ರಾಯರು ಬಂದರು ಮಾವನ ಮನೆಗೆ raayaru bandaru

Поделиться
HTML-код
  • Опубликовано: 7 янв 2025

Комментарии • 977

  • @balur7951
    @balur7951 3 года назад +136

    😍😘ಸಾಹಿತ್ಯ ಅಂದರೇ ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಸದ್ಯ ಯಂಥಹ ವರ್ಣಣೆ ರಾತ್ರಿ ಇಂತಹ ಹಾಡು ಕೇಳಿ ಮಲಗಿದ್ರೆ ಯಲ್ಲ ಮರೆತು ಆರಾಮಾಗಿ ನಿದ್ದೆ ಬರುತ್ತೆ... ಅಲ್ವಾ ಫ್ರೆಂಡ್ಸ್ ಇದು ನನ್ನ ಅಭಿಪ್ರಾಯ... 😍😍😍😍

  • @rajendrapattar916
    @rajendrapattar916 3 года назад +315

    ಇವತ್ತಿನ ದಿನಗಳಲ್ಲಿ ಇಂತಹ ಸಂಗೀತ ಮತ್ತು ಸಾಹಿತ್ಯ ಮರಿಚಿಕೆ ಆಗಿ ಹೋಗಿದೆ..... ತುಂಬಾ ಧನ್ಯವಾದಗಳು ಕೆ. ಎಸ್. ನರಸಿಂಹಸ್ವಾಮಿಯವರಿಗೆ ...... 🙏🙏

  • @shivashankarshetty6949
    @shivashankarshetty6949 3 года назад +353

    ಕೇರಳದ ಕಾಸರಗೋಡಿನಲ್ಲಿ ‌ಈ‌‌ ಹಾಡು ಕೇಳುತ್ತಿದ್ದೇನೆ 😍

    • @ChandruGulapur
      @ChandruGulapur 2 года назад +4

      God bless you ...

    • @kingboymeghu7104
      @kingboymeghu7104 2 года назад +7

      ಧನ್ಯವಾದಗಳು ಸರ್ ನಿಮ್ಮ ಕನ್ನಡ ಪ್ರೇಮ ಪ್ರೀತಿ ‌ ಹಿಗೆಇರಲಿ

    • @rajeshagd2295
      @rajeshagd2295 2 года назад +2

      Thank you 💞

    • @ravitravi4361
      @ravitravi4361 2 года назад

      @@ChandruGulapur t6uuuuuuuiiiiiujjjjjjjjjjjjjjjjj

    • @rajendraks1
      @rajendraks1 Год назад +26

      ಕಾಸರಗೋಡು ಕರ್ನಾಟಕದ್ದೇ..

  • @malluhatti7652
    @malluhatti7652 4 года назад +176

    ಇಂತಹ ಸಾಹಿತ್ಯವನ್ನು ಬರೆದಂತಹ ಕೆ. ಎಸ್.ನರಸಿಂಹಸ್ವಾಮಿ ಅವರಿಗೆ ಅನಂತ ಕೋಟಿ ನಮನಗಳು ಸರ್

  • @manjusmg7630
    @manjusmg7630 3 года назад +129

    ಎಷ್ಟು ಸಲ ಕೇಳಿದರು ತೃಪ್ತಿ ಆಗುವುದಿಲ್ಲ... ಆನಂತ ಕೋಟಿ ಧನ್ಯವಾದಗಳು ಕೆ ಎಸ್ ನರಸಿಂಹ ಸ್ವಾಮಿ ಸರ್.... ಮತ್ತೆ ಹುಟ್ಟಿ ಬನ್ನಿ 🙏🙏

  • @PrakashMuttalageri
    @PrakashMuttalageri Год назад +36

    ನಮ್ಮ ತುಳು ನಾಡು ಮಂಗಳೂರಲ್ಲಿ ಈ ಹಾಡು ಕೇಳಿದರೆ ಏಷ್ಟೋ ಆನಂದವಾಯಿತು 🥰♥️😍

  • @Mahmad_Asif
    @Mahmad_Asif 4 года назад +176

    ಕನ್ನಡ ನಮ್ಮ ಹೆಮ್ಮೆಯ ಭಾಷೆ 😍💛❤️
    ನಮ್ಮ ಕನ್ನಡ ಸಾಹಿತ್ಯ 🙏💜

    • @sethuraghavan1160
      @sethuraghavan1160 3 года назад +2

      It's written by k s narasimha swamy an iyengar not an tamilian... (n) ending names are all not tamilians...first you learn kannada history before commenting on others.

  • @bhagyashreekm3155
    @bhagyashreekm3155 3 года назад +47

    ಈ ಹಾಡನ್ನು ಪ್ರತಿಭಾ ಕಾರಂಜಿಯಲ್ಲಿ ಹಾಡಿ 1st ಬಹುಮಾನ ಬಂದಿತ್ತು 🤩❤🌼🌼

    • @amareshkurli2799
      @amareshkurli2799 3 года назад

      Well done good luck Soubhagya

    • @rameshnatikar3449
      @rameshnatikar3449 Год назад

      Shree avare nim tumba chenagi hadtira ide song matome hadi video upload madi....

