Shri Kumareshwar Abhang Presented by Hanagall Shri Kumar Shivayogi Seva Samithi Trust New Delhi

Поделиться
HTML-код
  • Опубликовано: 21 окт 2024
  • Shri Kumareshwar Abhang Presented by Hanagall Shri Kumar Shivayogi Seva Samithi Trust New Delhi .
    Written By Shreekant.Choukimath
    Vocal & Music By Shri Ramachandra Hadapad.
    ಅಭಂಗ ಮಹಾರಾಷ್ಟ್ರದ ಸಂತರು ತಮ್ಮ ಕಾವ್ಯಸೃಷ್ಟಿಗೆ ವಿಶೇಷವಾಗಿ ಬಳಸಿಕೊಂಡಿರುವ ಛಂದಸ್ಸು.
    ಕನ್ನಡ ಶರಣರ ವಚನಗಳಿದ್ದಂತೆ,
    ಹರಿದಾಸರ ಪದಗಳಿದ್ದಂತೆ,
    ಗುರುದ್ವಾರದ ಸಂತರ ಭಜನೆಗಳಿದ್ದಂತೆ,
    ಹಿಂದೀಸಂತರ ದೋಹಾಗಳಿದ್ದಂತೆ,
    ಮರಾಠೀಸಂತರ ಅಭಂಗ.
    ಪರಾಭಕ್ತಿಯ ಸಹಜ ಸಮಾಧಿಯ ಅವೇಶದಲ್ಲಿ ಮುಳುಗಿ ತನ್ಮಯರಾಗಿದ್ದಾಗ, ಅಪ್ರಯತ್ನವಾಗಿ ಹೊರಹೊಮ್ಮಿದ ಕಾವ್ಯಧಾರೆ ಇದು.
    ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಸೇವಾ ಸಮಿತಿ ,ಪರಮಪೂಜ್ಯ ಹಾನಗಲ್ಲ ಗುರುಕುಮಾರೇಶ್ವರರನ್ನು ಭಕ್ತಿಸಂಗೀತದ ವಿವಿಧ ಸ್ಥರಗಳಲ್ಲಿ ವಿವಿಧ ಸ್ವರಗಳನ್ನು ಪರಿಚಯಿಸಿದೆ.
    "ಅಭಂಗ" ಶಬ್ದದ ಅರ್ಥ ಭಂಗವಿಲ್ಲದ, ಅಂದರೆ ದೋಷರಹಿತ, ನಿರಂತರ ಪ್ರಕ್ರಿಯೆ, ಈ ಸಂದರ್ಭದಲ್ಲಿ ಒಂದು ಕವಿತೆಯನ್ನು ಸೂಚಿಸುತ್ತದೆ. ತದ್ವಿರುದ್ಧವಾಗಿ, ಭಜನೆಗಳೆಂದು ಪರಿಚಿತವಿರುವ ಭಕ್ತಿಗೀತೆಗಳು ಆಂತರಿಕ ಪ್ರಯಾಣದ ಮೇಲೆ ಕೇಂದ್ರೀಕರಿಸುತ್ತವೆ.
    ಅಭಂಗಗಳು ಸಮುದಾಯಕೇಂದ್ರೀಯ ಅನುಭವದ ಹೆಚ್ಚು ಉತ್ಸಾಹಿ ಅಭಿವ್ಯಕ್ತಿಗಳಾಗಿವೆ.
    ಹಾಗೆಯೇ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರಿಗೆ,
    ಅರ್ಥ ಭಂಗವಿಲ್ಲದ,
    ದೋಷರಹಿತ,
    ನಿರಂತರ ಪ್ರಕ್ರಿಯೆ ಎಂಬಂತೆ ಅಭಂಗ ಸ್ವರೂಪದ ,ಶಿಶು ಸಾಹಿತ್ಯಕ್ಕೆ
    ರಾಗ ಸಂಯೋಜನೆ ಗಾಯನದ ಲೋಕಾರ್ಪಣೆ.
    ಗಾಯನ ಮತ್ತು ಸಂಗೀತ : ಶ್ರೀ ರಾಮಚಂದ್ರ .ಹಡಪದ.
    ರಚನೆ: ಶ್ರೀಕಂಠ.ಚೌಕೀಮಠ
    ಇದು ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಪ್ರಸ್ತುತಿ

Комментарии • 4