ಶ್ರೀ ಆನುಮಲೆ ಮಹದೇಶ್ವರ ಸ್ವಾಮಿ | ಸಾಲು ಬೆಟ್ಟಗಳ ಸರದಾರ ಸಾವಿರ ಮಲೆಗಳ ಸಾಹುಕಾರ | MM Hills | Male Mahadeshwara

Поделиться
HTML-код
  • Опубликовано: 12 сен 2024
  • ದಟ್ಟ ಕಾನನದ ಚಿಕ್ಕ ಮಡಿಲಲ್ಲಿ ಪುಟ್ಟ ಪುಟ್ಟ ನಡೆಯ ಮುದ್ದು ಮಾದಪ್ಪ ಮಹದೇಶ್ವರ ಸ್ವಾಮಿಯವರು ಮಲೆಮಲೆಯ ಸಂಚಾರದ ಸಮಯದಲ್ಲಿ ಕಾರಯ್ಯ ಮತ್ತು ಬಿಲ್ಲಯ್ಯನವರು ಕಾಡು ಎಮ್ಮೆಗಳನ್ನು ಮೇಯಿಸಿಕೊಂಡು ಬರುವಾಗ ಮಾದೇಶ್ವರ ಸ್ವಾಮಿಯು ಆನೆಮಲೆಯ ಬಯಲು ಕಾನನ ಪ್ರದೇಶದಲ್ಲಿ ಮಲಗಿದ್ದ ಕಾಲದಲ್ಲಿ ಕಾಡೆಮ್ಮೆಗಳನ್ನು ನೋಡಿ ಕಾಡು ಎಮ್ಮೆ ಎಂದರೆ ದೊಡ್ಡ ಹಣೆ(ದೊಡ್ಡಾಣೆ) ಎಂದು ನಾಮಕರಣ ಮಾಡಿರುತ್ತಾರೆ. ಶ್ರೀ ಕ್ಷೇತ್ರ ಎಪ್ಪತ್ತೇಳು ಮಲೆಗಳಲ್ಲಿ ಮಹದೇಶ್ವರ ಸ್ವಾಮಿಯ ಕೂಗು ಕಾಗಲೇಯ ಆನುಮಲೆ ಮೊದಲ ಮಲೆಯಾಗಿದೆ. ಶ್ರೀ ಮಲೆ ಮಹದೇಶ್ವರರು ಈ ಮಲೆಯನ್ನು ಆನೆಯ ಆಕಾರದಂತೆ ಸೃಷ್ಟಿಸಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಸ್ವಾಮಿಯವರು ಹುಟ್ಟುಬಂಡೆಯ(ಹುಟ್ಟುಗಲ್ಲು) ಮೇಲೆ ಆನುಮಲೆ ಎಂದು ಆಗಿನ ಕಾಲದ ಭಾಷೆಯಲ್ಲಿ ಬರೆದಿರುವ ಶಾಸನವಿದೆ.
    ಶ್ರೀ ಮಹದೇಶ್ವರ ಸ್ವಾಮಿಯವರ ಈರುಗಲ್ಲು, ವೀರಗಲ್ಲು, ಆನೆಯ ಹೆಜ್ಜೆಯ ಗುರುತು, ಆನೆಯ ಮೂಗಿನ ಗುರುತಿನ ಪವಾಡವಿದೆ. ನೋಡಲು ಸುತ್ತಲೂ ಸುಂದರವಾದ ಕಾನನದ ನಡುವೆ ಬೆಟ್ಟಗುಡ್ಡಗಳು ರಮ್ಯ ಆಕರ್ಷಿತವಾಗವೆ. ಆನುಮಲೆಯ ಸುತ್ತಲು ಕಣ್ಣಿಗೆ ಕಾಣುವಷ್ಟು ದೂರದ ಮಲೆಗಳನ್ನು ನೋಡಬಹುದು.
    ಆನುಮಲೆ ಮಹದೇಶ್ವರ ಸ್ವಾಮಿ ಅವರ ಪ್ರತಿಮೆ ನಿರ್ಮಾಣಕ್ಕಾಗಿ ತಮ್ಮ ಕೈಲಾದ ಧನ ಅಥವಾ ಕಬ್ಬಿಣ, ಸಿಮೆಂಟ್, ಮರಳು, ಎಸೆಂಟ್ ಇತ್ಯಾದಿಗಳನ್ನು ಕಾಣಿಕೆಯಾಗಿ ಕೊಟ್ಟು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ. ಕೂಡಿಟ್ಟ ಹಣಕ್ಕಿಂತ ಕೊಟ್ಟ ದಾನ ಪುಣ್ಯದ ಸಂಕೇತ, ಮಾಡಿಟ್ಟ ಸಂಪತ್ತಿಗಿಂತ ಪರರ ಹಸಿವು ನೀಗಿಸುವ ತತ್ವದ ಪರಿಯೇ ಶಿವ ಸಂಕೇತ.
    ಕೋರಣ್ಯ ನೀಡು ಕೋಡುಗಲ್ಲಯ್ಯನಿಗೆ ಈರುಗಲ್ಲಯ್ಯನಿಗೆ ವೀರುಗಲ್ಲಯ್ಯನಿಗೆ ಮಲೆಯ ಮಾದಯ್ಯನಿಗೆ.
    #Anumale #AnumaleJenumale #Mahadeshwara #AnemaleyaHasikondavare #MahadevCreations #MahadevaSwamy #MahadeshwaraSongs #MadeshwaraDayebarade #MaleMahadeshwaraBetta #MMHills #drrajkumar #UgheUgheMadeshwara #Madeshwara
    #mmhills #malemahadeshwarahills #malemahadeshwara #mahadeshwara #mahadeshwarasongs #madappa #trending #kannada #kannadanews #kannadavlogs #kannadavlog #kannadavlogger #forest #nature #tamilnadu #tamil #hills #hillstation #trekking #shiva #shivshankar #kedarnath #kedarnathtemple #mahadeshwara #karnataka #karnatakanews

Комментарии • 20