  • @ramesharamesha4504
    @ramesharamesha4504 5 месяцев назад +10

    ನಾನು ಲಂಬಾಣಿ ಆಗಿದ್ರು ಇಂತಹ ಜಾನಪದ ಹಾಡು ಗಳಿಗೆ ತುಂಬಾ ಇಷ್ಟ ಪಡುತೇನೇ l love this song ❤️❤️❤️❤️❤️❤️❤️ತುಂಬಾ ಅಚ್ಚು ಕಟ್ಟಾಗಿ ವಿವರಿಸಿದ್ದಾರೆ ಈ ಹಾಡಿನಲ್ಲಿ so ಹಾಡಿದವರಿಗೆ ತುಂಬಾ ಧನ್ಯವಾದಗಳು ನನ್ನ ಕಡೆ ಯಿಂದ ನಾನು ನೋಡಿದ್ದು 10-7-2024 ನಲ್ಲಿ

  • @Abbas_abbu
    @Abbas_abbu 10 дней назад

    ಅದೆಷ್ಟು ಸೊಗಸಾದ ಹಾಡು! ಹಳೇ ಹಾಡುಗಳ ಕೇಳೋದೇ ಒಂದು ಆನಂದ ❤

  • @nayanacharya3263
    @nayanacharya3263 4 года назад +101

    ಅಮೋಘ ಸಾಹಿತ್ಯ ..ಕನ್ನಡ ಸಾಹಿತ್ಯ ಕಲಿಗಳಿಗೆ ಸರಿಸಾಟಿ ಇಲ್ಲವೇ ಇಲ್ಲ ...🙏🙏♥️♥️♥️😘😘😘😘

  • @gopalcharir2494
    @gopalcharir2494 2 года назад +32

    ಮನಸ್ಸಿನ ನೋವು ದುಃಖಗಳು ಮಾಯವಾಗುವ ಇಂತಹ ಹಾಡು ಕೇಳುವರಿಗೆ ಎಂಥ ಸೊಗಸಾದ ಹಾಡು ಇದು ಇಂತಹ ಹಾಡುಗಳು ಎಂದಿಗೂ ಇರಬೇಕು ಮತ್ತೆ ಎಲ್ಲಿ ಹೋದರು ಸಹ ಇಂಥ ಹಾಡುಗಳು ಕೇಳಬೇಕು ಆಗಿವೆ ನಾವು ಕನ್ನಡದಲ್ಲಿ ಹುಟ್ಟಿದ್ದಕ್ಕೆ ನಮ್ಮ ಅದೃಷ್ಟ.

  • @hemanthhemanth8851
    @hemanthhemanth8851 2 года назад +24

    ಭಾರತ ದೇಶದ ಶ್ರೀಮಂತ ಭಾಷೆ ನಮ್ಮ ಕನ್ನಡ

  • @chandrashekhara1
    @chandrashekhara1 3 года назад +22

    ನೆನಪಾಗುತ್ತಿದೆ ಎಂದೋ‌‌ ರೇಡಿಯೋದಲ್ಲಿ‌ ಕೇಳುತ್ತಿದ್ದ ಗೀತೆ‌. ಅಂದು ಸಮಯವಿತ್ತು ಹಾಡು ಕೇಳಲು, ಇಂದು ಬಗೆ ಬಗೆ ಮಾಧ್ಯಮಗಳಿದ್ದರು ಈ ಗೀತೆಗಳು ಕಾಣದೆ(ಕೇಳದೆ) ಇರುವುದು ನಮ್ಮ‌ ದುರಾದೃಷ್ಟ..

  • @pavithracl9835
    @pavithracl9835 4 года назад +164

    ಅಳಿಯ ನ ಆಗಮನ ಊಟ ಉಪಚಾರ ಎಲ್ಲ ಸೂಪರ್ ಆದ್ರೆ ಹೆಂಡತಿ ಕಾಣದೇ ಪರಿತಪಿಸೋ ರಾಯರ ಮುಖ ನೋಡಲು ಆನಂದ 👏💐💐💐🌹🌷

  • @raghavendrapattar2923
    @raghavendrapattar2923 5 лет назад +69

    ಮಾವನ ಮನೆಗೆ ಹೋಗೋ ಸಂದರ್ಭ ಓಹೋ ಅದ್ಬುತ....

  • @Crazyindiantaste
    @Crazyindiantaste 5 лет назад +300

    ಹಕ್ಕಾ ಅವನೌನ ಕನ್ನಡಕ್ಕಿಂತ ಚಂದ ಯಾವದಿಲ್ಲ... 😘😘😘

  • @lingarajuhr1965
    @lingarajuhr1965 4 года назад +102

    ನಮ್ ಕನ್ನಡ ಹಾಡುಗಳು ಇತರ ಭಾಷೆಗಳ ಹಾಡುಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಬಿಡಿ... ಸೊಗಸಾದ ಹಾಡು...

