀಡಿತ್ತು.. ಆದರೆ ಆದೇಶ ನೀಡಿದ ನ್ಯಾಯಾಧೀಶರಿಗೇ ಸಮಸ್ಯೆಗಳಾದಾಗ ಎರಡು ವರ್ಷಗಳಿಗೊಮ್ಮೆ ನಡೆಸಲು ತೀರ್ಮಾನಿಸಲಾಯಿತು. ಆ ಬಳಿಕ ಎಲ್ಲರ ಕೂಡುವಿಕೆಯಲ್ಲಿ ಈಗ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿದೆ.
    ಕಳೆದ ವರ್ಷ ಕೊರೊನಾ ಕಾರಣದಿಂದ ಪಿಲಿಕೋಲ ನಡೆಸಲು ಸಾಧ್ಯವಾಗಿಲ್ಲ..ಈ ಬಾರಿ ವಿಜೃಂಭಣೆಯಿಂದ ಕೋಲ ನಡೆದಿದೆ..ಈ ಕೋಲ ಅವಿಭಜಿತ ಜಿಲ್ಲೆಗಳಲ್ಲಿ ಅತೀ ಪ್ರಸಿದ್ಧವಾಗಿದೆ.ಈ ಕೋಲ ನೋಡಲೆಂದೇ ಹತ್ತಿರದ ಜಿಲ್ಲೆಳಿಂದ ಜನ ಬರುತ್ತಾರೆ.ಹುಲಿ ಭೂತ ವನ್ನು ಮುಟ್ಟಬಾರದೆಂಬ ಪ್ರತೀತಿ ಇರೋದರಿಂದ ಅಟ್ಟಿಸಿಕೊಂಡು ಬರುವ ದೈವದಿಂದ ತಪ್ಪಿಸಿಕೊಂಡು ಜನ ಓಡುವುದೇ ಈ ಪಿಲಿ ಭೂತದ ಆಕರ್ಷಣೆ
    ಒಟ್ಟಿನ್ನಲ್ಲಿ ದೈವಾರಾಧನೆ ಯ ಮೂಲಕ ವಿಸ್ಮಯಗಳ ಪ್ರಂಪಚವಾಗಿರುವ ತುಳುನಾಡಿನಲ್ಲಿ ಎಲ್ಲರ ಹುಬ್ಬೇರಿಸುವ ಪಿಲಿಭೂತದ ಆರಾಧನೆ ನಡೆದಿದೆ. ಹಲವು ಸಂಶೋಧನೆಗಳಿಗೆ ನಾಂದಿಯಾಗಿರುವ ಈ ಅದ್ಭುತ ಆಚರಣೆ ಈ ಬಾರಿ ನಿರ್ವಿಘ್ನವಾಗಿ ನಡೆದಿದ್ದು ,ಪಿಲಿಕೋಲವನ್ನು ಈ ಬಾರಿಯೂ ಸಾವಿರಾರು ಜನ ಕುತೂಹಲ ದಿಂದ ಕಂಡಿದ್ದಾರೆ..
    #Tulunadu #Kapupilikola #Pilikola
    Our Website : Vijaykarnataka...
    Facebook: / vijaykarnataka
    Twitter: / vijaykarnataka

Комментарии •