ಭಾರತದ ಈ ಹಳ್ಳಿಯ ಮನೆಗಳಿಗೆ, ಬ್ಯಾಂಕ್‌ಗೆ ಬಾಗಿಲುಗಳೇ ಇಲ್ಲ, ಕಳ್ಳತನವೂ ನಡೆದಿಲ್ಲ!! ಜನರಲ್ಲಿರುವ ನಂಬಿಕೆ ಏನು? ..

Поделиться
HTML-код
  • Опубликовано: 11 окт 2024
  • ಭಾರತದ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿ ಶನಿ ಶಿಂಗ್ನಾಪುರ್‌ ಎಂಬ ಗ್ರಾಮ ಇದೆ. ಈ ಗ್ರಾಮದ ವಿಶೇಷವೆಂದರೆ ಈ ಗ್ರಾಮದ ಯಾವುದೇ ಮನೆಗಳಿಗೇ ಬಾಗಿಲೇ ಇಲ್ಲ, ಮನೆ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಆದರೆ ಇಲ್ಲಿ ಯಾರ ಮನೆಯಲ್ಲೂ ಬಾಗಿಲುಗಳು ಮಾತ್ರ ಇಲ್ಲ,
    ಇದುವರೆಗೆ ಒಂದೂ ಕಳ್ಳತನ ನಡೆದಿಲ್ಲ
    ಇಲ್ಲಿಯ ಮನೆಗಳಿಗೆ ಬಾಗಿಲು ಇಲ್ಲ, ಆದರೆ ಈ ಗ್ರಾಮದೊಳಗೆ ಬಂದು ಕಳ್ಳತನ ಮಾಡುವ ಧೈರ್ಯ ಮಾತ್ರ ಯಾವುದೇ ಕಳ್ಳನಿಗೆ ಇಲ್ಲ. ಇದುವರೆಗೆ ಈ ಹಳ್ಳಿಯಲ್ಲಿ ಒಂದೇ ಒಂದು ಕಳ್ಳತನ ನಡೆದಿಲ್ಲ. 2010ರಲ್ಲಿ ಒಬ್ಬರು ತಮ್ಮ 35, 00 ಕಳ್ಳತನವಾಗಿದೆ ಎಂದು ಹೇಳಿ ದೂರು ನೀಡಿದ್ದರು. ಆದರೆ ಪರಿಶೀಲಿಸಿದಾಗ ಆ ಕಳ್ಳತನ ಗ್ರಾಮದ ಹೊರಭಾಗದಲ್ಲಿ ನಡೆದಿತ್ತು.
    ಇಲ್ಲಿನ ಬ್ಯಾಂಕ್‌ಗಳಿಗೂ ಬಾಗಿಲುಗಳಿಲ್ಲ
    ದೇವರು ಈ ಗ್ರಾಮವನ್ನು ರಕ್ಷಿಸುತ್ತಾನೆ, ಮನೆಗೆ ಬಾಗಿಲುಗಳು ಇಟ್ಟರೆ ಒಳಿತಾಗುವುದಿಲ್ಲ ಎಂಬ ಭಾವನೆ ಗ್ರಾಮಸ್ಥರಲ್ಲಿದೆ. ಗ್ರಾಮಸ್ಥರ ಈ ಭಾವನೆಗೆ ಧಕ್ಕೆಯಾಗದಂತೆ ಅಲ್ಲಿನ ಬ್ಯಾಂಕ್‌ಗಳಲ್ಲಿ ಕೂಡ ಯಾವುದೇ ಬಾಗಿಲುಗಳಿಲ್ಲ. ಆದರೆ ಕೂಲಂಕಷವಾಗಿ ನೋಡಿದರೆ ಬ್ಯಾಂಕ್‌ನಲ್ಲಿ ರಿಮೋಟ್‌ ಕಂಟ್ರೋಲ್ ಎಲೆಕ್ಟ್ರೋ ಮ್ಯಾಗ್ನೆಟ್ ಲಾಕ್‌ ಸಿಸ್ಟಮ್ ಇದೆ, ಅಲ್ಲದೆ ಸಂಜೆ ಹಣವನ್ನೆಲ್ಲಾ ಸಮೀಪದ ಬ್ಯಾಂಕ್‌ಗೆ ವರ್ಗಾಯಿಸಲಾಗುವುದು.
    ಜನರಲ್ಲಿರುವ ನಂಬಿಕೆ ಏನು?
    ಗ್ರಾಮಸ್ಥರು ಹೇಳುವ ಪ್ರಕಾರ ಎಷ್ಟೋ ವರ್ಷಗಳ ಹಿಂದೆ ಆ ಗ್ರಾಮದಲ್ಲಿ ಶನಿ ಪ್ರತ್ಯಕ್ಷವಾಗಿ ಈ ಗ್ರಾಮದ ಮನೆಗಳಿಗೆ ಬಾಗಿಲು ಇರಬಾರದು, ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದನಂತೆ, ಅಲ್ಲಿಂದ ಆ ಗ್ರಾಮದ ಮನೆಗಳಿಗೆ ಬಾಗಿಲುಗಳಿಲ್ಲ ಎನ್ನುತ್ತಾರೆ. ಅಲ್ಲದೆ ಅಲ್ಲಿಯ ಜನರ ನಂಬಿಕೆಗೆ ಇದುವರೆಗೆ ಮೋಸವಾಗಿಲ್ಲ, ಆದ್ದರಿಂದ ಶನಿ ಮಹಾತ್ಮ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾನೆ ಎಂಬ ನಂಬಿಕೆ ಬಲವಾಗಿದೆ.
    ಇದರ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ

Комментарии • 1