    • @ashokasrinivasrao8929
      @ashokasrinivasrao8929 3 года назад +6

      ಚೆ ಎಂಥಾ ತಪ್ಪುಕಲ್ಪನೆ ತಮ್ಮದು ಬೇರೆ ಭಾಷೆಗಿಂತ ನಮ್ಮ ಭಾಷೆ ಉತ್ತಮ ಅತ್ಯುತ್ತಮ ಸುಂದರ ಕೆಳಕ್ಕೆ ಬಹಳ ಸೊಗಸು. ಇಂಗ್ಲೀಷ್ ಹಾಡುಗಳಂತೂ ಬಹಳ ವರ್ಸ್ಟ್ ಏನು ಚೆನ್ನಾಗಿಲ್ಲ

    • @pavankannada7358
      @pavankannada7358 2 года назад +1

      ಇತರ ಭಾಷೆಯ ಹಾಡುಗಳು ನಮ್ಮ ಭಾಷೆಯ ಹಾಡಿಗೆ ಯಾವುದೇ ರೀತಿಯ ಸರಿಸಾಟಿ ಅಲ್ಲ.ಮೂಢ

  • @baluperfecteditz2211
    @baluperfecteditz2211 4 года назад +52

    ಇಂತ ಹಾಡುಗಳಿಗೆ ಇವತ್ತಿನ ಹಾಡುಗಳು ಯಾವ ಎಣಿಕೆಯಲ್ಲೂ ಸಮನಿಲ್ಲ..😍💝🙌

  • @lohitkalerkaler6838
    @lohitkalerkaler6838 6 лет назад +59

    ಬಾಳ ಚಲೂ ಐತ್ರೀ ಈ ಹಾಡು ಮನಸ್ಸಿಗೆ ಬಾಳ ಖುಷಿ ಆಯಿತು

  • @pavithracl9835
    @pavithracl9835 4 года назад +83

    ಚಂದಕಿಂತ ಚಂದ ಈ ಹಾಡು, ಸಾಹಿತ್ಯ 💐🌹❤️

  • @girishbastal15
    @girishbastal15 5 лет назад +63

    ಈ ಹಾಡು... ಬ್ರಿಟಿಷರ ಕಾಲದಲ್ಲಿ ನಡೆದ ಘಟನೆಯ ಆಧಾರದ ಮೇಲೆ ಈ ಸಿನಿಮಾ ಮತ್ತು ಹಾಡು ಮಾಡಿದ್ದಾರೆ (ಬಹಳ ಚೆನ್ನಾಗಿದೆ)

  • @_abhi_abhi
    @_abhi_abhi 2 года назад +18

    ಅಮೆರಿಕಾದ ಚಿಕಾಗೋದಲ್ಲಿ ಈ ಹಾಡನ್ನು ಕೆಳೂತಿದ್ದೇನೆ 💙💙👍👍

  • @thrimurthyh.s7427
    @thrimurthyh.s7427 2 месяца назад +1

    ಈ ಹಾಡನ್ನು ಕೇಳುತ್ತಿದ್ದರೆ ನಮ್ಮ ಮಾವನ ಮನೆ ನೆನಪಿಗೆ ಬರುತ್ತದೆ...❤

  • @veerakademaneyoutube5175
    @veerakademaneyoutube5175 6 лет назад +197

    ನಾನು ಮತ್ತು ನಮ್ಮ ಸಂಘವು ಕನ್ನಡದ ಪ್ರೇಮಕವಿ ಕೆ.ಎಸ್.ನರಸಿಂಹ ಸ್ವಾಮಿಯವರಿಗೆ
    ನಮಸ್ಕಾರ ಸಲ್ಲಿಸುತ್ತದೆ. ಪಂಪ ಪ್ರಶಸ್ತಿ ಪಡೆದ ಮಹಾಕವಿ ಜನಿಸಿದ್ದು
    25-1-1926 . ಮಹಾಕವಿಯವರಿಗೆ ನಮನ.

  • @SaruParit-y1o
    @SaruParit-y1o 4 месяца назад +1

    ಎಲ್ಲಾ ಕಾಲಕ್ಕೂ ಈ ಹಾಡು ಕೇಳುವಂತಹವು. ನಮ್ಮ ಕನ್ನಡದ ಕವಿಗಳು ಬರಿದಿರುವ ಪ್ರತಿಯೊಂದು ಹಾಡು ಎಂದೆಂದಿಗೂ ಜೀವಂತ.ಎಂದೆಂದಿಗೂ ಕೇಳುತಲೇ ಇರುತ್ತೇವೆ.❤❤❤🙏🙏🙏

  • @mallikmalli3546
    @mallikmalli3546 3 года назад +19

    ಇಂತಹ ನೀತಿ ಯುಕ್ತ ಸಂಸ್ಕಾರ ವಿಚಾರದ ಹಾಡುಗಳು ‌ಈಗಿನ‌ ಪೀಳಿಗೆಗೆ ಬೇಕಿಲ್ಲ ತುಂಬಾ ವಿಷಾದದ ‌ಸಂಗತಿ

