ಪೊಳಲಿ ನಾಗರಿಕರಿಗೆ ಶಾಸಕ ರಾಜೇಶ್​​​ ನಾಯ್ಕ್ ರಿಂದ ಉಚಿತ ವಾಹನ ವ್ಯವಸ್ಥೆ l Suddi9

Поделиться
HTML-код
  • Опубликовано: 12 сен 2024
  • #polali
    ಪೊಳಲಿ ನಾಗರಿಕರಿಗೆ ಶಾಸಕ ರಾಜೇಶ್​​​ ನಾಯ್ಕ್ ರಿಂದ ಉಚಿತ ವಾಹನ ವ್ಯವಸ್ಥೆ l Suddi9
    ಬಂಟ್ವಾಳ: ಪೊಳಲಿಯಲ್ಲಿ ಹರಿಯುವ ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅಡ್ಡೂರು( ಪೊಳಲಿ) ಸೇತುವೆ ದುರಸ್ತಿ ಹಿನ್ನೆಲೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿರುವುದರಿಂದ ವಿದ್ಯಾರ್ಥಿಗಳು,ಶ್ರೀ ಕ್ಷೇತ್ರ ಪೊಳಲಿಯ ಭಕ್ತಾದಿಗಳ ಹಾಗೂ ಜನರ ನಿತ್ಯ ಓಡಾಟಕ್ಕಾಗಿ ಬಂಟ್ವಾಳ ಶಾಸಕ ರಾಜೇಶ್​​​ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವಯಕ್ತಿಕ ನೆಲೆಯಲ್ಲಿ ಉಚಿತ ಮಿನಿಬಸ್ ವಾಹನ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.ಶುಕ್ರವಾರ ಬೆಳಿಗ್ಗೆ ಪೊಳಲಿ ದೇವಾಲಯದಲ್ಲಿ ಪೂಜಾವಿಧಿವಿಧಾನ ನಡೆದ ಬಳಿಕ ದೇವಾಲಯದ ಮುಂಭಾಗದಲ್ಲಿ ಅರ್ಚಕರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಮಿನಿ ಬಸ್​​​ಗೆ ರಾಜೇಶ್ ನಾಯ್ಕ್ ಉಳಿಪಾಡಿಯವರು ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಸ್ಥಳೀಯ ನಿವಾಸಿ ಚಂದ್ರಶೇಖರ್ ಶೆಟ್ಟಿ​​​​ ಬಡ್ಕಬೈಲ್ ಜನರಿಗಾಗುವ ಸಮಸ್ಯೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್​​​​ ನಾಯ್ಕ್​​​ ಅವರ ಗಮನಕ್ಕೆ ತಂದ 24 ತಾಸಿನೊಳಗೆ ಸ್ಪಂದಿಸಿ ಒಂದು ಮಿನಿ ಬಸ್​​​ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಮಿನಿಬಸ್ ಅಡ್ಡೂರಿನಿಂದ ಪೊಳಲಿಗೆ ಮಾತ್ರ ಚಲಿಸಲಿದೆ. ಕೆಲಸಕ್ಕೆ ತೆರಳುವ ಕಾರ್ಮಿಕರು, ವಿದ್ಯಾರ್ಥಿಗಳು, ಪೊಳಲಿಗೆ ಬರುವ ಭಕ್ತರಿಗೆ ಇದು ಅನುಕೂಲವಾಗಲಿದೆ. ಜನರ ಸಮಸ್ಯೆ ಅರಿತ ಶಾಸಕ ರಾಜೇಶ್​​​ ನಾಯ್ಕ್​​ ಅವರು ಮಿನಿಬಸ್ ವಾಹನ ವ್ಯವಸ್ಥೆ ಮಾಡಿರುವುದಕ್ಕಾಗಿ ನಾಗರಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು.

Комментарии •