ಮಹಿಳಾ ಜಾಗೃತಿ ಹಾಡು: ಮೆರವಣಿಗೆ ಹೊರಡುತ್ತಾರೆ | A song of women’s awareness march

Поделиться
HTML-код
  • Опубликовано: 20 авг 2024
  • ಕರ್ನಾಟಕದ ಜೀವಪರ, ಮಹಿಳಾಪರ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇರುವ ಸಂಘಸಂಸ್ಥೆಗಳು ಹಾಗೂ ವ್ಯಕ್ತಿಗಳು ಒಗ್ಗೂಡಿ ರಚಿಸಿರುವ ಸೋದರಿತ್ವದ ಜಾಲ "ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ". ಪ್ರೀತಿಯ ರಾಜಕಾರಣವನ್ನು ಪ್ರತಿಪಾದಿಸುವ ಒಕ್ಕೂಟವು ನಡೆಸುವ ಲಿಂಗಸೂಕ್ಷ್ಮತಾ ಕಾರ್ಯಾಗಾರ `ಅರಿವಿನ ಪಯಣ’. ಅರಿವಿನ ಪಯಣದ ವೀಡಿಯೋ ಚಿತ್ರೀಕರಣವು ಶಿವಮೊಗ್ಗದಲ್ಲಿ 2022ರ ಜನವರಿ 1 ಮತ್ತು 2ನೇ ತಾರೀಕು ನಡೆಯಿತು. ಇಲ್ಲಿರುವ ವೀಡಿಯೋದಲ್ಲಿ ಮಹಿಳಾ ಜಾಗೃತಿಯ ʼಮೆರವಣಿಗೆ ಹೊರಡುತ್ತಾರೆʼ ಹಾಡಿದೆ.
    ಯಾವುದೇ ದಮನವನ್ನು ಹೆಚ್ಚು ದಿನ ಸಹಿಸಿಕೊಂಡಿರಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ದಮನಿತ ಮನಸ್ಸು ಬಂಡೇಳುತ್ತದೆ, ತನ್ನಂತೆ ಸಮಾನ ದುಃಖಿತರನ್ನು, ವಂಚಿತರನ್ನು ಗುರುತಿಸಿಕೊಳ್ಳುತ್ತದೆ. ಹಿಂಸೆಯ ಕಗ್ಗತ್ತಲಲ್ಲಿ ಶಾಂತಿಯ ಕಂದೀಲು ಹಿಡಿದು, ದ್ವೇಷದ ಬೇರು ಕಿತ್ತು ಪ್ರೀತಿಯ ಬೀಜ ಬಿತ್ತುತ್ತ ಜೊತೆಗೂಡಿ ಮಹಿಳೆಯರು ಹೊರಡುತ್ತಾರೆ. ಘನತೆ ಉಳಿಸಲು, ದೌರ್ಜನ್ಯ ಅಳಿಸಲು, ಸಮತೆಯ ಮೈತ್ರಿಯ ಕನಸು ಕಾಣುತ್ತಾ, ಸಮಾನತೆಯ ಹಕ್ಕು ಕೇಳುತ್ತಾ ಸಂಘಟಿತರಾಗಿ ಮೆರವಣಿಗೆ ಹೊರಡುತ್ತಾರೆ; ಈ ನೆಲದ ಹಾದಿಬೀದಿಗಳ ತುಂಬುತ್ತಾರೆ ಎಂದು ಈ ಗೀತೆ ಆಶಾಭಾವನೆ ವ್ಯಕ್ತಪಡಿಸುತ್ತದೆ.

Комментарии • 6

  • @himaarl3490
    @himaarl3490 2 года назад +2

    ಸಮಾಜ ಮುಖಿ ನಿಮ್ಮ ಕಾರ್ಯಕ್ಕೆ ಎಲ್ಲರಿಗೂ ಧನ್ಯವಾದಗಳು

  • @user-pu8kf5we7i
    @user-pu8kf5we7i 2 года назад +2

    ಅದ್ಭುತ , ಎಲ್ಲರಿಗೂ ಧನ್ಯವಾದಗಳು.💐

  • @jamuchandram3196
    @jamuchandram3196 Год назад

    ಅರ್ಥಪೂರ್ಣ ಜಾಗೃತಿ ಹಾಡು

  • @salkodmugwaambigarakeri2079
    @salkodmugwaambigarakeri2079 Год назад

    Super amupama madeam

  • @varshinibj9992
    @varshinibj9992 Год назад

    👌👌👌

  • @roselinedsouza3334
    @roselinedsouza3334 5 месяцев назад