  • @sunils.k3732
    @sunils.k3732 6 лет назад +18

    ನಮ್ಮ ಕನ್ನಡ ಹಾಡು ಕೇಳಿದರೆ ಮತ್ತೆ ಮತ್ತೆ ಕಳಬೀಕು ಅನಿಸುತ್ತದೆ

  • @m.malagi.4322
    @m.malagi.4322 5 лет назад +62

    ಕನ್ನಡ ನಾಡು,ನುಡಿ, ಕಲೆ ಮತ್ತು ಸಾಹಿತ್ಯ, ಸಂಸ್ಕೃತಿ ಅಜರಾಮರ.🙏

  • @mallapparagi113
    @mallapparagi113 12 дней назад

    ತುಂಬಾ ಅದ್ಬುತವಾದ ಸಾಹಿತ್ಯ ಎಷ್ಟು ಕೇಳಿದರು ಇನ್ನು ಕೇಳಬೇಕು ಅನ್ನೋ ಹಂಬಲ..❤ ಕನ್ನಡ ❤

  • @Manuhiremath.
    @Manuhiremath. 4 года назад +160

    ರೇಡಿಯೊದಲ್ಲಿ ಬರುತ್ತಿತ್ತು ಬಂದಾಗ
    ಆ ರೇಡಿಯೊನೆ ಕಿವಿಗೆ ಇಟ್ಟುಕೊಂಡು ಕೇಳುತಿದ್ದೆವು.ಆ ಮಜಾನೆ ಬೇರೆ ಇತ್ತು.
    ಈಗ ನನ್ ಹತ್ರ ಕಾಸ್ಟಲಿ ಮ್ಯೂಜಿಕ್ ಸಿಸ್ಟಮ್ ಇದೆ ಆದ್ರೆ ಆ ಪೀ..ಲ್ ಸಿಗುತ್ತಿಲ್ಲ

  • @pavithracl9835
    @pavithracl9835 4 года назад +57

    ಮಡದಿಯ ಹುಡುಕಾಟ, ಒದ್ದಾಟ ವಾಹ್ ಸೂಪರ್ ❤️

  • @parashurammalipatil2598
    @parashurammalipatil2598 5 лет назад +10

    ಇಂತಹ ಹಾಡುಗಳು ಕನ್ನಡ ಭಾಷೆಯಲ್ಲಿ ಬಿಟ್ಟರೆ ಬೇರೆ ಯಾವ ಭಾಷೆಯಲ್ಲಿ ಸಿಗುವುದಿಲ್ಲ ಅದ್ಭುತ ಸಾಲುಗಳು

  • @nagarajsmahashetty9084
    @nagarajsmahashetty9084 4 года назад +14

    ಅದ್ಭುತ ವಾದ ಹಾಡು ಕನ್ನಡ ಬಳಿಸಿ ಕನ್ನಡ ಉಳಿಸಿ
    ಜೈ ಕರ್ನಾಟಕ ಮಾತೆ ವಂದೇ ಮಾತರಂ 🚩🇮🇳🙏

    • @pavankannada7358
      @pavankannada7358 2 года назад

      ಕನ್ನಡ ಬೆಳೆಸಬೇಕು ಮೊದಲು

    • @pavankannada7358
      @pavankannada7358 2 года назад

      ವಂದೇ ಮಾತರಂ ಗ್ಯಂಗ್ ಜನರಿಂದ ಕನ್ನಡ ಹಾಳಾಗಿದೆ

  • @ayeshabanu6107
    @ayeshabanu6107 6 лет назад +96

    The sweetness, Melody of Kannada songs can't be found any where.... Proud to be a kannadiga....🎵🎵🎵👌

  • @sidduwaghmare6988
    @sidduwaghmare6988 2 года назад +6

    ನಾನು ಚಿಕ್ಕವನಾಗಿದ್ದಾಗ ಈ ಸಾಂಗ್ ಕೇಳಿದರೆ ಇವತ್ತು ಕೇಳಿ ತುಂಬಾ ಸಂತೋಷ ಆಗ್ತಾ ಇದೆ ಇಂಥ ಸಾಂಗು ಇವತ್ತು ನಾ ಎಲ್ಲಿ ಕೇಳಿಲ್ಲ ಈ ಸಾಂಗ್ ಬಿಟ್ಟವರಿಗೆ ತುಂಬಾ ಧನ್ಯವಾದಗಳು

  • @pavithracl9835
    @pavithracl9835 4 года назад +104

    2021 ರಲ್ಲಿ ನೋಡ್ತಾಯಿದೀನಿ ನೀವು 👍

  • @pavithracl9835
    @pavithracl9835 Год назад +2

    ನನ್ನ ಅಚ್ಚು ಮೆಚ್ಚಿನ ಗೀತೆಗಳಲ್ಲಿ ಇದು ಮೊದಲನೇ ಸ್ಥಾನ ❤ನಿಮಗೆ

  • @sinchanagowda4322
    @sinchanagowda4322 5 лет назад +4

    ಇಂತಹ ಹಾಡುಗಳನ್ನು ಬರೆದಿರುವ ಕೆ.ಎಸ್.ನರಸಿಂಹಸ್ವಾಮಿಯವರಿಗೆ ನಮ್ಮ ನಮನ

  • @suresh5601
    @suresh5601 2 месяца назад

    ಅಧ್ಬುತವಾದ ಸಾಹಿತ್ಯ
    ನಮ್ಮ ಹೆಮ್ಮೆಯ ಕವಿ ಕೆ.ಎಸ್.ನರಸಿಂಹ ಸ್ವಾಮಿ ಯವರು

  • @sohananira4286
    @sohananira4286 5 лет назад +81

    ಬಾಲ್ಯದ ನೆನಪು ತರುವ ಹಾಡು

  • @raghurraghur1446
    @raghurraghur1446 2 года назад +5

    ರಾತ್ರಿ ನಿಶ್ಯಬ್ದವಾದ ತಂಪಾದ ವಾತಾವರಣದಲ್ಲಿ ಈ ಹಾಡನ್ನು ಕೇಳುತ್ತಿದ್ದರೇ ಅದರ ಮಜಾನೇ ಬೇರೆ💕💕

  • @pavithracl9835
    @pavithracl9835 5 лет назад +65

    ಅಳಿಯ ನ ಸತ್ಕಾರ ಹೆಂಡತಿ ಮನೇಲಿ 👌👍

    • @devrajdevraj2849
      @devrajdevraj2849 3 года назад +2

      ಈಗಿನ ಕಾಲದಲ್ಲಿ ಯಾವ ಸತ್ಕಾರನು ಇಲ್ಲ

  • @chandrashekhara1
    @chandrashekhara1 3 года назад +7

    ಪದುಮಳು ನಕ್ಕಳು, ರಾಯರು ನಗಲಿಲ್ಲ ಎಂತಹ ಅದ್ಬುತವಾದ‌ ಸಾಲು.

  • @ravij3341
    @ravij3341 4 года назад +24

    One of the beautiful song of yester years & sung by late Shri Ananthaswamy. It's an evergreen song. Beautifully sung

  • @srustidm8037
    @srustidm8037 6 лет назад +4

    ಇಂತಹ ಹಾಡುಎಂದರೆ ನನಗೆ ತುಂಬ ಇಷ್ಟವಾಯಿತು ಧನ್ಯವಾದಗಳು ಸಾರ್

  • @pavithracl9835
    @pavithracl9835 5 лет назад +8

    ಇಂತಹ ಸುಮಧುರವಾದ ಹಾಡುಗಳು ಮತ್ತಷ್ಟು ಬರಲಿ

    • @78cheeni
      @78cheeni 4 года назад

      ಅದು ಅಸಾಧ್ಯ..ನರಸಿಂಹಸ್ವಾಮಿ ಅವರೊಬ್ಬರೇ ಬರೆಯಲಿಕ್ಕೆ ಸಾದ್ಯ

    • @hanumeshpoojarhanumeshpooj468
      @hanumeshpoojarhanumeshpooj468 4 года назад

      Enaka ninge astondu estana e song bahala comment ninve ive

    • @pavithracl9835
      @pavithracl9835 4 года назад

      @@hanumeshpoojarhanumeshpooj468 ಹೌದು ಈ ಹಾಡು ನಂಗೆ ತುಂಬಾ ಅಚ್ಚುಮೆಚ್ಚು ಅದಿಕ್ಕೆ ಹೆಚ್ಚು ಕಾಮೆಂಟ್ಸ್ ಮಾಡಿದೀನಿ 👏👍

  • @hanamantpujar4702
    @hanamantpujar4702 Год назад +1

    ಈ ಹಾಡು ಕೆಳುತಾಯಿದ್ದರೆ ಕೆಳುತಾನೆ ಇರಬೇಕೂ ಅನಿಸುತ್ತೆ 💖💖

  • @vikramvikramnayak3849
    @vikramvikramnayak3849 5 лет назад +12

    Super wonderful is nice songs ,ಕನ್ನಡವೇ ಸತ್ಯ ಕನ್ನಡವೇ ನಿತ್ಯ .ಜೈ ಕರ್ನಾಟಕ ಮಾತೇ

  • @sunithapraveen18
    @sunithapraveen18 3 месяца назад +1

    ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು |
    ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು | ತುಂಬಿದ ಚಂದಿರ ಬಂದಿತ್ತು ||
    ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು |
    ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ ತಂಬಿಗೆ ಬಂದಿತ್ತು | ಒಳಗಡೆ ದೀಪದ ಬೆಳಕಿತ್ತು ||
    ಘಮಘಮಿಸಿವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು |
    ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ ರಾಯರ ಕರೆದಿತ್ತು | ಭೂಮಿಗೆ ಸ್ವರ್ಗವೇ ಇಳಿದಿತ್ತು ||
    ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು |
    ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು | ಪದುಮಳು ಹಾಕಿದ ಹೂವಿತ್ತು ||
    ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತ |
    ಬಿಸಿ ಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ | ಮಡದಿಯ ಸದ್ದೇ ಇರಲಿಲ್ಲ ||
    ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮ |
    ಇನಿದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ | ನಕ್ಕಳು ರಾಯರು ನಗಲಿಲ್ಲ ||
    ಏರುತ ಇಳಿಯುತ ಬಂದರು ರಾಯರು ಬಂದರು ದೂರದ ಊರಿಂದ |
    ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ | ಪದುಮಳ ಬಳೆಗಳ ದನಿಯಿಲ್ಲ ||
    ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ |
    ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ | ಯಾರಿಗೆ ಎನ್ನಲು ಹರುಷದಲಿ ||
    ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ | ರಾಯರ ಕೋಣೆಯಲಿ

  • @syedshabbir4539
    @syedshabbir4539 5 лет назад +24

    ಅರ್ಥಗರ್ಭಿತ ಸುಮಧುರ ಹಾಡು👌

  • @gangadharnaik9376
    @gangadharnaik9376 Год назад +1

    ನಾ ಹುಟ್ಟಿ ಬೆಳೆದ ಕರುನಾಡು ಕರ್ನಾಟಕ ದಲ್ಲಿ ಈ ಸೊಗಸಾದ ಹಾಡನ್ನು ಕೇಳುತಿದ್ದೀನಿ❤️❤️

    • @santoshdalvi6141
      @santoshdalvi6141 Год назад

      मराठी येतं का ? मला मदत हवी.🎼

  • @basavakp.basavakp4163
    @basavakp.basavakp4163 6 лет назад +50

    ಮತ್ತಷ್ಟು ಇಂತಹ sang ಬರಲಿ ನಮ್ಮ ಎಲರ ಹಾರೈಕೆ

  • @anjinappashanjinappa6359
    @anjinappashanjinappa6359 2 года назад +2

    ಎಷ್ಟು ಸಲ ಕೇಳಿದರೂ ಸಾಂಗ್ ಬೇಜಾರಾಗುವುದಿಲ್ಲ ತುಂಬಾ ತುಂಬಾ ಸೂಪರ್ ಸಾಂಗ್

  • @chiranjeevic8384
    @chiranjeevic8384 4 года назад +3

    ನಮ್ಮ ಕನ್ನಡ ಕಸ್ತೂರಿ ಕನ್ನಡ . ನಮ್ಮ ಭಾಷೇನೇ ಚಂಧ

  • @prashantmallappanavar7245
    @prashantmallappanavar7245 2 года назад +1

    Aaha Yentaha Kushi aytu Tumba Adbhutavada Sundarawada Sahittya Sangita Gayana 👌😘🙏🙏🌺🍀🌱💐🌼🌻🌿🌾

  • @drvishu8299
    @drvishu8299 5 лет назад +31

    ಎಷ್ಟೊಂದು ಅರ್ಥ ಗರ್ಭಿತವಾದ ಸಾಂಗ್ ಅಲ್ವ..ಅದಕ್ಕೆ ಹೇಳುವರು Old is Gold ಅಂತ.. ಸುಪರ್

  • @mohan2304
    @mohan2304 Год назад +1

    Every film song sung by Rathnamala Prakash is just amazing. I still can't believe what stopped filmmakers from approaching her for more songs.

  • @somashekharkawalga9333
    @somashekharkawalga9333 4 года назад +10

    ಅದ್ಭುತವಾದ ಸಂಗೀತ.....
    ⚘🙏🙏🙏⚘

  • @UdayKumar-xo9ov
    @UdayKumar-xo9ov 2 года назад +1

    ಇಂತಹ ಸಾಹಿತ್ಯ ವನ್ನು ಬರೆದಿರುವ ಕವಿ ಕೆ ಎಸ್ ನರಸಿಂಹ ಸ್ವಾಮಿ ಅವರಿಗೆ ಅನಂತ ಧನ್ಯವಾದಗಳು ಸರ್

  • @shreedeviyadagi
    @shreedeviyadagi 5 месяцев назад +5

    2024 ralli yaru kelidira like madi

  • @basavarajbadiger7459
    @basavarajbadiger7459 Год назад +1

    My big solute to KSN sir. ಇಂತಹ ಅದ್ಭುತ ಸಾಹಿತ್ಯ ಸಂಗೀತ ನಮ್ಮ ಕಾಲದಲ್ಲಿ ಬಂದಿದ್ದು ನಮ್ಮ ಅದೃಷ್ಟ

  • @mohammedsadiq6588
    @mohammedsadiq6588 5 лет назад +7

    I remember this movie when iam only 10 year old and I love this song very much Kannada Da Sugandha janapada Geete gala maatu bere yellu barodilla am proud to be am from Karnataka jai hind jai Karnataka

  • @anandmalagi4940
    @anandmalagi4940 3 года назад +2

    ಕನ್ನಡ ಭಾಷೆ ಪ್ರಪಂಚದ ಎಲ್ಲ ಭಾಷೆಗಳಿಗಿಂತ ಉತ್ತಮವಾಗಿದೆ

  • @sampathbakki8030
    @sampathbakki8030 2 года назад +3

    ಹಿಂದಿನ ಕಾಲದಲ್ಲಿ ಅಳಿಯನ ಉಪಚಾರ ಮಾತು ಗಂಡ ಹೆಂಡತಿಯ ಪ್ರೀತಿಯನ್ನು ವ್ಯಕ್ತ ಪಡಿಸುತದೆ ಈ ಹಾಡು

  • @Keerupradi
    @Keerupradi Год назад +1

    ಇವಾಗಿನ ಆಲ್ಬಮ್ ಸಾಂಗ್ಸ್ಗಳು ಇದರ ಮುಂದೆ ಏನು ಅಲ್ಲ ❤..

  • @vasantmudakannanavar6566
    @vasantmudakannanavar6566 6 лет назад +60

    ಯನ್ chnda ಮಾವನ ಮನೇ ಗೇ ಹೋಗೋದು ನಮಗೆ ಯಾವಾಗ್ ಬರುತಪಾ ಇದು

  • @pavithracl9835
    @pavithracl9835 2 года назад +1

    ಯಾವಾಗ್ಲೂ ಈ ಹಾಡು ನನ್ನ ಅಚ್ಚು ಮೆಚ್ಚಿನ ಹಾಡು ಮಧುರ, ಹಾಗೆ ಸುಮಧುರವಾದ ಹಾಡು ❤️❤️

  • @-davidson319
    @-davidson319 5 лет назад +25

    🌹ಕಸ್ತೂರಿ ಕನ್ನಡ🌹

  • @JayPrakash-cq6df
    @JayPrakash-cq6df Год назад +2

    An immortal .always heart touch green memory song.wahw KSN..

  • @srinidhi7140
    @srinidhi7140 5 лет назад +306

    ಹಾಡು ತುಂಬಾ ಇಷ್ಟಪಟ್ಟವರು ಒಂದು ಲೈಕ್ ಮಾಡಿ

    • @shivakumarshiva9056
      @shivakumarshiva9056 4 года назад +4

      Super songs

    • @lathab.k625
      @lathab.k625 4 года назад +5

      Supersongs

    • @archanat3898
      @archanat3898 4 года назад +5

      ಎಷ್ಟು ಹಿಂಪಾಗಿದೆ ಹಾಡು.... ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ......

    • @suvarnar2862
      @suvarnar2862 4 года назад +2

      @@shivakumarshiva9056 la
      P

    • @shabuddin.n.bagavanbagavan5974
      @shabuddin.n.bagavanbagavan5974 4 года назад +1

      👍🏻👍🏻👍🏻👍🏻🌹🌹🌹🌹🌹🙏🏻🙏🏻🙏🏻🙏🏻

  • @manjunathk7887
    @manjunathk7887 3 года назад +2

    ಎಂಥಾ ಕಲ್ಪನೆ, ಕವಿಗೊಂದು ನನ್ನದೊಂದು ನಮನ

  • @shashankbv3366
    @shashankbv3366 2 года назад +8

    This type culture can be seen now in malainadu .... shivamogga ❤️ Sagara.... Hosanagara and thrithahalli.... Thalaguppa

    • @pavankannada7358
      @pavankannada7358 2 года назад

      Ella tamil marathi janara paalagide nimma shivamogga innelli ide Namma kannada samskruti

  • @thrimurthyh.s7427
    @thrimurthyh.s7427 3 месяца назад

    ಎಲ್ಲಾ ಕಾಲದಲ್ಲೂ ಕೇಳುವಂತಹ ಹಾಡು... ಸಾಲುತ್ತಿಲ್ಲ, ಇನ್ನೂ ಕೇಳಬೇಕೆನ್ನಿಸುತ್ತದೆ...

  • @goudanayaka5478
    @goudanayaka5478 3 года назад +14

    KS ನರಸಿಂಹ ಸ್ವಾಮಿ... ಅವರ ಸಾಹಿತ್ಯ ಅಂದ್ರೆ ಸುಮ್ನೇನಾ....??✍️🥰🥰🥰🥰👌✨️

  • @prakashhiremath266
    @prakashhiremath266 4 года назад +1

    ಎಂತಾ ಸುಂದರ ಅನುಭವ ನೀಡಿದೆ,, ಈ ಹಾಡು,,,,, ಸೂಪರ್

  • @pavithracl9835
    @pavithracl9835 4 года назад +4

    ನಾನು ಮತ್ತೆ ಮತ್ತೆ ನೋಡುವ ಹಾಡು💐👍👌

  • @satishcr9058
    @satishcr9058 Год назад

    ಎಂತಹ ಸುಂದರ ಸಾಹಿತ್ಯ ನಮ್ಮ ಕೆ ಎಸ್ ಎನ್ ಅವರದ್ದು 😁 👌

  • @Prakash-kg5qg
    @Prakash-kg5qg 5 лет назад +17

    Ever green song, beauty of lyrics & composing song was amazing

  • @VGKvlogss
    @VGKvlogss Год назад

    ನನ್ನ ಬಾಲ್ಯದ ಹಾಡು ತುಂಬಾ ದಿನದ ಮೇಲೆ ಕೇಳಿದೆ ಮನಸ್ಸು ಸಂತೋಷ್ ಆಯ್ತು

  • @kartiksj12
    @kartiksj12 4 года назад +13

    ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
    ಹುಣ್ಣಿಮೆ ಹರಸಿದೆ ಬಾನಿನ ನಡುವೆ ಚಂದಿರ ಬಂದಿತ್ತು
    ತುಂಬಿದ ಚಂದಿರ ಬಂದಿತ್ತು ||
    ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು
    ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ ತಂಬಿಗೆ ಬಂದಿತ್ತು
    ಒಳಗಡೆ ದೀಪದ ಬೆಳಕಿತ್ತು
    ಘಮ ಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು
    ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ ರಾಯರ ಕರೆದಿತ್ತು
    ಭೂಮಿಗೆ ಸ್ವರ್ಗವೆ ಇಳಿದಿತ್ತು
    ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು
    ಅಪ್ಪಟ ರೇಸಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು
    ಪದುಮಳು ಹಾಕಿದ ಹೂವಿತ್ತು
    ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗು ನಗುತಾ
    ಬಿಸಿ ಬಿಸಿ ಹಾಲಿನ ಬಟ್ಟಲ ತಂದರು ಅಕ್ಕರೆಯಲಿ ಮಾವ
    ಮಡದಿಯ ಸದ್ದೇ ಇರಲಿಲ್ಲ
    ಮಡದಿಯ ತಂಗಿಯ ಕರೆದಿಂತೆಂದರು "ಅಕ್ಕನ ಕರೆಯಮ್ಮ"
    ಮೆಲು ದನಿಯಲಿ ನಾದಿನಿ ಇಂತೆಂದಳು "ಪದುಮಳು ಒಳಗಿಲ್ಲ"
    ನಕ್ಕಳು ರಾಯರು ನಗಲಿಲ್ಲ
    ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ
    ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ
    ಪದುಮಳ ಬಳೆಗಳ ದನಿ ಇಲ್ಲ
    ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ
    ಒಳಮನೆಯಲಿ "ನೀರಾಯಿತು" ಎಂದಳು ನಾದಿನಿ ರಾಗದಲಿ
    "ಯಾರಿಗೆ" ಎನ್ನಲು ಹರುಷದಲಿ
    ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ

  • @ravikumard9846
    @ravikumard9846 Год назад

    ಇಂಥ ಹಾಡುಗಳನ್ನ ಎಷ್ಟು ಕೇಳಿದರೂ ಬೇಜರಾಗೊದಿಲ್ಲ 👌👌👌

  • @ningappakori9932
    @ningappakori9932 5 лет назад +10

    ನಾವೆಲ್ಲ ಕನ್ನಡಿಗರು ಕನ್ನಡದಲ್ಲಿ ಉತ್ತರಿಸುವ ಪ್ರಶ್ನೆ ಮಾಡೋಣ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಕನ್ನಡದಲ್ಲಿ ಕನ್ನಡದಲ್ಲಿ ವಿವರಿಸೋಣ .. ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ

  • @lifeisjourney123
    @lifeisjourney123 3 года назад

    ಎಂಥಹ ಅತ್ಯದ್ಭುತ ಕಲ್ಪನೆ, ಕೆ ಸ್ ನ ಅವರಿಗೆ ಕೋಟಿ ನಮನಗಳು..

  • @komalapawar
    @komalapawar 6 лет назад +5

    Aww sudharani looking Sooooooper...

  • @preethampreethu1740
    @preethampreethu1740 3 года назад +1

    12/2021 ಯಾರೆಲ್ಲ ಕೇಳ್ತಿದಿರ ಈ ಹಾಡನ್ನು ಲೈಕ್ ಒತ್ತಿ ..

  • @nayanamurty4601
    @nayanamurty4601 6 лет назад +143

    ಎಷ್ಟು ಚೆಂದದ ಹಾಡು ಮಾರಾಯ್ರೆ...

  • @prakashterani
    @prakashterani 4 года назад +1

    ಇಂಥ ಹಾಡನ್ನು ಕೇಳಿದ ನಾವೇ ಧನ್ಯರು

  • @venkateshpujari1440
    @venkateshpujari1440 5 лет назад +13

    I love this song to much
    What a words, padagalu super

  • @siddaramu92
    @siddaramu92 4 года назад +2

    ವಾವ್ ಏನ್ ಸೂಪರ್ ಸಾಂಗ್ ಗುರು

  • @shashiaisi9924
    @shashiaisi9924 6 лет назад +9

    what a beautiful song...sudharani Madum love you so much...dhanyavadhagalu K.S.Narashima swami sir...sadha namma manasalli young aage irthira lv u sir always...

  • @VLOGER-UK-NIN
    @VLOGER-UK-NIN 3 года назад +2

    ಮತ್ತೆ ಮತ್ತೆ ಕೇಳಬೇಕು ಎನಿಸುವ ಸುಂದರವಾದ ಹಾಡು
    ಹೊಸದಾಗಿ ಮದಯವೆಯಾದರಿಗೆ😂

  • @shivarajshivarajnelogi6292
    @shivarajshivarajnelogi6292 3 года назад +3

    ತುಂಬಾ ಇಂಪಾದ ಹಾಡು.👌👌

  • @basappabasappa8093
    @basappabasappa8093 5 лет назад +2

    ನನಗೆ ಯಾವಾಗಲೂ ಇಷ್ಟವಾಗುವ ಹಾಡು!!

  • @KiranK-bi7ek
    @KiranK-bi7ek 3 года назад +3

    What a wonderful lyrics... 🙏🙏

  • @nagendrahb727
    @nagendrahb727 9 месяцев назад

    Evathina ketta karkasha sangeethadamunde entha hadina swarshya nijakku greate sir hats up e hadige

  • @Shiva..
    @Shiva.. 5 лет назад +7

    ಬೊಂಬಾಟ್ ಅಂದ್ರೆ ಇದು !

  • @foodruraltv
    @foodruraltv 3 года назад

    Very nice video my friend loved it big like for you

  • @phaniphani1676
    @phaniphani1676 6 лет назад +6

    super SAR fantastic

  • @Gururagavendraswami
    @Gururagavendraswami 6 лет назад +2

    ಎಲ್ಲರ ಜೀವನದಲ್ಲಿ ನೇಡಿಯುವ ನೈಜ ಘಟನೇ ಯನ್ನು ಶಬ್ದದಲ್ಲಿ ವರ್ಣನೆ ಸೂಪರ್